ಸಿಹಿತಿಂಡಿ, ಪಾನೀಯಗಳನ್ನು ಸಾಮಾನ್ಯವಾಗಿ ಎಲ್ರೂ ಸೇವಿಸ್ತಾರೆ. ಆದ್ರೆ ಇದನ್ನು ಸಿಹಿ (Sweet)ಯಾಗಿಸಲು ಏನೆಲ್ಲಾ ಸೇರಿಸ್ತಾರೆ ಅನ್ನೋದರ ಬಗ್ಗೆ ತಿಳ್ಕೊಳ್ಳಲ್ಲ. ಸಿಹಿತಿಂಡಿಗೆ ಬಳಸೋ ಮುಖ್ಯ ಪದಾರ್ಥಗಳಲ್ಲೊಂದು ಕಾರ್ನ್ ಸಿರಪ್ (Corn Syrup). ಹಾಗಂದ್ರೇನು ? ಇದು ಆರೋಗ್ಯ (Health)ಕ್ಕೆ ಪೂರಕವಾ ? ಮಾರಕವಾ ? ಎಂಬುದನ್ನು ತಿಳ್ಕೊಳ್ಳಿ.
ಸಿಹಿತಿಂಡಿಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಸಿಹಿತಿಂಡಿಗಳನ್ನು ತಯಾರಿಸಲು ಏನೆಲ್ಲಾ ಬಳಸುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಕಾರ್ನ್ ಸಿರಪ್ (Corn Syrup) ಹೆಚ್ಚಿನ ಸಿಹಿ ತಿನಿಸುಗಳು ಮತ್ತು ಮಿಠಾಯಿಗಳಲ್ಲಿ ಅಡಕವಾಗಿರುವ ಅಂಶವಾಗಿದೆ. ಇದು ಸಿಹಿತಿಂಡಿಗೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಸಾಮಾನ್ಯ ಸಕ್ಕರೆಗಿಂತ ಕಡಿಮೆ ಸಿಹಿಯಾಗಿರುವ ಕಾರ್ನ್ ಸಿರಪ್ ಪಾಶ್ಚಿಮಾತ್ಯ ಶೈಲಿಯ ಅಡುಗೆಯಲ್ಲಿ ಬಳಸಲಾಗುವ ಹಳೆಯ ಸಿಹಿಕಾರಕವಾಗಿದೆ, ಇದನ್ನು ಹಲವಾರು ತಿಂಡಿಗಳನ್ನು ಬೇಯಿಸಲು ಮತ್ತು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಹಾಗಿದ್ರೆ ಕಾರ್ನ್ ಸಿರಪ್ ಎಂದರೇನು ? ಇದನ್ನು ತಿನ್ನೋದ್ರಿಂದ ಆರೋಗ್ಯ (Health)ಕ್ಕೆ ತೊಂದ್ರೆಯಿದ್ಯಾ ಅನ್ನೋದನ್ನು ತಿಳಿಯಿರಿ.
ಕಾರ್ನ್ ಸಿರಪ್ ಎಂದರೇನು ?
ಕಾರ್ನ್ ಸಿರಪ್ ಮೂಲತಃ ಕಾರ್ನ್ ಪಿಷ್ಟವನ್ನು ಸಂಸ್ಕರಿಸುವ ಮೂಲಕ ತಯಾರಿಸಿದ ದ್ರವರೂಪದ ಸಿಹಿಯಾಗಿದೆ. ಈ ಸ್ವಲ್ಪ ಸಿಹಿಯಾದ ಆಹಾರ ಸಿರಪ್‌ನ್ನು ಮೆಕ್ಕೆ ಜೋಳದ ಪಿಷ್ಟದಿಂದ ತಯಾರಿಸಲಾಗುತ್ತದೆ. ಹೆಚ್ಚು ಸಿಹಿಯಾಗಲು ಇದಕ್ಕೆ ಸಕ್ಕರೆ (Sugar) ಮಿಶ್ರಣವನ್ನು ಸಹ ಸೇರಿಸಲಾಗುತ್ತದೆ. ಕಾರ್ನ್ ಸಿರಪ್‌ನ್ನು ಗ್ಲುಕೋಸ್ ಸಿರಪ್ ಎಂದು ಸಹ ಕರೆಯಲಾಗುತ್ತದೆ. ಕಾರ್ನ್ ಸಿರಪ್ ಮೃದುವಾಗಿರುವ ಕಾರಣ ಇದನ್ನು ಮಿಠಾಯಿಗಳು, ಜೆಲ್ಲಿಗಳು ಮತ್ತು ಸಿಹಿತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ.
ಕಾರ್ನ್ ಸಿರಪ್ ಬಳಸುವುದರಿಂದ ಸಿಹಿತಿಂಡಿಯಲ್ಲಿ ಸಕ್ಕರೆ ಪ್ರಮಾಣ ಮಿತವಾಗಿ ಬಳಕೆಯಾಗುತ್ತದೆ ಮತ್ತು ತಿಂಡಿಗೆ ವಿಶೇಷ ಪರಿಮಳ ದೊರಕುತ್ತದೆ. ಕಾರ್ನ್ ಸಿರಪ್‌ಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವು ಯಾವುದೆಲ್ಲಾ ತಿಳಿಯೋಣ.
ಬೇಬಿ ಕಾರ್ನ್ ತಿನ್ನೋದ್ರಿಂದ ದೇಹಕ್ಕಾಗೋ ಪ್ರಯೋಜನ ಒಂದೆರಡಲ್ಲ!
ಕಾರ್ನ್ ಸಿರಪ್ ಮತ್ತು ಫ್ರಕ್ಟೋಸ್ ಕಾರ್ನ್ ಸಿರಪ್ ನಡುವಿನ ವ್ಯತ್ಯಾಸವೇನು ?
ಕಾರ್ನ್ ಸಿರಪ್ ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್‌ಗಿಂತ ಭಿನ್ನವಾಗಿದೆ. ಏಕೆಂದರೆ ಇದನ್ನು ಕಿಣ್ವಗಳನ್ನು ಪ್ರಚೋದಿಸುವ ಮೂಲಕ ಸಾಮಾನ್ಯ ಕಾರ್ನ್ ಸಿರಪ್ ಅನ್ನು ಪರಿವರ್ತಿಸುವ ಮೂಲಕ ತಯಾರಿಸಲಾಗುತ್ತದೆ. ಇದನ್ನು ವಾಣಿಜ್ಯಿಕವಾಗಿ ಉತ್ಪಾದಿಸಲಾಗುತ್ತದೆ, ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್‌ನ್ನು ಕಾರ್ನ್ ಸಿರಪ್‌ನಿಂದ ತಯಾರಿಸಲಾಗುತ್ತದೆ, ಅದರ ಗ್ಲುಕೋಸ್‌ನ ಹೆಚ್ಚಿನ ಪ್ರಮಾಣವನ್ನು ಫ್ರಕ್ಟೋಸ್ ಆಗಿ ಪರಿವರ್ತಿಸುವ ಮೂಲಕ ಡಿ ಕ್ಸೈಲೋಸ್ ಐಸೊಮೆರೇಸ್ ಎಂಬ ಕಿಣ್ವವನ್ನು ಬಳಸಿ, ಇದು ಸಿಹಿಗೊಳಿಸುವ ಸಿರಪ್‌ನ್ನು ಉತ್ಪಾದಿಸುತ್ತದೆ.
ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಸಾಮಾನ್ಯ ಟೇಬಲ್ ಸಕ್ಕರೆಗಿಂತ ಹೆಚ್ಚಾಗಿ 1.75 ಪಟ್ಟು ಸಿಹಿಯಾಗಿರುತ್ತದೆ. ಈ ಸಿರಪ್‌ನ ಅತಿಯಾದ ಸಿಹಿಯನ್ನು ಪ್ಯಾಕ್ ಮಾಡಿದ ಪಾನೀಯಗಳು ಮತ್ತು ತಿಂಡಿಗಳಲ್ಲಿ ಬಳಸಲಾಗುತ್ತದೆ. ಇದು ಸಾಮಾನ್ಯ ಸಕ್ಕರೆಗೆ ತುಲನಾತ್ಮಕವಾಗಿ ಅಗ್ಗದ ಪರ್ಯಾಯವಾಗಿದೆ. ಇದನ್ನು ವಾಣಿಜ್ಯ ಉತ್ಪಾದನೆಯಲ್ಲಿ ಬಳಸುವುದರಿಂದ, ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಸಾಮಾನ್ಯ ದಿನನಿತ್ಯದ ಬಳಕೆಗೆ ಲಭ್ಯವಿಲ್ಲ.
ಬೇಸಿಗೆಯಲ್ಲಿ ಸಿಹಿ ಜೋಳ ಬೇಕು ದೇಹಕ್ತೆ, ಯಾವಾಗ ತಿಂದರೊಳಿತು ಇಲ್ ಓದಿ
ಅಡುಗೆಯಲ್ಲಿ ಕಾರ್ನ್ ಸಿರಪ್ ಬಳಸುವುದು ಹೇಗೆ ?
ಕಾರ್ನ್ ಸಿರಪ್‌ನ್ನು ವಿವಿಧ ಸಿಹಿತಿಂಡಿಗಳು, ಮಿಠಾಯಿಗಳು ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಸಿರಪ್‌ಗೆ ವಿಶೇಷ ತಯಾರಿ ಅಗತ್ಯವಿಲ್ಲ. ಲೈಟ್ ಕಾರ್ನ್ ಸಿರಪ್ ಸೂಕ್ಷ್ಮವಾದ ಸಿಹಿ ಸುವಾಸನೆಯನ್ನು ಹೊಂದಿರುತ್ತದೆ. ಆದರೆ ಪ್ಯಾಕ್ ಮಾಡಲಾದ ಕಾರ್ನ್ ಸಿರಪ್‌ಗೆ ಕೃತಕ ರುಚಿಯನ್ನು ಸೇರಿಸಿರಬಹುದು. ಡಾರ್ಕ್ ಕಾರ್ನ್ ಸಿರಪ್‌ನ ಸಂದರ್ಭದಲ್ಲಿ ವಿನ್ಯಾಸವು ಹೆಚ್ಚು ಕ್ಯಾರಮೆಲೈಸ್ ಆಗಿರುತ್ತದೆ ಮತ್ತು ಸುವಾಸನೆಯು ಮೊಲಾಸಸ್‌ನಂತೆಯೇ ಇರುತ್ತದೆ.
ಮಧುಮೇಹಿಗಳಿಗೆ ಕಾರ್ನ್ ಸಿರಪ್ ಸುರಕ್ಷಿತವೇ ?
ಕಾರ್ನ್ ಸಿರಪ್ ಶುದ್ಧ ಗ್ಲುಕೋಸ್ ಆಗಿದೆ. ಹೀಗಾಗಿ ಇದು ಆಹಾರ (Food)ಗಳಿಗೆ ವಿಶೇಷ ರುಚಿಯನ್ನು ನೀಡುತ್ತದೆ. ಆದರೆ ನೀವು ಮಧುಮೇಹಿ (Diabetes)ಗಳಾಗಿದ್ದರೆ, ನೈಸರ್ಗಿಕವಾಗಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದರಿಂದ ಕಾರ್ನ್ ಸಿರಪ್ ಸೇವಿಸುವುದನ್ನು ತಪ್ಪಿಸುವುದು ಉತ್ತಮ. ಅಲ್ಲದೆ, ಕಾರ್ನ್ ಸಿರಪ್ ಅನ್ನು ಮಿತವಾಗಿ ಸೇವಿಸುವುದು ಉತ್ತಮ. ಏಕೆಂದರೆ ಇದು ಇನ್ಸುಲಿನ್ ಅಸಮತೋಲನವನ್ನು ಪ್ರಚೋದಿಸುತ್ತದೆ.