ಮಕ್ಕಳು ಎಂದರೆ ತಿನ್ನುವ ವಿಚಾರದಲ್ಲಿ ಬಹಳ ಹಠ ಮಾಡುತ್ತಾರೆ. ಅದು ಬೇಕು ಇದು ಬೇಡ ಎನ್ನುವ ಮಕ್ಕಳನ್ನು ದಾರಿಗೆ ತರುವುದು ಸ್ವಲ್ಪ ಕಷ್ಟ. ಏಕೆಂದರೆ ಅವರಿಗೆ ಮನೆಯೂಟಕ್ಕಿಂತ ಹೊರಗಿನ ಊಟ ಬಹಳ ಇಷ್ಟವಾಗುತ್ತದೆ. ಇದಕ್ಕೆ ಕಾರಣ ಹುಡುಕಿದರೆ ಅವರು ತಯಾರಿಸುವ ಕಲರ್ ಫುಲ್ ಆಹಾರ ಹಾಗೂ ಸರ್ವಿಂಗ್ ರೀತಿ. ಇದೇ ರೀತಿ ಮನೆಯಲ್ಲೇ ಮಾಡಬಹುದಾದ ಮಕ್ಕಳನ್ನು ಆಕರ್ಷಿಸಬಲ್ಲ ಕೆಲ ಸ್ಯಾಕ್ಸ್ ಹಾಗೂ ಸ್ಕೂಲ್ ಡಬ್ಬಿಗೂ ಕಟ್ಟಬಹುದಾದ ತಿಂಡಿಗಳು ಇಲ್ಲಿವೆ.
ಬೆಳೆಯುವ ಮಕ್ಕಳಿಗೆ ಪೌಷ್ಠಿಕ ಆಹಾರ ಬೇಕಾಗುತ್ತದೆ. ಎಷ್ಟು ತಿಂದರೂ ಸಾಲದು ಎಂಬಹುದು ಪೋಷಕರದ್ದು. ಹಾಗಂತ ಮನೆ ತಿಂಡಿ ಬಿಟ್ಟು ಹೊರಗಿನ ತಿಂಡಿಯನ್ನೇ ಯಾವಾಗಲೂ ತಿನ್ನುವುದಕ್ಕೆ ಸಾಧ್ಯವಿಲ್ಲ. ಹೊರಗಿನ ತಿಂಡಿ ತಿನಿಸುಗಳಿಗೆ ಹೆಚ್ಚು ಆಕರ್ಷಿತರಾಗುವ ಇಂದಿನ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ತಿಂಡಿ ಕೊಟ್ಟರೆ ಸ್ವಲ್ಪ ಮುಖ ಬಾಡುವುದು ಇದೆ. ಹಾಗಾಗಿ ಪೋಷಕರಾದ ನಾವೇ ಕಲರ್‌ಫುಲ್ ಹಾಗೂ ಅವರಿಗೆ ಇಷ್ಟವಾಗುವ ರೀತಿ, ಸ್ಕೂಲ್‌ಗೂ ಕಳುಹಿಸಿಕೊಡಬಹುದಾದ ತಿಂಡಿಗಳು ಇಲ್ಲಿದೆ. ಒಮ್ಮೆ ಟ್ರೆöÊ ಮಾಡಿ.
1.ಪನೀರ್ ಫ್ರಾಂಕಿ (Paneer Frankie)
ನೈಸರ್ಗಿಕವಾಗಿ ಪ್ರೋಟೀನ್ ತುಂಬಿಕೊಂಡಿರುವ ಆಹಾರ ಎಂದರೆ ಅದು ಪನೀರ್. ಇದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity Power) ಬಲಪಡಿಸುತ್ತದಲ್ಲದೆ, ಹಾಗೂ ಮಗು ಹಾಲನ್ನು ಇಷ್ಟಪಡುವುದಿಲ್ಲವೆಂದರೆ ಅವರ ಆಹಾರಕ್ಕೆ ಇದು ಉತ್ತಮ ಪದಾರ್ಥವಾಗಿದೆ. ಪನೀರ್‌ನಲ್ಲಿ ವಿಟಮಿನ್ ಎ, ಡಿ ಅಂಶ ಹೇರಳವಾಗಿದ್ದು, ಮೂಳೆ ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ.
ಪನೀರ್‌ನಲ್ಲಿ ಮೆಗ್ನೀಶಿಯಮ್ (Magnesium) ಇದ್ದು ಇದು ಮಲಬದ್ಧತೆಯನ್ನು (Constipation) ನಿವಾರಿಸುತ್ತದೆ. ಬಹು ಉಪಯೋಗಿಯಾಗಿರುವ ಪನೀರ್ ದೈನಂದಿನ ಊಟದಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು. ಮಕ್ಕಳಿಗೆ ಇಷ್ಟವಾಗುವಂತೆ ತರಕಾರಿಗಳನ್ನು ಹಾಕಿ ಪನೀರ್‌ನ ಈ ತಿಂಡಿ ಮಾಡಿಕೊಟ್ಟರೆ ಅವರಿಗೆ ಖಂಡಿತ ಇಷ್ಟವಾಗುತ್ತದೆ.
Healthy Lifestyle: ತಿಂಡಿಗೆ ಬ್ರೆಡ್, ಬಿಸ್ಕತ್ ತಿಂತೀರಾ? ಬೇಡ, ಇವತ್ತೇ ಬಿಟ್ಬಿಡಿ
ಬೇಕಾಗುವ ಸಾಮಗ್ರಿಗಳು
ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಮ್, ಈರುಳ್ಳಿ, ಪನೀರ್, ಕಲಸಿಕೊಂಡ ಗೋಧಿ ಹಿಟ್ಟು, ಒರೆಗಾನೊ, ಕಾಳುಮೆಣಸಿನ ಪುಡಿ, ಉಪ್ಪು, ಎಣ್ಣೆ.
ಮಾಡುವ ವಿಧಾನ
ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಚೆನ್ನಾಗಿ fry ಮಾಡಿಕೊಳ್ಳಿ. ಸ್ವಲ್ಪ ಬೆಂದ ನಂತರ ಇದಕ್ಕೆ ಪನೀರ್ ಹಾಕಿ ಸ್ವಲ್ಪ ಫ್ರೈ ಮಾಡಬೇಕು. ಪನೀರ್ ಕಂದು ಬಣ್ಣಕ್ಕೆ ಬಂದ ನಂತರ ಉಪ್ಪು, ಒರೆಗಾನೊ, ಕಾಳು ಮೆಣಸಿನ ಪುಡಿ ಹಾಕಿ ಸ್ವಲ್ಪ ಫ್ರೈ ಮಾಡಿ ಸ್ಟೌ ಆಫ್ ಮಾಡಿ ತಣ್ಣಗಾಗಲು ಬಿಡಿ. ಕಲಸಿದ ಗೋಧಿ ಹಿಟ್ಟಿನ ಒಂದು ಉಂಡೆ ತೆಗೆದುಕೊಂಡು ಚಪಾತಿ ಲಟ್ಟಿಸಿಕೊಳ್ಳಿ. ಇದನ್ನು ಒಂದು ಪ್ಯಾನ್‌ಗೆ ಹಾಕಿ ಎರಡೂ ಕಡೆ ತುಪ್ಪ ಹಾಕಿ ಬೇಯಿಸಿಕೊಳ್ಳಿ. ಈ ಚಪಾತಿಗೆ ಟೊಮೆಟೊ ಸಾಸ್ ಹಾಕಿ ಹರಡಿ. ನಂತರ ಮಾಡಿಕೊಂಡ ಪನೀರ್ ಫ್ರೈ ಅನ್ನು ಹಾಕಿ ಸ್ಟಫ್ ಮಾಡಿ ರೋಲ್ ಮಾಡಿ ಮೂರು ಕಡಿ ಮಡಚಿ ಟೂತ್‌ಪಿಕ್‌ನಿಂದ ಲಾಕ್ ಮಾಡಿ. ನಂತರ ಮಕ್ಕಳ ಡಬ್ಬಿಗೆ ಹಾಕಿ ಕಳುಹಿಸಿ.
2. ರೋಸ್ಟೆಡ್ ಬೇಬಿ ಪೊಟ್ಯಾಟೊ (Roasted Baby Potato)
ಆಲೂಗೆಡ್ಡೆ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕವಾಗಿ ಸಿಗುವ ಕಾರ್ಬೋಹೈಡ್ರೇಟ್ ಇದೆ. ಮಕ್ಕಳ ಬೆಳವಣಿಗೆಗೆ ಬೇಕಾದಷ್ಟು ಶಕ್ತಿಯನ್ನು ಒದಗಿಸುತ್ತದೆ. ಗ್ಲೂಟೀನ್ ಫ್ರೀ ಇರುವ ಆಲೂಗೆಡ್ಡೆಯನ್ನು ಮಕ್ಕಳ ಬಾಕ್ಸ್ನಲ್ಲಿ ಕಳುಹಿಸಿಕೊಟ್ಟರೆ ಎಲ್ಲಿಲ್ಲದ ಖುಷಿ.
ಬೇಕಾದ ಸಾಮಗ್ರಿಗಳು: ಪುಟ್ಟ ಆಲುಗೆಡ್ಡೆ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿಣ, ಬೆಳ್ಳುಳ್ಳಿ, ಕರಿಬೇವು, ಹಿಂಗ್, ಕೊತ್ತೊಂಬರಿ ಸೊಪ್ಪು, ತುಪ್ಪ, ಉಪ್ಪು.
ಮಾಡುವ ವಿಧಾನ: ಪುಟ್ಟ ಆಲುಗೆಡ್ಡೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್‌ನಲ್ಲಿ ನೀರು ಹಾಕಿ 2 ವಿಶಲ್ ಕೂಗಿಸಿ. ಕುಕ್ಕರ್ ತಣ್ಣಗಾದ ನಂತರ ಆಲುಗೆಡ್ಡೆಯ ಸಿಪ್ಪೆಯನ್ನು ತೆಗೆಯಬೇಕು. ಒಂದು ಪ್ಯಾನ್‌ಗೆ ಆಲುಗೆಡ್ಡೆ, ಎಣ್ಣೆ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿಣ, ಹಿಂಗ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಹಾಗೆ ಬಿಡಬೇಕು. ಸ್ಟೌ ಆಫ್ ಮಾಡಿ ಅದಕ್ಕೆ ತುಪ್ಪ ಹಾಕಿ, ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ಕರಿಬೇವಿನ ಎಲೆ ಹಾಕಿ ಕೈಯ್ಯಾಡಿಸಬೇಕು. ನಂತರ ಆಲುಗೆಡ್ಡೆ ಮಿಶ್ರಣವನ್ನು ಹಾಕಿ 10 ನಿಮಿಷ ಬೇಯಿಸಿ ನಂತರ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಕ್ಕಳಿಗೆ ಇಷ್ಟವಾಗುವ ರೋಸ್ಟೆಡ್ ಬೇಬಿ ಪೊಟ್ಯಾಟೊ ರೆಡಿ.
ಮಕ್ಕಳು ಬೆಳಗ್ಗೆ ತಿಂಡಿ ತಿನ್ನೋಲ್ವಾ? ಭವಿಷ್ಯದಲ್ಲೂ ಕಾಡಬಹುದು ಮಾನಸಿಕ ಸಮಸ್ಯೆ!
3. ಸ್ವೀಟ್ ಕಾರ್ನ್ ಸ್ಪಿನಾಚ್ ಟಿಕ್ಕಿ (Sweet Corn Spinach Tikki)
ಸ್ವೀಟ್ ಕಾರ್ನ್ ಮತ್ತು ಪಾಲಕ್ (Paalak) ಸೊಪ್ಪಿನ ತಿಂಡಿಗಳು ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ಮಕ್ಕಳಿಗೆ ಸಾಮಾನ್ಯವಾಗಿ ಪಾಲಕ್ ಸೊಪ್ಪು ಇಷ್ಟವಾಗುವುದಿಲ್ಲ. ಆದರೆ ಪಾಲಕ್ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಲಾಭದಾಯಕವಾಗಿದೆ. ಅಲ್ಲದೆ ಸ್ವೀಟ್ ಕಾರ್ನ್ ಎಂದರೆ ಮಕ್ಕಳಿಗೆ ಬಹಳ ಇಷ್ಟ ಇದರಲ್ಲಿ ಫೋಲಿಕ್ ಆಸಿಡ್ (Folic Acid) ಮತ್ತು ಫೈಬರ್ (Fiber) ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದೆ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ವಿಟಮಿನ್ ಕೆ ಅಂಶವೂ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿ ಮತ್ತು ಮೂಳೆಯನ್ನು ಬಲಪಡಿಸುತ್ತದೆ. ಬೀಟಾ ಕ್ಯಾರೋಟಿನ್ ಮತ್ತು ಕೋರೊಫಿಲ್ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಪಾಲಕ್ ಸೊಪ್ಪನ್ನು ಮಕ್ಕಳಿಗೆ ನಿಯಮಿತವಾಗಿ ನೀಡಿದರೆ ಶಕ್ತಿ ತುಂಬುತ್ತದೆ. ಸ್ವೀಟ್ ಕಾರ್ನ್ನಲ್ಲಿ ವಿಟಮಿನ್ ಮತ್ತು ಖನಿಜಗಳು ಹೇರಳವಾಗಿದಲ್ಲದೆ ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ.
ಬೇಕಾಗುವ ಸಾಮಗ್ರಿಗಳು: ಸ್ವೀಟ್ ಕಾರ್ನ್, ಆಲುಗೆಡ್ಡೆ, ಪಾಲಕ್, ಬೆಳ್ಳುಳ್ಳಿ ಪೇಸ್ಟ್, ಒರೆಗಾನೊ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿಣ, ಬೆಣ್ಣೆ, ಉಪ್ಪು.
ಮಾಡುವ ವಿಧಾನ: ಒಂದು ಕುಕ್ಕರ್‌ನಲ್ಲಿ ಸ್ವೀಟ್ ಕಾರ್ನ್ ಮತ್ತು ಆಲುಗೆಡ್ಡೆಯನ್ನು ಸ್ವಲ್ಪ ಉಪ್ಪು ಹಾಗೂ ನೀರು ಹಾಕಿ 2 ವಿಶಲ್‌ಗೆ ಬೇಯಿಸಿಕೊಳ್ಳಿ. ಕುಕ್ಕರ್ ಕೂಗಿದ ನಂತರ ಆಲುಗೆಡ್ಡೆ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಳ್ಳಿ. ಪಾಲಕ್ ಅನ್ನು ಚೆನ್ನಾಗಿ ತೊಳೆದು ನೀರು ಹಾಕಿ ಬೇಯಿಸಿಕೊಳ್ಳಿ. 20 ನಿಮಿಷ ಬೆಂದ ನಂತರ ಬೆಂದ ಪಾಲಕ್ ಸೊಪ್ಪನ್ನು ತಣ್ಣೀರಿನಲ್ಲಿ ಹಾಕಿ. ಕುಕ್ಕರ್‌ನಲ್ಲಿ ಬೇಯಿಸಿದ ಸ್ವೀಟ್ ಕಾರ್ನ್ ಅನ್ನು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಸ್ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಬೇಯಿಸಿದ ಆಲೂಗೆಡ್ಡೆ, ಬೆಂದ ಪಾಲಕ್ ಸೊಪ್ಪು, ಬೆಳ್ಳುಳ್ಳಿ ಪೇಸ್ಟ್ (Garlic Paste), ಒರೆಗಾನೊ, ಕಾಳುಮೆಣಸಿನ ಪುಡಿ (Pepper Powder), ಜೀರಿಗೆ ಪುಡಿ, ಅರಿಶಿಣ, ಉಪ್ಪು (Salt) ಹಾಕಿ ಎಲ್ಲವೂ ಚೆನ್ನಾಗಿ ಕಲಸಿ. ಒಂದೊಂದೆ ಉಂಡೆಯಾಗಿ ತೆಗೆದುಕೊಂಡು ಸ್ವಲ್ಪ ಪ್ರೆಸ್ ಮಾಡಿ ಟಿಕ್ಕಿ ತಯಾರಿಸಿ ಒಂದು ಪ್ಲೇಟ್‌ನಲ್ಲಿರಿಸಿ ಅದನ್ನು ಫ್ರಿಡ್ಜನಲ್ಲಿ 15 ನಿಮಿಷ ಇಡಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ ತಣ್ಣಗಾದ ಸ್ವೀಟ್ ಕಾರ್ನ್ ಟಿಕ್ಕಿಯನ್ನು ಮಧ್ಯಮ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ಟಿಕ್ಕಿ ರೆಡಿ.