ಬಿಯರ್ ಪ್ರೀಯರು ಹೆಚ್ಚಾದರೂ ಭಾರತದಲ್ಲಿ 1300 ಕೋಟಿ ರೂ ನಷ್ಟ, ಸಂಕಷ್ಟದಲ್ಲಿ ಉದ್ಯಮ

Published : Oct 13, 2025, 04:29 PM IST

ಬಿಯರ್ ಪ್ರೀಯರು ಹೆಚ್ಚಾದರೂ ಭಾರತದಲ್ಲಿ 1300 ಕೋಟಿ ರೂ ನಷ್ಟ, ಸಂಕಷ್ಟದಲ್ಲಿ ಉದ್ಯಮ, ಹಲವರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ದಿನ ಬಿಯರ್ ಕುಡಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಿಯರ್ ಉದ್ಯಮ ಮಾತ್ರ ನಷ್ಟಕ್ಕೆ ಜಾರಿದ್ದು ಹೇಗೆ? 

PREV
15
ದಾಖಲೆ ಮಾರಾಟ ಕಾಣುತ್ತಿರುವ ಬಿಯರ್ ಉದ್ಯಮದಲ್ಲಿ ಆತಂಕ

ದಾಖಲೆ ಮಾರಾಟ ಕಾಣುತ್ತಿರುವ ಬಿಯರ್ ಉದ್ಯಮದಲ್ಲಿ ಆತಂಕ

ಭಾರತದ ಬಿಯರ್ ಉದ್ಯಮ ಅತೀ ಹೆಚ್ಚು ಬೇಡಿಕೆ ಪಡೆಯುತ್ತಿರುವ ಉದ್ಯಮವಾಗಿ ಮಾರ್ಪಟ್ಟಿತ್ತು. ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ಬಿಯರ್ ದಾಖಲೆ ಮಾರಾಟ ಕಾಣುತ್ತಿತ್ತು. ಇನ್ನು ಪ್ರತಿ ದಿನ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎಂಆರ್‌ಪಿ ಕೇಂದ್ರಗಳು, ಬಾರ್, ವೈನ್ ಶಾಪ್ ಎಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಭಾರತದ ಬಿಯರ್ ಉದ್ಯಮ ಆತಂಕ ಎದುರಿಸುತ್ತಿರುವುದೇಕೆ?

25
1,300 ಕೋಟಿ ರೂ ನಷ್ಟಕ್ಕೆ ಕಾರಣವೇನು?

1,300 ಕೋಟಿ ರೂ ನಷ್ಟಕ್ಕೆ ಕಾರಣವೇನು?

ಭಾರತದಲ್ಲಿ ಬಿಯರ್ ಉದ್ಯಮ ಸದ್ಯಕ್ಕೆ 1,300 ಕೋಟಿ ರೂಪಾಯಿ ನಷ್ಟದ ಆತಂಕದಲ್ಲಿದೆ. ಇದಕ್ಕೆ ಕಾರಣವನ್ನು ಬ್ರಿವರಸ್ ಅಸೋಸಿಯೇಶನ್ ಇಂಡಿಯಾ (BAI) ನೀಡಿದೆ. ಭಾರತದಲ್ಲಿ ಆಲ್ಯೂಮಿನಿಯಂ ಕ್ಯಾನ್ ಕೊರತೆ ಎದುರಾಗಿದೆ. ಅಲ್ಯೂಮಿನಿಯಂ ಪೂರೈಕೆಯಾಗುತ್ತಿಲ್ಲ. ಇದರಿಂದ ಬಿಯರ್ ಪೂರೈಕೆ ಸಮಸ್ಯೆಯಾಗುತ್ತಿದೆ ಎಂದು ಬಿಎಐ ಹೇಳಿದೆ.

35
ದಿಢೀರ್ ಅಲ್ಯೂಮಿನಿಯಂ ಕ್ಯಾನ್ ಸಮಸ್ಯೆ ಆರಂಭಗೊಂಡಿದ್ದು ಹೇಗೆ?

ದಿಢೀರ್ ಅಲ್ಯೂಮಿನಿಯಂ ಕ್ಯಾನ್ ಸಮಸ್ಯೆ ಆರಂಭಗೊಂಡಿದ್ದು ಹೇಗೆ?

ಬಿಯರ್ ಅಲ್ಯೂಮಿನಿಯಂ ಕ್ಯಾನ್ ಸಮಸ್ಯೆಗೆ ಪ್ರಮುಖ ಕಾರಣ ಎಪ್ರಿಲ್ 1, 2025ರಲ್ಲಿ ಬಿಯರ್ ಕ್ಯಾನ್‌ಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಸರ್ಟಿಫೀಕೇಶನ್ ಕಡ್ಡಾಯ ಮಾಡಲಾಗಿದೆ. ಸುರಕ್ಷತೆ ಹಾಗೂ ಗುಣಮಟ್ಟ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಸ್ಟಾಂಡರ್ಡ್‌ಗೆ ತಕ್ಕಂತೆ ಬಿಯರ್ ಕ್ಯಾನ್ ಪೂರೈಕೆಯಾಗುತ್ತಿಲ್ಲ.

45
ಸ್ಟಾಕ್ ಕ್ಲಿಯರ್, ಬಿಯರ್ ಕೊರತೆ

ಸ್ಟಾಕ್ ಕ್ಲಿಯರ್, ಬಿಯರ್ ಕೊರತೆ

ಎಪ್ರಿಲ್ 1 ರಿಂದ ಬಿಯರ್ ಕ್ಯಾನ್ ಕೊರತೆ ಕಾಡುತ್ತಿದೆ. ಹೀಗಾಗಿ ಬಿಯರ್ ಕಂಪನಿಗಳು ಸದ್ಯ ಇರುವ ಸ್ಟಾಕ್ ಪೂರೈಕೆ ಮಾಡಿದೆ. ಇದೀಗ ಸ್ಟಾಕ್ ಮುಗಿದಿದೆ. ಹೀಗಾಗಿ ಬಿಯರ್ ಭಾರತದಲ್ಲಿ ಪೂರೈಕೆ ಸಮಸ್ಯೆಯಾಗುತ್ತಿದೆ. ಹಲವೆಡೆ ಬಿಯರ್ ಕೊರತೆಗಳು ಆರಂಭಗೊಂಡಿದೆ. ಬಿಯರ್ ಬಾಟಲಿ ಬೆಲೆ ದುಬಾರಿಯಾಗಿರುವ ಕಾರಣ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತಿದೆ.

55
ಆಮದು ಮೇಲೂ ಹೊಡೆತ

ಆಮದು ಮೇಲೂ ಹೊಡೆತ

ಭಾರತಕ್ಕೆ ಆಮದು ಮಾಡಲಾಗುತ್ತಿದ್ದ ಬಿಯರ್‌ಗೂ ಹೊಡೆತ ಬಿದ್ದಿದೆ. ಆಮದು ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ವಾರ್ಷಿಕವಾಗಿ ಭಾರತದಲ್ಲಿ 12 ರಿಂದ 13 ಕೋಟಿ 500ಎಂಎಲ್ ಬಿಯರ್ ಕ್ಯಾನ್ ಅವಶ್ಯಕತೆ ಇತ್ತು. ಆದರೆ ಪೂರೈಕೆಯಾಗತ್ತಿಲ್ಲ. ಇದರಿಂದ ಶೇಕಡಾ 20 ರಷ್ಟು ಬಿಯರ್ ಮಾರಾಟದಲ್ಲಿ ಕುಸಿತವಾಗುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತಿದೆ.

Read more Photos on
click me!

Recommended Stories