ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದ್ರಲ್ಲಿ ಹುಡುಗನೊಬ್ಬ ಎಗ್ ರೋಲ್ ತಯಾರಿಸ್ತಿರೋದನ್ನು ನೀವು ನೋಡ್ಬಹುದು. ಅರೆ ಕ್ಷಣದಲ್ಲಿ ರೋಲ್ ತಯಾರಿಸುವ ಈ ಹುಡುಗ ಕೈನಲ್ಲಿ ಮಾತ್ರವಲ್ಲ ಬಾಯಲ್ಲೂ ಜೋರು.
ಈಗಿನ ಮಕ್ಕಳು ಸೂಪರ್ ಫಾಸ್ಟ್ (Super Fast Kids). ಕೋಡಿಂಗ್ ನಿಂದ ಹಿಡಿದು ಅಡುಗೆವರೆಗೆ ಎಲ್ಲ ಕೆಲಸದಲ್ಲೂ ಸೈ ಎನ್ನಿಸಿಕೊಳ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ಅನೇಕ ಮಕ್ಕಳ ಬಗ್ಗೆ ಆಗಾಗ ನಾವೇ ವರದಿ ಮಾಡ್ತಿರುತ್ತೇವೆ. ಎಲ್ಲ ಮಕ್ಕಳು ಐಟಿ, ಗಣಿತ, ಕೋಡಿಂಗ್ ನಲ್ಲೇ ಮುಂದಿರಬೇಕಾಗಿಲ್ಲ. ಕೆಲ ಮಕ್ಕಳು ಅನಿವಾರ್ಯ ಅಥವಾ ಆಸಕ್ತಿಯಿಂದ ಬೇರೆ ಕೆಲಸ ಮಾಡ್ತಿರೋದನ್ನು ನಾವು ನೋಡ್ತಿದ್ದೇವೆ. ವಿದ್ಯಾಭ್ಯಾಸ ಬಿಟ್ಟು ಮಕ್ಕಳು ಕೆಲಸ ಮಾಡೋದು ಅಪರಾಧವೇ ಆದ್ರೂ ಕೆಲ ಮಕ್ಕಳಿಗೆ ಇದು ಅನಿವಾರ್ಯ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಕೆಲ ದಿನಗಳ ಹಿಂದೆ 10 ವರ್ಷದ ಪಂಜಾಬ್ ಹುಡುಗನ ವಿಡಿಯೋ ವೈರಲ್ ಆಗಿತ್ತು. ಅಪ್ಪನನ್ನು ಕಳೆದುಕೊಂಡಿರುವ ಬಾಲಕ, ತನ್ನ ಸಹೋದರಿ ಜೊತೆ ಎಗ್ ರೋಲ್ ಮಾರಾಟ ಮಾಡಿ ಜೀವನ ನಡೆಸ್ತಿರುವ ಆತನ ಕಥೆ ಅನೇಕನ್ನು ಭಾವುಕಗೊಳಿಸಿತ್ತು. ಈಗ ಇನ್ನೊಬ್ಬ ಬಾಲಕರ ವಿಡಿಯೋ ವೈರಲ್ ಆಗಿದೆ. ಈ ಬಾಲಕ ಮಾತಿನಷ್ಟೇ ಚುರುಕಾಗಿ ತನ್ನ ಕೆಲಸ ಮಾಡ್ತಾನೆ. ಅತಿ ಕಡಿಮೆ ಬೆಲೆಗೆ ಆತನ ಅಂಗಡಿಯಲ್ಲಿ ಡಬಲ್ ಎಗ್ ಚಿಕನ್ ರೋಲ್ ಸಿಗ್ತಿದೆ. ಮೋದಿ ಟೀ ಮಾರಾಟ ಮಾಡಿ ಮಹಾನ್ ವ್ಯಕ್ತಿ ಆದಂತೆ ತಾನು ಎಗ್ ರೋಲ್ ಮಾರಾಟ ಮಾಡಿ ದೊಡ್ಡ ಸಾಧನೆ ಮಾಡ್ಬೇಕೆಂಬ ಕನಸನ್ನು ಬಾಲಕ ಹೊಂದಿದ್ದಾನೆ.
ನೋಯ್ಡಾ (Noida) ದಲ್ಲಿ 12 ವರ್ಷದ ಬಾಲಕ ತಯಾರಿಸೋ ಚಿಕನ್ (Chicken) ಎಗ್ ರೋಲ್ ವಿಡಿಯೋ ಇನ್ಸ್ಟಾಗ್ರಾಮ್ (Instagram) ನಲ್ಲಿ ವೈರಲ್ ಆಗಿದೆ. ಇಂಡಿಯಾ ಈಟ್ ಮೇನಿಯಾ ಹೆಸರಿನ ಖಾತೆಯಲ್ಲಿ ಈ ಬಾಲಕನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿರೂಪಕಿ ಕೇಳುವ ಎಲ್ಲ ಪ್ರಶ್ನೆಗೆ ಫಟಾ ಫಟ್ ಅಂತ ಬಾಲಕ ಉತ್ತರ ನೀಡ್ತಿದ್ದಾನೆ. ಎಗ್ ರೋಲ್ ಮಾರಾಟ ಮಾಡುವ ಹುಡುಗ ಸ್ಕೂಲ್ ತಪ್ಪಿಸ್ತಿಲ್ಲ. ಶಾಲೆಯಲ್ಲಿ ಮೊದಲ ರ್ಯಾಂಕ್ ಬರ್ತಿರುವ ಬಾಲಕ ಹದಿನೈದಕ್ಕಿಂತಲೂ ಹೆಚ್ಚು ವೆರೈಟಿ ರೋಲ್ ತಯಾರಿಸ್ತಾನೆ.
undefined
Health Tips: ಗ್ಯಾಸ್‌ಗಿಂತ ಮೈಕ್ರೋವೇವ್ ಬೆಸ್ಟ್ ಅಂತಿದ್ದಾರೆ ತಜ್ಞರು..
ಅಣ್ಣನ ಜೊತೆ ಶಾಪ್ ನಡೆಸ್ತಿರುವ ಇವನು, ಡಬಲ್ ಎಗ್ ಚಿಕನ್ ಇಲ್ಲಿ ಹೆಚ್ಚು ಮಾರಾಟವಾಗುತ್ತೆ ಎನ್ನುತ್ತಾನೆ. ಈತನ ಪಾಲಕರೆಲ್ಲ ಹಳ್ಳಿಯಲ್ಲಿದ್ದು, ಆಟಕ್ಕಿಂತ ರೋಲ್ ಮಾಡೋದ್ರಲ್ಲಿ ಈತನಿಗೆ ಖುಷಿ ಇದ್ಯಂತೆ. ಒಂದೇ ನಿಮಿಷದಲ್ಲಿ ನಾಲ್ಕೈದು ಎಗ್ ಚಿಕನ್ ರೋಲ್ ರೆಡಿ ಮಾಡ್ತೇನೆ ಎನ್ನುವ ಕಾನ್ಫಿಡೆನ್ಸ್ ಇವನಿಗಿದೆ.
ನೋಯ್ಡಾದಲ್ಲಿರುವ ಈತನ ಶಾಪ್ ನಲ್ಲಿ ಅತಿ ಕಡಿಮೆ ಬೆಲೆಗೆ ರೋಲ್ ಸಿಗುತ್ತೆ ಅನ್ನೋದು ಮತ್ತೊಂದು ವಿಶೇಷ. ಸಿಂಗಲ್ ಎಗ್ ರೋಲ್ ಗೆ 40 ರೂಪಾಯಿ ಚಾರ್ಜ್ ಮಾಡಿದ್ರೆ ಡಬಲ್ ಎಗ್ ರೋಲ್ ಗೆ 50 ರೂಪಾಯಿ. ಹತ್ತಕಿಂತ ಹೆಚ್ಚು ದಿನ ಕೆಲಸಕ್ಕೆ ರಜೆ ಹಾಕದ ಈ ಬಾಲಕನ ರೋಲ್ ತಿನ್ನೋಕೆ ಜನರು ಮುಗಿ ಬೀಳ್ತಾರಂತೆ. ತನಗಿಂತ ಗ್ರಾಹಕರು ಮುಖ್ಯ ಎನ್ನುವ ಬಾಲಕ, ಕೆಲಸವನ್ನು ಎಂಜಾಯ್ ಮಾಡ್ತಾನಂತೆ. ಹಣ ಗಳಿಸೋದಕ್ಕಿಂತ ಜನರ ಹೊಟ್ಟೆ ತುಂಬಿಸೋದು ಮುಖ್ಯ ಎಂಬ ಸ್ಲೋಗನ್ ಇವನದ್ದು. ಡರ್ ಕೆ ಆಗೇ ಜೀತ್ ಹೈ ಎನ್ನುವ ಬಾಲಕ ಸಂಜೆ ಐದು ಗಂಟೆ ನಂತ್ರ ಕೆಲಸಕ್ಕೆ ಹಾಜರಾಗ್ತಾನೆ.
ಕಚೇರಿಗೆ ತಡವಾದರೆ 200 ರೂ ದಂಡ, ಹೊಸ ನಿಯಮ ಜಾರಿಗೊಳಿಸಿದ ಸಂಸ್ಥಾಪಕನಿಗೆ 1,000 ರೂ ಫೈನ್!
ಇನ್ಸ್ಟಾದಲ್ಲಿ ವೈರಲ್ ಆಗಿರುವ ಈ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಕ್ಕಳು ಇಂಥ ಕೆಲಸ ಮಾಡೋದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಅನೇಕರು ಮುಂದಿಟ್ಟಿದ್ದಾರೆ. ಮತ್ತೆ ಕೆಲವರು ಓದಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ರೆ, ಇನ್ನು ಕೆಲವರು ಹುಡುಗನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಚೆಲ್ಡ್ ಲೇಬರ್ ಬಗ್ಗೆ ಪ್ರಮೋಟ್ ಮಾಡ್ಬೇಡಿ ಎಂಬ ಮಾತೂ ಇಲ್ಲಿ ಕೇಳಿ ಬಂದಿದೆ.