Weight Loss Tips: ಹೊಸ ವರ್ಷಕ್ಕೆ ಸ್ಲಿಮ್ ಆಗಬೇಕೆ ? ಕಿಚನ್‌ನಲ್ಲಿರೋ ಈ ಬೀಜ ತಿನ್ನಿ ಸಾಕು

By Vinutha PerlaFirst Published Dec 17, 2022, 12:03 PM IST
Highlights

ತೂಕ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುವ ಸಮಸ್ಯೆ. ಮುಂದಿನ ವರ್ಷನಾದ್ರೂ ಹೇಗಾದ್ರು ಸರಿ ತೂಕ ಇಳಿಸ್ಕೋಬೇಕಪ್ಪಾ ಅಂದ್ಕೊಳ್ತಾರೆ. ಆದ್ರೆ ನೀವು ತೂಕವನ್ನು ಕಳೆದುಕೊಳ್ಳಲು ಹೊಸ ವರ್ಷಕ್ಕಾಗಿ ಕಾಯುವ ಅಗತ್ಯವಿಲ್ಲ. ಮನೆಯಲ್ಲಿ ಲಭ್ಯವಿರುವ ಬೀಜಗಳಿಂದ ನೀವು ಅದ್ಭುತವಾದ ತೂಕ ನಷ್ಟ ಪಾನೀಯವನ್ನು ತಯಾರಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹೊಸ ವರ್ಷ 2023ಕ್ಕೆ (New year) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿದೆ. ಪ್ರತಿಯೊಬ್ಬರೂ ಹೊಸ ವರ್ಷದಲ್ಲಿ ಕೆಲವು ನಿರ್ಣಯಗಳನ್ನು ಮಾಡುತ್ತಾರೆ, ಅದರಲ್ಲಿ ಸಾಮಾನ್ಯವಾದ ತೂಕವನ್ನು ಕಳೆದುಕೊಳ್ಳುವುದು (Weight loss). ಆದರೆ ತೂಕ ಇಳಿಸಿಕೊಳ್ಳಲು ಹೊಸ ವರ್ಷಕ್ಕಾಗಿ ಕಾಯಬೇಕಾಗಿಲ್ಲ. ಏಕೆಂದರೆ, ಅದಕ್ಕೂ ಮುನ್ನ ದೇಹ (Body)ದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ಸಿಗುವ ಚಿಯಾ ಬೀಜ (Chia seeds)ಗಳನ್ನು ತಿಂದು ನೀವು ಸ್ಲಿಮ್ ಆಗಿರುವ ಬಾಡಿ ಪಡೆಯಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಲ್ಲಿ ಫ್ಯಾಟ್ ಬರ್ನರ್ ಡ್ರಿಂಕ್
ತೂಕ ನಷ್ಟದ ಈ ಸ್ಪೆಷಲ್ ಡ್ರಿಂಕ್ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಪರಿಣಾಮಕಾರಿ ಮಾರ್ಗವಾಗಿದೆ. ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಮತ್ತು ನಿಮ್ಮ ಸೊಂಟವನ್ನು ತೆಳ್ಳಗೆ ಮಾಡುತ್ತದೆ. ಮನೆಯಲ್ಲಿ ಇರುವ ಬೀಜಗಳನ್ನು ತೂಕವನ್ನು ಕಡಿಮೆ ಮಾಡಲು ಬಳಸಬಹುದು. ಈ ಬೀಜಗಳನ್ನು ಚಿಯಾ ಬೀಜಗಳು ಎಂದು ಕರೆಯಲಾಗುತ್ತದೆ, ಇದು ಮಸಾಲೆ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತದೆ. ಚಿಯಾ ಬೀಜಗಳೊಂದಿಗೆ ಕೊಬ್ಬು ಕರಗಿಸುವ ಪಾನೀಯವನ್ನು ತಯಾರಿಸಿ. ಚಿಯಾ ಬೀಜಗಳ ನೀರನ್ನು ತೂಕ ಇಳಿಸುವ ಪಾನೀಯವಾಗಿ ಸೇವಿಸಬಹುದು. ಇದನ್ನು ಮಾಡಲು, ನಿಮಗೆ 40 ಗ್ರಾಂ ಚಿಯಾ ಬೀಜಗಳು ಮತ್ತು 1 ಲೀಟರ್ ನೀರು ಬೇಕಾಗುತ್ತದೆ. ಅದರ ರುಚಿಯನ್ನು ಹೆಚ್ಚಿಸಲು ನಿಂಬೆ ರಸವನ್ನು (Lemon juice) ಸಹ ಬಳಸಬಹುದು.

ಬಳಕುವ ಬಳ್ಳಿಯಾಗೋ ಪ್ರಯತ್ನದಲ್ಲಿದ್ದೀರಾ? ಮಲಗೋ ಮುನ್ನ ಇವನ್ನು ಕುಡಿಯಿರಿ!

ತೂಕ ನಷ್ಟ ಪಾನೀಯವನ್ನು ತಯಾರಿಸುವುದು ಹೇಗೆ ?
ತೂಕ ಇಳಿಸುವ ಪಾನೀಯವನ್ನು ತಯಾರಿಸಲು, ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ಸುಮಾರು 20ರಿಂದ 30 ನಿಮಿಷಗಳ ನಂತರ ಈ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯಿರಿ. ತೂಕ ಇಳಿಸುವ ಈ ಪಾನೀಯವನ್ನು ಬೆಳಿಗ್ಗೆ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೆನಪಿನಲ್ಲಿಡಿ.

ಚಿಯಾ ಬೀಜಗಳು ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ
ಚಿಯಾ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಪ್ರೋಟೀನ್-ಫೈಬರ್ ಅನ್ನು ಸೇವಿಸಿದಾಗ, ಹೊಟ್ಟೆಯು ನಿಧಾನವಾಗಿ ಖಾಲಿಯಾಗುತ್ತದೆ ಮತ್ತು ಹಸಿವು ದೀರ್ಘಕಾಲದವರೆಗೆ ನಿಯಂತ್ರಣದಲ್ಲಿರುತ್ತದೆ. ಈ ಸಂದರ್ಭದಲ್ಲಿ, ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ಚಿಯಾ ಬೀಜಗಳನ್ನು ಅತಿಯಾಗಿ ಸೇವಿಸಬೇಡಿ. ಏಕೆಂದರೆ, ಇದು ನಿಮ್ಮ ಕ್ಯಾಲೋರಿಗಳನ್ನೂ ಹೆಚ್ಚಿಸಬಹುದು.

ಹೊಟ್ಟೆಯ ಕೊಬ್ಬು ಕರಗುತ್ತದೆ: ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಾಗ, ದೇಹವು ಕ್ಯಾಲೋರಿ ಕೊರತೆಗೆ ಹೋಗುತ್ತದೆ. ಇದು ಹೊಟ್ಟೆ ಅಥವಾ ದೇಹದ ಇತರ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಡುವ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಈ ಸಮಯದಲ್ಲಿ ಕ್ಯಾಲೋರಿಗಳ ಜೊತೆಗೆ, ನೀವು ಪ್ರೊಟೀನ್, ವಿಟಮಿನ್‌ಗಳು ಅಥವಾ ಇತರ ಖನಿಜಗಳನ್ನು ಕಡಿಮೆ ಮಾಡಬಾರದು ಎಂಬುದನ್ನು ಗಮನಿಸುವುದು ಮುಖ್ಯ.

ತೂಕ ಇಳಿಸ್ಕೊಳ್ಳೋಕೆ ಏನೇನೋ ಸರ್ಕಸ್ ಮಾಡ್ಬೇಡಿ, ಇಡ್ಲಿ-ಸಾಂಬಾರ್ ತಿನ್ನಿ ಸಾಕು

ಚಿಯಾ ಬೀಜಗಳನ್ನು ಹೇಗೆ ತಿನ್ನಬೇಕು
ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸುವ ಮೂಲಕವಷ್ಟೇ ಸೇವಿಸಬೇಕೆಂದೇನಿಲ್ಲ. ಈ ಬೀಜಗಳನ್ನು ಟೇಸ್ಟಿ ಸ್ಮೂಥಿಗಳು, ಸಲಾಡ್‌ಗಳು, ಮೊಸರುಗಳು, ಸೂಪ್‌ಗಳು ಇತ್ಯಾದಿಗಳಲ್ಲಿಯೂ ಬಳಸಬಹುದು. ತೂಕ ಇಳಿಸುವ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸುವುದು ತುಂಬಾ ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಇನ್ಯಾಕೆ ತಡ, ಹೊಸ ವರ್ಷಕ್ಕೆ ಬೇಗ ಬೇಗನೇ ತೂಕ ಇಳಿಸ್ಕೊಂಡು ಸೂಪರ್ ಆಗಿ ರೆಡಿಯಾಗಿ.

click me!