ಒಂದೇ ದಿನ 22,900 ರೂ ಕುಸಿದ ಚಿನ್ನದ ಬೆಲೆ, ಗ್ರೀನ್‌ಲ್ಯಾಂಡ್, ತೆರಿಗೆ ನೀತಿ ಬದಲಾವಣೆ ಎಫೆಕ್ಟ್

Published : Jan 22, 2026, 01:24 PM IST

ಒಂದೇ ದಿನ 22,900 ರೂ ಕುಸಿದ ಚಿನ್ನದ ಬೆಲೆ, ಗ್ರೀನ್‌ಲ್ಯಾಂಡ್, ತೆರಿಗೆ ನೀತಿ ಬದಲಾವಣೆ ಎಫೆಕ್ಟ್, ಚಿನ್ನ ಖರೀದಿದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯತ್ತ ಸಾಗಿದೆ. ಇಂದಿನ ದರ ಎಷ್ಟು? 

PREV
16
ಬಂಗಾರ ಬೆಲೆ

ಅಮೆರಿಕ ಹಾಗೂ ಚೀನಾ ನಿರ್ಧಾರಗಳು ಪ್ರಮುಖವಾಗಿ ಚಿನ್ನದ ಮಾರುಕಟ್ಟೆ (ಎಂಸಿಎಕ್ಸ್) ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇಷ್ಟು ದಿನ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ, ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕದ ಕಣ್ಣು ಸೇರಿದಂತೆ ಹಲವು ಕಾರಣಗಳಿಂದ ಚಿನ್ನದ ಮಾರುಕಟ್ಟೆಯಲ್ಲಿ ಕೋಲಾಹಲ ಎದ್ದಿದೆ. ಇದರ ಪರಿಣಾಮ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು (ಜ.22) ಇಳಿಕೆಯಾಗಿದೆ.

26
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ

ಬೆಂಗಳೂರಿನಲ್ಲಿ ಇಂದು (ಜ.22) ಚಿನ್ನದ ದರ ಬರೋಬ್ಬರಿ 22,900 ರೂಪಾಯಿ ಇಳಿಕೆಯಾಗಿದೆ. ಹೌದು, 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 22,900 ರೂಪಾಯಿ ಇಳಿಕೆಯಾಗಿದೆ. ಅಂದೆರೆ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 229 ರೂಪಾಯಿ ಇಳಿಕೆಯಾಗಿದೆ. ಸದ್ಯ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 15,431 ರೂಪಾಯಿ ಆಗಿದೆ.

36
22 ಕ್ಯಾರಟ್ ಚಿನ್ನದ ದರ

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನ ದರದಲ್ಲೂ ಇಳಿಕೆಯಾಗಿದೆ. ಒಂದು ಗ್ರಾಂ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದೆ. ಸದ್ಯ 22 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 14,145 ರೂಪಾಯಿ ಆಗಿದೆ. 18 ಗ್ರಾಂ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. 1 ಗ್ರಾಂ ಚಿನ್ನದ ಮೇಲೆ 172 ರೂಪಾಯಿ ಇಳಿಕೆಯಾಗಿದೆ. ಇದರ ಪರಿಣಾಮ 1 ಗ್ರಾಂ ಚಿನ್ನಕ್ಕೆ 11,573 ರೂಪಾಯಿ ಆಗಿದೆ.

46
ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಶೇಕಡಾ 2ರಷ್ಟು ಕುಸಿತ

ಗ್ರೀನ್‌ಲ್ಯಾಂಡ್ ಮೇಲೆ ಮಿಲಿಟರಿ ಪ್ರಯೋಗ ಮಾಡುವುದಿಲ್ಲ ಎಂದು ಡೋನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಇಂದು ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಕುತೂಹಲ ಬೆಳವಣಿಗೆ ನಡಿದಿದೆ. ಎಂಸಿಎಕ್ಸ್ ಮಾರುಕಟ್ಟೆ ಆರಂಭದಲ್ಲೇ ಗೋಲ್ಡ್ ಫ್ಯೂಚರ್ ಶೇಕಡಾ 2ರಷ್ಟು ಕುಸಿತ ಕಂಡರೆ, ಚಿನ್ನದ ಬೆಲೆಯಲ್ಲಿ ಶೇಕಡಾ 1ರಷ್ಟು ಕುಸಿತ ಕಂಡಿದೆ.

56
ಯೂರೋಪಿಯನ್ ಯೂನಿಯನ್ ತೆರಿಗೆ ನೀತಿ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯೂರೋಪಿಯನ್ ಯೂನಿಯನ್ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಏರಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆ ಇಳಿಕೆ ಆರಂಭಗೊಂಡಿದೆ. ಕಳೆದ ಒಂದು ವಾರ ಸತತ ಏರಿಕೆಯಲ್ಲಿದ್ದ ಚಿನ್ನ ಇಂದು ಇಳಿಕೆಯಾಗಿದೆ.

66
ನಿಟ್ಟುಸಿರು ಬಿಟ್ಟ ಭಾರತೀಯರು

ಭಾರತದಲ್ಲಿ ಮದುವೆ ಸೀಸನ್ ಆರಂಭಗೊಂಡಿದೆ. ಇದರ ನಡುವೆ ಚಿನ್ನದ ಬೆಲೆ ಏರಿಕೆ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಚಿನ್ನದ ಬೆಲೆ ಇಳಿಕೆಯಿಂದ ಇದೀಗ ಹಲವು ಜಸಾಮಾನ್ಯ ಕುಟುಂಬಗಳು ನಿಟ್ಟುಸಿರು ಬಿಟ್ಟಿದೆ. ಇದೀಗ ಬಂಗಾರ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.

ನಿಟ್ಟುಸಿರು ಬಿಟ್ಟ ಭಾರತೀಯರು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories