ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!

Published : Oct 06, 2025, 09:58 PM IST

India Investment News: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈ ಡಿಯರ್ ಫ್ರೆಂಡ್ ಅನ್ನುತ್ತಲೇ ಸುಂಕ ಹೆಚ್ಚಳ ಮಾಡುತ್ತಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕ ಕಂಪನಿಯೊಂದು ಶಾಕ್ ನೀಡಿದೆ.

PREV
16
ಅಮೆರಿಕ ಕಂಪನಿಯಿಂದ ಟ್ರಂಪ್‌ಗೆ ಶಾಕ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈ ಡಿಯರ್ ಫ್ರೆಂಡ್ ಅನ್ನುತ್ತಲೇ ಸುಂಕ ಹೆಚ್ಚಳ ಮಾಡುತ್ತಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕ ಕಂಪನಿಯೊಂದು ಶಾಕ್ ನೀಡಿದ್ದು, ಇದು ಭಾರತದ ಆರ್ಥಿಕತೆಗೆ ಸಕಾರಾತ್ಮಕ ಸುದ್ದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಎಚ್‌1ಬಿ ವೀಸಾ ಶುಲ್ಕವನ್ನು ಏರಿಕೆ ಮಾಡಿದ್ದರು. ಈ ಏರಿಕೆಯಿಂದಾಗಿ ಅಮೆರಿಕ ಕಂಪನಿಗಳು ಭಾರತೀಯರನ್ನು ನೇಮಿಸಿಕೊಳ್ಳಲು ಕಷ್ಟಪಡಬೇಕಾಗಿದೆ.

26
ಅಮೆರಿಕದ ಔಷಧ ಕಂಪನಿಯಿಂದ ಹೂಡಿಕೆ

ಇದೀಗ ಅಮೆರಿಕದ ಔಷಧ ಕಂಪನಿಯೊಂದು ಭಾರತದಲ್ಲಿ ಹೂಡಿಕೆ ಮಾಡೋದಾಗಿ ಘೋಷಿಸಿದೆ. ಅಮೆರಿಕೆಯ ಎಲಿ ಲಿಲ್ಲಿ ಆಂಡ್ ಕಂಪನಿ (Eli Lilly and Company) ಭಾರತದಲ್ಲಿ 1 ಬಿಲಿಯನ್ ಯುಎಸ್ ಡಾಲರ್ (ಸುಮಾರು 8,879 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿಕೊಂಡಿದೆ. ಭಾರತೀಯರ ನೇಮಕ ಕಷ್ಟವಾಗುತ್ತಿರುವ ಹಿನ್ನೆಲೆ ಅಮೆರಿಕದ ಕಂಪನಿಗಳು ಭಾರತದತ್ತ ಮುಖ ಮಾಡುತ್ತಿವೆ. ಎಲಿ ಲಿಲ್ಲಿ ಆಂಡ್ ಕಂಪನಿ ಭಾರತದಲ್ಲಿ ಉತ್ಪಾದನೆ ಮತ್ತು ತನ್ನ ಉತ್ಪನ್ನಗಳ ಪೂರೈಕೆಯನ್ನು ವಿಸ್ತರಣೆ ಮಾಡೋದಾಗಿ ಹೇಳಿಕೊಂಡಿದೆ.

36
ಎಲಿ ಲಿಲ್ಲಿ ಆಂಡ್ ಕಂಪನಿ ಎಲ್ಲಿ ಆರಂಭ?

ಎಲಿ ಲಿಲ್ಲಿ ಆಂಡ್ ಕಂಪನಿ ಹೈದರಾಬಾದ್‌ನಲ್ಲಿ ತನ್ನ ಹೊಸ ಕೇಂದ್ರ ಆರಂಭಿಸಲಿದ್ದು, ಇದು ಉತ್ತಮ ಗುಣಮಟ್ಟದ ತಂತ್ರಜ್ಞಾನ ಮತ್ತು ನಾವೀನ್ಯತೆ ಸೇವೆಗಳನ್ನು ಒದಗಿಸಲಿದೆ ಎಂದು ನಂಬಲಾಗಿದೆ. ಇದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ. 2025ರ ಆರಂಭದಲ್ಲಿ ತೂಕ ಇಳಿಸುವಿಕೆ ಮತ್ತು ಮಧುಮೇಹ 'ಮೌಂಜಾರೊ' (Mounjaro) ಹೆಸರಿನ ಔಷಧವನ್ನು ಬಿಡುಗಡೆ ಮಾಡಿತ್ತು. ಭಾರತ ಮಧುಮೇಹ ಔಷಧಿಗಳ ಅತಿದೊಡ್ಡ ಮಾರುಕಟ್ಟೆಯಾಗುತ್ತಿದ್ದು, ಈ ಹಿನ್ನೆಲೆ ಅಮೆರಿಕ ಕಂಪನಿ ಭಾರತದತ್ತ ಮುಖ ಮಾಡಿದೆ. ಈ ಕಂಪನಿ ಭವಿಷ್ಯದಲ್ಲಿ ಗಮನಾರ್ಹ ಲಾಭ ಮಾಡಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ

46
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯೆ

ಎಲಿ ಲಿಲ್ಲಿ ಆಂಡ್ ಕಂಪನಿ ಹೂಡಿಕೆ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕ ಕಂಪನಿಯ ಹೂಡಿಕೆಯು ರಾಜ್ಯದಲ್ಲಿ ಹೆಚ್ಚು ಉದ್ಯೋಗವಕಾಶ ಸೃಷ್ಟಿಸುವುದಲ್ಲದೇ ಭಾರತದ ಜೈವಿಕ ತಂತ್ರಜ್ಞಾನ ಮತ್ತು ಔಷಧೀಯ ಕೈಗಾರಿಕೆಗಳಿಗೆ ಹೊಸ ಚೈತನ್ಯವನ್ನು ನೀಡಲಿದೆ. ಈ ಹೂಡಿಕೆಯಿಂದ ಜಾಗತೀಕಮಟ್ಟದಲ್ಲಿ ಹೈದರಾಬಾದ್ ಉದಯೋನ್ಮುಖ ನಗರವಾಗಲಿದೆ ಎಂದು ರೇವಂತ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

56
ಸ್ಥಳೀಯ ಔಷಧ ಕಂಪನಿಗಳ ಪಾಲುದಾರಿಕೆ

ತೆಲಂಗಾಣದ ಸ್ಥಳೀಯ ಔಷಧ ಕಂಪನಿಗಳ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಎಲಿ ಲಿಲ್ಲಿ ಘೋಷಿಸಿಕೊಂಡಿದೆ. ಈ ಪಾಲುದಾರಿಕೆ ಮೂಲಕ ಕಡಿಮೆ ದರದಲ್ಲಿ ಗುಣಮಟ್ಟದ ಬೊಜ್ಜು ಮತ್ತು ಮಧುಮೇಹ ಔಷಧಿಗಳನ್ನು ಜನರಿಗೆ ತಲುಪಿಸುವ ಗುರಿ ಹೊಂದಿದೆ. ಜಾಗತಿಕವಾಗಿ ನಮ್ಮ ಔಷಧ ಉತ್ಪನ್ನ ಹಂಚಿಕೆಯನ್ನು ವಿಸ್ತರಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದಲ್ಲಿಯ 1 ಬಿಲಿಯನ್ ಡಾಲರ್ ಹೂಡಿಕೆ ನಮ್ಮ ವಿಸ್ತರಣೆಯ ಕಾರ್ಯತಂತ್ರವಾಗಿದೆ ಎಂದು ಎಲಿ ಲಿಲ್ಲಿ ಇಂಟರ್‌ನ್ಯಾಷನಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ಯಾಟ್ರಿಕ್ ಜಾನ್ಸನ್ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಶೀಘ್ರದಲ್ಲಿ ಕಡಿಮೆಯಾಗಲಿದೆ ಚಿನ್ನದ ಬೆಲೆ? ಎಷ್ಟು ಇಳಿಕೆ? ಮಾರುಕಟ್ಟೆ ತಜ್ಞರ ಭವಿಷ್ಯವಾಣಿ ಏನು?

66
ಆರೋಗ್ಯ ರಕ್ಷಣೆ ಮತ್ತು ಔಷಧ ವಲಯ

ಎಲಿ ಲಿಲ್ಲಿ ಕಂಪನಿಯ ಹೂಡಿಕೆ ಭಾರತದ ಆರೋಗ್ಯ ರಕ್ಷಣೆ ಮತ್ತು ಔಷಧ ವಲಯಗಳಲ್ಲಿ ಪ್ರಮುಖ ಬೆಳವಣಿಗೆಯಾಗಲಿದೆ. ಎಲಿ ಲಿಲ್ಲಿಯಂತಹ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರೋದು ಜಾಗತೀಕ ಹೂಡಿಕೆಗೆ ಆಕರ್ಷಣೆಯಾಗಲಿದೆ. ಭಾರತದ ಮಾರುಕಟ್ಟೆಯ ಉತ್ಪದನಾ ಸಾಮರ್ಥ್ಯ ಮತ್ತು ಮೂಲಸೌಕರ್ಯ ಒದಗಿಸುವಿಕೆಯನ್ನು ದೃಢಪಡಿಸುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಭಾರತಕ್ಕೆ ಶಾಕ್ ನೀಡಲು ಚಾಪೆ ಕೆಳಗೆ ನುಗ್ಗಿದ್ದ ಟ್ರಂಪ್‌ಗೆ ಆಘಾತ; ರಂಗೋಲಿ ಕೆಳಗೆ ನುಸಳಲು ಅಮೆರಿಕನ್ ಕಂಪನಿಗಳು ಪ್ಲಾನ್

Read more Photos on
click me!

Recommended Stories