Delicious Food : ಋತು ಮುಗಿಯೋ ಮೊದ್ಲೇ ನೇರಳೆ ಹಣ್ಣಿನ ಪಾನಿಪುರಿ ಟ್ರೈ ಮಾಡಿ

By Roopa Hegde  |  First Published Jun 14, 2024, 2:04 PM IST

ಪ್ರತಿ ದಿನ ಅದೇ ಆಹಾರ ತಿಂದು ಬಾಯಿ ಕೆಡೋದು ಸುಳ್ಳಲ್ಲ. ಆಗಾಗ ಪಾನಿಪುರಿ ಬಾಯಿಗೆ ಬೀಳ್ತಿದ್ರೆ ನಾಲಿಗೆ ಚುರ್ ಅನ್ನುತ್ತೆ. ಈ ಬಾರಿ ಪಾನಿಪುರಿಯಲ್ಲಿ ಹೊಸದು ಟ್ರೈ ಮಾಡ್ಬಹುದು. ನೇರಳೆ ಹಣ್ಣನ್ನು ಮನೆಗೆ ತಂದು ಪಾನಿಪುರಿ ಮಾಡ್ನೋಡಿ. 
 


ಬೇಸಿಗೆ ಕೊನೆ, ಮಳೆಗಾಲದ ಆರಂಭದಲ್ಲಿ ಬರುವಂತಹ ಹಣ್ಣು ನೇರಳೆ ಹಣ್ಣು. ಹಳ್ಳಿಗಳಲ್ಲಿ ಯಥೇಚ್ಛವಾಗಿ ಸಿಗುವ ಈ ಹಣ್ಣು ಪಟ್ಟಣದಲ್ಲಿ ಸಿಗೋದಿಲ್ಲ. ಮಾರುಕಟ್ಟೆಯಲ್ಲಿ ಹಣಕೊಟ್ಟು ಜನರು ನೇರಳೆ ಹಣ್ಣನ್ನು ಖರೀದಿ ಮಾಡ್ತಾರೆ. ಬೆಲೆ ಹೆಚ್ಚಿದ್ರೂ ವರ್ಷದಲ್ಲಿ ಒಂದು ತಿಂಗಳು ಮಾತ್ರ ಸಿಗುವ ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಧುಮೇಹಿಗಳಿಂದ ಹಿಡಿದು ಎಲ್ಲರೂ ಈ ಹಣ್ಣಿನ ಸೇವನೆ ಮಾಡ್ತಾರೆ. ಸಾಕಷ್ಟು ಆರೋಗ್ಯ ಗುಣಗಳನ್ನು ಹೊಂದಿರುವ ಹಣ್ಣನ್ನು ನೋಡಿದ್ರೆ ತಿನ್ನಬೇಕು ಎನ್ನಿಸದೆ ಇರದು. ನೇರಳೆ ಹಣ್ಣನ್ನು ಹಾಗೆ ತಿನ್ನೋದು ನಮಗೆ ಗೊತ್ತು. ಅದ್ರ ಜ್ಯೂಸ್ ಸೇವನೆ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಮತ್ತೆ ಕೆಲವರು ಅದ್ರ ಬೀಜವನ್ನು ಒಣಗಿಸಿ ಅದನ್ನು ಔಷಧಿಗೆ ಬಳಕೆ ಮಾಡ್ತಾರೆ. ಆದ್ರೆ ಎಲ್ಲರ ಅಚ್ಚುಮೆಚ್ಚು ಪಾನಿಪುರಿಗೂ ನೀವು ನೇರಳೆ ಹಣ್ಣು ಬಳಸಬಹುದು ಎಂಬುದು ನಿಮಗೆ ಗೊತ್ತಾ? ನಾವಿಂದು ನೇರಳೆ ಹಣ್ಣಿನ ಪಾನಿಪುರಿ ಮಾಡೋದು ಹೇಗೆ ಅಂತ ನಿಮಗೆ ತಿಳಿಸ್ತೇವೆ.

ಪಾನಿಪುರಿ (Panipuri) ಎಂದ ತಕ್ಷಣ ಪ್ರತಿಯೊಬ್ಬರ ಬಾಯಲ್ಲಿ ನೀರು ಬರುತ್ತೆ. ಜೋರು ಮಳೆಯಲ್ಲಿ ಖಾರದ ಪಾನಿಪುರಿ ತಿನ್ನುವ ಮಜವೇ ಬೇರೆ. ಈ ಬಾರಿ ಸ್ವಲ್ಪ ಟೇಸ್ಟ್ ಬದಲಿಸಿ. ನೇರಳೆ (Jamun ) ಹಣ್ಣಿನ ಪಾನಿಪುರಿ ಎಂಜಾಯ್ ಮಾಡಿ.

Latest Videos

undefined

ಜಗತ್ತಿನ ಬೆಸ್ಟ್ ಡಿಪ್ಸ್‌ನಲ್ಲಿ ಭಾರತೀಯ ಚಟ್ನಿಗೆ ಸಿಗ್ತು ಸ್ಥಾನ

ನೇರಳೆ ಹಣ್ಣಿ (Fruit) ನ ಪಾನಿಪುರಿಗೆ ಅಗತ್ಯವಿರುವ ಪದಾರ್ಥ : 250 ಗ್ರಾಂ ನೇರಳೆ ಹಣ್ಣು, ಎರಡು ಗ್ಲಾಸ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕಪ್ಪು ಉಪ್ಪು, ಎರಡು ಚಮಚ ಹುರಿದ ಜೀರಿಗೆ, ಖಾರಕ್ಕೆ ಎರಡು ಹಸಿ ಮೆಣಸಿನ ಕಾಯಿ, ನಿಂಬೆ ರಸ, ಕತ್ತರಿಸಿದ ಕೊತ್ತಂಬರಿ, ಪುದೀನಾ ಎಲೆ, ಐಸ್ ಕ್ಯೂಬ್.

ನೇರಳೆ ಹಣ್ಣಿನ ಪಾನಿಪುರಿ ಮಾಡುವ ವಿಧಾನ : ನೇರಳೆ ಹಣ್ಣನ್ನು ಕತ್ತರಿಸಿ, ಬೀಜ ತೆಗೆದು, ಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ, ನೀರನ್ನು ಹಾಕಿ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಕಪ್ಪು ಉಪ್ಪು, ಬಿಳಿ ಉಪ್ಪು, ಹುರಿದ ಜೀರಿಗೆ, ಹಸಿ ಮೆಣಸಿನ ಕಾಯಿ, ನಿಂಬೆ ರಸ ಮತ್ತು ಕತ್ತರಿಸಿ ಕೊತ್ತಂಬರಿ ಹಾಗೂ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಐಸ್ ಕ್ಯೂಬ್ ಹಾಕಿ. ಇಷ್ಟು ಮಾಡಿದ್ರೆ ನೇರಳೆ ಹಣ್ಣಿನ ಪಾನಿ ಸಿದ್ಧ. 

ಆ ನಂತ್ರ ನೀವು ಪುರಿಯನ್ನು ತೆಗೆದುಕೊಂಡು ಅದರೊಳಗೆ ಆಲೂಗಡ್ಡೆ (Potato) ಮಿಶ್ರಣ ಹಾಕಿ, ನೇರಳೆ ಹಣ್ಣಿನ ಪಾನಿಯನ್ನು ಹಾಕಿ, ಕೊನೆಯಲ್ಲಿ ಖಾರದ ಬೂಂದಿಯನ್ನು ಹಾಕಿ ಸರ್ವ್ ಮಾಡಿ. ಇನ್ಸ್ಟಾಗ್ರಾಮ್ ನಲ್ಲಿ ಮೇಘನಾಸ್ಫುಡ್ಮ್ಯಾಜಿಕ್ (Meghnasfoodmagic) ಖಾತೆಯಲ್ಲಿ ಮೇಘನಾ ಈ ರೆಸಿಪಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಗೆ ಲಕ್ಷಾಂತರ ವೀವ್ಸ್ ಸಿಕ್ಕಿದೆ. ಸಾವಿರಾರು ಮಂದಿ ಲೈಕ್ ಒತ್ತಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ. ಇಂಥ ಭಿನ್ನ ರುಚಿಯ ಪಾನಿಪುರಿ ತಿನ್ನಲು ಉತ್ಸುಕರಾಗಿರೋದಾಗಿ ಅನೇಕರು ಹೇಳಿದ್ದಾರೆ. ಇದನ್ನು ನೋಡಿದ್ರೆ ತುಂಬಾ ರುಚಿಯಿದ್ದಂತೆ ಕಾಣುತ್ತೆ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಆರೋಗ್ಯಕರ ಪಾನಿಪುರಿ ಎಂಬ ಕಮೆಂಟ್ ಕೂಡ ಬಂದಿದೆ. 

ಆರೋಗ್ಯಕರವಾಗಿ ತೂಕ ಹೆಚ್ಚಿಸ್ಬೇಕಾ? ಈ 8 ಹಣ್ಣುಗಳನ್ನು ಪ್ರತಿ ದಿನ ಸೇವಿಸಿ

ನೇರಳೆ ಹಣ್ಣಿನ ಪ್ರಯೋಜನ :  ನೇರಳೆ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಇದು ಉತ್ಕರ್ಷಣ ನಿರೋಧಕಗಳು, ರಂಜಕ, ಕ್ಯಾಲ್ಸಿಯಂ ಮತ್ತು ಫ್ಲೇವನಾಯ್ಡ್‌ಗಳಿಂದ ಕೂಡಿದೆ. ಇದು ಫೈಬರ್, ಫೋಲಿಕ್ ಆಮ್ಲ, ಕೊಬ್ಬು, ಪ್ರೊಟೀನ್, ಸೋಡಿಯಂ, ರೈಬೋಫ್ಲಾವಿನ್, ಥಯಾಮಿನ್, ಕ್ಯಾರೋಟಿನ್ ಮುಂತಾದ ನಮ್ಮ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಿಮೋಗ್ಲೋಬಿನ್ ಮಟ್ಟವನ್ನು ಇದು ಸುಧಾರಿಸುತ್ತದೆ. ಮಧುಮೇಹಿಗಳಿಗೆ ಇದು ಅತ್ಯುತ್ತಮ ಹಣ್ಣು. ಹೃದಯವನ್ನು ಆರೋಗ್ಯವಾಗಿಡುವ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

click me!