
ಗುಣಮಟ್ಟಕ್ಕೆ ಹೆಸರಾದ ಸಮಿದೋರಿ ಗ್ರೀನ್ ಟೀ ಲೀಫ್ ಊಹೆಗೂ ನಿಲುಕದ ಬೆಲೆಗೆ ಮಾರಾಟವಾಗಿದೆ. ಜಪಾನ್‌ನ ಪ್ರಸಿದ್ಧ 1 ಕೆಜಿ ಸಮಿದೋರಿ ಹಸಿರು ಚಹಾ ಎಲೆಗಳು (Green Tea Leaves) ಹರಾಜಿನಲ್ಲಿ ದಾಖಲೆಯ 1.96 ಮಿಲಿಯನ್ ಯೆನ್ (ಅಂದಾಜು 15,294 ಡಾಲರ್, 1,184,254.25 ಭಾರತೀಯ ರೂಪಾಯಿ) ಗಳಿಸಿವೆ ಎಂದು ಸುದ್ದಿ ಸಂಸ್ಥೆ ಕ್ಯೋಡೋ ವರದಿ ಮಾಡಿದೆ. ಹೊಸ ದಾಖಲೆ (New Record) ಬರೆದ ಸಮಿಡೋರಿ ಎಲೆಗಳು, ಹಸಿರು ಚಹಾದ ಅಡಿಯಲ್ಲಿನ ಒಂದು ಚಹಾ ತಳಿ. ಶಿಜುವೊಕಾ ಪ್ರೀಫೆಕ್ಚರ್‌ನಲ್ಲಿರುವ ಫ್ಯೂಜಿನೋಮಿಯಾ ನಗರದಲ್ಲಿ ಇವನ್ನು ಬೆಳೆಯಲಾಗುತ್ತದೆ, ಈ ಸಮಿಡೋರಿ ಎಲೆಗಳು ಜಪಾನ್‌ನಾದ್ಯಂತ ಅದರ ಉತ್ತಮ ಗುಣಮಟ್ಟದ (Good Quality) ಹಸಿರು ಚಹಾಗಳಿಗೆ (Green Tea) ಹೆಸರುವಾಸಿಯಾಗಿದೆ.
ಸಮಿಡೋರಿ ಎಲೆಗಳನ್ನು ಶಿಜುವೊಕಾ ಜಪಾನೀಸ್ ಟೀ ಮಾರುಕಟ್ಟೆಯಲ್ಲಿ ಬೆಳೆ ಋತುವಿನ ಆರಂಭವನ್ನು ಗುರುತಿಸಲು ವಾರ್ಷಿಕ ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಪ್ರಸ್ತುತ ಹೆಚ್ಚುತ್ತಿರುವ ಇಂಧನ ಮತ್ತು ಕಚ್ಚಾ ವಸ್ತುಗಳ ಬೆಲೆಗಳು ದುಬಾರಿ ಚಹಾ ಎಲೆಗಳ ಸಾವಿಗೆ ಕಾರಣವಾಗಿವೆ ಎಂದು ಶಿಜುವೊಕಾ ಮಾರುಕಟ್ಟೆ ಅಧ್ಯಕ್ಷ ಯಾಸುಹಿಡೆ ಉಚಿನೊ ಕ್ಯೋಡೋ ನ್ಯೂಸ್‌ಗೆ ತಿಳಿಸಿದರು. ಇಂಧನ ಮತ್ತು ಕಚ್ಚಾ ವಸ್ತುಗಳ ಸವಾಲುಗಳ ಕುರಿತು ಮಾತನಾಡಿದ ಅವರು, ಇದರ ಹೊರತಾಗಿಯೂ, ಮಾರುಕಟ್ಟೆಯು ಗ್ರಾಹಕರಿಗೆ ಗುಣಮಟ್ಟದ ಚಹಾವನ್ನು ಸಮಂಜಸವಾದ ಬೆಲೆಯಲ್ಲಿ ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ನಿರುದ್ಯೋಗ: ಚಾ ಅಂಗಡಿ ತೆರೆದ ಅರ್ಥಶಾಸ್ತ್ರ ಪದವೀಧರೆ
ಶಿಜುವೊಕಾ ಜಪಾನೀಸ್ ಟೀ ಮಾರುಕಟ್ಟೆಯಲ್ಲಿ ಸಮಿಡೋರಿ ಎಲೆಗಳ ಮಾರಾಟ
ಇದಕ್ಕೂ ಮೊದಲು, ಜಪಾನ್‌ನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಚಹಾದ ದಾಖಲೆಯು 2021ರಲ್ಲಿ 1.08 ಮಿಲಿಯನ್ ಯೆನ್ ಅಥವಾ 8,507.70 ಡಾಲರ್ ಆಗಿತ್ತು ಎಂದು ಸ್ಥಳೀಯ ಸುದ್ದಿ ಸಂಸ್ಥೆ ತಿಳಿಸಿದೆ. ಹರಾಜಿನಲ್ಲಿದ್ದ ಟೀ ಸಗಟು ವ್ಯಾಪಾರಿಗಳು ತಮ್ಮ ಖರೀದಿಯಿಂದ ಸಂತೋಷಪಟ್ಟರು. ನಾವು ಅತ್ಯುತ್ತಮ ಬಣ್ಣ ಮತ್ತು ಗುಣಮಟ್ಟದ ಚಹಾವನ್ನು ಪಡೆಯಲು ಸಾಧ್ಯವಾಯಿತು ಎಂದು ಶಿಜುಕಾ ನಗರದ ಸಗಟು ವ್ಯಾಪಾರಿ ನಟ್ಸುಕಿ ವಾಡಾ ಕ್ಯೋಡೋಗೆ ತಿಳಿಸಿದರು. ಜತೆಗೆ ಈ ವರ್ಷ ಚಹಾದ ಗುಣಮಟ್ಟ ಉತ್ತಮವಾಗಿದೆ ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.ಇದರ ಹೊರತಾಗಿಯೂ, ಮಾರುಕಟ್ಟೆಯು ಗ್ರಾಹಕರಿಗೆ ಗುಣಮಟ್ಟದ ಚಹಾವನ್ನು ನ್ಯಾಯಯುತ ಬೆಲೆಯಲ್ಲಿ ಒದಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಎರಡು ಟೀ ಚಮಚಗಳ ಸಮಿದೋರಿ ಎಲೆಗಳಿಂದ ಮಾಡಿದ ಒಂದು ಕಪ್ ಚಹಾದ ಬೆಲೆ $ 31 (2,368.50 ಭಾರತೀಯ ರೂಪಾಯಿಗಳು). 2020 ರ ವೇಳೆಗೆ, ಎರಡು ಟೀಚಮಚಗಳನ್ನು ಬಳಸುವ ಒಂದು ಕಪ್ ಹಸಿರು ಚಹಾದ ಸರಾಸರಿ ಬೆಲೆ 8 ಸೆಂಟ್‌ಗಳಿಗಿಂತ ಕಡಿಮೆಯಿತ್ತು ಮತ್ತು ರೆಸ್ಟೋರೆಂಟ್‌ಗಳಲ್ಲಿ, ಊಟ ಮತ್ತು ಚಹಾ ಕಪ್‌ಗಳು ಸಾಮಾನ್ಯವಾಗಿ ಉಚಿತವಾಗಿರುತ್ತವೆ. ಚಹಾದ ಬೆಲೆ ಲಭ್ಯತೆ ಮತ್ತು ಬೆಳೆಯಲು ಮತ್ತು ಕೊಯ್ಲು ಮಾಡುವ ಶ್ರಮವನ್ನು ಅವಲಂಬಿಸಿ ಬದಲಾಗುತ್ತದೆ.
Weight Loss Tips: ಮನೆಯಲ್ಲೇ ತಯಾರಿಸಬಹುದಾದ ಹೆಲ್ದೀ ಡ್ರಿಂಕ್ಸ್ ಕುಡೀರಿ.. ಸೂಪರ್ ಸ್ಲಿಮ್ ಆಗಿ
ಸೆಮಿಡೋರಿ ಎಲೆಗಳ ವಿಶೇಷತೆ ಮತ್ತು ಇತಿಹಾಸ
ಚಹಾ ಎಲೆಗಳು ಬೆಚ್ಚನೆಯ ಹವಾಮಾನಕ್ಕೆ ಸೂಕ್ತವಾಗಿವೆ, ಮುಖ್ಯವಾಗಿ ದಕ್ಷಿಣ ಜಪಾನ್‌ನ ಕ್ಯುಶು ಪ್ರದೇಶದಲ್ಲಿ, ಮುಖ್ಯವಾಗಿ ಕಾಗೋಶಿಮಾ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತದೆ. ಸೆಮಿಡೋರಿಯ ಬಣ್ಣ, ಪರಿಮಳ ಮತ್ತು ರುಚಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಹೆಚ್ಚಿನ ಅಮೈನೋ ಆಮ್ಲದ ಅಂಶವನ್ನು ಹೊಂದಿದೆ.
ಸೇಮಿಡೋರಿಯ ಎಲೆ ಅಸತ್ಸುಯು ತಳಿಯು ಉತ್ತಮ ಗುಣಮಟ್ಟದ್ದಾಗಿದೆ. ಸೆಮಿಡೋರಿಯನ್ನ ಅಂತಿಮವಾಗಿ 1990ರಲ್ಲಿ ಚಹಾ ತಳಿ ಸಂಖ್ಯೆ 40 ಎಂದು ನೋಂದಾಯಿಸಲಾಯಿತು. ಬೆಳೆಯಾಗಿ ಇದನ್ನು ತುಂಬಾ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಬೆಳೆಸಬೇಕು. ಹಿಮದಲ್ಲಿ ಇದು ಬದುಕುವುದಿಲ್ಲ, ಸೇಮಿಡೋರಿ ಚಹಾ ಸಸ್ಯಗಳ ಎಲೆಗಳು ಬಲವಾದ ಗಾಳಿಗೆ ಉದುರಿ ಹೋಗುತ್ತದೆ ಮತ್ತು ಒಮ್ಮೆ ಇವು ಹಾನಿಗೆ ಒಳಗಾದರೆ ಅದು ಸುಲಭವಾಗಿ ಚೇತರಿಸಿಕೊಳ್ಳುವುದಿಲ್ಲ. ಹೀಗಾಗಿ ಬಹಳ ಜಾಗರೂಕತೆಯಿಂದ ರೈತರು ಬೆಳೆಸುತ್ತಾರೆ. ವಿಶ್ವಸಂಸ್ಥೆ ಪ್ರಕಾರ, ಜಾಗತಿಕ ಚಹಾ ಉದ್ಯಮವು 2024ರ ವೇಳೆಗೆ 21.3 ಬಿಲಿಯನ್ ಡಾಲರ್ ತಲುಪುತ್ತದೆ ಎಂದು ಅಂದಾಜಿಸಿದೆ. ಚೀನಾ ಮತ್ತು ಭಾರತವು ಚಹಾ ಮಾರುಕಟ್ಟೆಯ ಅತಿದೊಡ್ಡ ಷೇರುಗಳನ್ನು ಹೊಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.