ಅಕಸ್ಮಾತ್ ಜ.27ರಿಂದ ನೌಕರರು ಮುಷ್ಕರ ನಡೆಸಿದರೆ, 5 ದಿನ ಬ್ಯಾಂಕ್ ಕೆಲಸವಾಗೋಲ್ಲ

Published : Jan 05, 2026, 01:01 PM IST

ಅಕಸ್ಮಾತ್ ಜ.27ರಿಂದ ನೌಕರರು ಮುಷ್ಕರ ನಡೆಸಿದರೆ, 5 ದಿನ ಬ್ಯಾಂಕ್ ಕೆಲಸವಾಗೋಲ್ಲ, ವಾರದಲ್ಲಿ 2 ದಿನ ರಜೆ ಸೇರಿದಂತೆ ಹಲವು ಬೇಡಿಕೆ ಈಡೇರಿಕಾಗಿ ಬ್ಯಾಂಕ್ ನೌಕರರು ಮುಷ್ಕರದ ಎಚ್ಚರಿಕ ನೀಡಿದ್ದಾರೆ. 

PREV
15
ಜನವರಿ 27ಕ್ಕೆ ಬ್ಯಾಂಕ್ ಮುಷ್ಕರ ಎಚ್ಚರಿಕೆ

ವಿವಿದ ಬೇಡಿಕೆಗಳ ಈಡೇರಿಕೆಗೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಮುಷ್ಕರದ ಎಚ್ಚರಿಕೆ ನೀಡಿದೆ. ಜನವರಿ 27ರಂದು ಬ್ಯಾಂಕ್ ಉದ್ಯೋಗಿಗಳು ಮುಷ್ಕರ ಮಾಡುವುದಾಗಿ ಎಚ್ಚರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಯ ಕುರಿತು ಸ್ಪಷ್ಟ ಆದೇಶ ಹೊರಬೀಳದಿದ್ದರೆ ಮುಷ್ಕರ ಖಚಿತ ಎಂದಿದ್ದಾರೆ.

25
ಮೂರ ದಿನ ಬ್ಯಾಂಕ್ ರಜೆ?

ಜನವರಿ 27ಕ್ಕೆ ಬ್ಯಾಂಕ್ ಮುಷ್ಕರಕ್ಕೆ ಕರೆ ಕೊಟ್ಟರೆ ಗ್ರಾಹಕರು ಹೈರಾಣಾಗಲಿದ್ದಾರೆ. ಕಾರಣ ಜನವರಿ 25 ಹಾಗೂ 26 ಬ್ಯಾಂಕ್ ರಜಾ ದಿನವಾಗಿದೆ. ಜನವರಿ 27ರಂದು ಮುಷ್ಕರ ನಡೆದರೆ , ಒಟ್ಟು ಮೂರು ದಿನ ಬ್ಯಾಂಕ್ ಕೆಲಸಗಳು ನಡೆಯುವುದಿಲ್ಲ. ಇದರಿಂದ ಗ್ರಾಹಕರು ಹೈರಾಣಾಗಲಿದ್ದಾರೆ.

35
ಹೆಚ್ಚುವರಿ ಕೆಲಸ

ಆರ್‌ಬಿಐ ಮಾರ್ಗಸೂಚಿ, ಬ್ಯಾಂಕ್ ಅಸೋಸಿಯೇಶನ್ ಒಪ್ಪಂದ ಪ್ರಕಾರ ಬ್ಯಾಂಕ್ ನೌಕರರು ಪ್ರತಿ ದಿನ 40 ನಿಮಿಷ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರಜಾ ದಿನಗಳು 2024ರಿಂದ ಕಡಿತಗೊಂಡಿದೆ. ಸ್ಟಾಕ್ ಮಾರ್ಟೆಕ್ ಸೇರಿದಂತೆ ಹಲವು ಕ್ಷೇತ್ರಗಳು ಶನಿವಾರ ಕೆಲಸ ಮಾಡುತ್ತಿಲ್ಲ. ಆದರೆ ನಾವು ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

45
ಸದ್ಯ 2 ಮತ್ತು ನಾಲ್ಕನೇ ಶನಿವಾರ ರಜೆ

2024ರ ಒಪ್ಪಂದದ ಪ್ರಕಾರ ಬ್ಯಾಂಕ್ ನೌಕರರಿಗೆ 2ನೇ ಮತ್ತು ನಾಲ್ಕನೇ ಶನಿವಾರ ರಜಾ ದಿನವಾಗಿದೆ. ಇನ್ನುಳಿದಂತೆ ಎಲ್ಲಾ ಭಾನುವಾರ ರಜಾ ದಿನವಾಗಿದೆ. ಆದರೆ ವಾರದಲ್ಲಿ ಐದು ದಿನ ಕೆಲಸದ ನಿಯಮ ಜಾರಿಯಾಗಬೇಕು. ಬ್ಯಾಂಕ್ ಸಂಬಂಧಿಸಿದ ಹಲವು ಕ್ಷೇತ್ರಗಳು ಶನಿವಾರ ರಜಾ ದಿನವಾಗಿದೆ ಎಂದು ಬ್ಯಾಂಕ್ ನೌಕರರು ರಜೆಗೆ ಬೇಡಿಕೆ ಇಟ್ಟಿದ್ದಾರೆ.

55
ಬ್ಯಾಂಕ್ ಮುಷ್ಕರದಿಂದ ಸರ್ಕಾರಕ್ಕೆ ತಲೆನೋವು

ಬ್ಯಾಂಕ್ ಮುಷ್ಕರದಿಂದ ಸರ್ಕಾರಕ್ಕೆ ತೀವ್ರ ತಲೆನೋವಾಗಲಿದೆ. ಸರ್ಕಾರ ಪ್ರತಿ ದಿನ ಅತೀ ಹೆಚ್ಚು ಬ್ಯಾಂಕ್ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಡೆಸುತ್ತದೆ. ಒಂದು ದಿನ ಮುಷ್ಕರ ನಡೆಸಿದರೆ ಸರ್ಕಾರದ ಬಹುತೇಕ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಲಿದೆ. ಇತ್ತ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವುುದಿಲ್ಲ ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.

ಬ್ಯಾಂಕ್ ಮುಷ್ಕರದಿಂದ ಸರ್ಕಾರಕ್ಕೆ ತಲೆನೋವು

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories