ಹಾಲು ಆರೋಗ್ಯಕ್ಕೆ ಅತ್ಯುತ್ತಮ ಅನ್ನೋದು ಹೆಚ್ಚಿನವರಿಗೆ ತಿಳಿದಿದೆ. ಆದರೆ ಹಾಲನ್ನು ಯಾವಾಗ ಕುಡಿದರೆ ಆರೋಗ್ಯಕ್ಕೆ ಒಳ್ಳೆಯು ಎಂಬ ಬಗ್ಗೆ ಹೆಚ್ಚಿನವರು ತಿಳಿದಿಲ್ಲ. ಬೆಳಗ್ಗೆದ್ದು ಹಾಲು ಕುಡಿಯೋ ಅಭ್ಯಾಸ ಒಳ್ಳೇದಾ ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಹಾಲು ಮಗುವಿಗೆ ನೀಡುವ ಮೊದಲ ಆಹಾರವಾಗಿದೆ. ಅಂದಿನಿಂದ ದೊಡ್ಡವರಾಗುವ ವರೆಗೂ ಪ್ರತಿಯೊಬ್ಬರ ಆಹಾರದ ಅತ್ಯಗತ್ಯ ಭಾಗವಾಗಿದೆ. ಅದರ ಅಸಾಧಾರಣ ಪೌಷ್ಟಿಕಾಂಶದ ಗುಣಲಕ್ಷಣಗಳಿಗೆ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೂ, ನೀವು ನಿಮ್ಮ ದಿನವನ್ನು ಹಾಲಿನೊಂದಿಗೆ ಪ್ರಾರಂಭಿಸಬೇಕೆ ಎಂಬುದು ಚರ್ಚೆ ಮಾಡುವಂತಹಾ ವಿಷಯವಾಗಿದೆ. ಆಯುರ್ವೇದವು ನೀವು ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸಬೇಕೇ ಮತ್ತು ಅದನ್ನು ಹೊಂದಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿಸುತ್ತದೆ ಎಂಬುದನ್ನು ತಿಳಿಯೋಣ.
ಹಾಲು ಕುಡಿಯುವ ಮೂಲಕ ದಿನವನ್ನು ಆರಂಭಿಸಬಹುದಾ ?
ಹೆಚ್ಚಿನ ಜನರು ಹಾಲಿನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ದೇಹವು (Body) ಪ್ರತಿದಿನ ಅದನ್ನು ಸೇವಿಸುವ ಚಟಕ್ಕೆ ಒಳಗಾಗುವುದರಿಂದ ಅದು ಮುಂದುವರಿಯುತ್ತದೆ. ಇದು ನಿಸ್ಸಂದೇಹವಾಗಿ ದಿನಕ್ಕೆ ಪರಿಪೂರ್ಣ ಆರಂಭವನ್ನು ನೀಡಬಹುದು, ಆದರೆ ಹೆಚ್ಚಿನ ತಜ್ಞರು (Experts) ಅದರ ಬಗ್ಗೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಬೆಳಗ್ಗೆದ್ದ ಕೂಡಲೇ ಟೀ, ಕಾಫಿ ಕುಡಿಯೋದು ಹೇಗೆ ಆರೋಗ್ಯಕ್ಕೆ (Health) ಒಳ್ಳೆಯದಲ್ಲವೋ ಹಾಗೆಯೇ ಹಾಲಿನ ಸೇವನೆ ಸಹ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದಿಲ್ಲ.
ಈ ಸಮಸ್ಯೆ ಇದ್ರೆ ಅರಿಶಿನದ ಹಾಲನ್ನು ಕುಡಿಯೋದು ಡೇಂಜರಸ್!
ಬೆಳ್ಳಂಬೆಳಗ್ಗೆ ಒಂದು ಲೋಟ ಹಾಲನ್ನು (Milk) ಕುಡಿಯುವುದು ಹೊಟ್ಟೆ (Stomach) ಭಾರವಾಗುವ ಭಾವನೆಯನ್ನು ತರಬಹುದು.ಆಯುರ್ವೇದದ ಪ್ರಕಾರ, ನೀವು ಬೆಳಿಗ್ಗೆ ಹಾಲನ್ನು ಸೇವಿಸುವ ಬದಲು ಲಘುವಾಗಿ ಏನನ್ನಾದರೂ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸುವ ಅಭ್ಯಾಸ (Habit) ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಇದು ದೇಹದ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ (Skin) ಪ್ರಯೋಜನಕಾರಿಯಲ್ಲ.
ತಜ್ಞರ ಪ್ರಕಾರ, ಹಾಲು ಜೀರ್ಣ ಮಾಡಿಕೊಳ್ಳಲು ಕಷ್ಟವಾಗಿದೆ. ಹೀಗಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಭಾರವಾದ ಕೆಲಸವನ್ನು ಜಾರಿಗೊಳಿಸುವುದು ಒಳ್ಳೆಯದಲ್ಲ. ಏಕೆಂದರೆ ಜೀರ್ಣಾಂಗ ವ್ಯವಸ್ಥೆ ಭಾರವಾದ ಆಹಾರ (Food)ವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಕ್ರಮೇಣ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಹಾಲನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಆಮ್ಲೀಯತೆ, ಉಬ್ಬುವುದು, ಹೊಟ್ಟೆ ಸೆಳೆತ, ವಾಂತಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ದಿನಕ್ಕೊಂದು ಲೋಟ ಶುಂಠಿ ಹಾಲು ಕುಡಿದರೆ ಆರೋಗ್ಯಕ್ಕೇನು ಲಾಭ?
ಹಾಲು ಕುಡಿಯಲು ಉತ್ತಮ ಸಮಯ ಯಾವುದು?
ಆಯುರ್ವೇದದ ಪ್ರಕಾರ, ಸಂಜೆ ಹಾಲು ಕುಡಿಯಲು ಉತ್ತಮ ಸಮಯ. ಇದಕ್ಕೆ ಕಾರಣ, ಹಾಲು ಜೀರ್ಣಿಸಿಕೊಳ್ಳಲು ತುಂಬಾ ಸುಲಭವಾಗಿದೆ. ಇದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ನೀವು ವಿಶ್ರಾಂತಿ (Rest)ಯಲ್ಲಿರುವಾಗ ನಿಮ್ಮ ದೇಹವನ್ನು ಪುನರ್ಯೌವನಗೊಳಿಸಲು ಸಹ ಇದು ಸಹಾಯ ಮಾಡುತ್ತದೆ. ಬೆಳಿಗ್ಗೆ ಹಾಲು ಕುಡಿಯುವುದು ಹೊಟ್ಟೆ ಭಾರವನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ, ಆದರೆ ಸಂಜೆ ಅದನ್ನು ಕುಡಿಯುವುದು ನಿದ್ರೆ ಮತ್ತು ನರಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದು ಎಲ್ಲಾ ರೀತಿಯಲ್ಲಿ ಆರೋಗ್ಯ (Health)ವನ್ನು ಸಹ ವೃದ್ಧಿಗೊಳಿಸುತ್ತದೆ.
ದಿನಾ ಸಕ್ಕರೆ ಸೇರಿಸಿದ ಹಾಲು ಕುಡಿಯೋ ಅಭ್ಯಾಸ ಒಳ್ಳೆಯದಾ ?
ಚಿಕ್ಕಂದಿನಲ್ಲೇ ಹಾಲು ಆರೋಗ್ಯಕ್ಕೆ ಉತ್ತಮ ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತದೆ. ಆದರೆ ಹಾಲನ್ನು ಯಾವ ರೀತಿ ಕುಡಿಯುವುದು ಉತ್ತಮ ಎಂಬುದು ಹೆಚ್ಚಿನವರು ತಿಳಿದಿಲ್ಲ. ಹಸಿ ಹಾಲು ಕುಡಿಯೋದು ಒಳ್ಳೇದಾ, ಬಿಸಿ ಹಾಲಾ, ಸಕ್ಕರೆ ಹಾಕಿದ ಹಾಲು ಒಳ್ಳೆಯದಾ ? ಸಕ್ಕರೆ ಹಾಕದ ಹಾಲು ಉತ್ತುಮನಾ ಈ ಬಗ್ಗೆ ಹಲವರಿಗೆ ಗೊಂದಲವಿದೆ. ಪರಿಣಿತರು ಶುದ್ಧೀಕರಿಸಿದ ಸಕ್ಕರೆಯೊಂದಿಗೆ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಹೇಳುತ್ತಾರೆ. ಸಕ್ಕರೆ ಮತ್ತು ಹಾಲನ್ನು ಮಿಶ್ರಣ ಮಾಡುವುದನ್ನು ತಡೆಯಲು ತಜ್ಞರು ಸೂಚಿಸುವ ಕೆಲವು ಕಾರಣಗಳು ಇಲ್ಲಿವೆ.
ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು: ಹಾಲು (Milk) ಮತ್ತು ಸಕ್ಕರೆಯ (Sugar) ಸಂಯೋಜನೆಯು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆಮ್ಲೀಯತೆ, ಮಲಬದ್ಧತೆ, ಅತಿಸಾರ ಮತ್ತು ಪೈಲ್ಸ್‌ನಂತಹ ಕಾಯಿಲೆಗಳನ್ನು ಪ್ರಚೋದಿಸುತ್ತದೆ. ವಿಶೇಷವಾಗಿ, ಲ್ಯಾಕ್ಟೋಸ್ ಅಸಹಿಷ್ಣುತೆಯ ಸಂದರ್ಭದಲ್ಲಿ ಸಕ್ಕರೆಯನ್ನು ಮಿಶ್ರಣಕ್ಕೆ ಸೇರಿಸುವುದರಿಂದ ಜೀರ್ಣಿಸಿಕೊಳ್ಳಲು ಹೆಚ್ಚು ಕಷ್ಟವಾಗುತ್ತದೆ ಮತ್ತು ಒಟ್ಟಾರೆ ಜೀರ್ಣಕಾರಿ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಸಮಯದಲ್ಲಿ ಹಾಲು ಕುಡಿಯುವುದು, ಜೀರ್ಣಕ್ರಿಯೆ (Digetion)ಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಮತ್ತು ಅಜೀರ್ಣ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಮಕ್ಕಳ ಹಾಲಿನ ಬಾಟಲಿ ಕ್ಲೀನ್ ಮಾಡಲು ಸಿಂಪಲ್ ಟಿಪ್ಸ್
ತೂಕ ಹೆಚ್ಚಳದ ಸಮಸ್ಯೆ: ವೈಟ್ ಲಾಸ್ ಮಾಡ್ಕೊಬೇಕು ಅಂತ ಊಟವನ್ನು ತ್ಯಜಿಸಿ ಮತ್ತು ಸಕ್ಕರೆಯೊಂದಿಗೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ನೀವು ಇಟ್ಕೊಂಡಿದ್ರೆ ಇದು ತೂಕ ಇಳಿಕೆಯ ದೃಷ್ಟಿಯಿಂದ ನೋಡಿದಾಗ ತುಂಬಾ ಕೆಟ್ಟದ್ದು. ಈ ಸಂಯೋಜನೆಯು ಹೆಚ್ಚಿನ ಕ್ಯಾಲೋರಿ ಅಂಶದಿಂದಾಗಿ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ತೂಕ (Weight) ಹೆಚ್ಚಾಗುವುದು ಮತ್ತು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಹೀಗಾಗಿ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಡಿಮೆ ಕೊಬ್ಬಿನ ಹಾಲು ಅಥವಾ ಸಸ್ಯಾಹಾರಿ ಹಾಲನ್ನು ಆರಿಸಿ ಮತ್ತು ಸಂಸ್ಕರಿಸಿದ ಸಕ್ಕರೆ ಇಲ್ಲದೆ ಕುಡಿಯಿರಿ.
ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು: ಬೆಚ್ಚಗಿನ ಹಾಲಿನೊಂದಿಗೆ ಸಕ್ಕರೆ (Sugar)ಯನ್ನು ಬೆರೆಸುವುದು ಪಾನೀಯದ ರುಚಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಆದರೆ ಕೇವಲ 1 ಚಮಚ ಸಂಸ್ಕರಿಸಿದ ಸಕ್ಕರೆಯು ಸುಮಾರು 60 ಕ್ಯಾಲೊರಿಗಳನ್ನು ಹೊಂದಿದೆ ಮತ್ತು ಅದನ್ನು 1 ಗ್ಲಾಸ್ ಪೂರ್ಣ ಕೆನೆ ಹಾಲಿನ ಕ್ಯಾಲೊರಿಗಳೊಂದಿಗೆ ಸಂಯೋಜಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದು ಸುಮಾರು 149 ಕ್ಯಾಲೊರಿಗಳನ್ನು ಹೊಂದಿದೆ. ಹೀಗಾಗಿ ಇವೆರಡನ್ನು ಬೆರೆಸುವ ಮೂಲಕ ರಚಿಸಲಾದ ಕ್ಯಾಲೋರಿಗಳು ಮತ್ತು ಕೊಬ್ಬಿನಂಶವು ಯಕೃತ್ತಿನ ಮೇಲ್ಮೈಯಲ್ಲಿ ಕೊಬ್ಬಿನ ಅಣುಗಳ ಶೇಖರಣೆಗೆ ಕಾರಣವಾಗಬಹುದು. ಇದು ದೀರ್ಘಾವಧಿಯಲ್ಲಿ ಯಕೃತ್ತಿನ ಕಾಯಿಲೆಗಳಾಗಿ ಬದಲಾಗಬಹುದು.