ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಅನ್ನೋದು ಹಲವರಿಗೆ ಗೊತ್ತಿರುವ ವಿಷಯ. ಆದರೆ ಕೇವಲ ಹಣ್ಣುಗಳು ಮಾತ್ರವಲ್ಲ ಕಾಯಿ ಸಹ ಆರೋಗ್ಯಕ್ಕೆ ತುಂಬಾ ಒಳ್ಳೇದು. ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಅದ್ರಲ್ಲಿರುತ್ತದೆ. ಪಪ್ಪಾಯ ಕಾಯಿ ಕೂಡ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಇದ್ರ ಸೇವನೆಯಿಂದ ಮಹಿಳೆಯರು ಅನೇಕ ಲಾಭ ಪಡೆಯಬಹುದು.
ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದ್ರೆ ಕೆಲವೊಂದು ಹಣ್ಣುಗಳು ಮಾತ್ರವಲ್ಲ ಕಾಯಿಗಳು ಸಹ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಅದ್ರಲ್ಲೊಂದು ಪಪ್ಪಾಯಿ. ಪಪ್ಪಾಯವನ್ನು ನೀವು ಹಣ್ಣಾದ್ಮೇಲೆ ಸೇವನೆ ಮಾಡ್ಬಹುದು. ಹಾಗೆ ಪಪ್ಪಾಯ ಕಾಯಿಯಿಂದ ಸಲಾಡ್ ಮಾಡಬಹುದು. ಇಲ್ಲವೆ ಪಪ್ಪಾಯಿ ಕಾಯಿಯ ಪರಾಟ ಮಾಡಬಹುದು. ಪಪ್ಪಾಯಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಜೀವಸತ್ವಗಳು, ಕಿಣ್ವಗಳು ಮತ್ತು ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್-ಇ, ಸಿ, ಬಿ, ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಖನಿಜಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ನೀವು ಅಧಿಕ ತೂಕ (Weight) ಹೊಂದಿದ್ದರೆ ಅಥವಾ ಯೂರಿಕ್ ಆಮ್ಲವು ನಿಮ್ಮ ದೇಹ (Body)ದಲ್ಲಿ ವೇಗವಾಗಿ ಹೆಚ್ಚುತ್ತಿದ್ದರೆ, ಹಸಿ ಪಪ್ಪಾಯಿಯು (Raw papaya) ನಿಮಗೆ ರಾಮಬಾಣವೆಂದು ಸಾಬೀತಾಗಲಿದೆ. ಇದನ್ನು ತಿನ್ನುವ ಸರಿಯಾದ ಮಾರ್ಗ, ಸಮಯ ಮತ್ತು ಅನುಪಾತದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
undefined
Women Health: ಮಹಿಳೆಯರು ಪಪ್ಪಾಯ ಕಾಯಿ ತಿಂದ್ನೋಡಿ
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ ತಕ್ಷಣ ಕೀಲು ನೋವು ಅಥವಾ ಸಂಧಿವಾತದ (Arthritis) ಸಮಸ್ಯೆ ಶುರುವಾಗುತ್ತದೆ. ಯೂರಿಕ್ ಆಸಿಡ್ ಅನ್ನು ಸಮಯಕ್ಕೆ ನಿಯಂತ್ರಿಸದೆ ಹೋದಲ್ಲಿ, ಅದು ಸಂಧಿವಾತವಾಗಿ ಬದಲಾಗುತ್ತದೆ. ನಂತರ ನಡೆದಾಡುವುದರಿಂದ ಹಿಡಿದು ಕುಳಿತುಕೊಳ್ಳುವವರೆಗೆ ಅಸಹನೀಯ ನೋವು (Pain) ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲಿ ನಾವು ಹಸಿ ಪಪ್ಪಾಯಿಯ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಹಸಿ ಪಪ್ಪಾಯಿ ಸೇವನೆ ನಿಮ್ಮ ಈ ಸಮಸ್ಯೆಯನ್ನು ಬುಡ ಸಮೇತ ನಿವಾರಿಸುತ್ತದೆ.
ಹಸಿ ಪಪ್ಪಾಯಿಯ ಗುಣಗಳು
ಹಸಿ ಪಪ್ಪಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿಯೂ ಕಡಿಮೆಯಾಗಿರುತ್ತದೆ. ಇದು ವಿಟಮಿನ್ ಸಿ, ಫೋಲೇಟ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧವಾಗಿದೆ. ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಈ ಮೂರೂ ರಾಸಾಯನಿಕಗಳು ಔಷಧಿಗಳಂತೆ (Medicine) ಕೆಲಸ ಮಾಡುತ್ತವೆ. ಹಾಗಾದರೆ ಪಪ್ಪಾಯಿಯ ಹೆಚ್ಚಿನ ಪ್ರಯೋಜನಗಳನ್ನು ಮತ್ತು ಅದನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ತಿಳಿದುಕೊಳ್ಳೋಣ.
ಪ್ಲೇಟ್ ಲೆಟ್ ಕೊರತೆ ಕಾಡುತ್ತಿದೆಯೇ? ಈ ಎಲೆ ಬಳಸಿ ಮ್ಯಾಜಿಕ್ ನೋಡಿ
ಪಪ್ಪಾಯಿ ಜ್ಯೂಸ್ ತಯಾರಿಸಿ
ಯೂರಿಕ್ ಆಮ್ಲವನ್ನು ತಕ್ಷಣವೇ ನಿಯಂತ್ರಣಕ್ಕೆ ತರಬೇಕು ಎಂದರೆ, ನೀವು ಪ್ರತಿದಿನ ಬೆಳಗ್ಗೆ (Morning) ಕನಿಷ್ಠ ಒಂದು ಲೋಟ ಹಸಿ ಪಪ್ಪಾಯಿ ರಸವನ್ನು ಕುಡಿಯುವುದು ಮುಖ್ಯ. ನೀವು ಬಯಸಿದರೆ, ನೀವು ಅದರಲ್ಲಿ ನಿಂಬೆ (Lemon) ಅಥವಾ ಜೇನುತುಪ್ಪ (Honey)ವನ್ನು ಕೂಡ ಬೆರೆಸಬಹುದು. ಅದರಲ್ಲಿಯೂ ವಿಶೇಷವಾಗಿ ಯೂರಿಕ್ ಆಮ್ಲ ಹೆಚ್ಚಳ ಸಮಸ್ಯೆ ಇರುವವರು ಪಪ್ಪಾಯಿ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮಾಡಲು ಇದು ಸಹಾಯ ಮಾಡುತ್ತದೆ.
ತರಕಾರಿಯ ರೂಪದಲ್ಲಿ ಸೇವಿಸಿ
ಹಸಿ ಪಪ್ಪಾಯಿಯನ್ನು ನೀಡುವ ತರಕಾರಿಯ (Vegetables) ರೂಪದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೂ ಕೂಡ ಉತ್ತಮ. ಇದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದನ್ನು ತಯಾರಿಸುವಾಗ, ಅದರಲ್ಲಿ ಮೆಂತ್ಯ ಮತ್ತು ಇಂಗು ಹಾಕಿ. ಅರಿಶಿನ ಮತ್ತು ಉಪ್ಪಿನೊಂದಿಗೆ ಬೇಯಿಸಿ. ಯೂರಿಕ್ ಆಸಿಡ್ ಅಧಿಕವಾಗಿರುವ ಯಾವುದೇ ರೂಪದಲ್ಲಿ ಹಸಿ ಪಪ್ಪಾಯಿಯನ್ನು ಆದಷ್ಟು ಹೆಚ್ಚು ತಿನ್ನಲು ಪ್ರಯತ್ನಿಸಿ.