ಅಲ್ಲ ಹೀಗೂ ಇರ್ತಾರಂತ. ತಿನ್ನೋ ಅವಸರಾನ, ನಿರ್ಲಕ್ಷ್ಯನಾ ಏನೋಪ್ಪಾ ಆಕೆಯಂತೂ ರಾಶಿ ರಾಶಿ ಇರುವೇನಾ ತಿಂದುಬಿಟ್ಟಿದ್ದಾಳೆ. ಛೀ ಇರುವೆ (Ant)ಯನ್ನು ತಿನ್ನೋದಾ ಅನ್ಬೇಡಿ. ಆಕೆ ತಿಂದಿದ್ದು ಕೂಡಾ ಗೊತ್ತಿಲ್ದೇನೆ. ಅಷ್ಟಕ್ಕೂ ಅಲ್ಲಾಗಿದ್ದೇನು. ತಿಳ್ಕೊಳ್ಳೋಣ.
ಮನುಷ್ಯ (Human)ನನ್ನು ಜಾಣ್ಮೆಯುಳ್ಳವ, ಬುದ್ಧಿವಂತ ಎಂದು ಗುರುತಿಸಲಾಗುತ್ತದೆ. ಆದರೆ ಇದೇ ಮನುಷ್ಯ ಕೆಲವೊಮ್ಮೆ ಪರಮಮೂರ್ಖನಂತೆ ವರ್ತಿಸುವುದೂ ಇದೆ. ಅಂಥಾ ಹಲವಾರು ಎಡವಟ್ಟಿನ ಪ್ರಸಂಗಗಳು ಈಗಾಗ್ಲೆ ನಡೆದಿವೆ. ಅದಕ್ಕೆ ಇನ್ನೊಂದು ಸೇರ್ಪಡೆ ಈ ಘಟನೆ. ಇಲ್ಲಿ ಮಹಿಳೆ (Women)ಯೊಬ್ಬಾಕೆ ಏನು ಮಾಡಿದ್ದಾಳೆಂದು ತಿಳಿದರೆ ಅರೆ ಇದೇನು ವಿಚಿತ್ರ ಅಂತ ನೀವು ಆಶ್ಚರ್ಯಪಡೋದು ಖಂಡಿತ. ಮಹಿಳೆ ಮಾಡಿದ್ದು ಮತ್ತೇನಲ್ಲ, ಬಿಸ್ಕೆಟ್ ತಿಂದಿರೋದು ಆದ್ರೆ ಅಲ್ಲಾಗಿರೋ ಎಡವಟ್ಟು ಮಾತ್ರ ಬೇರೇನೆ.
ಹೌದು ಮಹಿಳೆ ಬಿಸ್ಕೆಟ್ (Biscuit) ತಿಂದಿದ್ದೇನೋ ಸರಿ. ಆದ್ರೆ ಅದು ಅಂತಿಂಥಾ ಬಿಸ್ಕೆಟ್ ಅಲ್ಲ. ಫುಲ್ ಇರುವೆಗಳಿಂದ ತುಂಬಿದ್ದ ಬಿಸ್ಕೆಟ್. ಬೇರೇನೋ ಕೆಲಸ ಮಾಡುತ್ತಿದ್ದ ಮಹಿಳೆ ಬಿಸ್ಕೆಟ್‌ಗೆ ಬೀಜ ಹಾಕಿದ್ದಾರೆ ಎಂದು ತಿಳಿದುಕೊಂಡು ಬಿಸ್ಕೆಟ್‌ನ್ನು ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾಳೆ. ಆದ್ರೆ ತಿಂದ ಸ್ಪಲ್ಪ ಹೊತ್ತಿನಲ್ಲಿ ಅದು ಬೀಜವಲ್ಲ ಇರುವೆಗಳು ಎಂದು ಗೊತ್ತಾಗಿದೆ. ಮಹಿಳೆ ಇರುವೆ (Ant) ತುಂಬಿದ ಬಿಸ್ಕೆಟ್ ತಿಂದಿರುವ ವೀಡಿಯೋ (Video) 20 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
Eatable Tea Cups: ಚಹಾ ಕುಡಿದು ಕಪ್ ತಿನ್ನಿ..! ಗಮನ ಸೆಳೆಯುತ್ತಿದೆ ಟೀ ಸ್ಟಾಲ್
ಟಿಕ್‌ಟೋಕರ್ ಬ್ರೆನ್ನಾ ಇರುವೆಗಳಿದ್ದ ಬಿಸ್ಕೆಟ್‌ನ್ನು ತಿಂದಿದ್ದಾರೆ. ನಿಜವಾಗಿ ಏನಾಯಿತು ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಬ್ರೆನ್ನಾ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ನೀವು ಬಹುಶಃ ಬೀಜಗಳೊಂದಿಗೆ ಬರುವ ಕುಕೀಸ್ ಅಥವಾ ಬಿಸ್ಕೆಟ್‌ಗಳನ್ನು ಅಥವಾ ಅದರ ಮೇಲ್ಮೈಯಲ್ಲಿ ಹರಡಿರುವ ಸಣ್ಣ ಚಾಕೊಲೇಟ್ ಚಿಪ್‌ಗಳನ್ನು ತಿಂದಿರಬಹುದು. ಬಿಸ್ಕೆಟ್ ಮೇಲೆ ಎಳ್ಳಿನಿಂದ ಜೀರಿಗೆಯವರೆಗೆ, ಕಡಲೇಬೀಜ, ಗೋಡಂಬಿ, ದ್ರಾಕ್ಷಿ ಹೀಗೆ ಏನೇನನ್ನೋ ಸೇರಿಸಿರುತ್ತಾರೆ. ಆದರೆ ಕೆಲವೊಮ್ಮೆ, ಕುಕೀ ಅಥವಾ ಬಿಸ್ಕತ್ತು ತಿನ್ನುವ ಮೊದಲು ಅದರ ಗುಣಮಟ್ಟ ಮತ್ತು ಸ್ಥಿತಿಯನ್ನು ಪರಿಶೀಲಿಸುವುದು ಅವಶ್ಯಕ. ಯಾಕೆಂದರೆ ಬಿಸ್ಕೆಟ್‌ಗಿಂತ ಮೊದಲು ಇಂಥಾ ಮೇಲ್ಮೆಯಲ್ಲಿ ಹರಡಿರುವ ಬೀಜಗಳು ಹಾಳಾಗುತ್ತವೆ. ಆದ್ರೆ ಬ್ಯಾಡ್‌ಟೈಂ ಅಂದ್ರೆ ಮಹಿಳೆ ಅದನ್ನು ಸಹ ಮಾಡಲು ಹೋಗಿಲ್ಲ. ಸುಮ್ಮನೆ ಪ್ಯಾಕೆಟ್ ಓಪನ್ ಮಾಡಿ ಬಿಸ್ಕೆಟ್ ಗಬಗಬನೇ ತಿಂದಿದ್ದಾಳೆ ಅಷ್ಟೆ.
ಟಿಕ್‌ಟೋಕರ್ ಬ್ರೆನ್ನಾ ಪ್ಯಾಕೆಟ್‌ನಿಂದ ಬಿಸ್ಕೆಟ್ ತಿನ್ನುವ ಭಯಾನಕತೆಯನ್ನು ಬಹಿರಂಗಪಡಿಸಿದ್ದಾರೆ. ನಾನು ಬೀಜಗಳಿಂ ಅಲಂಕರಿಸಿದ ಬಿಸ್ಕೆಟ್ ಎಂದು ಖುಷಿಯಿಂದ ತಿನ್ನುತ್ತಿದ್ದೆ.ನಂತರ ನನ್ನ ಬಾಯಿಯ ಮೇಲೆ ಇರುವೆ ಧೂಳನ್ನು ನಾನು ಗಮನಿಸಿದೆ. ಆಗ ನಾನು ಬಿಸ್ಕೆಟ್ ಜೊತೆಗೆ ಇರುವೆಯನ್ನು ತಿನ್ನುತ್ತಿರುವುದು ಗೊತ್ತಾಯಿತು ಎಂದು ಬ್ರೆನ್ನಾ ಹೇಳಿದರು. ತಿಂದಾದ ನಂತರ ಬಿಸ್ಕೆಟ್ ಮೇಲಿದ್ದಿದ್ದು ಮೇಲೆ ಕಪ್ಪು ಕಲೆಗಳು ಬೀಜಗಳು ಅಥವಾ ಚಾಕೊಲೇಟ್ ಅಲ್ಲ ಇರುವೆಗಳು ಎಂದು ತಿಳಿದುಬಂತು ಎಂದು ತಿಳಿಸಿದ್ದಾರೆ.
ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ!
ಬ್ರೆನ್ನಾ ತನ್ನ ಅನುಯಾಯಿಗಳಿಗೆ ಇರುವೆಗಳಿಂದ ಮುಚ್ಚಿದ ಬಿಸ್ಕೆಟ್‌ಗಳನ್ನು ತಪ್ಪಾಗಿ ತಿನ್ನುವ ಅನುಭವದ ಬಗ್ಗೆ ಹೇಳಲು ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಬಿಸ್ಕೆಟ್‌ನಲ್ಲಿರುವುದು ಬೀಜಗಳು ಎಂದು ನಾನು ಭಾವಿಸಿದೆ. ನಾನು ಈಗಾಗಲೇ ಎರಡನ್ನು ತಿಂದಿದ್ದೇನೆ. ಹೀಗಾಗಿ ಎಲ್ಲರೂ ಬಿಸ್ಕೆಟ್ ತಿನ್ನುವ ಮೊದಲು ಎಚ್ಚರ ವಹಿಸಬೇಕು ಎಂದು ಬ್ರೆನ್ನಾ ಹೇಳಿದ್ದಾರೆ.
ಬ್ರೆನ್ನಾ ಶೇರ್ ಮಾಡಿರುವ ಕ್ಲಿಪ್ ಈಗ 20 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಇತರ ಟಿಕ್‌ಟೋಕರ್‌ಗಳಿಂದ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಗಳಿಸಿದೆ. ಹೆಚ್ಚಿನವರು ಘಟನೆಯ ತಮಾಷೆಯ ಭಾಗವನ್ನು ನೋಡಿದ್ದರೆ, ಕೆಲವರು ಈ ಘಟನೆಯು ಬ್ರೆನ್ನಾಗೆ ಆಘಾತಕಾರಿಯಾಗಿರಬಹುದು ಎಂದು ಹೇಳಿದರು.
ಒಬ್ಬ ಬಳಕೆದಾರನು, ಇದು ತುಂಬಾ ಆಘಾತಕಾರಿಯಾಗಿದೆ ಎಂದು ಬರೆದಿದ್ದಾರೆ. ನಾನು 10 ವರ್ಷಗಳ ಹಿಂದೆ Do-Si-Do ಕುಕೀಗಳ ಬಾಕ್ಸ್‌ನೊಂದಿಗೆ ಅದೇ ಕೆಲಸವನ್ನು ಮಾಡಿದ್ದೇನೆ ಮತ್ತು ನಂತರ ಕುಕೀಯನ್ನು ತಿನ್ನಲು ಭಯಪಡುತ್ತಿದ್ದೇಟನೆ ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.