
ಮುಸ್ಲಿಂ ದೇಶ (Muslim country )ಗಳಲ್ಲಿ ಅತಿ ಹೆಚ್ಚು ಗೋಮಾಂಸ (beef) ಮಾರಾಟವಾಗುತ್ತೆ ಅಂತ ನಾವು ಭಾವಿಸಿದ್ದೇವೆ. ಆದ್ರೆ ಮುಸ್ಲಿಮೇತರ ರಾಷ್ಟ್ರಗಳಲ್ಲೂ ಗೋ ಮಾಂಸ ಮಾರಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ತಿನ್ನಲ್ಪಡುವ ಮಾಂಸಗಳಲ್ಲಿ ಗೋಮಾಂಸ ಕೂಡ ಒಂದು. ಮಾಹಿತಿ ಪ್ರಕಾರ, ವಿಶ್ವದಲ್ಲಿ ಗೋಮಾಂಸ ಮಾರಾಟ ಶೇಕಡಾ 24ರಷ್ಟಿದೆ. ಮುಸ್ಲಿಮೇತರ ಕೆಲ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಗೋ ಮಾಂಸ ಮಾರಾಟವಾಗುತ್ತದೆ. ಅದ್ರಲ್ಲಿ ಟಾಪ್ ಐದು ದೇಶಗಳ ಪಟ್ಟಿ ಇಲ್ಲಿದೆ.
ಗೋಮಾಂಸ ಹೆಚ್ಚು ಮಾರಾಟವಾಗುವ ದೇಶಗಳು :
ಅರ್ಜೆಂಟೀನಾ (Argentina) : ಅರ್ಜೆಂಟೀನಾದಲ್ಲಿಗೋಮಾಂಸ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಪ್ರತಿ ವ್ಯಕ್ತಿ ಅತಿ ಹೆಚ್ಚಿನ ಮಟ್ಟದಲ್ಲಿ ಗೋಮಾಂಸ ಸೇವನೆ ಮಾಡ್ತಾನೆ. ಮಾಹಿತಿ ಪ್ರಕಾರ, ಅರ್ಜೆಂಟೀನಾದಲ್ಲಿ ಪ್ರತಿ ವರ್ಷ ಸುಮಾರು ಶೇಕಡಾ 46.93 ಕೆ.ಜಿ ಗೋಮಾಂಸ ಮಾರಾಟವಾಗುತ್ತದೆ.
ಈ ಬೀಜದ ನೀರನ್ನು 7 ದಿನಗಳು ಕುಡಿದ್ರೆ ಏನಾಗುತ್ತೆ?
ಅಮೆರಿಕ (America) : ಗೋ ಮಾಂಸ ಸೇವನೆ ಮಾಡೋದ್ರಲ್ಲಿ ಅಮೆರಿಕಾ ಹಿಂದೆ ಬಿದ್ದಿಲ್ಲ. ಇಲ್ಲಿನ ಜನರು ಹೆಚ್ಚಿನ ಮಟ್ಟದಲ್ಲಿ ಗೋ ಮಾಂಸ ಸೇವನೆ ಮಾಡ್ತಾರೆ. ವರದಿ ಪ್ರಕಾರ, ಪ್ರತಿ ವರ್ಷ ಅಮೆರಿಕಾದಲ್ಲಿ 38.1 ಕೆ.ಜಿ ಗೋಮಾಂಸ ಸೇವನೆ ಮಾಡಲಾಗುತ್ತದೆ.
ಬ್ರೆಜಿಲ್ (Brazil) : ಬ್ರೆಜಿಲ್ ಕೂಡ ಗೋಮಾಂಸ ಮಾರಾಟದಲ್ಲಿ ಹಿಂದೆ ಬಿದ್ದಿಲ್ಲ. ಬ್ರೆಜಿಲ್ ನಲ್ಲಿ ಪ್ರತಿ ವರ್ಷ 34.59 ಕೆಜಿಗಿಂತ ಹೆಚ್ಚು ಗೋ ಮಾಂಸವನ್ನು ಮಾರಾಟ ಮಾಡಲಾಗುತ್ತದೆ. ಬ್ರೆಜಿಲನ್ನು ಗೋಮಾಂಸ ರಫ್ತಿನಲ್ಲಿ ಜಾಗತಿಕವಾಗಿ ಪ್ರಮುಖ ರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬ್ರೆಜಿಲ್ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಹಲವು ಪ್ರದೇಶಗಳಿಗೆ ಗೋಮಾಂಸವನ್ನು ಪೂರೈಸುತ್ತದೆ.
ಆಸ್ಟ್ರೇಲಿಯಾ ಹಾಗೂ ಕೆನಡಾ ಕೂಡ ಗೋಮಾಂಸವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದೆ. ಚೀನಾದಲ್ಲೂ ಗೋ ಮಾಂಸ ಸೇವನೆ ಮಾಡುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.
ಭಾರತದಲ್ಲಿ ಗೋ ಮಾಂಸ ಮಾರಾಟ : 2021 ರಲ್ಲಿ ಭಾರತೀಯರು 3372 ಮೆಟ್ರಿಕ್ ಟನ್ ಕೋಳಿ ಮಾಂಸವನ್ನು ಸೇವಿಸಿದ್ದರೆ, 1049 ಮೆಟ್ರಿಕ್ ಟನ್ ಗೋಮಾಂಸವನ್ನು ಸೇವಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಚಿತ್ರ ಅಂದ್ರೆ ಗೋ ಮಾಂಸ ವಿರೋಧಿ ದೇಶದಲ್ಲಿ ಹಂದಿ ಮಾಂಸ ಮತ್ತು ಕುರಿ ಮಾಂಸಕ್ಕಿಂತ ಗೋ ಮಾಂಸದ ಮಾರಾಟ ಹೆಚ್ಚಾಗಿದೆ. 2021ರಲ್ಲಿ ಹಂದಿ ಮಾಂಸ 401 ಮತ್ತು ಕುರಿ ಮಾಂಸ 725 ಮೆಟ್ರಿಕ್ ಟನ್ ಮಾರಾಟವಾಗಿತ್ತು. ಬಿಹಾರದಲ್ಲಿ ಪ್ರತಿದಿನ 500 ಹಸುಗಳು ಮತ್ತು 200 ಎಮ್ಮೆಗಳನ್ನು ಹತ್ಯೆ ಮಾಡಲಾಗುತ್ತದೆ.
ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿ ತಿಂದ್ರೆ ಏನಾಗುತ್ತೆ?
ಕೆಲ ವರ್ಷಗಳ ಹಿಂದೆ ನಡೆದ ಸಮೀಕ್ಷೆ ಪ್ರಕಾರ, 101,000 ಮನೆಗಳಲ್ಲಿ, 9,711 ಮನೆಯವರು ಗೋಮಾಂಸ,ಎಮ್ಮೆ ಮಾಂಸ ಸೇವಿಸಿರುವುದಾಗಿ ಹೇಳಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 7.35 ರಷ್ಟು ಮಂದಿ ಗೋ ಮಾಂಸ ಸೇವನೆ ಮಾಡ್ತಿದ್ದಾರೆ ಎಂದು ವರದಿ ಮಾಡಲಾಗಿತ್ತು.
2020ರ ವರದಿಯಲ್ಲಿ ಏನಿದೆ? : 2020 ರಲ್ಲಿ 165 ದೇಶಗಳ ಹೋಲಿಕೆಯ ಆಧಾರದ ಮೇಲೆ, ಅಮೆರಿಕವು 12,535 ಕೆ.ಜಿ ಗೋ ಮಾಂಸ ಸೇವನೆಯೊಂದಿಗೆ ಅಗ್ರಸ್ಥಾನದಲ್ಲಿತ್ತು. ನಂತ್ರ ಚೀನಾ ಮತ್ತು ಬ್ರೆಜಿಲ್. ಫೌಸ್ಟಾಟ್ ಪ್ರಕಾರ, 2020 ರಲ್ಲಿ ವಿಶ್ವದಾದ್ಯಂತ ಒಟ್ಟು ಜಾನುವಾರು ಮಾಂಸ ಸೇವನೆಯು 70,438 ಕಿಲೋಟನ್ ತಲುಪಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.