ಹಲ್ದಿರಾಮ್ ಪ್ಯಾಕೆಟ್‌ನಲ್ಲಿ ಉರ್ದು ಬರಹ, ಗ್ರಾಹಕರು ಗರಂ

By Suvarna News  |  First Published Apr 6, 2022, 4:44 PM IST

ನವರಾತ್ರಿ ಹಬ್ಬ ಹತ್ರ ಬಂತು ಅಂತ ಹಲ್ದಿರಾಮ್ಸ್ (Haldirams) ತರಹೇವಾರಿ ತಿಂಡಿಗಳ ಪ್ಯಾಕೆಟ್‌ (Packet)ಗಳನ್ನು ಮಾರುಕಟ್ಟೆಗೆ ಇಳಿಸುತ್ತಿದೆ. ವೆರೈಟಿಯಾಗಿರುವ ತಿಂಡಿಗೇನೂ ಜನರು ಖುಷಿಯಾಗಿದ್ದಾರೆ. ಆದ್ರೆ ಹಲ್ದಿರಾಮ್ಸ್‌ನ ಈ ಕ್ರಮ ಮಾತ್ರ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಏನದು?


ಸಿಹಿತಿಂಡಿಗಳು, ಖಾರದ ಆಹಾರಗಳು, ಸ್ನ್ಯಾಕ್ಸ್‌ (Snacks)ಗಳನ್ನು ತಯಾರಿಸುವ ಹಲ್ದಿರಾಮ್ಸ್,  ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಹಲ್ದಿರಾಮ್‌ (Haldiram) ಕಂಪನಿಯು ನಾಗ್ಪುರ, ನವದೆಹಲಿ, ಗುರ್ಗಾಂವ್, ರುದ್ರಪುರ ಮತ್ತು ನೋಯ್ಡಾದಂತಹ ವಿವಿಧ ಸ್ಥಳಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಹಲ್ದಿರಾಮ್ ಬ್ರಾಂಡ್‌ನ ಹಲವಾರು ಉತ್ಪನ್ನಗಳು ದೇಶದ ಮೂಲೆ ಮೂಲೆಗಳಿಗೆ ಮಾತ್ರವಲ್ಲ ವಿದೇಶಕ್ಕೂ ಪೂರೈಕೆಯಾಗುತ್ತದೆ. ಉತ್ತಮ ರುಚಿ, ಗುಣಮಟ್ಟದ ಪ್ಯಾಕೇಜಿಂಗ್ ಇರುವ ಕಾರಣ ಹೆಚ್ಚಿನವರು ಇದನ್ನು ಖರೀದಿಸುತ್ತಾರೆ. ಹಬ್ಬ ಹರಿದಿನಗಳಲ್ಲೂ ಹಲ್ದಿರಾಮ್ಸ್ ಸ್ವೀಟ್ಸ್ (Sweets) ಖರೀದಿಸುತ್ತಾರೆ. 

ಸದ್ಯ ತಾನು ಮಾಡಿರುವ ಎಡವಟ್ಟಿನಿಂದಾಗಿ ಹಲ್ದಿರಾಮ್‌ ಕಂಪೆನಿ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದೆ. ಹಲ್ದಿರಾಮ್‌ ಪ್ಯಾಕೆಟ್‌ನಲ್ಲಿ (Packet) ಉರ್ದು ಬರಹ ಕಂಡು ಬಂದಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟರ್‌ (Twitter)ನಲ್ಲಿ ಈ ವಿಚಾರವೇ ಟ್ರೆಂಡ್ ಆಗುತ್ತಿದೆ. ಟ್ವಿಟರ್‌ನಲ್ಲಿ ವೈರಲ್ (Viral) ಆಗಿರುವ ವೀಡಿಯೊದಲ್ಲಿ, ಸುದ್ದಿ ವರದಿಗಾರರೊಬ್ಬರು ನಮ್‌ಕೀನ್ ಮಿಶ್ರಣದ ಪ್ಯಾಕೇಜಿಂಗ್‌ (Packaging)ನಲ್ಲಿ ಉರ್ದು ವಿವರಣೆಗಾಗಿ ಹಲ್ದಿರಾಮ್‌ನ ಔಟ್‌ಲೆಟ್‌ನ ಸ್ಟೋರ್ ಮ್ಯಾನೇಜರ್ ಅನ್ನು ಪ್ರಶ್ನಿಸುವುದನ್ನು ಕಾಣಬಹುದು.

Amazing restraint by the Haldiram staff. BTW, Sudarshan's ‘sherni’ should know that it's Arabic and not Urdu. Haldiram exports to muliple Muslim majority countries who buy Indian products without discrimination.pic.twitter.com/jic6ASOo15

— Alishan Jafri (@alishan_jafri)

Tap to resize

Latest Videos

ಉತ್ತರಭಾರತದ ಪ್ರಸಿದ್ಧ ತಿನಿಸಾಗಿರುವ 'ಫಲ್ಹಾರಿ ಮಿಶ್ರಣ'ದ ಪ್ಯಾಕೇಜಿಂಗ್‌ನಲ್ಲಿ ಹಿಂದಿ, ಇಂಗ್ಲಿಷ್ ಜೊತೆ ಉರ್ದು ಬರಹ ಕಂಡು ಬಂದಿದೆ. 'ಫಲ್ಹಾರಿ ಮಿಶ್ರಣ ಹಲ್ದಿರಾಮ್‌ ಬ್ರ್ಯಾಂಡ್‌ನ ಉತ್ತಮ ಪ್ರಾಡಕ್ಟ್ ಆಗಿದೆ. ಈ ಪ್ಯಾಕೆಟ್‌ನ ಹಿಂಭಾಗದಲ್ಲಿ ವಿವರಣೆಯನ್ನು ಉರ್ದುವಿನಲ್ಲಿ ಬರೆಯಲಾಗಿದೆ ಮತ್ತು ಮುಂಭಾಗದಲ್ಲಿರುವ ಮುಖ್ಯ ವಿವರಣೆ ಇಂಗ್ಲಿಷ್‌ನಲ್ಲಿದೆ. ಅಲ್ಲದೆ, ಪ್ಯಾಕೇಜಿಂಗ್ ಹಸಿರು ಸಸ್ಯಾಹಾರಿ ಚಿಹ್ನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಸೌಮ್ಯವಾದ ಮಸಾಲೆಗಳೊಂದಿಗೆ ಕಡಲೆಕಾಯಿ ಮತ್ತು ಆಲೂಗಡ್ಡೆಗಳ ಸಿಹಿ ಮತ್ತು ಉಪ್ಪು ಮಿಶ್ರಣವಾಗಿದೆ.

Food Health : ಲೇಟಾಯ್ತು ಅಂತಾ ಗಬ ಗಬ ತಿಂದು ಹೆಲ್ತ್ ಹಾಳ್ಮಾಡ್ಕೊಳ್ಬೇಡಿ

ಈ ಉತ್ಪನ್ನದ ಮೇಲೆ ಉರ್ದು ಪ್ಯಾಕೇಜಿಂಗ್‌ಗಾಗಿ ಹಲಿರಾಮ್‌ನ ಸ್ಟೋರ್ ಮ್ಯಾನೇಜರ್ ಅನ್ನು ವರದಿಗಾರ ಪ್ರಶ್ನಿಸುತ್ತಿದ್ದು, ಹಿಂದಿ ಸುದ್ದಿ ವಾಹಿನಿಯೊಂದು ಹಂಚಿಕೊಂಡ ನಂತರವೇ ವೈರಲ್ ವೀಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. ಮಹಿಳಾ ವರದಿಗಾರ್ತಿ ಮ್ಯಾನೇಜರ್‌ಗೆ ಉರ್ದುವಿನಲ್ಲಿ ಪ್ಯಾಕೆಟ್‌ನ ವಿವರಣೆಯನ್ನು ಮರೆಮಾಚುವ ಮೂಲಕ ಹಲ್ದಿರಾಮ್ ಏನನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳುತ್ತಾರೆ.  ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಪ್ಯಾಕೆಟ್‌ನೊಳಗಿನ ಆಹಾರವು ಆರೋಗ್ಯಕ್ಕೆ ಹಾನಿಕರವಲ್ಲ ಎಂದು ನಿರ್ವಾಹಕರು ಹೇಳುತ್ತಾರೆ ಮತ್ತು ನಂತರ ಅವರು ವರದಿಗಾರನನ್ನು ಅಂಗಡಿಯಿಂದ ಹೊರಹೋಗುವಂತೆ ಕೇಳುತ್ತಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ವಾದ-ವಿವಾದ ನಡೆಯೋದನ್ನು ಸಹ ಗಮನಿಸಬಹುದು.

ವೈರಲ್ ವೀಡಿಯೊ ಇದುವರೆಗೆ 878.9k ವೀಕ್ಷಣೆಗಳು, 3439 ರೀಟ್ವೀಟ್‌ಗಳು ಮತ್ತು 12k ಲೈಕ್ಸ್‌ ಗಳನ್ನು ಗಳಿಸಿದೆ. ಮತ್ತು ಹಲ್ದಿರಾಮ್‌ ಕಂಪೆನಿಯಿಂದಾಗಿರುವ ಆಗಿರುವ ಈ ಕ್ರಮಕ್ಕೆ ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಟ್ವಿಟರ್ ಬಳಕೆದಾರರು ಫಲ್ಹಾರಿ ಮಿಶ್ರಣದ ಪ್ಯಾಕೆಟ್‌ನಲ್ಲಿ ಉರ್ದು ಬಳಸಿದರೆ ಎಷ್ಟು ಅರ್ಥವಾಗುತ್ತದೆ. ಎಷ್ಟು ಭಾರತೀಯರಿಗೆ ಉರ್ದು ತಿಳಿದಿದೆ. ಹಿಂದಿ ನಮ್ಮ ರಾಷ್ಟ್ರ ಭಾಷೆ., ಅದನ್ನು ಬಳಸುವುದು ಸರಿ. ಆದರೆ ಅದನ್ನು ಬಿಟ್ಟು ಹಿಂದಿಯನ್ನು ಯಾಕೆ ಬರೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

Aeroponic Agriculture: ಮಣ್ಣಿನಡಿ ಮಾತ್ರವಲ್ಲ, ಗಾಳಿಯಲ್ಲೂ ಬೆಳೆಯುತ್ತೆ ಆಲೂಗಡ್ಡೆ!

ಅದೇನೆ ಇರ್ಲಿ, ಭಾಷಾ ತಾರತಮ್ಯದ ವಿಚಾರವನ್ನು ಬದಿಗಿಟ್ಟರೂ ಹಲ್ದಿರಾಮ್ಸ್‌ ಮಾಡಿರುವುದು ಎಷ್ಟು ಸರಿಯೆಂದು ಜನರು ಪ್ರಶ್ನಿಸುತ್ತಿದ್ದಾರೆ. 

click me!