ಈರುಳ್ಳಿ ತಿಂದ್ಮೇಲೆ ಬಾಯಿಂದ ಬರುವ ಗಬ್ಬು ವಾಸನೆಗೆ Home Remedies

Suvarna News   | Asianet News
Published : Jan 06, 2022, 03:39 PM IST
ಈರುಳ್ಳಿ ತಿಂದ್ಮೇಲೆ ಬಾಯಿಂದ ಬರುವ ಗಬ್ಬು ವಾಸನೆಗೆ Home Remedies

ಸಾರಾಂಶ

ಯಪ್ಪಾ..! ಏನ್ ತಿಂದ್ಕೊಂಡು ಬಂದಿದಿಯಾ? ಈರುಳ್ಳಿ ವಾಸನೆ ಮೂಗಿಗೆ ಬಡಿತಿದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೆ ಇರಿಸುಮುರಿಸಾಗುತ್ತದೆ. ಬಾಯಿ ಮುಚ್ಚಿಕೊಂಡು ಎಷ್ಟು ಹೊತ್ತು ಇರೋಕಾಗುತ್ತೆ? ಈ ಈರುಳ್ಳಿ ಸಹವಾಸವೆ ಬೇಡ ಎನ್ನುವವರು ಈ ಟಿಪ್ಸ್ ಪಾಲಿಸಿ.  

ಭಾರತೀಯ(India)ರ ಪಾಕ ಪದ್ಧತಿ ವಿಶೇಷವಾಗಿದೆ. ಆಹಾರ (Food)ದ ರುಚಿ ಹೆಚ್ಚಿಸಲು ಹೆಚ್ಚು ಮಸಾಲೆ ಪದಾರ್ಥ(Spice)ವನ್ನು ಬಳಸುತ್ತೀವಿ. ಹಾಗೆಯೇ ಕೆಲ ಆಹಾರಕ್ಕೆ ಹಸಿ ತರಕಾರಿಗಳನ್ನು ಹಾಕ್ತೀವೆ. ಇದ್ರಲ್ಲಿ ಈರುಳ್ಳಿ ಕೂಡ ಒಂದು. ಕೆಲವೊಂದು ತಿಂಡಿಗಳಿಗೆ ಹಸಿ ಈರುಳ್ಳಿ ಹಾಕದೆ ಹೋದ್ರೆ ಅದು ರುಚಿ ಕಳೆದುಕೊಳ್ಳುತ್ತದೆ. ರುಚಿ ರುಚಿಯಾಗಿರುವ ಈರುಳ್ಳಿಯನ್ನು ತಿಂದು ತೇಗುತ್ತೇವೆ ನಿಜ. ಆದ್ರೆ ತಿಂದ್ಮೇಲೆ ಅದ್ರ ವಾಸನೆ (Smell) ಮುಜುಗರ ತರಿಸುತ್ತದೆ. ಈರುಳ್ಳಿ (Onion )ದುರ್ವಾಸನೆ ಬಾಯಿಯಲ್ಲಿ ದೀರ್ಘ ಕಾಲದವರೆಗೆ ಇರುತ್ತದೆ.  ಉಸಿರಲ್ಲೂ ಸೇರಿ ಹೋಗುತ್ತದೆ.

ಈರುಳ್ಳಿಯ ವಾಸನೆ ಕೆಲವು ಗಂಟೆಗಳಿಂದ ಇಡೀ ರಾತ್ರಿ (Night)ಯವರೆಗೆ ಇರುತ್ತದೆ. ಇದೇ ಕಾರಣದಿಂದಾಗಿ ಅನೇಕ ಜನರು ಹಸಿ ಈರುಳ್ಳಿ ತಿನ್ನಲು ಇಷ್ಟಪಡುವುದಿಲ್ಲ. ಇನ್ಮುಂದೆ ವಾಸನೆ ಬರುತ್ತೆ ಎನ್ನುವ ಕಾರಣಕ್ಕೆ ನೀವು ಈರುಳ್ಳಿಯಿಂದ ದೂರವಿರಬೇಕಾಗಿಲ್ಲ. ಕೆಲ ಮನೆ ಮದ್ದುಗಳನ್ನು ಬಳಸುವ ಮೂಲಕ ಈರುಳ್ಳಿ ದುರ್ಗಂಧದಿಂದ ಮುಕ್ತಿ ಪಡೆಯಬಹುದು. ಬಾಯಿಯಲ್ಲಿ ಕಾಡುವ ಹಸಿ ಈರುಳ್ಳಿ ವಾಸನೆ ತೊಡೆದು ಹಾಕುವ ವಿಧಾನಗಳು ಇಲ್ಲಿವೆ.   

ತಾಜಾ ಹಣ್ಣು (Fruit)ಗಳು ಮತ್ತು ತರಕಾರಿ (Vegetable) : ಕಬ್ಬಿಣ ಕಬ್ಬಿಣವನ್ನು ಕತ್ತರಿಸುತ್ತದೆ ಎಂಬ ಮಾತಿದೆ. ಇದು ಇಲ್ಲಿಯೂ ಕೆಲಸ ಮಾಡುತ್ತದೆ. ಕೆಲ ಹಸಿ ತರಕಾರಿ, ಹಣ್ಣುಗಳು, ಹಸಿ ಈರುಳ್ಳಿ ಘಮವನ್ನು ಕಡಿಮೆ ಮಾಡುತ್ತವೆ. ತಾಜಾ ಹಣ್ಣು, ತರಕಾರಿಗಳು ಬಾಯಿಯಲ್ಲಿ ಸಲ್ಫರ್ ವಾಸನೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ. ಹಸಿ ಈರುಳ್ಳಿ ತಿಂದ ನಂತರ  ತಾಜಾ ಸೇಬು ತಿಂದರೂ ಬಹುತೇಕ ಬಾಯಿ ವಾಸನೆ ಹೋಗುತ್ತದೆ. 

ಅಜಮೋದ (ಪಾರ್ಸ್ಲಿ ) (Parsley) :  ಸಾಂಬಾರ್ ಪದಾರ್ಥವಾಗಿರುವ ಪಾರ್ಸ್ಲಿ ಕೂಡ ಈರುಳ್ಳಿ ವಾಸನೆ ಕಡಿಮೆ ಮಾಡುತ್ತದೆ. ಈರುಳ್ಳಿ ತಿಂದ ನಂತ್ರ ಅಜಮೋದವನ್ನು ಸೇವನೆ ಮಾಡಬೇಕು. ಇದು ಬಾಯಿಯನ್ನು ತಾಜಾಗೊಳಿಸುತ್ತದೆ. ಇದು ಮಾತ್ರವಲ್ಲದೆ ಮನೆ ಮನೆಯಲ್ಲಿ ಸುಲಭವಾಗಿ ಸಿಗುವ ತುಳಸಿ ಎಲೆಯನ್ನು ನೀವು ಬಳಸಬಹುದು.  ಇದಲ್ಲದೇ ಬೇಸಿಗೆ ಕಾಲದಲ್ಲಿ ಪುದೀನಾ ಸೊಪ್ಪನ್ನು ಕೂಡ ತಿನ್ನುವುದರಿಂದ ಬಾಯಿಯಿಂದ ಬರುವ ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡರ ವಾಸನೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. 

ಆಪಲ್ ಸೈಡರ್ ವಿನೆಗರ್  (Apple Cider Vinegar) : ಆಪಲ್ ಸೈಡರ್ ವಿನೆಗರ್ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಅನೇಕರು ಇದನ್ನು ತಮ್ಮ ನಿಯಮಿತ ಆಹಾರದಲ್ಲಿ ಬಳಸುತ್ತಾರೆ. ಇದರ ಇನ್ನೊಂದು ಪ್ರಯೋಜನವೆಂದರೆ ಇದು ಬಾಯಿಯಿಂದ ಬರುವ ಈರುಳ್ಳಿಯ ವಾಸನೆಯನ್ನು ಕಡಿಮೆ ಮಾಡುತ್ತದೆ. ಹಾಗಂತ ಇದ್ರ ಸೇವನೆಯನ್ನು ಅತಿಯಾಗಿ ಮಾಡಬಾರದು. ಕೇವಲ 1 ಚಮಚ ಆಪಲ್ ಸೈಡರ್ ವಿನೆಗರ್ ಗೆ ನೀರನ್ನು ಬೆರೆಯಿಸಿ ಕುಡಿಯಬೇಕು.   

ಗ್ರೀನ್ ಟೀ : ತೂಕ ಇಳಿಸಿಕೊಳ್ಳಲು ಮಾತ್ರವಲ್ಲ ಗ್ರೀನ್ ಟೀ ಬಾಯಿಯಿಂದ ಬರುವ ಈರುಳ್ಳಿ ವಾಸನೆ ಕಡಿಮೆ ಮಾಡಲು ನೆರವಾಗುತ್ತದೆ. 

Fig Benefits : ಈ ರೀತಿ ಅಂಜೂರ ಸೇವಿಸಿದ್ರೆ ತೂಕ ಇಳಿಸಿ ಸ್ಟ್ಯಾಮಿನಾ ಹೆಚ್ಚಿಸಬಹುದು..

ಚೂಯಿಂಗ್ ಗಮ್ : ಬಾಯಿಯಿಂದ ಬರುವ ಈರುಳ್ಳಿ ವಾಸನೆಯನ್ನು ತೆಗೆದುಹಾಕಲು ನೀವು ಚೂಯಿಂಗ್ ಗಮ್  ಸಹ ಬಳಸಬಹುದು. ವಿವಿಧ ರುಚಿಯ ಚೂಯಿಂಗ್ ಗಮ್  ಪ್ರಯತ್ನಿಸಬಹುದು. ಇದು ಬಾಯಿಯಲ್ಲಿ ಲಾಲಾರಸ ರಚನೆಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಆಹಾರದ ಕಣಗಳನ್ನು ತೆಗೆದುಹಾಕುತ್ತದೆ.

ಅಮೇರಿಕನ್ ಡೆಂಟಲ್ ಅಸೋಸಿಯೇಷನ್‌ನ ವರದಿಯ ಪ್ರಕಾರ, ಊಟವಾದ 20 ನಿಮಿಷಗಳ ನಂತರ ಸಕ್ಕರೆ ಇಲ್ಲದ ಚ್ಯೂಯಿಂಗ್ ಗಮ್  ಸೇವಿಸಿದರೆ, ದಂತದ ಸಮಸ್ಯೆ  ಕಡಿಮೆಯಾಗುತ್ತದೆ. 

ಚಳಿಗಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು celebrity fitness expert ರುಜುತಾ ನೀಡಿರೋ ಟಿಪ್ಸ್ ಇಲ್ಲಿವೆ..

ಪೇಸ್ಟ್,ಮೌತ್ ವಾಶ್ : ಇದರ ಜೊತೆಗೆ ಟೂತ್‌ಪೇಸ್ಟ್ ನಿಂದ ಬಾಯಿಯನ್ನು ಸ್ವಚ್ಛಗೊಳಿಸುವುದು ಅಥವಾ ಮೌತ್‌ವಾಶ್  ಬಳಸುವುದು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಬಾಯಿಯ ದುರ್ವಾಸನೆಯನ್ನು ಬಹಳ ಮಟ್ಟಿಗೆ ಹೋಗಲಾಡಿಸುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?
ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ