ಹಬ್ಬಕ್ಕೆ ಪಾಯಸದ ಸಂಭ್ರಮವಿರಲಿ. ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಪಾಯಸಗಳನ್ನು ಮಾಡಿಕೊಂಡು ಸವಿಯಿರಿ. ಏನಾದರೂ ಸಿಹಿ ತಿಂಡಿಗಳನ್ನು ಮಾಡಿ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುವ ಬದಲು ಈ ಕೆಲವು ಪಾಯಸಗಳು ತುಂಬ ಉತ್ತಮ.
ಹಬ್ಬಗಳೆಂದರೆ ಖುಷಿ, ಸಂಭ್ರಮ. ಸಂತಸಕ್ಕೆ ಇನ್ನಷ್ಟು ಮೆರುಗು ಸಿಹಿ ತಿಂಡಿಗಳಿಂದ ಬರುತ್ತದೆ. ಮನೆಯಲ್ಲಿ ಏನೇ ಸಮಸ್ಯೆ ಇರಲಿ, ಹಬ್ಬಗಳಲ್ಲಿ ಸಿಹಿ ತಿಂಡಿಗಳನ್ನು ಮಾಡದಿದ್ದರೆ ಸಂಭ್ರಮಕ್ಕೆ ಕೋಡು ಮೂಡುವುದಿಲ್ಲ. ಆದರೆ, ಸಿಹಿ ತಿನಿಸುಗಳನ್ನು ಎಲ್ಲರೂ ಇಷ್ಟಪಡುವುದಿಲ್ಲ. ಸಿಹಿ ತಿಂಡಿಗಳು ಆರೋಗ್ಯಕ್ಕೆ ಹಿತವೇ ಅಹಿತವೇ ಎಂದೆಲ್ಲ ವಿಚಾರ ಮಾಡುವವರು ನೀವಾಗಿದ್ದರೆ ಆರೋಗ್ಯಕರ ಸಿಹಿಯನ್ನೇ ಮಾಡಿಕೊಂಡು ಸವಿಯಲು ಸಾಧ್ಯ. ಆದರೆ, ಕೆಲವು ಸಿಹಿ ತಿಂಡಿಗಳು ಆರೋಗ್ಯಕ್ಕೆ ದುಬಾರಿಯಾಗಿ ಪರಿಣಮಿಸಬಹುದು. ಅತಿಯಾದ ಸಿಹಿ ತಿನಿಸುಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಕಾಟ ನೀಡಬಹುದು. ಹೀಗಾಗಿ, ಹೆಚ್ಚು ಸಿಹಿಯೂ ಅಲ್ಲದ, ಆರೋಗ್ಯಕ್ಕೂ ಪೂರಕವಾಗಿರುವ ಸಿಹಿ ಯಾವುದೆಂದರೆ ಸಿಗುವ ಉತ್ತರ ಪಾಯಸ. ಸಿಹಿ ತಿಂಡಿಗಳಲ್ಲಿ ಪಾಯಸಕ್ಕೆ ಅಗ್ರ ಸ್ಥಾನ. ನವರಾತ್ರಿಗಳಲ್ಲಿ ದೇವಿಗೆ ಪಾಯಸದ ನೈವೇದ್ಯ ಮಾಡುವುದು ಸಾಮಾನ್ಯ. ದೇವಿಯನ್ನು ಸಂಪ್ರೀತಿಗೊಳಿಸಲು ಪಾಯಸವೇ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗಾಗಿ, ಆರೋಗ್ಯಕರ ಪಾಯಸಗಳನ್ನು ಮಾಡಲು ಆದ್ಯತೆ ನೀಡಬಹುದು. ದುರ್ಗಾಪೂಜೆ, ವಿಜಯದಶಮಿ, ದೀಪಾವಳಿಗಳಂದು ಈ ಕೆಲವು ಪಾಯಸಗಳನ್ನು ಮಾಡಬಹುದು. ಕೆಲವು ಪಾಯಸಗಳ ರೆಸಿಪಿ ಅರಿತುಕೊಳ್ಳಿ.
• ಚೋಕೋ ಪಾಯಸ (Choco Payasam)
ಹಬ್ಬಗಳಿಗೆ ಇದೇನಿದು ಚೋಕೋ ಪಾಯಸ ಎನ್ನಬೇಡಿ. ಸ್ವಲ್ಪವೇ ಸ್ವಲ್ಪ ಚಾಕೋಲೇಟ್, ಕೋಕೋ ಸೇರಿಸಿ ಮಾಡುವ ಈ ಪಾಯಸ ಆರೋಗ್ಯಕ್ಕೆ ಉತ್ತಮ.
ಬೇಕಾಗುವ ಸಾಮಗ್ರಿ: ಕೆಂಪಕ್ಕಿ (Red Rice), ಒಂದು ಕಪ್ ಬೆಲ್ಲ (Jaggery), ಕಾಯಿತುರಿ, 50 ಎಂಎಲ್ ಡಾರ್ಕ್ ಚೊಕೋಲೇಟ್ ಸಿರಪ್ (Dark Chocolate Syrup) ಅಥವಾ ಫ್ಲೇಕ್ಸ್ (Flakes), 75 ಗ್ರಾಮ್ ಕೋಕೋ, ಬಾದಾಮಿ (Almond), ಗೋಡಂಬಿ (Cashew), ಹಾಲು (Milk).
ಮಾಡುವ ವಿಧಾನ:
ಹಾಲನ್ನು ಬಿಸಿಮಾಡಿ (Boil). ಸಣ್ಣ ಉರಿಯಲ್ಲಿ ಸ್ವಲ್ಪ ಸಮಯ ಇಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಮೆತ್ತಗೆ (Smooth) ಬೇಯುವವರೆಗೂ ಬೇಯಿಸಿ. ಮಧ್ಯದಲ್ಲಿ ಬೇಕಾದರೆ ಸ್ವಲ್ಪ ನೀರನ್ನೋ, ಹಾಲನ್ನೋ ಸೇರಿಸಬಹುದು. ಅಕ್ಕಿ ಸರಿಯಾಗಿ ಬೆಂದ ಬಳಿಕ ಬೆಲ್ಲ ಸೇರಿಸಿ, ರುಬ್ಬಿದ ಕಾಯಿತುರಿ ಸೇರಿಸಿ. ಬಳಿಕ, ಡಾರ್ಕ್ ಚೊಕೋಲೇಟ್ ಫ್ಲೇಕ್ಸ್ ಮತ್ತು ಸಿರಪ್, ಕೋಕೋ ಮಿಕ್ಸ್ ಮಾಡಿ. ಬಾದಾಮಿಯನ್ನು ತುರಿದು ಸೇರಿಸಿ. ಗೋಡಂಬಿ ಹಾಕಿ ಮಿಶ್ರಣ ಮಾಡಿ. ಸರ್ವ್ ಮಾಡುವಾಗ ಮೇಲಿನಿಂದ ನಟ್ಸ್ (Nuts) ಹಾಕಬಹುದು.
ಆರೋಗ್ಯ ವೃದ್ಧಿಸುವ ಐದು ರುಚಿಕರ ಪಾಯಸಗಳು!
• ನವಣೆ (Quinoa) ಅಕ್ಕಿಯ ಖೀರು (Kheer)
ನವಣೆ ಅಕ್ಕಿಯನ್ನು ಇತ್ತೀಚೆಗೆ ಸಾಕಷ್ಟು ಜನ ಬಳಕೆ ಮಾಡುತ್ತಿದ್ದಾರೆ. ಇದು ಆರೋಗ್ಯಕ್ಕೆ ಭಾರೀ ಉತ್ತಮ. ಇದರ ಖೀರು ಸಹ ಅತ್ಯುತ್ತಮ ಸಿಹಿ (Sweet) ತಿನಿಸಾಗಿದೆ.
ಬೇಕಾಗುವ ಸಾಮಗ್ರಿ: ನವಣೆ ಅಕ್ಕಿ, ಹಾಲು, ಬೆಲ್ಲ, ಏಲಕ್ಕಿ ಪುಡಿ (Cardamom Powder), ಕೇಸರಿ (Saffron), ನಟ್ಸ್, ದೇಸಿ ತುಪ್ಪ (Ghee).
ಮಾಡುವ ವಿಧಾನ: ಹಾಲನ್ನು ಪಾತ್ರೆಯಲ್ಲಿ ಬಿಸಿ ಮಾಡಿ. ಅದಕ್ಕೆ ನವಣೆ ಸೇರಿಸಿ, ಸರಿಯಾಗಿ ಬೇಯಲು ಬಿಡಿ. ಸ್ವಲ್ಪ ತುಪ್ಪ ಹಾಕಿ. ಅಕ್ಕಿ ಮೃದುವಾಗಿ ಬೇಯುವವರೆಗೂ ತಳ ಹಿಡಿಯದಂತೆ ನೋಡುತ್ತಿರಿ. ಅಕ್ಕಿ ಬೆಂದಾಗ ಬೆಲ್ಲ ಸೇರಿಸಿ. ತುರಿದ ನಟ್ಸ್ ಮಿಕ್ಸ್ ಮಾಡಿ ಇನ್ನಷ್ಟು ನಿಮಿಷಗಳ ಕಾಲ ಕುದಿಯಲು ಬಿಡಿ. ಒಣದ್ರಾಕ್ಷಿ, ಏಲಕ್ಕಿ ಪುಡಿ, ಕೇಸರಿ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಮೇಲಿನಿಂದ ಬಾದಾಮಿ ಎಳೆಗಳನ್ನು ಹಾಕಿ ಸರ್ವ್ ಮಾಡಬಹುದು.
• ಮಖಾನ (Makhana) ಅಥವಾ ತಾವರೆ ಬೀಜದ ಖೀರು
ತಾವರೆಯ ಬೀಜಕ್ಕೆ ಮಖಾನ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಆರೋಗ್ಯಕ್ಕೂ ಪೂರಕವಾಗಿದೆ.
ಬೇಕಾಗುವ ಸಾಮಗ್ರಿ: ಮಖಾನ, ಹಾಲು, ಬೆಲ್ಲ, ನಟ್ಸ್, ಒಣಹಣ್ಣುಗಳಾದ ಬಾದಾಮಿ, ಒಣದ್ರಾಕ್ಷಿ (Raisins), ಸಿಹಿಗುಂಬಳದ ಬೀಜ (Pumpkin Seed), ಕೇಸರಿ, ಹಸಿರು ಏಲಕ್ಕಿಯ ಪುಡಿ.
ಹಬ್ಬದ ಕಳೆ ಹೆಚ್ಚಿಸುವ ವಿವಿಧ ಬಗೆಯ ಹೋಳಿಗೆ ಇಲ್ಲಿದೆ!
ಮಾಡುವ ವಿಧಾನ:
ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ. ಅದು ಬಿಸಿಯಾದಾಗ ಮಖಾನ ಬೀಜಗಳನ್ನು ಹಾಕಿ ತೆಳು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಮಂದವಾಗಿ ಪೇಸ್ಟ್ (Paste) ನಂತೆ ರುಬ್ಬಿಕೊಳ್ಳಿ. ಹಾಲನ್ನು ಕುದಿಸಿ ಈ ಮಿಶ್ರಣ ಸೇರಿಸಿ. ಸರಿಯಾಗಿ ಮಿಕ್ಸ್ (Mix) ಮಾಡಿ. ಸುಮಾರು ನಾಲ್ಕೈದು ನಿಮಿಷಗಳ ಕಾಲ ಉರಿಯಲ್ಲಿಟ್ಟರೆ ಹಾಲು ಮಂದವಾಗುತ್ತದೆ. ಆಗ ಬೆಲ್ಲ, ನಟ್ಸ್ ಹಾಕಿ ಮತ್ತೆ ಸ್ವಲ್ಪ ಕುದಿಯಲು ಬಿಡಿ. ಬಳಿಕ ಏಲಕ್ಕಿ, ಕೇಸರಿ ಮಿಶ್ರಣ ಮಾಡಿ.