ಬೆಂಗಳೂರಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಸ್ಫೋಟ, ಕಂಗಾಲಾದ ಜನ

Published : Jan 23, 2026, 01:02 PM IST

ಬೆಂಗಳೂರಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು ದಿಢೀರ್ ಸ್ಫೋಟ, ಕಂಗಾಲಾದ ಜನ, ಕಾರಣ ಇದೀಗ ಚಿನ್ನದ ಬೆಲೆ 10 ಗ್ರಾಂಗೆ 1.6 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿದೆ.

PREV
15
ಬಂಗಾರ ಬೆಲೆ ಸ್ಫೋಟ

ಬಂಗಾರದ ಬೆಲೆ ಸ್ಫೋಟಗೊಂಡಿದೆ. ಜನವರಿ 22ರಂದು ಕುಸಿತ ಕಂಡಿದ್ದ ಚಿನ್ನದ ಬೆಲೆ ಜನವರಿ 23ರಂದು ದಿಢೀರ್ ಏರಿಕೆ ಕಂಡಿದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 1.6 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಶುಕ್ರವಾರ ಎಂಸಿಎಕ್ಸ್ ಚಿನ್ನ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯೊಂದಿಗೆ ಚಿನ್ನ ವಹಿವಾಟು ಆರಂಭಗೊಂಡಿದೆ.

25
ಬೆಂಗಳೂರಲ್ಲಿ ಚಿನ್ನದ ದರ

ಬೆಂಗಳೂರಿನಲ್ಲಿ 24 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 15971 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನ ಪ್ರತಿ ಗ್ರಾಂನಲ್ಲಿ 540 ರೂಪಾಯಿ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,59,300 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 495 ರೂಪಾಯಿ ಏರಿಕೆಯಾಗಿದೆ. ಪ್ರತಿ ಗ್ರಾಂಗೆ 14,640 ರೂಪಾಯಿ ಏರಿಕೆಯಾಗಿದೆ. ಇನ್ನು 18 ಕ್ಯಾರೆಟ್ 1 ಗ್ರಾಂ ಚಿನ್ನದ ಮೇಲೆ 405 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ ಗ್ರಾಂಗೆ 11,978 ರೂಪಾಯಿಗೆ ಏರಿಕೆಯಾಗಿದೆ.

35
ಬೆಳ್ಳಿ ಬೆಲೆಯಲ್ಲೂ ಏರಿಕೆ

ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 340 ರೂಪಾಯಿ ಏರಿಕೆಯಾಗಿದೆ. ಪ್ರತಿ ಕೆಜೆ ಬೆಳ್ಳಿ ಬೆಲೆಯಲ್ಲಿ 15,000 ರೂಪಾಯಿ ಹೆಚ್ಚಳವಾಗಿದೆ. ಇದೀಗ 1 ಕೆಜಿ ಬೆಳ್ಳಿ ಬೆಲೆ 3,40,000 ರೂಪಾಯಿಗೆ ಏರಿಕೆಯಾಗಿದೆ. ವಿಶೇಷ ಅಂದರೆ 2025ರಲ್ಲಿ ಬೆಳ್ಳಿ ಶೇಕಡಾ 150 ರಷ್ಟು ರಿಟರ್ನ್ಸ್ ನೀಡಿ ಹೂಡಿಕೆದಾರ ಜೇಬು ಗಟ್ಟಿಗೊಳಿಸಿದೆ.

45
ಜಾಗತಿಕ ಕೋಲಾಹಲ ನಡುವೆ ಚಿನ್ನ ದುಬಾರಿ

ಡೋನಾಲ್ಡ್ ಟ್ರಂಪ್ ಜಾಗತಿಕವಾಗಿ ತೆರಿಗೆ ಯುದ್ದ ನಡೆಸುತ್ತಿದ್ದಾರೆ. ಇದರ ನಡುವೆ ಗ್ರೀನ್‌ಲ್ಯಾಂಡ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಚಿನ್ನದ ಬೆಲೆಯಲ್ಲೂ ಭಾರಿ ವ್ಯತ್ಯಾಸವಾಗಿತ್ತು. ಇದೇ ವೇಳೆ ಗ್ರೀನ್‌ಲ್ಯಾಂಡ್ ಮೇಲೆ ಮಿಲಿಟರಿ ಪ್ರಯೋಗ ಇಲ್ಲ ಎಂದು ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೇ ವೇಳೆ ಬಂಗಾರ ಕೆಲ ದಿನಗಳ ಕಾಲ ಇಳಿಕೆಯಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು.

55
ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಶೇಕಡಾ 2ರಷ್ಟು ಜಿಗಿತ

ಎಂಸಿಎಕ್ಸ್ ಚಿನ್ನದ ಮಾರುಕಟ್ಟೆಯಲ್ಲಿ ಇಂದು (ಜ.23) ಚಿನ್ನದ ವ್ಯವಹಾರ ಶೇಕಡಾ 2ರಷ್ಟು ಜಿಗಿತ ಕಂಡಿದೆ. ಅಮೆರಿಕದಲ್ಲೂ ಚಿನ್ನದ ಬೆಲೆಯಲ್ಲಿ ದಾಖಲೆ ಬರೆದಿದೆ. ಅಮೆರಿಕದಲ್ಲಿ ಪ್ರತಿ ಟ್ರಾಯ್ ಔನ್ಸ್ ಚಿನ್ನಕ್ಕೆ $4,969.69 ಡಾಲರ್ ಆಗಿದೆ. ಒಂದೇ ದಿನದಲ್ಲಿ ಶೇಕಡಾ 1 ರಷ್ಟು ಏರಿಕೆ ಕಂಡಿದೆ.

ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಶೇಕಡಾ 2ರಷ್ಟು ಜಿಗಿತ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories