ಸಾವಿರಾರು ಕೋಟಿ ವ್ಯವಹಾರದ ಅದಾನಿ Q3 ಆದಾಯ ಕೇವಲ ಇಷ್ಟೇನಾ? ಕುಸಿತ ಕಂಡ ಎನರ್ಜಿ, ಮೂರನೈ ತ್ರೈಮಾಸಿಕದಲ್ಲಿ ಅದಾನಿ ಅದಾಯ ಕುಸಿತ ತಂಡಿದೆ. ಅಚ್ಚರಿ ಎಂದರೆ ಸಾವಿರ ಕೋಟಿ ಆದಾಯ ಪಡೆಯುತ್ತಿದ್ದ ಅದಾನಿ ಆದಾಯ ಇಷ್ಟೇನಾ?
ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಪ್ರತಿ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆಯುತ್ತದೆ. ಹೂಡಿಕೆ, ವ್ಯವಹಾರ ಎಲಲ್ವೂ ಲಕ್ಷ ಕೋಟಿ. ಆದರೆ ಮೂರನೇ ತ್ರೈಮಾಸಿಕದಲ್ಲಿ ಗೌತಮ್ ಅದಾನಿ ಆದಾಯ ಭಾರಿ ಕುಸಿತ ಕಂಡಿದೆ. ಗೌತಮ್ ಅದಾನಿ ಎನರ್ಜಿ ಸೊರಗಿದೆ.
25
ತೆರಿಗೆ ನೀತಿಯಲ್ಲಿ ಆದಾಯ ಕುಸಿತ
ಗೌತಮ್ ಅದಾನಿ ಮಾಲೀಕತ್ವದ ಅದಾನಿ ಎನರ್ಜಿ ಸೊಲ್ಯೂಶನ್ ಲಿಮಿಟೆಡ್ ಕಂಪನಿ ಮೂರನೇ ತೈಮಾಸಿಕದಲ್ಲಿ ಶೇಕಡಾ 8ರಷ್ಟು ಆದಾಯ ಕುಸಿತ ಕಂಡಿದೆ. ಪ್ರಮುಖವಾಗಿ ಹೆಚ್ಚುವರಿ ತೆರಿಗೆ ನೀತಿಯಿಂದ ಅದಾನಿ ಆದಾಯದಲ್ಲಿ ಭಾರಿ ಕುಸಿತ ಕಂಡಿದೆ. ಆದಾಯದ ಬಹುಪಾಲು ತೆರಿಗೆ ಪಾವತಿಯಲ್ಲಿ ಹೋಗಿದೆ.
35
574 ಕೋಟಿ ರೂಪಾಯಿ ಆದಾಯ
3ನೇ ತ್ರೈಮಾಸಿಕದಲ್ಲಿ ಗೌತಮ್ ಅದಾನಿ ಎನರ್ಜಿ ಸೊಲ್ಯೂಶನ್ ಆದಾಯ 574.06 ಕೋಟಿ ರೂಪಾಯಿ ಮಾತ್ರ. ಇದೇ ಅವಧಿಯಲ್ಲಿ ಕಳೆದ ವರ್ಷ ಅದಾನಿ ಎನರ್ಜಿ 625.30 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಅಡ್ಜಸ್ಟೆಡ್ ಪ್ರಾಫಿಟ್‌ನಲ್ಲಿ ಬೆಳವಣಿಗೆ ಕಂಡರೂ ನೆಟ್ ಆದಾಯದಲ್ಲಿ ಕುಸಿತ ಕಂಡಿದೆ.
ಅದಾನಿ ಎನರ್ಜಿ ಸೊಲ್ಯೂಶನ್ 226.17 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಎನರ್ಜಿ ಸೊಲ್ಯೂಶನ್ ಮೇಲಿನ ಹೆಚ್ಚುವರಿ ತೆರಿಗೆ ಅದಾನಿ ಕಂಪನಿಗೆ ಹೊಡತೆ ನೀಡಿದೆ. ಅದಾನಿ ಎನರ್ಜಿ ತ್ರೈಮಾಸಿಕದಲ್ಲಿನ ಒಟ್ಟು ವ್ಯವಹಾರ 6,945 ಕೋಟಿ ರೂಪಾಯಿ.
55
ನಗದು ಲಾಭ
ಅದಾನಿ ಎನರ್ಜಿ ಲಿಮಿಟೆಡ್‌ನ ನಗದು ಲಾಭ ಶೇಕಡಾ 22.8ರಷ್ಟು ಏರಿಕೆಯಾಗಿದೆ. ಆರ್ಥಿಕ ವರ್ಷದಲ್ಲಿ ಉತ್ತಮ ಬೆಳವಣಿಗೆ ಕಾಣುವ ಮೂಲಕ ಸಾಗಿದೆ. ಅದಾನಿ ಗ್ರೂಪ್ ಕಂಪನಿಗಳಲ್ಲಿ ಅದಾನಿ ಎನರ್ಜಿ ಅತ್ಯಂತ ಪ್ರಮುಖ ಕಂಪನಿಯಾಗಿದೆ. ದೇಶ ವಿದೇಶಗಳಲ್ಲಿ ಹೂಡಿಕೆ ಮಾಡಿದೆ.
ನಗದು ಲಾಭ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.