ಅಬ್ಬಾ ಏನ್ ಖಾರ ಅಂತೀರಿ. ಬಾಯಿಗಿಡೋಕಾಗಲ್ಲ..ಹೀಗೆ ಹಲವರು ಹೇಳಿರೋದನ್ನು ಕೇಳಿರಬಹುದು. ಆಹಾರ ಹೆಚ್ಚು ಉಪ್ಪು, ಹೆಚ್ಚು ಖಾರ (Spicy), ಹೆಚ್ಚು ಹುಳಿ, ಹೆಚ್ಚು ಸಿಹಿಯಾಗಿ ಬಿಡುವ ತಪ್ಪು ಆಗಾಗ ಹಲವರಿಂದಾಗುತ್ತದೆ. ಅದರಲ್ಲೂ ಆಹಾರ (FOOD)ದಲ್ಲಿ ಖಾರ ಹೆಚ್ಚಾದರೆ ಅದನ್ನು ಬಾಯಿಗಿಡುವುದೇ ಕಷ್ಟ, ಹೀಗಿದ್ದಾಗ ಏನು ಮಾಡಬಹುದು ?
ಅಡುಗೆ ಮಾಡುವುದು ಅಭ್ಯಾಸದಿಂದ ಮಾತ್ರ ಪರಿಪೂರ್ಣವಾಗಬಲ್ಲ ಕಲೆ. ಅತ್ಯುತ್ತಮ ಅಡುಗೆಯವರು ಕೂಡಾ ಒಮ್ಮೊಮ್ಮೆ ಆಹಾರದಲ್ಲಿ ಸೇರಿಸಬೇಕಾದ ಪದಾರ್ಥಗಳ ಪ್ರಮಾಣವನ್ನು ತಪ್ಪಾಗಿ ಹಾಕಿ ಬಿಡುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಸಾಲೆ (Spice) ಹಾಕುವುದು ದೈನಂದಿನ ಅಡುಗೆಯಲ್ಲಿ ಸಾಮಾನ್ಯವಾಗಿ ಆಗುವ ತಪ್ಪಾಗಿದೆ. ಅರಿವಿಲ್ಲದೆ ಎರಡೆರಡು ಬಾರಿ ಮಸಾಲೆ ಪುಡಿ ಹಾಕಿರಬಹುದು. ಅಥವಾ ಈ ಬಾರಿ ತಂದಿರುವ ಮೆಣಸಿನಕಾಯಿ ತುಂಬಾ ಖಾರವಾಗಿರಬಹುದು ಮತ್ತು ನೀವು ಅದನ್ನು ತಿಳಿಯದೇ ಹೆಚ್ಚಿನ ಪ್ರಮಾಣದಲ್ಲಿ ಬಳಸಿರಬಹುದು. ಕಾರಣ ಏನೇ ಆಗಿದ್ದರೂ ಅತಿಯಾದ ಖಾರ ಆಹಾರ (Food)ದ ರುಚಿಯನ್ನೇ ಹಾಳು ಮಾಡುತ್ತದೆ.
ಹೀಗಾದಾಗ ಬೇಯಿಸಿದ ಆಹಾರವನ್ನು ವ್ಯರ್ಥ ಮಾಡುವ ಮೊದಲು, ಮಸಾಲೆಯ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಹಾರದ ರುಚಿಯನ್ನು ಸಮತೋಲನಗೊಳಿಸಲು ನೀವು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಮಸಾಲೆಯ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ನೀವು ಊಹಿಸಿದಂತೆ ನಿಮ್ಮ ಆಹಾರವನ್ನು ಸವಿಯಲು ನಿಮ್ಮ ಆಹಾರದಲ್ಲಿ ಈ ಕೆಳಗಿನ ಪದಾರ್ಥಗಳನ್ನು ಸೇರಿಸಿ.
ಸೆಲೆಬ್ರಿಟಿ ಬಾಣಸಿಗ ಪಂಕಜ್ ಬದೌರಿಯಾ, ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚುವರಿ ಮಸಾಲೆಯುಕ್ತ ಆಹಾರವನ್ನು ಸರಿಪಡಿಸಲು ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Kitchen Tips: ಮಸಾಲೆ ಪದಾರ್ಥಗಳು ಹಾಳಾಗ್ತಿದ್ಯಾ ? ಹೀಗೆ ಮಾಡಿ ನೋಡಿ
ಡೈರಿ ಉತ್ಪನ್ನಗಳನ್ನು ಸೇರಿಸಿ
ಡೈರಿ ಉತ್ಪನ್ನವನ್ನು ಸೇರಿಸುವುದು ಆಹಾರದಲ್ಲಿ ಮಸಾಲೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಸಾಲೆ ಮಟ್ಟವನ್ನು ಸರಿಹೊಂದಿಸಲು ನೀವು ಆಯಾ ಆಹಾರಕ್ಕೆ ಹೊಂದುವಂತೆ ಹಾಲು (Milk), ಮೊಸರು ಅಥವಾ ಕೆನೆಯನ್ನು ಸೇರಿಸಬೇಕು. ಇದು ಆಹಾರದಲ್ಲಿ ಖಾರದ ಮಟ್ಟವನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ. ಬಿಸಿ ಮಸಾಲೆಯುಕ್ತ ಆಹಾರ ಸೇವಿಸಿದ್ದೇ ಆಗಿದ್ದಲ್ಲಿ, ಇದರ ಪರಿಣಾಮವನ್ನು ಕಡಿಮೆ ಮಾಡಲು ನೀವು ನೀರಿನ ಬದಲು ಹಾಲನ್ನು ಕುಡಿಯಬೇಕು.
ಉಳಿದ ಪದಾರ್ಥಗಳನ್ನು ಸೇರಿಸಿ
ಆಹಾರದಲ್ಲಿ ಹೆಚ್ಚಾದ ಖಾರದ ಅಂಶವನ್ನು ಕಡಿಮೆ ಮಾಡಲು ಇದಕ್ಕೆ ಉಳಿದ ಪದಾರ್ಥಗಳನ್ನು ಸೇರಿಸುವುದು ಸರಳ ವಿಧಾನವಾಗಿದೆ. ಮೊದಲು ಆಹಾರಕ್ಕೆ ಸ್ವಲ್ಪ ನೀರು ಸೇರಿಸಿ. ನಂತರ ಯಾವ ಆಹಾರವನ್ನು ತಯಾರಿಸುತ್ತಿದ್ದೀರೋ ಆ ಆಹಾರದ ಪ್ರಮಾಣವನ್ನು ಹೆಚ್ಚಿಸಿ. ಉದಾಹರಣೆಗೆ ಪಾಸ್ತಾ ಮಾಡುವುದಾದರೆ ಇನ್ನಷ್ಟು ಪಾಸ್ತಾ ಸೇರಿಸಿ, ಸಾಂಬಾರು ಮಾಡಿದ್ದರೆ ಇನ್ನಷ್ಟು ತರಕಾರಿಗಳನ್ನು ಸೇರಿಸಿ. ಖಾದ್ಯದಲ್ಲಿನ ರುಚಿಯನ್ನು ಸಮತೋಲನಗೊಳಿಸಲು ಈರುಳ್ಳಿ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಬಳಸಬಹುದು.
Sex & spices : ಭಾರತೀಯ ಅಡುಗೆ ಮನೆಗಳು ಕಾಮೋತ್ತೇಜಕ ಮಸಾಲೆಗಳ ಖಜಾನೆ
ಬೆಣ್ಣೆಯನ್ನು ಬಳಸಿ
ಆಹಾರದಲ್ಲಿ ಮಸಾಲೆಯ ಪ್ರಭಾವವನ್ನು ಕಡಿಮೆ ಮಾಡಲು ಸ್ಪಲ್ಪ ಕಡಲೆಕಾಯಿ ಬೆಣ್ಣೆ (Peanut Butter)ಯನ್ನು ಸೇರಿಸಿ. ಅಥವಾ ಪರ್ಯಾಯವಾಗಿ ಬಾದಾಮಿ ಬೆಣ್ಣೆಯನ್ನು ಸಹ ಬಳಸಬಹುದು. ಈ ಬೆಣ್ಣೆಯ ರುಚಿಯು ಖಾರವನ್ನು ಕಡಿಮೆಗೊಳಿಸುತ್ತದೆ. ಮಸಾಲೆಯನ್ನು ತಟಸ್ಥಗೊಳಿಸುತ್ತದೆ.
ಆಮ್ಲೀಯ ಪದಾರ್ಥಗಳನ್ನು ಸೇರಿಸಿ
ಖಾರದ ಪರಿಣಾಮವನ್ನು ಕಡಿಮೆ ಮಾಡಲು ಆಹಾರಕ್ಕೆ ಆಮ್ಲೀಯ ಪದಾರ್ಥಗಳನ್ನು ಸೇರಿಸಿ. ವಿನೇಗರ್, ಸಿಟ್ರಸ್ ಅಥವಾ ಕೆಚಪ್‌ನಂತಹ ಆಮ್ಲೀಯ ಪದಾರ್ಥಗಳನ್ನು ಸೇರಿಸುವುದು ಆಹಾರದಲ್ಲಿ ಖಾರ (Spicy)ದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಆಮ್ಲದಂತೆಯೇ, ನಿಂಬೆ ರಸವು ಆಹಾರದ ಮಸಾಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರುಚಿ ಮತ್ತು ಸುವಾಸನೆಗಳ ಪರಿಪೂರ್ಣ ಸಮತೋಲನವನ್ನು ಪಡೆಯಲು ನಿಂಬೆ (Lemon) ರಸದಿಂದ ಟ್ಯಾಂಜಿನೆಸ್ ಹೆಚ್ಚುವರಿ ಮಸಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.
ಆಹಾರದಲ್ಲಿ ಸಿಹಿಯನ್ನು ಸೇರಿಸಿ
ಮಸಾಲೆಯುಕ್ತ ಊಟದ ನಂತರ ಸಿಹಿ ತಿನ್ನುವ ಬದಲು, ಹೆಚ್ಚುವರಿ ಮಸಾಲೆಯನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಸಿಹಿಯನ್ನು ಸೇರಿಸಿ. ಆಹಾರಕ್ಕೆ ಸಿಹಿಯಾದ ಪರಿಮಳವನ್ನು ನೀಡಲು ಸಕ್ಕರೆ (Sugar), ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು, ಆದರೆ ಪ್ರಮಾಣವನ್ನು ಗಮನದಲ್ಲಿರಿಸಿಕೊಳ್ಳಿ. ಇಲ್ಲದಿದ್ದರೆ ಆಹಾರ ವಿಪರೀತ ಸಿಹಿಯಾಗುವ ಸಾಧ್ಯತೆಯಿದೆ. ಬೆಲ್ಲ, ಸಕ್ಕರೆಯ ಬದಲು ನೀವು ರುಚಿಯಲ್ಲಿ ಸಿಹಿಯಾಗಿರುವ ಈರುಳ್ಳಿ ಮತ್ತು ಟೊಮೆಟೊಗಳಂತಹ ನೈಸರ್ಗಿಕ ಸಿಹಿಕಾರಕಗಳನ್ನು ಸಹ ಸೇರಿಸಬಹುದು. ಇದು ಮಸಾಲೆಯ ಸುವಾಸನೆಗಳನ್ನು ಸಮತೋಲನಗೊಳಿಸಲು ಸಹಾಯ ಮಾಡಬಹುದು.
ಇವಿಷ್ಟೇ ಟ್ರಿಕ್ಸ್ ಮಾತ್ರವಲ್ಲದೆ ಆಹಾರದಲ್ಲಿ ಖಾರವನ್ನು ಕಡಿಮೆ ಮಾಡಲು ಇತರ ಕೆಲವು ಮಾರ್ಗವನ್ನು ಸಹ ಅನುಸರಿಸಬಹುದು. ಆಹಾರದಲ್ಲಿ ಖಾರ ಹೆಚ್ಚಾಗಿದ್ದರೆ ಅದು ಬಿಸಿಯಿದ್ದಾಗಲೇ ಸೇವಿಸುವುದನ್ನು ತಪ್ಪಿಸಿ. ಬದಲಿಗೆ ತಣ್ಣಗಾದ ನಂತರವಷ್ಟೇ ತಿನ್ನಿ .ಇದು ನೈಸರ್ಗಿಕವಾಗಿ ಮಸಾಲೆ ಮಟ್ಟವನ್ನು ಕಡಿಮೆ ಮಾಡುತ್ತದೆ. ದಾಲ್ ಮಸಾಲೆಯುಕ್ತವಾಗಿದ್ದರೆ, ಅದಕ್ಕೆ ಕ್ಯಾರೆಟ್ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ಸೇರಿಸಿ. ಯಾವಾಗಲೂ ಮಸಾಲೆಯುಕ್ತ ಆಹಾರವನ್ನು ಅನ್ನದೊಂದಿಗೆ ತಿನ್ನಿ. ಇದರಿಂದ ಖಾರದ ಪ್ರಮಾಣ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ.