ನೌಕರರಿಗೆ 8ನೇ ವೇತನ ಆಯೋಗ ಬಂಪರ್, ಜ.1ರಿಂದ ಪಿಯೋನ್‌ಗೆ 45000, ಸೆಕ್ರೆಟರಿಗೆ 5 ಲಕ್ಷ ರೂ ಸ್ಯಾಲರಿ, ಹೊಸ ವರ್ಷದಿಂದ ವೇತನ ಹೆಚ್ಚಳವಾಗುತ್ತಿದೆ. ಲೆವೆಲ್ 1 ರಿಂದ ಲೆವೆಲ್ 18ರ ವರೆಗಿನ ನೌಕರರ ವೇತನ ಭಾರಿ ಹೆಚ್ಚಳವಾಗುತ್ತಿದೆ. ಯಾರ ಸ್ಯಾಲರಿ ಎಷ್ಟಾಗಲಿದೆ?
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ಅನುಮೋದನೆ ನೀಡಿದೆ. ಜನವರಿ 1 ರಿಂದ 8ನೇ ವೇತನ ಆಯೋಗ ಜಾರಿಯಾಗುತ್ತಿದೆ. ಹೊಸ ವರ್ಷದಿಂದ ಕೇಂದ್ರ ಸರ್ಕಾರಿ ನೌಕರರ ಸ್ಯಾಲರಿ ಭರ್ಜರಿಯಾಗಿ ಹೆಚ್ಚಳವಾಗುತ್ತಿದೆ. ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಲೆವಲ್1ನಿಂದ ಲೆವೆಲ್ 18ರ ವರೆಗಿನ ಎಲ್ಲಾ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ.
25
8ನೇ ವೇತನ ಆಯೋಗದ ವೇತನ ಹೆಚ್ಚಳ (ಅಂದಾಜು ಸರಾಸರಿ)
ಪಿಯೋನ್ ಸೇರಿ ಡಿ ಗ್ರೂಪ್ ನೌಕರರು: 45,000 ರೂಪಾಯಿ (ಸದ್ಯ 18,000 ರೂಪಾಯಿ)
ಲೆವೆಲ್ 5:62,700 ರೂಪಾಯಿ (ಸದ್ಯ ವೇತನ 29,200 ರೂಪಾಯಿ)
ಲೆವೆಲ್ 10: 1,20,615 ರೂಪಾಯಿ (ಸದ್ಯ 56,100 ರೂಪಾಯಿ)
ಲೆವೆಲ್ 15:3,91,730 ರೂಪಾಯಿ (ಸದ್ಯ 1,82,200 ರೂಪಾಯಿ)
ಲೆವೆಲ್ 18: 5,37,500 ರೂಪಾಯಿ (ಸದ್ಯ 2,50,00 ರೂಪಾಯಿ)
35
ಬೇಸಿಕ್ ಸ್ಯಾಲರಿ ಗಣನೀಯ ಹೆಚ್ಚಳ
ಈ ಬಾರಿಯ ವೇತನ ಹೆಚ್ಚಳದ ವಿಶೇಷತೆ ಎಂದರೆ ಬೇಸಿಕ್ ಸ್ಯಾಲರಿ ಭಾರಿ ಹೆಚ್ಚಳವಾಗುತ್ತಿದೆ. ಇದರಿಂದ ಪ್ರತಿಯೊಬ್ಬ ವೇತನ ಗಣನೀಯವಾಗಿ ಏರಿಕೆಯಾಗುತ್ತಿದೆ.
ಈ ಹಿಂದಿನ 7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025ರ ವರೆಗೆ ಅನ್ವಯವಾಗುತ್ತದೆ. 2026ರಿಂದ ಹೊಸ ವೇತನ ಆಯೋಗ ನಿಗಧಿಪಡಿಸಲು 8ನೇ ವೇತನ ಆಯೋಗ ಸಭೆ ನಡೆಸಿತ್ತು. ಹಲವು ವರದಿ, ಸಭೆಗಳ ಮೂಲಕ ಆಯೋಗ 8ನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿತ್ತು.
55
ಬೇಸಿಕ್ ಸ್ಯಾಲರಿ ಹೆಚ್ಚಳ
8ನೇ ವೇತನ ಆಯೋಗದಲ್ಲಿ ಬೇಸಿಕ್ ಸ್ಯಾಲರಿ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ತುಟ್ಟಿ ಭತ್ಯೆ, ದಿನಭತ್ಯೆ ಸೇರಿದಂತೆ ಇತರ ಸೌಲಭ್ಯಗಳು ಸೇರಿಕೊಳ್ಳಲಿದೆ. ಇದರಿಂದ ಕೈಸೇರುವ ವೇತನ ದುಪ್ಪಟ್ಟಾಗುತ್ತಿದೆ.
ಬೇಸಿಕ್ ಸ್ಯಾಲರಿ ಹೆಚ್ಚಳ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.