ಗಾಂಧಿ ಬಜಾರ್ (Gandhi Bazaar)ಗೆ ಹೋದರೆ ವಿದ್ಯಾರ್ಥಿ ಭವನ (Vidyarthi Bhavan)ಕ್ಕೆ ಭೇಟಿ ನೀಡದವರೇ ಇಲ್ಲ. ಇಲ್ಲಿನ ಮಸಾಲೆ ದೋಸೆ (Masala Dosa) ಸವಿಯಲು ದೂರ ದೂರದಿಂದಲೂ ಜನರು ಬರುತ್ತಾರೆ. ಪ್ರತಿದಿನ ಇಲ್ಲಿ ರಶ್ಶೋ ರಶ್. ಹೀಗಿರುವಾಗ ಇನ್ನೊಂದು ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಆರಂಭವಾಗುತ್ತೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೆ ವಿದ್ಯಾರ್ಥಿ ಭವನ ಮಲ್ಲೇಶ್ವರಂ (Malleshwaram) ಗೆ ಬರ್ತಿರೋದು ನಿಜ ಆದ್ರೆ ಹೋಟೆಲ್ ಆಗಿ ಅಲ್ಲಾ, ಬದಲಾಗಿ ಸುಂದರ ನಾಟಕವಾಗಿ.
ಬೆಂಗಳೂರು: ಕಳೆದ ಎಂಟು ದಶಕಗಳಿಂದ ಮಸಾಲೆ ದೋಸೆ (Masalae Dosa) ಮೂಲಕವೇ ಬೆಂಗಳೂರಿಗರ ಮನ ಗೆದ್ದಿದ್ದ ವಿದ್ಯಾರ್ಥಿ ಭವನ (Vidyarthi Bhavan) ಹೋಟೆಲ್, ಇತ್ತೀಚಿಗಷ್ಟೇ 'ಮಲ್ಲೇಶ್ವರಕ್ಕೆ ಬರಲಿದೆ ವಿದ್ಯಾರ್ಥಿ ಭವನ' ಎಂಬ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದ್ದು, ಮಲ್ಲೇಶ್ವರಂ (Malleshwaram) ನಿವಾಸಿಗಳು ನಮಗೆ ಹತ್ರದಲ್ಲೇ ಮಸಾಲೆ ದೋಸೆ ಸಿಗುತ್ತೆ ಅಂತ ಖುಷಿ ಆಗಿದ್ರು, ಆದ್ರೆ ಇಲ್ಲಿ ಆಗಿರೋದೇ ಬೇರೆ. ವಿದ್ಯಾರ್ಥಿ ಭವನ ಮಲ್ಲೇಶ್ವರಂ ಗೆ ಬರ್ತಿರೋದು ನಿಜ ಆದ್ರೆ ಹೋಟೆಲ್ ಆಗಿ ಅಲ್ಲಾ, ಬದಲಾಗಿ ಸುಂದರ ನಾಟಕವಾಗಿ.
ಎಸ್, ವಿದ್ಯಾರ್ಥಿ ಭವನ ಅಂದ್ರೆ ಸಾಕು ಅದೊಂದು ಹೋಟೆಲ್ (Hotel) ಅಂತ ಹೊಸದಾಗಿ ಹೇಳೋದೇ ಬೇಡ, ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಪಾಪ್ಯುಲರ್ ಆಗಿದೆ. ಅದೆಷ್ಟೋ ಜನ ವಿದ್ಯಾರ್ಥಿ ಭವನದ ದೋಸೆನೆ ಬೇಕು ಅಂತ ಸಾಲಿನಲ್ಲಿ ನಿಂತು ತಿಂದು ಬರ್ತಾರೆ. ಅಷ್ಟೊಂದ್ ಹೆಸರಿರುವ ಈ ಹೋಟೆಲ್ ಕಳೆದ 79 ವರ್ಷದಿಂದಲೂ ಅದೇ ಕ್ವಾಲಿಟಿಯನ್ನ ಮೇಂಟೈನ್ ಮಾಡ್ಕೊಂಡ್ ಬಂದಿದೆ. ಅದ್ರ ಬೆನ್ನಲ್ಲೇ ಇದೀಗ ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ ವಿದ್ಯಾರ್ಥಿ ಭವನದ ರುಚಿಕರ ದೋಸೆಯ ಹಾಗೂ ಹೋಟೆಲ್ ಸಾಗಿ ಬಂದ ಹಾದಿಯನ್ನು ಎಲ್ಲರಿಗೂ ತಿಳಿಸುವ ಸಲುವಾಗಿ ವಿದ್ಯಾರ್ಥಿ ಭವನ ಎಂಬ ನಾಟಕ (Drama)ವನ್ನ ಪ್ರದರ್ಶಿಸಲು ಮುನ್ನುಡಿ ಬರೆದಿದ್ದಾರೆ.
ವಿದ್ಯಾರ್ಥಿ ಭವನಕ್ಕೆ ತುಂಬಿತು 75: ಪಯಣದ ಕಥೆ ಇಲ್ಲಿದೆ
ಖ್ಯಾತ ನಾಟಕ ರಚಣೆಕಾರರದ ರಾಜೇಂದ್ರ ಕಾರಂತ್ ಈ ನಾಟಕ ರಚನೆ ಮಾಡಿದ್ದು, ಬೆಂಗಳೂರು ಥಿಯೇಟರ್ (Theatre) ಫೌಂಡೇಶನ್ ತಂಡದ ಕಲಾವಿದರು ನಾಟಕದಲ್ಲಿ ಭಾಗಿಯಾಗಳಿದ್ದಾರೆ. ಇದೆ ಮೇ 6,7,8ರಂದು ಮಲ್ಲೇಶ್ವರಂ ನ ಚೌಡಯ್ಯ ಸ್ಮಾರಕ ಭವನದಲ್ಲಿ ವಿದ್ಯಾರ್ಥಿ ಭವನ ನಾಟಕ ಪ್ರದರ್ಶನಗೊಳ್ಳಲು ಸಿದ್ದವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಅರುಣ್ ಅಡಿಗ, ಜನರನ್ನು ಮಿಸ್ ಲೀಡ್ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ, ನಾವು ಮಲ್ಲೇಶ್ವರಕ್ಕೆ ಬರಲಿದೆ ವಿದ್ಯಾರ್ಥಿ ಭವನ ಅಂತ ಹೇಳಿದ್ದೆವು, ಅದರಂತೆ ಮೇ 6ಕ್ಕೆ ನಾವು ಬರ್ತಿದ್ದೇವೆ. ವಿದ್ಯಾರ್ಥಿ ಭವನ ಎಂಬ ಹೋಟೆಲ್ ಬದಲಾಗಿ ನಾಟಕದ ಮೂಲಕ ಜನರ ಮನ ಸೇರ್ತೀದ್ದೇವೆ ಎಂದಿದ್ದಾರೆ.
ಹೀಗೆ ತಿನ್ಬೇಕಂತೆ ಮಸಾಲೆ ದೋಸೆ : ವಿಡಿಯೋ ವೈರಲ್
ಕಳೆದ 79 ವರ್ಷಗಳಿಂದ ನಾಡಿನ ಜನರಿಗೆ ರುಚಿಯಾಗಿ ದೋಸೆ ಉಣಬಡಿಸುತ್ತಾ ಮನೆ ಮಾತಾಗಿರುವ ವಿದ್ಯಾರ್ಥಿ ಭವನ ಹೋಟೆಲ್ ನಲ್ಲಿ ಸಾಕಷ್ಟು ವೈಶಿಸ್ತ್ಯಗಳಿವೆ, ಈ ಅವಧಿಯಲ್ಲಿ ಪ್ರಸಿದ್ದ ಕವಿಗಳು ಈ ಹೋಟೆಲ್‌ಗೆ ಬಂದು ಹೋಗಿದ್ದಾರೆ, ಅಲ್ಲದೆ ಈ ಹೋಟೆಲ್ ನ ಗೋಡೆಗಳ ಮೇಲೆ ನೂರಾರು ಕಥೆಗಳ ಚಿತ್ರಣವಿದೆ. ಗಾಂಧಿಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ಗೆ ಬರುವ ಗ್ರಾಹಕರಿಗೆ ದೋಸೆ ಜೊತೆಗೆ ನಾಡು ನುಡಿಗೆ ಶ್ರಮಿಸಿದವರ ಫೋಟೋಗಳು ಸಹ ನೋಡಸಿಗಿತ್ತವೆ.
ಇಂತಹ ಅವೆಷ್ಟೋ ವಿಷಯಗಳನ್ನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಈ ನಾಟಕ ಪ್ರದರ್ಶಿಸಲು ವಿದ್ಯಾರ್ಥಿ ಭವನ ತಂಡ ಈ ತೀರ್ಮಾನವನ್ನ ಕೈಗೊಂಡಿದೆ. ನೀವು ಕೂಡ ವಿದ್ಯಾರ್ಥಿ ಭವನದ ಇತಿಹಾಸ ತಿಳಿಯಲು ಈ ನಾಟಕಕ್ಕೆ ಹೋಗಬಹುದಾಗಿದ್ದು, ಇದಕ್ಕೆ ಬೇಕಾದ ಟಿಕೆಟ್ನ್ನು ವಿದ್ಯಾರ್ಥಿ ಭವನ ಹೋಟೆಲ್ ನಲ್ಲಿ ಪಡೆಯಬಹುದಾಗಿದೆ.
ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು