ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿಯು ಮಂಡ್ಯದಲ್ಲಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಸುಮಾರು 94 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ.
ಮಂಡ್ಯ: ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿ ಸ್ಥಾಪಿಸಲು ಉದ್ದೇಶಿಸಿರುವ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸರ್ಕಾರಿ ಭೂಮಿ ಲಭ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
24
ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನೆ
ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದ ಸರ್ವೆ ನಂ.81ರಲ್ಲಿ 72.31 ಎಕರೆ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಿದ್ದಾಪುರ ಗ್ರಾಮದ ಸರ್ವೆ ನಂ.93ರಲ್ಲಿ 21.22 ಎಕರೆ ಹುಲ್ಲುಬನ್ನಿ ಜಾಗ ಸೇರಿದಂತೆ 94.13 ಎಕರೆ ಜಾಗವನ್ನು ಗುರುತಿಸಿ ಎರಡೂ ತಾಲೂಕಿನ ತಹಸೀಲ್ದಾರ್‌ಗಳು ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿದ್ದಾರೆ.
34
ಗೋಮಾಳ ಜಮೀನು
ರಾಗಿಮುದ್ದನಹಳ್ಳಿಯಲ್ಲಿ 118.31 ಎಕರೆಯಿದ್ದು ಅದರಲ್ಲಿ ಖಾಸಗಿ 25.18 ಎಕರೆ, ಗಣಿ ಗುತ್ತಿಗೆಗೆ 20.22 ಎಕರೆ, ಇತರೆ 1 ಎಕರೆ ಜಮೀನು, ಉಳಿಕೆ ಗೋಮಾಳ 71.31 ಎಕರೆ ಇದೆ. ಸಿದ್ದಾಪುರದಲ್ಲಿ 33.28 ಎಕರೆ ಜಮೀನಲ್ಲಿ ಖಾಸಗಿ 11.07ಎಕರೆ, ವಿವಿಧ ಯೋಜನೆಗಳಿಗೆ 4.30 ಎಕರೆಯಿದೆ. ಗೋಮಾಳದ ಜಮೀನು 21.22 ಎಕರೆ ಉಳಿದುಕೊಂಡಿರುವುದಾಗಿ ವಿವರದಲ್ಲಿ ದಾಖಲಿಸಲಾಗಿದೆ.
ನಿರ್ಮಾಣವಾಗುತ್ತಿರುವ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್‌ನಲ್ಲಿ ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೇಡ್, ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್ ಚಿಪ್ಗಳು ತಯಾರಾಗಲಿದ್ದು, ಭಾರತದ ಮಿಲಿಟರಿಗೂ ಪೂರೈಕೆ ಆಗುತ್ತದೆ. ಇದರ ಜೊತೆಯಲ್ಲಿಯೇ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಮಿಲಿಟರಿಗೂ ಇಲ್ಲಿನ ಉತ್ಪನ್ನಗಳು ಸರಬರಾಜು ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.