Indian Investment News: ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಕಂಪನಿ, ಕೋಲಾರ ಜಿಲ್ಲೆಯ ನರಸಾಪುರದಲ್ಲಿ 600 ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗದ ಜೊತೆಗಿನ ಯಶಸ್ವಿ ಮಾತುಕತೆ.
ರಾಜ್ಯದ ಕೋಲಾರ ಜಿಲ್ಲೆಯ ನರಸಾಪುರದಲ್ಲಿ 600 ಕೋಟಿ ರೂಪಾಯಿ ಹೂಡಿಕೆಗೆ ಜಪಾನ್ ದೇಶದ ಕಂಪನಿ ಒಪ್ಪಿಗೆ ಸೂಚಿಸಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗದ ಜೊತೆ ಚರ್ಚೆಯ ಬಳಿಕ ಜಪಾನ್ ಕಂಪನಿ ಈ ಘೋಷಣೆಯನ್ನು ಮಾಡಿದೆ.
25
HMSI
ಜಪಾನಿನ ಆಟೋ ಮೇಜರ್‌ನ ಅಂಗಸಂಸ್ಥೆಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಲಿಮಿಟೆಡ್ (HMSI) ತನ್ನ ಮೊದಲ ವಿದ್ಯುತ್ ದ್ವಿಚಕ್ರ ವಾಹನ ಉತ್ಪಾದನೆಯ ಹೊಸ ಉತ್ಪಾದನಾ ಘಟಕವನ್ನು ಕೋಲಾರದ ನರಸಾಪುರದಲ್ಲಿ ಆರಂಭಿಸಲಿದೆ. ಇದೇ ಕಂಪನಿ ಸದ್ಯ ನರಸಾಪುರದಲ್ಲಿ 2.4 ಮಿಲಿಯನ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತಿದೆ
35
ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ
ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ನಿಯೋಗ ಜಪಾನ್‌ನಲ್ಲಿ HMSIನ ನಿರ್ದೇಶಕಿ, ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಕಾರ್ಯನಿರ್ವಾಹಕ ಅಧಿಕಾರಿ ನೋರಿಯಾ ಕೈಹರ ಅವರನ್ನು ಭೇಟಿಯಾಗಿತ್ತು. ಈ ವೇಳೆ ಕರ್ನಾಟಕ ಸರ್ಕಾರದ ಜೊತೆಗಿನ ಒಪ್ಪಂದಕ್ಕೆ ಹೊಂಡಾ ಸಹಿ ಹಾಕಿದೆ. ಘಟಕ ಆರಂಭಕ್ಕೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಎಂಬಿ ಪಾಟೀಲ್ ನೇತೃತ್ವದ ನಿಯೋಗ ಭರವಸೆಯನ್ನು ನೀಡಿದೆ.
HMSI ಭಾರತದಲ್ಲಿ ಆಕ್ಟಿವಾ ಇ ಮತ್ತು ಕ್ಯೂಸಿ 1 ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ರಫ್ತು ಸಹ ಮಾಡುತ್ತದೆ. ವಿದೇಶಕ್ಕೆ ಭೇಟಿ ನೀಡಿರುವ ಕರ್ನಾಟಕದ ನಿಯೋಗ ಮಿತ್ಸುಬಿಷಿ ಎಲೆಕ್ಟ್ರಿಕ್, ಯೊಕೊಗಾವಾ ಎಲೆಕ್ಟ್ರಿಕ್, ಟೋಕಿಯೋ ಎಲೆಕ್ಟ್ರಾನ್ ಮತ್ತು ರೆಸ್ಟಾರ್ ಜೊತೆ ಮಾತನಾಡಿ ಒಪ್ಪಂದ ಮಾಡಿಕೊಳ್ಳುತ್ತಿದೆ.
ಕೆಲವು ದಿನಗಳ ಹಿಂದಿನ ನಮ್ಮ ಜಪಾನ್ ಪ್ರವಾಸದ ವೇಳೆ #Hitachi ಕಂಪೆನಿ ಧಾರವಾಡದಲ್ಲಿ ನಿರ್ಮಾಣ ಯಂತ್ರಗಳ ನೂತನ ಘಟಕ ಸ್ಥಾಪನೆ ಘೋಷಿಸಿದೆ. ಈ ನೂತನ ಘಟಕ ಜಾಗತಿಕ ಮಟ್ಟದ ನಿರ್ಮಾಣ ಯಂತ್ರಗಳು ಹಾಗೂ ಬಿಡಿಭಾಗಗಳ ವಿನ್ಯಾಸ ಹಾಗೂ ತಯಾರಿಕೆ ಮಾಡಲಿದೆ. ಈ ಘಟಕದಿಂದ 2027ರ ವೇಳೆಗೆ 200 ಎಂಜಿನಿಯರುಗಳಿಗೆ ಉದ್ಯೋಗಗಳನ್ನು ಸೃಷ್ಟಿಯಾಗಲಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.