Viral News: ಪಾಪ.. ಮನೆಗೆ ಬಂದ ಪಿಜ್ಜಾ ನೋಡಿ ಬೇಸರಗೊಂಡ ಯುವತಿ

By Suvarna NewsFirst Published Apr 13, 2023, 3:53 PM IST
Highlights

ಪಿಜ್ಜಾ ಪ್ರೇಮಿಗಳಿಗೆ ರುಚಿ ಮಾತ್ರವಲ್ಲ ಗಾತ್ರವೂ ಇಂಪಾರ್ಟೆಂಟ್ ಆಗುತ್ತೆ. ಗಾತ್ರ ಸ್ವಲ್ಪ ಕಡಿಮೆಯಾದ್ರೂ ಕೋಪ ಬರುತ್ತೆ. ಪಿಜ್ಜಾ ಗಾತ್ರ ಎರಡು ಇಂಚು ಕಡಿಮೆಯಾಗಿದ್ದಕ್ಕೆ ಬೇಸರಗೊಂಡ ಯುವತಿ ಏನು ಮಾಡಿದ್ದಾಳೆ ಗೊತ್ತಾ?
 

ದುಡ್ಡು ಕೊಟ್ಟಿರ್ತೀವಿ, ಅದಕ್ಕೆ ತಕ್ಕಂತೆ ವಸ್ತುಗಳ ಬೇಡಿಕೆ ಇಡ್ತೇವೆ. ಅದರಲ್ಲಿ ಏನು ತಪ್ಪಿದೆ ಅಲ್ವಾ? ನಾವು ಯಾವುದೇ ವಸ್ತು ಖರೀದಿ ಮಾಡ್ಲಿ ಮೊದಲು ನೋಡೋದು ಕೊಟ್ಟ ದುಡ್ಡಿಗೆ ಇದು ಸೂಕ್ತವಾಗಿದೆಯೇ ಅಂತ. ಕೆಲವರು ಹೇಳೋದನ್ನು ನೀವು ಕೇಳಿರಬಹುದು, ನೂರು ರೂಪಾಯಿ ನೀಡುವ ಐಟಂ ಇದಲ್ಲ, 50 ರೂಪಾಯಿಗೆ ಊಟ ಸರಿಯಾಗಿದೆ, ಇಷ್ಟೊಂದು ಬೆಲೆಗೆ ಈ ಡ್ರೆಸ್ ಖರೀದಿ ಮಾಡ್ಬಾರದಿತ್ತು.. ಹೀಗೆ ಹಣಕ್ಕೆ ತಕ್ಕಂತೆ ವಸ್ತು ಇರುತ್ತೆ. ಬಟ್ಟೆ, ಚಪ್ಪಲಿ, ಊಟ ಎಲ್ಲದರಲ್ಲೂ ನ್ಯಾಯಯುತ ವ್ಯವಹಾರವನ್ನು ಗ್ರಾಹಕರು ಬಯಸ್ತಾರೆ. ಹಾಗಂತ ಚೌಕಾಸಿ ಮಾಡೋದಿಲ್ವಾ ಅಂತಾ ನೀವು ಕೇಳ್ಬೇಡಿ. 10 ರೂಪಾಯಿ ವಸ್ತುವನ್ನು ಐದು ರೂಪಾಯಿಗೆ ಕೇಳೋರ ಸಂಖ್ಯೆ ಹೆಚ್ಚಿದೆ. ಅದು ಬೇರೆ ವಿಷ್ಯ ಬಿಡಿ. 

ನಾವು ಅಂಗಡಿ (Shop) ಗೆ ಹೋದಾಗ ಕೆಜಿ ನೋಡದೆ ಕೆಲವೊಮ್ಮೆ ಸಾಮಾನುಗಳನ್ನು ತಂದಿರ್ತೇವೆ. ಮನೆಗೆ ಬಂದು ನೋಡಿದ್ರೆ ಕೆಜಿಯಲ್ಲಿ ಸ್ವಲ್ಪನಾದ್ರೂ ಹೆಚ್ಚುಕಮ್ಮಿ ಬಂದಿರುತ್ತೆ. ಆದ್ರೆ ಅದನ್ನೆಲ್ಲ ನೋಡುವ ಪುರುಸೊತ್ತು ನಮಗಿಲ್ಲ. ಆದ್ರೆ ಈ ಯುವತಿ ತಾಳ್ಮೆ ಹಾಗೂ ಪಿಜ್ಜಾ ಮೇಲಿರುವ ಪ್ರೀತಿ ಕೇಳಿದ್ರೆ ನೀವು ದಂಗಾಗ್ತೀರಾ. ವಿಶ್ವದಲ್ಲಿ ಪಿಜ್ಜಾ (Pizza) ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಸಣ್ಣ ತುಂಡು ಬಿಡದೆ ತಿನ್ನೋರಿದ್ದಾರೆ. ಒಂದೇ ಬೈಟಕ್ ಗೆ ಎರಡು – ಮೂರು ಪಿಜ್ಜಾ ಖಾಲಿ ಮಾಡೋರನ್ನು ನಾವು ನೋಡ್ಬಹುದು. ಆಸೆಯಿಂದ ತರಿಸಿಕೊಂಡ ಪಿಜ್ಜಾದಲ್ಲಿ ಸಣ್ಣ ಮಿಸ್ಟೆಕ್ ಆದ್ರೂ ಪಿಜ್ಜಾ ಪ್ರೇಮಿಗಳಿಗೆ ಅದು ಗೊತ್ತಾಗ್ಬಿಡುತ್ತೆ. ಈ ಯುವತಿಗೂ ಪಿಜ್ಜಾದಲ್ಲಾದ ಮೋಸ ಗೊತ್ತಾಗಿದೆ. ಇದನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾಳೆ.

Latest Videos

ಸ್ವಿಗ್ಗಿಯ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು..ಮಹಿಳೆ ಕಕ್ಕಾಬಿಕ್ಕಿ!

ಟ್ವಿಟರ್ (Twitter) ನಲ್ಲಿ ಮಹಿಳೆ ಪಿಜ್ಜಾ ಫೋಟೋ ಹಾಕಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. @shubhibhatia03 ಹೆಸರಿನ ಟ್ವಿಟರ್ ಖಾತೆಯಲ್ಲಿ ಪಿಜ್ಜಾ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಫೋಟೋಕ್ಕೆ ಅಗ್ನಿಪರೀಕ್ಷೆ ಎಂದು ಶೀರ್ಷಿಕೆ ಹಾಕಿದ್ದಾರೆ @shubhibhatia03. ಪಿಜ್ಜಾ ಮೇಲೆ ಒಂದು ಟೇಪ್ ಕೂಡ ಇಡಲಾಗಿದೆ. ಅದ್ರಲ್ಲಿ ನೀವು ಪಿಜ್ಜಾ ಗಾತ್ರವನ್ನು ಪರೀಕ್ಷಿಸಬಹುದು. ನಾನು ಆರ್ಡರ್ ಮಾಡಿದ್ದು 10 ಇಂಚಿನ ಪಿಜ್ಜಾ. ಬಂದಿದ್ದು 8 ಇಂಚಿನ ಪಿಜ್ಜಾ ಎಂದು ಅಳುವ ಎಮೊಜಿ ಹಾಕಲಾಗಿದೆ. ಮೊದಲೇ ಹೇಳಿದಂತೆ ಪ್ರತಿಯೊಬ್ಬರೂ ನ್ಯಾಯಯುತ ಒಪ್ಪಂದವನ್ನು ಬಯಸ್ತಾರೆ. 10 ಇಂಚಿನ ಬದಲು 8 ಇಂಚಿನ ಪಿಜ್ಜಾ ಕಳುಹಿಸಿದ್ದು ತಪ್ಪೆ. ಆದ್ರೆ ಇದು ಹೇಗಾಯ್ತು ಎಂಬುದನ್ನು ನಾವು ಹೇಳೋಕೆ ಸಾಧ್ಯವಿಲ್ಲ. ಸಂಬಂಧಪಟ್ಟವರು ತಪ್ಪನ್ನು ಒಪ್ಪಿಕೊಳ್ಳಬೇಕು. ಹಾಗೆ ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. 

India Recipes: ಕಣ್ಮರೆಯಾದ ಭಾರತೀಯ ಖಾದ್ಯಗಳಿವು

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ : ಟ್ವಿಟರ್ ನಲ್ಲಿ ಪಿಜ್ಜಾ ಫೋಟೋ ಪೋಸ್ಟ್ ಆಗ್ತಿದ್ದಂತೆ ಅನೇಕರು ಕಮೆಂಟ್ ಮಾಡಿದ್ದಾರೆ. ಅಳತೆ ಮಾಡುವ ಟೇಪ್ ಮೇಲೆ ಅನೇಕರ ಕಣ್ಣು ಹೋಗಿದೆ. ಅಳತೆ ಮಾಡುವ ಟೇಪ್ ಕೊಳಕಾಗಿದೆ. ಹಾಗೆಯೇ ತುಕ್ಕು ಹಿಡಿದಿದೆ. ಪಿಜ್ಜಾ ಗಾತ್ರವನ್ನು ಇದ್ರಿಂದ ಸರಿಯಾಗಿ ಗುರುತಿಸಲು ಆಗ್ತಿಲ್ಲವೆಂದು ಕೆಲಸವರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, ಇದನ್ನು ಯಾರು ಚೆಕ್ ಮಾಡ್ತಾರೆ ಎಂದು ಕೇಳಿದ್ದಾರೆ. ನೋಡೋಕೆ ಗಾತ್ರದಲ್ಲಿ ಚಿಕ್ಕದಾಗಿ ಕಾಣ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮಧ್ಯದಲ್ಲಿ ಕಟ್ ಆಗಿದೆ ಅಂತಾ ಮತ್ತೊಬ್ಬರು ಹೇಳಿದ್ರೆ, ಆಡಿಟ್ ಮಾಡುವ ಸಮಯದಲ್ಲೂ ನಾನು ಇಷ್ಟೊಂದು ಪರಿಶೀಲನೆ ನಡೆಸೋದಿಲ್ಲವೆಂದು ಇನ್ನೊಬ್ಬರು ಬರೆದಿದ್ದಾರೆ. ಹಾಗಾದ್ರೆ ಹಣ ನಿಮಗೆ ವಾಪಸ್ ಬಂತಾ ಎಂದು ಮತ್ತೊಬ್ಬರು ಮಾಡಿದ ಪ್ರಶ್ನೆಗೆ @ shubhibhatia03 ನಾನು ಭಾಗಶಃ ಮರುಪಾವತಿ ಪಡೆದಿದ್ದೇನೆ ಎಂದು ಬರೆದಿದ್ದಾರೆ.
 

click me!