India Recipes: ಕಣ್ಮರೆಯಾದ ಭಾರತೀಯ ಖಾದ್ಯಗಳಿವು

By Suvarna News  |  First Published Apr 12, 2023, 6:10 PM IST

ಆಹಾರ ಪ್ರೇಮಿಗಳಿಗೆ ಭಾರತ ಸ್ವರ್ಗ. ಯಾಕೆಂದ್ರೆ ಒಂದೊಂದು ಪ್ರದೇಶದಲ್ಲಿ, ಒಂದೊಂದು ಮನೆಯಲ್ಲಿ ಬೇರೆ ಬೇರೆ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದ್ರೆ ಹೊಸ ಅಲೆ ಬರ್ತಿದ್ದಂತೆ ಹಳೆ ಅಲೆ ಮರೆಯಾಗುವಂತೆ ಭಾರತದ ಕೆಲ ಸಾಂಪ್ರದಾಯಿಕ ಆಹಾರಗಳು ಈಗ ನೇಪಥ್ಯಕ್ಕೆ ಸೇರಿವೆ.
 


ನಾನಾ ಬಗೆಯ ತಿಂಡಿ ಖಾದ್ಯಗಳಿಗೆ ಭಾರತ ಹೆಸರುವಾಸಿ. ಇಲ್ಲಿ ನೈಸರ್ಗಿಕವಾಗಿ ಬೆಳೆಯಲಾದ ಆಹಾರ, ಪದಾರ್ಥಗಳಿಂದಲೇ ತರಹೇವಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಂತೂ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಜನರಿಂದ ಜನರಿಗೆ ಸ್ಥಳದಿಂದ ಸ್ಥಳಕ್ಕೆ ಖಾದ್ಯಗಳು ಹಾಗೂ ಅವುಗಳನ್ನು ತಯಾರಿಸುವ ಶೈಲಿ ಭಿನ್ನವಾಗಿರುತ್ತದೆ. ಆದರೆ ಈಗಿನ ಫಾಸ್ಟ್ ಫುಡ್ ಕಾಲದಲ್ಲಿ ಕೆಲವು ಹಳೆಯ ಖಾದ್ಯಗಳು ಅಳಿವಿನಂಚಿನಲ್ಲಿವೆ ಎಂದರೆ ತಪ್ಪಾಗದು. ತಿನ್ನಲು ರುಚಿ ಎನಿಸುವ ಭಾರತದ ಕೆಲವು ಪ್ರಖ್ಯಾತ ಖಾದ್ಯಗಳು ಇಲ್ಲಿವೆ.

• ಸಾಸನಿ ಮೀನು ( Goldfish) : ಪಾರ್ಸಿ ಸಮುದಾಯದ ಜನರು ಈ ಖಾದ್ಯವನ್ನು ತುಂಬಾ ಇಷ್ಟಪಡುತ್ತಾರೆ. ಇದನ್ನು ತಯಾರಿಸಲು ಪಾಂಫ್ರೆಟ್ ಮೀನನ್ನು ಬಳಸಲಾಗುತ್ತದೆ. ನಂತರ ಮೊಟ್ಟೆ ಮತ್ತು ಅಕ್ಕಿ ಹಿಟ್ಟಿನಿಂದ ಸಾಸ್ ತಯಾರಿಸಲಾಗುತ್ತದೆ. ಅದರಲ್ಲಿ ಮೀನುಗಳನ್ನು ಬೇಯಿಸಲಾಗುತ್ತದೆ. ಕೆಲವೊಮ್ಮೆ ಇದಕ್ಕೆ ಸ್ಥಳೀಯವಾಗಿ ಬೆಳೆದ ತರಕಾರಿಗಳನ್ನು ಕೂಡ ಸೇರಿಸಲಾಗುತ್ತದೆ.

Tap to resize

Latest Videos

SUMMER FOOD: ಬೇಸಿಗೆಯಲ್ಲಿ ಈ ಜ್ಯೂಸ್ ಸೇವಿಸಿ ಕೂಲ್ ಆಗಿ

• ಸಾಗ್ ಗೋಸ್ಟ್  (Saag Ghost) : ಒಂದು ಕಾಲದಲ್ಲಿ ಎಲ್ಲ ಪಾರ್ಟಿಗಳ ಮೆನುವಿನಲ್ಲಿ ಕಾಮನ್ ಆಗಿ ಇರುತ್ತಿದ್ದ ರುಚಿಕರವಾದ ಪೌಷ್ಟಿಕ ಖಾದ್ಯ ಇದಾಗಿದೆ. ಮೂಳೆಯಿಲ್ಲದ ಕುರಿಮರಿ ಮತ್ತು ಸೊಪ್ಪಿನೊಂದಿಗೆ ಇದನ್ನು ತಯಾರಿಸಲಾಗುತ್ತದೆ. ಮೊದಲು ಇದನ್ನು ಮುಲ್ತಾನ್ ನಲ್ಲಿ ಆರಂಭಿಸಲಾಯ್ತು. ನಂತರದ ದಿನಗಳಲ್ಲಿ ಇದು ಪಂಜಾಬ ಮತ್ತು ಹರಿಯಾಣಗಳಲ್ಲಿ ಕೂಡ ಪ್ರಖ್ಯಾತಿ ಪಡೆಯಿತು.

• ಛೇನಾ ಪೋಡಾ (Chhena Poda) : ಛೇನಾ ಪೋಡಾ ಓರಿಸ್ಸಾದ ಜನಪ್ರಿಯ ಖಾದ್ಯವಾಗಿದೆ. ಇದೊಂದು ಬಗೆಯ ಕೆನೆಯ ಖಾದ್ಯವಾಗಿದ್ದು ತಣ್ಣಗಿರುವಾಗಲೇ ಇದನ್ನು ಸರ್ವ್ ಮಾಡುತ್ತಾರೆ. ಇದನ್ನು ರಿಕೊಟ್ಟಾ ಚೀಸ್, ಸಕ್ಕರೆ ಮತ್ತು ಕಂದು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಇದರ ಜೊತೆಗೆ ಹುರಿದ ಗೋಡಂಬಿ, ಒಣದ್ರಾಕ್ಷಿ ಕೆಲವೊಮ್ಮೆ ಬೆಲ್ಲವನ್ನು ಕೂಡ ಸೇರಿಸಲಾಗುತ್ತದೆ.

• ಜದೋಹ್ : ಜದೋಹ್ ಮೇಘಾಲಯದ ವಿಶಿಷ್ಟ ಭಕ್ಷವಾಗಿದೆ. ಇದರಲ್ಲಿ ಮುಖ್ಯವಾಗಿ ಅಕ್ಕಿಯನ್ನು ಬಳಸಲಾಗುತ್ತದೆ. ಅಕ್ಕಿಯ ಜೊತೆಗೆ ಹಂದಿಮಾಂಸ, ಗಿಡಮೂಲಿಕೆ, ಕೊತ್ತುಂಬರಿ ಸೊಪ್ಪು ಮುಂತಾದವನ್ನು ಬಳಸಲಾಗುತ್ತದೆ. ಈ ಖಾದ್ಯ ಈಗ ಅಳಿವಿನಂಚಿನಲ್ಲಿದೆ.

• ಬೆಳ್ಳುಳ್ಳಿಯ ಖೀರು : ರಾಜಸ್ತಾನದಲ್ಲಿ ಪ್ರಖ್ಯಾತವಾದ ಈ ಖೀರಿಗೆ ಖೋಯಾ, ಹಾಲು, ಒಣ ಹಣ್ಣು ಮತ್ತು ಬೆಳ್ಳುಳ್ಳಿಯನ್ನು ಹಾಕಿ ತುಪ್ಪದಲ್ಲಿ ತಯಾರಿಸಲಾಗುತ್ತದೆ.

Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!

• ಕಶ್ಮೀರಿ ಶುಫ್ತಾ :  ಕಶ್ಮೀರಿ ಶುಫ್ತಾ ಶ್ರೀನಗರದ ಕೆಲವು ಸಿಹಿ ಖಾದ್ಯಗಳಲ್ಲೊಂದು. ಹಬ್ಬ, ಮದುವೆಗಳಲ್ಲಿ ತಯಾರಿಸುವ ಇದಕ್ಕೆ ಪನೀರ್, ಡ್ರೈ ಫುಟ್ಸ್, ಕೇಸರಿ, ಹಾಲು, ತುಪ್ಪ ಮತ್ತು ಮೊರೆಲ್ ಅಣಬೆಯನ್ನು ಹಾಕಲಾಗುತ್ತದೆ.

• ಅಕೋತ್ರಿ : ಅಕೋತ್ರಿ ಉತ್ತರದ ಬೆಟ್ಟಗಳ ಸಿಹಿ ಭಕ್ಷ್ಯವಾಗಿದೆ. ಇದು ಗೋಧಿ ಮತ್ತು ಹುರುಳಿಯ ಬಾಟರ್ ನಿಂದ ತಯಾರಿಸುವ ಪಾನ್ ಕೇಕ್ ಆಗಿದೆ. ಇದು ಬಹಳ ತೆಳುವಾಗಿದ್ದು ಮೃದುವಾಗಿರುತ್ತದೆ.

• ಬಾಲ್ ಕರಿ : ಬಾಲ್ ಕರಿ ಆಂಗ್ಲೋ ಇಂಡಿಯನ್ ಪಾಕವಿಧಾನವಾಗಿದ್ದು, ಪೋರ್ಚುಗಲ್ ಖಾದ್ಯದ ಸ್ವಾದವನ್ನು ಹೊಂದಿದೆ. ಇದು ಮಸಾಲೆಯುಕ್ತ ಕಟುವಾದ ಪಾಕವಿಧಾನವಾಗಿದ್ದು ತೆಂಗಿನಕಾಯಿಯ ಅನ್ನದೊಂದಿಗೆ ಸರ್ವ್ ಮಾಡಲಾಗುತ್ತದೆ. ಇದರಲ್ಲಿ ಮಟನ್ ನಿಂದ ಬಾಲ್ ಗಳನ್ನು ತಯಾರಿಸಲಾಗುತ್ತದೆ.

ಈಗಿನ ಯುವಜನತೆ ಹಳೆಯ ಖಾದ್ಯಗಳನ್ನು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಈ ಎಲ್ಲ ಖಾದ್ಯ ಕಾಣೆಯಾಗ್ತಿದೆ. ಬರೀ  ಇವು ಮಾತ್ರವಲ್ಲ  ಇನ್ನೂ ಅನೇಕ ಖಾದ್ಯಗಳು ನೇಪಥ್ಯಕ್ಕೆ ಸೇರುತ್ತಿವೆ. ಫುಲ್ಕರಿ ಪುಲಾವ್, ಇರೊಂಬಾ, ಹುರಳಿ ದಾಲ್, ಕರ್ಜಿ ಎಗ್ ತಡ್ಕಾ ಮುಂತಾದ ಹೆಚ್ಚು ಮನ್ನಣೆ ಪಡೆದ ಭಕ್ಷ್ಯಗಳು ಕೂಡ ಭಾರತೀಯ ಇತಿಹಾಸದ ಪ್ರಮುಖ ಭಾಗವಾಗಿದೆ ಹಾಗೂ ನಿಧಾನವಾಗಿ ಕಣ್ಮರೆಯಾಗುತ್ತಿವೆ.

click me!