Health Tips: ಊಟ ಮಾಡಿದ್ಮೇಲೆ ನಡೀಬೇಕಾ ? ಎಕ್ಸ್‌ಪರ್ಟ್ಸ್ ಏನ್ ಹೇಳ್ತಾರೆ ಕೇಳಿ

By Suvarna News  |  First Published Feb 14, 2022, 9:30 PM IST

ಊಟ ಮಾಡಿದ ತಕ್ಷಣ ಸೋಮಾರಿ (Lazy) ಥರ ಬಿದ್ಕೊಳ್ ಬೇಡ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಇದು ಯಾಕೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಆಹಾರ (Food) ಸೇವಿಸಿದ ನಂತರ ನಡೆಯೋದ್ರಿಂದ ಏನಾದ್ರೂ ಉಪಯೋಗ ಇದ್ಯಾ. ನಾವ್ ಹೇಳ್ತೀವಿ.


ಹೊಟ್ಟೆ ತುಂಬಾ ಮಾಡಿದ್ ಮೇಲೆ ಕಣ್ತುಂಬಾ ನಿದ್ದೆ (Sleep) ಮಾಡ್ಬೇಕು ಅನ್ನೋದು ಹಲವರ ಪಾಲಿಸಿ. ಇಲ್ಲದಿದ್ರೂ ಹೊಟ್ಟೆ ಭಾರವಾದ ಮೇಲೆ ಸಾಮಾನ್ಯವಾಗಿ ತೂಕಡಿಕೆ ಬಂದು ಬಿಡುತ್ತೆ. ಆದ್ರೆ ಊಟ ಆದ ಕೂಡಲೇ ಈ ರೀತಿ ಮಲಗಬಾರದು ಅನ್ನೋದು ನಿಮಗೆ ಗೊತ್ತಾ ? ಊಟ ಮಾಡಿದ ತಕ್ಷಣ ಬಿದ್ಕೊಳ್ ಬಾರ್ದು, ಸ್ಪಲ್ಪ ಓಡಾಡಬೇಕು, ಕನಿಷ್ಠ ಪಕ್ಷ ಕೂತ್ಕೊಂಡಾದ್ರೂ ಇರ್ಬೇಕು ಎಂದು ಹಲವರು ಹೇಳಿರೋದನ್ನು ನೀವು ಕೇಳಿರಬಹುದು.

ಊಟ ಮಾಡಿದ ನಂತರ ನಡೆಯುವುದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಇದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ಜನರು ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಊಟದ ನಂತರ ಹೊಟ್ಟೆ ಭಾರವಾದಂತೆ ಅನುಭವವಾಗುತ್ತದೆ, ಚಿಕ್ಕನಿದ್ರೆ ಮಾಡಬೇಕೆಂದು ಅನಿಸುತ್ತದೆ, ಸೋಮಾರಿತನ ಕಾಡುತ್ತದೆ, ಸುಮ್ನೆ ಸ್ಪಲ್ಪ ಹೊತ್ತು ರೆಸ್ಟ್ ಮಾಡೋಣ ಅನಿಸುತ್ತದೆ ಎಂಬುದೆಲ್ಲಾ ನಿಜ. ಆದರೆ ಅನಿಸಿದ ತಕ್ಷಣ ಹೀಗೆ ಮಾಡುವುದೇ ತಪ್ಪು. ಊಟವಾದ ತಕ್ಷಣ ಕಿರು ನಿದ್ದೆ ಮಾಡುವುದು ಅಪಾಯಕಾರಿ. ಇದು ಅಸಿಡಿಟಿ ಮತ್ತು ಎದೆಯುರಿಗೆ ಕಾರಣವಾಗುತ್ತದೆ.

Latest Videos

undefined

Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

ಆಹಾರ (Food) ಸೇವಿಸಿದ ನಂತರ ನಡೆಯುವುದರಿಂದ ಏನೆಲ್ಲಾ ಪ್ರಯೋಜನವಿದೆ ?
ಊಟ ಮಾಡಿದ ನಂತರ ನಡೆಯುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಇದು ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ತಿಂದ ನಂತರ ಒಂದು ಸಣ್ಣ ನಡಿಗೆಯು ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳನ್ನು ಸುಧಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.

ಅನೇಕ ಜನರು ತಿಂದ ನಂತರ ಜಾಗಿಂಗ್ (Jogging) ಮಾಡಲು ಪ್ರಾರಂಭಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ಇದು ಹೊಟ್ಟೆ ನೋವು (Stomach Pain) ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. ಲಘು ವೇಗದಲ್ಲಿ 5-6 ನಿಮಿಷಗಳ ನಡಿಗೆಯೊಂದಿಗೆ ಪ್ರಾರಂಭಿಸಿ ಮತ್ತು ನಂತರ ಮಧ್ಯಮ ವೇಗದಲ್ಲಿ ಸಮಯವನ್ನು ಗರಿಷ್ಠ 10 ನಿಮಿಷಗಳ ವರೆಗೆ ಹೆಚ್ಚಿಸಿ. ಈ ರೀತಿಯ ನಡಿಗೆ ಮನೆಯ ಹೊರಗಡೆಯೇ ಮಾಡಬೇಕೆಂದಿಲ್ಲ. ಮನೆಯ ಒಳಾಂಗಣದಲ್ಲಿಯೂ ನಡೆಯಬಹುದು. ಹಾಲ್‌ನಲ್ಲಿ ಅಥಚಾ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಗರಿಷ್ಠ 10 ನಿಮಿಷಗಳ ಕಾಲ ನಡೆದರೂ ಸಾಕು.

Type 2 Diabetes :ವಾಕಿಂಗ್‌ ಮಾಡುವುದರಿಂದ ದೊಡ್ಡ ರಿಲೀಫ್

ಎಷ್ಟು ನಿಮಿಷಗಳ ಕಾಲ ನಡೆಯಬೇಕು ?
ಊಟದ ನಂತರ ಲಘುವಾದ ನಡಿಗೆ ಕ್ಯಾಲೊರಿ (Calorie)ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ವಿಶೇಷವಾಗಿ ಮಧುಮೇಹ ರೋಗಿಗಳು ಊಟದ ನಂತರ 10 ನಿಮಿಷಗಳ ಕಾಲ ನಡೆಯುವುದು ಬಹಳ ಮುಖ್ಯ ಎಂದು ವೈದ್ಯರು ಸೂಚಿಸುತ್ತಾರೆ. 

ಸಾಮಾನ್ಯ ಆರೋಗ್ಯವಂತರಾಗಿರುವವರು ಪ್ರತಿ ಊಟದ ನಂತರ 10 ನಿಮಿಷಗಳ ನಡೆದರೆ ದೇಹಕ್ಕೆ ಸಾಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೇಕೆನಿಸಿದರಲ್ಲಿ ಅದನ್ನು 15 ನಿಮಿಷಗಳವರೆಗೆ ಹೆಚ್ಚಿಸಬಹುದು ಆದರೆ ಅದನ್ನು ಅತಿಯಾಗಿ ಮೀರಿಸದಿರುವುದು ಒಳ್ಳೆಯದು. ಸಂಕ್ಷಿಪ್ತವಾಗಿ ಹೇಳುವುದಾದರೆ, ತಿಂದ ನಂತರ ಲಘುವಾಗಿ ಮಧ್ಯಮ ವೇಗದಲ್ಲಿ 10 ನಿಮಿಷಗಳ ನಡಿಗೆ ನಿಮ್ಮ ದೇಹಕ್ಕೆ ಜೀರ್ಣಕ್ರಿಯೆ, ತೂಕ ನಷ್ಟ (Weight Loss)ವನ್ನು ಹೆಚ್ಚಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ದೂರವಿರಿಸಲು ಉತ್ತಮವಾಗಿದೆ.

click me!