Diamond price: ಬಂಗಾರ, ಬೆಳ್ಳಿ ಖರೀದಿಗಿಂತ ವಜ್ರವೇ ಲೇಸು; ಗಣನೀಯ ಇಳಿಕೆಯಾದ ಡೈಮಂಡ್ ಬೆಲೆ

Published : Oct 13, 2025, 02:22 PM IST

Diamond price: ಜಾಗತಿಕ ಸಂಘರ್ಷಗಳಿಂದಾಗಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೆ, ಅಮೆರಿಕದ ಸುಂಕ ನೀತಿಗಳಂತಹ ಕಾರಣಗಳಿಂದ ವಜ್ರದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಈ ಅನಿರೀಕ್ಷಿತ ಬದಲಾವಣೆಯು ಆಭರಣ ಮಾರುಕಟ್ಟೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

PREV
16
ಗಗನಕ್ಕೇರುತ್ತಿರುವ ಚಿನ್ನದ ಬೆಲೆ

ಚಿನ್ನ ಅಂದ್ರೆ ಕಷ್ಟ ಎಂಬಂತೆ ಆಗಿದೆ. ಆಭರಣ ಪ್ರಿಯ ಮಹಿಳೆಯರು ಚಿನ್ನ ಖರೀದಿ ಇನ್ನು ಕನಸು ಅಂದುಕೊಳ್ಳುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ನಡುವೆ ವಜ್ರದ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ, ಡೊನಾಲ್ಡ್ ಟ್ರಂಪ್ ಅತಿರೇಕದ ಸುಂಕಗಳ ಪರಿಣಾಮ ಚಿನ್ನವಿಂದು ಗಗನಕುಸುವಾಗಿದೆ. ಈ ಎಲ್ಲಾ ಜಾಗತೀಕ ಬದಲಾವಣೆಗಳು ನೇರವಾಗಿ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.

26
ಎಷ್ಟು ದರ ಇಳಿಕೆ?

ಕಳೆದ ಕೆಲವು ತಿಂಗಳಿನಿಂದ ಗಣನೀಯವಾಗಿ ವಜ್ರದ ಬೆಲೆ ಕಡಿಮೆಯಾಗುತ್ತಿದೆ. ಕೆಲ ತಿಂಗಳ ಹಿಂದೆ 80,000 ರೂ.ಗಳವರೆಗಿದ್ದ 0-3 ಸೆನ್ಸ್ ವಜ್ರದ ಬೆಲೆ, ಇದೀಗ 40 ಸಾವಿರ ರೂಪಾಯಿ ಕುಸಿತ ಕಂಡಿದೆ. ಅದರಲ್ಲೂ 50 ಸೆನ್ಸ್ ಅಳತೆಯ ವಜ್ರದ ಬೆಲೆ ಕುಸಿತ ಕಂಡು ಬಂದಿದೆ. ವಜ್ರದ ದರ ಕುಸಿಯುತ್ತಿದ್ರೆ, ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಚಿನ್ನಕ್ಕಿಂತ ವಜ್ರ ಖರೀದಿಯೇ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

36
ವಜ್ರದ ಬೆಲೆ ಕುಸಿತಕ್ಕೆ ಕಾರಣ ಏನು?

ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿದ್ದಾರೆ. ಇದರಿಂದ ಭಾರತದ ವಜ್ರ ಅಥವಾ ಆಭರಣಗಳ ಬೇಡಿಕೆ ಅಮೆರಿಕಾದಲ್ಲಿ ಕಡಿಮೆಯಾಗಲಿದೆ. ಸಹಜವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಾರೆ. ಪೂರೈಕೆ ಹೆಚ್ಚಳವಾಗಿ ಬೇಡಿಕೆ ಕಡಿಮೆಯಾದ ಬೆಲೆ ಇಳಿಕೆಯಾಗೋದು ಮಾರುಕಟ್ಟೆಯ ಸಾಮಾನ್ಯ ನಿಯಮವಾಗಿದೆ.

46
ವಜ್ರದ ಕಚ್ಛಾ ಪದಾರ್ಥ ಪೂರೈಕೆ

ರಷ್ಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಸ್ರೇಲ್ ಸೇರಿದಂತೆ ಕೆಲವು ದೇಶಗಳು ವಜ್ರದ ಕಚ್ಛಾ ಪದಾರ್ಥಗಳನ್ನು ಪೂರೈಕೆ ಮಾಡುತ್ತವೆ. ದಕ್ಷಿಣ ಆಫ್ರಿಕಾದಿಂದ ಆಮದಾಗುವ ಕಚ್ಚಾ ವಸ್ತುಗಳ ಗುಣಮಟ್ಟ ಕಡಿಮೆಯಾಗಿರುತ್ತದೆ. ಫ್ರಾನ್ಸ್ ಪೂರೈಸುವ ಕಚ್ಛಾ ವಸ್ತುವಿನ ಗುಣಮಟ್ಟ ಉತ್ತಮವಾಗಿರುತ್ತದೆ. ಈ ಕಚ್ಛಾವಸ್ತುಗಳನ್ನು ಅತ್ಯಧಿಕವಾಗಿ ಆಮದು ಮಾಡಿಕೊಳ್ಳುವ ರಾಷ್ಟ್ರ ಭಾರತವಾಗಿದೆ. ಭಾರತದ ಮುಂಬೈ, ಸೂರತ್, ಅಹಮದಾಬಾದ್‌ ನಗರಗಳಲ್ಲಿ ವಜ್ರಾಭರಣಗಳು ಸಿದ್ಧಗೊಳ್ಳುತ್ತವೆ.

56
ಅಮೆರಿಕ ಮಾರುಕಟ್ಟೆ

ಭಾರತದಲ್ಲಿ ತಯಾರಾಗುವ ಶೇ.30ರಷ್ಟು ವಜ್ರಾಭರಣಗಳು ಅಮೆರಿಕದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಸುಂಕ ಹೆಚ್ಚಳ ಹಿನ್ನೆಲೆ ಭಾರತದ ವಜ್ರದ ಆಭರಣಗಳಿಗೆ ಬೇಡಿಕೆ ಕುಸಿಯಲಿದೆ. ಮತ್ತೊಂದೆಡೆ ವಜ್ರದ ಮೌಲ್ಯ ಕುಸಿಯುತ್ತಿರುವ ಕಾರಣ ಚಿನ್ನದ ಮೇಲಿನ ಹೂಡಿಕೆ ಹೆಚ್ಚಳವಾಗುತ್ತಿದೆ. ಚಿನ್ನ ಮರುಮಾರಾಟ ಮೌಲ್ಯ ಹೊಂದಿರೋದರಿಂದ ವಜ್ರದ ಬೇಡಿಕೆ ಇಳಿಕೆಯಾಗಲು ಮತ್ತೊಂದು ಕಾರಣವಾಗಿದೆ. 

ಇದನ್ನೂ ಓದಿ: ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!

66
ಚಿನ್ನದ ಬೆಲೆ ಏರಿಕೆಗೆ ಕಾರಣಗಳೇನು?

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಹಮಾಸ್‌-ಇಸ್ರೇಲ್‌ ಕದನ ವಿರಾಮಕ್ಕೆ ಒಪ್ಪಿದೆ. ಆದ್ರೆ ಶಾಂತಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವುದಿಲ್ಲವೆಂದು ಹಮಾಸ್‌ ಕ್ಯಾತೆ ತೆಗೆದಿದೆ. ಹಾಗಾಗಿ ಈ ಬಿಕ್ಕಟ್ಟು ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ. ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಳ್ಳುವ ನಿರ್ಧಾರಗಳು ಸಹ ಜಾಗತೀಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ಕೋಲಾರಕ್ಕೆ ಜಪಾನ್‌ ಜಾಕ್‌ಪಾಟ್, 600 ಕೋಟಿ ಹೂಡಿಕೆಗೆ ಅಸ್ತು; ಧಾರವಾಡದಲ್ಲಿ ಎಂಜಿನಿಯರ್ ಉದ್ಯೋಗ ಸೃಷಿ 

Read more Photos on
click me!

Recommended Stories