Post Officeನಲ್ಲಿ ಉಳಿತಾಯ ಮಾಡಿ- ಬ್ಯಾಂಕ್​ಗಳಿಗಿಂತಲೂ ಹೆಚ್ಚು ಬಡ್ಡಿ ಪಡೆಯಿರಿ: ಪರಿಷ್ಕೃತ ರೇಟ್ ಇಲ್ಲಿದೆ

Published : Oct 06, 2025, 01:15 PM IST

ಖಾಸಗಿ ಸಂಸ್ಥೆಗಳ ಮೋಸದ ಬಲೆಗೆ ಬೀಳುವ ಬದಲು, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುವುದು ಸುರಕ್ಷಿತ ಮತ್ತು ಲಾಭದಾಯಕ. ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿ ನೀಡುವ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

PREV
16
ಮೋಸ ಹೋಗುವ ಮೊದಲು...

ಕಷ್ಟಪಟ್ಟು ದುಡಿದು ಉಳಿತಾಯ ಮಾಡುವ ಹಣವನ್ನು ಠೇವಣಿ ಇಟ್ಟು ಭವಿಷ್ಯದ ಭದ್ರತೆಗಾಗಿ ಯೋಚನೆ ಮಾಡುವ ದೊಡ್ಡ ವರ್ಗವೇ ಇದೆ. ಅದಕ್ಕಾಗಿ ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಯಾವುದೋ ಖಾಸಗಿ ಸಂಸ್ಥೆಗಳಲ್ಲಿ ಹಣವನ್ನು ಇಟ್ಟು ಲಕ್ಷಾಂತರ ರೂಪಾಯಿ ಟೋಪಿ ಹಾಕಿಸಿಕೊಳ್ಳುವವರೂ ಅಷ್ಟೇಪ್ರಮಾಣದಲ್ಲಿ ಇದ್ದಾರೆ. ಹಣವನ್ನು ಡಬಲ್​ ಮಾಡುವ, ಅತಿ ಹೆಚ್ಚು ಬಡ್ಡಿ ಕೊಡುವ ನೆಪದಲ್ಲಿ ಜನರನ್ನು ಬಣ್ಣ ಬಣ್ಣದ ಮಾತುಗಳಿಂದ ಮರುಳು ಮಾಡಿ ಹಣ ಲಪಟಾಯಿಸುತ್ತಿದ್ದಾರೆ.

26
ಬ್ಯಾಂಕ್​ಗಳಿಗಿಂತ ಅಧಿಕ ಬಡ್ಡಿ

ಆದರೆ ಬ್ಯಾಂಕ್​ಗಳಲ್ಲಿ ಸಿಗುವ ಕಡಿಮೆ ಬಡ್ಡಿದರಕ್ಕೆ ಹಣವನ್ನು ಇಡುವ ಬದಲು, ಇಂಥ ಸಂಸ್ಥೆಗಳಲ್ಲಿ ಹಣ ಇಡಬಹುದಲ್ಲಾ ಎನ್ನುವ ಯೋಚನೆ ಮಾಡುವವರೇ ಹೆಚ್ಚುಮಂದಿ. ಆದರೆ ಮೋಸ ಹೋಗುವ ಬದಲು, ಕಡಿಮೆ ಬಡ್ಡಿಯಾದರೂ ಬ್ಯಾಂಕ್​ಗಳಲ್ಲಿ ಬೇಸರದಿಂದ ಎಫ್​ಡಿ ಇಡುವವರೂ ಇದ್ದಾರೆ. ಆದರೆ ನಿಮ್ಮ ಭವಿಷ್ಯದ ದೃಷ್ಟಿಯಿಂದ ಬ್ಯಾಂಕ್​ಗಳಿಗಿಂತಲೂ ಹೆಚ್ಚಿನ ಬಡ್ಡಿದರದ ಜೊತೆಗೆ, ನಿಮ್ಮ ಹಣಕ್ಕೆ 100% ಸೆಕ್ಯುರಿಟಿ ಇರುವ ಉಳಿತಾಯ ಯೋಜನೆ ಎಂದರೆ ಅದು ಪೋಸ್ಟ್​ ಆಫೀಸ್​ ಯೋಜನೆಗಳು.

36
ಪೋಸ್ಟ್​ ಆಫೀಸ್​ ವಿವಿಧ ಯೋಜನೆಗಳು

ಇದಾಗಲೇ ಸಾಕಷ್ಟು ಯೋಜನೆಗಳು ಅಂಚೆ ಕಚೇರಿಯಲ್ಲಿ ಇವೆ. ಚಿಕ್ಕಮಕ್ಕಳಿನಿಂದ ಹಿಡಿದು ಹಿರಿಯ ನಾಗರಿಕರು, ಮಹಿಳೆಯರು ಹೀಗೆ ವಿಭಿನ್ನ ರೀತಿಯ ಯೋಜನೆಗಳು ಈಗ ಲಭ್ಯವಿವೆ. ಅದರಲ್ಲಿ ಬಡ್ಡಿದರವೂ ಹೆಚ್ಚಿನದ್ದಾಗಿದೆ. ಈ ಬಡ್ಡಿದರಗಳನ್ನು ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಿಸಲಾಗುತ್ತದೆ. ಇದೀಗ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಬಡ್ಡಿದರ ಪಟ್ಟಿ ಬಿಡುಗಡೆಯಾಗಿದೆ.

46
ಬಡ್ಡಿದರ ಯಾವುದಕ್ಕೆ ಹೆಚ್ಚು?

ಕಳೆದ ಮೂರು ತಿಂಗಳು ಇರುವ ಬಡ್ಡಿದರವನ್ನೇ ಈಗಲೂ ಮುಂದುವರೆಸಲಾಗಿದ್ದು, ಅವುಗಳ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ. ಇದರಲ್ಲಿ 10 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಿಗಾಗಿಯೇ ಇರುವ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana -SSY) ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಇತರ ಪ್ರಮುಖ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಸಿಗುವ ಠೇವಣಿ ದರಕ್ಕೆ ಹೋಲಿಸಿದರೆ ಹೆಚ್ಚಿನ ಬಡ್ಡಿ ಸಿಗುತ್ತದೆ.

56
Post Office ವಿವಿಧ ಬಡ್ಡಿದರಗಳು
  • ಸೇವಿಂಗ್ಸ್ ಡೆಪಾಸಿಟ್ (Post Office Saving Deposit): ಶೇ. 4 ಬಡ್ಡಿ
     
  • ಟರ್ಮ್ ಡೆಪಾಸಿಟ್ (Post Office Term Depisit ) 1 ವರ್ಷ: ಶೇ. 6.90 ಬಡ್ಡಿ
     
  • ಟರ್ಮ್ ಡೆಪಾಸಿಟ್ 2 ವರ್ಷ: ಶೇ. 7 ಬಡ್ಡಿ
     
  • ಟರ್ಮ್ ಡೆಪಾಸಿಟ್ 3 ವರ್ಷ: ಶೇ. 7.10 ಬಡ್ಡಿ
     
  • ಟರ್ಮ್ ಡೆಪಾಸಿಟ್ 5 ವರ್ಷ: ಶೇ. 7.50 ಬಡ್ಡಿ
     
  • ಪೋಸ್ಟ್ ಆಫೀಸ್ ಆರ್​ಡಿ (Post Office RD) 5 ವರ್ಷ: ಶೇ. 6.70 ಬಡ್ಡಿ
     
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (National Saving Certificate) 5 ವರ್ಷ: ಶೇ. 6.70 ಬಡ್ಡಿ
     
  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಶೇ. 7.40 ಬಡ್ಡಿ
     
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ PPF: ಶೇ. 7.10 ಬಡ್ಡಿ
     
  • ಕಿಸಾನ್ ವಿಕಾಸ್ ಪತ್ರ: ಶೇ. 7.50 ಬಡ್ಡಿ
     
  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.20 ಬಡ್ಡಿ
     
  • ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.20 ಬಡ್ಡಿ
66
ದೀರ್ಘಾವಧಿ ಹೂಡಿಕೆಗೆ PPF

ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್​ (Public Provident Fund)ನಲ್ಲಿ ಠೇವಣಿಗೆ ಶೇ. 7.1 ಬಡ್ಡಿ ಸಿಗುತ್ತದೆ. ಇದರ ಕನಿಷ್ಠ ಹೂಡಿಕೆ ಅವಧಿ 15 ವರ್ಷ ಇರುವುದರಿಂದ ದೀರ್ಘಾವಧಿ ಇನ್ವೆಸ್ಟ್​ಮೆಂಟ್ ಎನಿಸಿದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಹೂಡಿಕೆಗೆ ಅವಕಾಶ ಇರುತ್ತದೆ. 15 ವರ್ಷಕ್ಕೆ ಮೆಚ್ಯೂರ್ ಆಗುತ್ತದಾದರೂ ಹೂಡಿಕೆಯನ್ನು ಐದೈದು ವರ್ಷ ವಿಸ್ತರಿಸಬಹುದಾಗಿದೆ.

Read more Photos on
click me!

Recommended Stories