ಆಧಾರ್ -ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಸರಳ ವಿಧಾನ ಇಲ್ಲಿದೆ, ಇಂದೆ ಲಾಸ್ಟ್ ಡೇಟ್, ನಾಳೆಯಿಂದ ದಂಡ ಮಾತ್ರವಲ್ಲ, ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಸುಲಭವಾಗಿ ಮನೆಯಲ್ಲೇ ಕುಳಿತು ಲಿಂಕ್ ಮಾಡುವುದು ಹೇಗೆ?
ಕೇಂದ್ರ ಸರ್ಕಾರ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಹಲವು ಬಾರಿ ಸೂಚಿಸಿದೆ. ಇದಕ್ಕಾಗಿ ಹಲವು ಗಡುವು ನೀಡಿತ್ತು. ಇದೀಗ ಡಿಸೆಂಬರ್ 31, 2025 ಲಾಸ್ಟ್ ಡೇಟ್. ಯಾರೆಲ್ಲಾ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಇಂದು ಕೊನೆಯ ಅವಕಾಶವಿದೆ. ಬಳಿಕ ದಂಡ, ಪಾನ್ ಕಾರ್ಡ್ ನಿಷ್ಕ್ರಿಯ, ಸೌಲಭ್ಯಗಳ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ.
25
ಕೇಂದ್ರ ಸರ್ಕಾರದ ಎಚ್ಚರಿಕೆ
ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಆಗಿದ್ದರೆ, ಅಂತಹ ಪಾನ್ ಕಾರ್ಡ್ ಮಾನ್ಯವಾಗುವುದಿಲ್ಲ. ಯಾವುದೇ ತೆರಿಗೆ ಸಂಬಂಧಿಸಿದ ದಾಖಲೆಗಳಿಗೆ ಪಾನ್ ಕಾರ್ಡ್ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇದೀಗ ತೆರಿಗೆ ಮಾತ್ರವಲ್ಲ ಹಲವು ರೀತಿಯಲ್ಲಿ ಸಮಸ್ಯೆಗಳಾಗಲಿದೆ. ಹೀಗಾಗಿ ಅವಧಿಗೂ ಮುನ್ನ ಲಿಂಕ್ ಮಾಡಲು ಸೂಚಿಸಿದೆ.
35
ಆಧಾರ್ ಕಾರ್ಡ್-ಪಾನ್ ಲಿಂಕ್ ಮಾಡುವುದು ಹೇಗೆ
ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ( https://www.incometax.gov.in/iec/foportal/)
ಫ್ರೊಫೈಲ್ ಸೆಕ್ಷನ್ ಕ್ಲಿಕ್/ಟ್ಯಾಪ್ ಮಾಡಿ ಆಧಾರ್ ಪಾನ್ ಕಾರ್ಡ್ ಲಿಂಕ್ ಆಯ್ಕೆ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸಂಖ್ಯೆ, ಹೆಸರು ಸೇರಿದಂತೆ ದಾಖಲೆ ನಮೂದಿಸಿ
ಎಲ್ಲಾ ದಾಖಲೆ ನಮೂದಿಸಿ ವ್ಯಾಲಿಡೇಟ್ ಕ್ಲಿಕ್ ಮಾಡಬೇಕು
ಆಧಾರ್ ಕಾರ್ಡ್ ನೋಂದಣಿ ಸಂಖ್ಯೆ ಮೊಬೈಲ್‌ಗೆ ಒಟಿಪಿ ಬರಲಿದೆ. ಈ ಒಟಿಪಿ ನಮೂದಿಸಬೇಕು
ಡಿ.31 ಕೊನೆಯ ದಿನ. ನಾಳೆಯಿಂದ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಲು 1,000 ರೂಪಾಯಿ ಪಾವತಿಸಬೇಕು. ಇಷ್ಟೇ ಅಲ್ಲ ಕೆಲ ದಿನಗಳ ವರಗೆ ದಂಡದ ಆಯ್ಕೆ ಇರಲಿದೆ. ಬಳಿಕ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಮತ್ತೆ ಲಿಂಕ್ ಮಾಡಬೇಕಾದಲ್ಲಿ, ಪಾನ್ ಕಾರ್ಡ್ ಸಕ್ರಿಯ ಮಾಡಿ, ದಂಡ ಪಾವತಿಸಿ ಲಿಂಕ್ ಮಾಡಬೇಕು.
ಜನವರಿ 1 ರಿಂದ 1,000 ರೂಪಾಯಿ ದಂಡ
55
ಲಿಂಕ್ ಮಾಡದಿದ್ದರೆ ಗಂಭೀರ ಸಮಸ್ಯೆ
ಐಟಿಆರ್ ಸಲ್ಲಿಕೆ ಮಾಡಲು, ಪರಿಶೀಲಿಸಲು,ಮರುಪಾವತಿ ಸಮಸ್ಯೆಯಾಗಲಿದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಬ್ಯಾಂಕಿಂಗ್, ಸಾಲ ಸೇರಿದಂತೆ ಯಾವುದೇ ಸೌಲಭ್ಯಗಳು ಲಭ್ಯವಾಗುವುದಿಲ್ಲ. ಹೊಸ ಹೂಡಿಕೆ ಮಾಡಲು ಸಾಧ್ಯವಾಗುದಿಲ್ಲ. ಡಿಮ್ಯಾಟ್, ಷೇರು ವ್ಯವಹಾರ ಸೇರಿದಂತೆ ಎಲ್ಲವೂ ಸಮಸ್ಯೆಗೆ ಸಿಲುಕಲಿದೆ.
ಲಿಂಕ್ ಮಾಡದಿದ್ದರೆ ಗಂಭೀರ ಸಮಸ್ಯೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.