ಸುವಾಸನೆಭರಿತ ತೆಂಗಿನಕಾಯಿ ಚಟ್ನಿ. ಬಿಸಿ ಬಿಸಿ ರೊಟ್ಟಿ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ಆದ್ರೆ ಗಡಿಬಿಡಿಯಲ್ಲಿದ್ದಾಗ ಇದನ್ನು ಆಗಿಂದಾಗೆ ತಯಾರಿಸಿಕೊಳ್ಳುವುದು ಕಷ್ಟ. ಹೀಗಾಗಿ ಸ್ವಾದಿಷ್ಟಭರಿತ ತೆಂಗಿನಕಾಯಿ ಚಟ್ನಿಯನ್ನು ಒಂದು ತಿಂಗಳ ಕಾಲ ಸ್ಟೋರ್ ಮಾಡಿಡಲು ತಯಾರಿಸುವಾಗ ಯಾವ ಟಿಪ್ಸ್ ಫಾಲೋ ಮಾಡ್ಬೇಕು ನಾವ್ ಹೇಳ್ತಿವಿ..
ಪ್ರತಿ ದಿನವೂ ಬಗೆಬಗೆಯ ಭರ್ಜರಿ ಊಟವನ್ನು ತಯಾರಿಸಲು ಯಾರಿಂದಲೂ ಸಾಧ್ಯವಿಲ್ಲ. ಒತ್ತಡದ ದಿನಗಳಲ್ಲಿ ಸಿಂಪಲ್ ಅಡುಗೆಯನ್ನು ಸಹ ಮಾಡಬೇಕಾಗುತ್ತದೆ. ಕೆಲವೊಮ್ಮೆ ದೋಸೆ, ಇಡ್ಲಿ ರೆಡಿಯಾಗಿದ್ದರೂ ಜೊತೆಗೆ ನೆಂಚಿಕೊಳ್ಳಲು ಚಟ್ನಿ ತಯಾರಿಸಲು ಸಮಯ ಇರುವುದಿಲ್ಲ. ಹೀಗಿದ್ದಾಗ ಬಹುದಿನಗಳ ಕಾಲ ಬಾಳ್ವಿಕೆ ಬರುವ ಚಟ್ನಿಯನ್ನು ಮಾಡಿಕೊಳ್ಳುವು ಒಳ್ಳೆಯ ಅಭ್ಯಾಸ. ಪುದೀನಾದಿಂದ ಆರಂಭಿಸಿ ಟೊಮ್ಯಾಟೊ, ಈರುಳ್ಳಿಯಿಂದ ನೀವು ಚಟ್ನಿ ಸಿದ್ಧಪಡಿಸಬಹುದು. ಅದರಲ್ಲೂ ಸುವಾಸನೆಭರಿತ ತೆಂಗಿನಕಾಯಿ ಚಟ್ನಿ. ಬಿಸಿ ಬಿಸಿ ರೊಟ್ಟಿ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ರೆ ಸ್ವಾದಿಷ್ಟಭರಿತ ತೆಂಗಿನಕಾಯಿ ಚಟ್ನಿ ತಯಾರಿಸೋದು ಹೇಗೆ ? ಇದನ್ನು ಸುದೀರ್ಘ ಒಂದು ತಿಂಗಳ ಕಾಲ ಸ್ಟೋರ್ ಮಾಡಿಡಲು ತಯಾರಿಸುವಾಗ ಯಾವ ಟಿಪ್ಸ್ ಫಾಲೋ ಮಾಡ್ಬೇಕು ನಾವ್ ಹೇಳ್ತಿವಿ.
ನಾನ್ ರೆಸ್ಟೋರೆಂಟ್‌ನಲ್ಲೇ ತಿನ್ಬೇಕು ಅಂತಿಲ್ಲ, ಮನೆಯಲ್ಲೇ ಮಾಡೋದು ತುಂಬಾ ಈಝಿ
ದಕ್ಷಿಣಭಾರತದ ಆಹಾರವು ತೆಂಗಿನಕಾಯಿ ಚಟ್ನಿ (Coconut chutney)ಯಿಲ್ಲದೆ ಅಪೂರ್ಣವಾಗಿದೆ. ರುಚಿಕರವಾ ದೋಸೆ, ಇಡ್ಲಿಯನ್ನು ತೆಂಗಿನಕಾಯಿ ಚಟ್ನಿಯಿಲ್ಲದೆ ಊಹಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತೀಯ ಶೈಲಿಯ ತೆಂಗಿನಕಾಯಿ ಚಟ್ನಿಯ ಈ ನಿರ್ದಿಷ್ಟ ಪಾಕವಿಧಾನವನ್ನು ಫುಡ್ ಬ್ಲಾಗರ್ ಪಾರುಲ್ ಅವರು ತಮ್ಮ ಯೂಟ್ಯೂಬ್ ಚಾನೆಲ್ 'ಕುಕ್ ವಿತ್ ಪಾರುಲ್' ನಲ್ಲಿ ಹಂಚಿಕೊಂಡಿದ್ದಾರೆ. ಪಾಕವಿಧಾನದ ಜೊತೆಗೆ, ಅವರು ತೆಂಗಿನಕಾಯಿ ಚಟ್ನಿಯನ್ನು ಒಂದು ತಿಂಗಳ ಕಾಲ ಸಂಗ್ರಹಿಸಿಡಲು (Store) ಕೆಲವೊಂದು ಸಲಹೆಯನ್ನು ನೀಡಿದ್ದಾರೆ.
ತೆಂಗಿನಕಾಯಿ ಚಟ್ನಿ ಮಾಡುವುದು ಹೇಗೆ ?
ಬೇಕಾದ ಪದಾರ್ಥಗಳು
ತಾಜಾ ತೆಂಗಿನಕಾಯಿ
ಎಣ್ಣೆ-1 ಸ್ಪೂನ್
ಹಸಿರು ಮೆಣಸಿನಕಾಯಿ 2
ಕರಿಬೇವಿನ ಎಲೆ ಸ್ಪಲ್ಪ
ಪುದೀನಾ ಎಲೆಗಳು ಸ್ಪಲ್ಪ
ಶುಂಠಿ ಒಂದು ಸಣ್ಣ ತುಂಡು
ಒಗ್ಗರಣೆಗೆ ಸಾಸಿವೆ, ಕರಿಬೇವು, ಒಣಮೆಣಸು
ಮೊದಲು ಪಾನಿಪುರಿ ತಯಾರಿಸಿದ್ದು ಮಹಾಭಾರತದ ದ್ರೌಪದಿಯಂತೆ !
ಮಾಡುವ ವಿಧಾನ: ತಾಜಾ ತೆಂಗಿನಕಾಯಿಯನ್ನು ತೆಗೆದುಕೊಂಡು ಅದನ್ನು ಎರಡು ಭಾಗಗಳಾಗಿ ಒಡೆಯಿರಿ. ತೆಂಗಿನಕಾಯಿಯನ್ನು ಸಣ್ಣದಾಗಿ ತುರಿದಿಟ್ಟುಕೊಳ್ಳಿ. ಈಗ, ಬಾಣಲೆಯಲ್ಲಿ ಎಣ್ಣೆಯನ್ನು (Oil) ಬಿಸಿ ಮಾಡಿ, ಇದಕ್ಕೆ ಕಡಲೇಕಾಯಿಯನ್ನು ಸೇರಿಸಿ. 2-3 ನಿಮಿಷಗಳ ಕಾಲ ಹುರಿಯಿರಿ. ಅದರ ನಂತರ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಒಂದು ನಿಮಿಷ ಹುರಿಯಿರಿ. ಇವುಗಳು ತಣ್ಣಗಾದ ಬಳಿಕ ರುಚಿಗೆ ಪುದೀನ ಎಲೆಗಳನ್ನು ಸೇರಿಸಿ.
ಮುಂದಿನ ಹಂತವು ಶುಂಠಿಯ (Ginger) ತುಂಡನ್ನು ಸೇರಿಸುವುದಾಗಿದೆ. ಈ ಮಿಶ್ರಣಕ್ಕೆ ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಹಾಕಿಕೊಳ್ಳಿ. ಈ ರೀತಿ ತಯಾರಿಸುವ ತೆಂಗಿನ ಕಾಯಿ ಚಟ್ನಿ ತಿಂಗಳುಗಳ ವರೆಗೆ ಹಾಳಾಗದೆ ಹಾಗೇ ಇರುತ್ತದೆ. ಯಾವುದೇ ತಿನಿಸಿನ ಜೊತೆ ನೆಂಚಿಕೊಂಡು ತಿನ್ನಲು ಸಾಧ್ಯವಾಗುತ್ತದೆ.
ತೆಂಗಿನಕಾಯಿ ಚಟ್ನಿ ಸೇವನೆಯ ಆರೋಗ್ಯ ಪ್ರಯೋಜನಗಳು
ಜೀರ್ಣಕ್ರಿಯೆಗೆ ಒಳ್ಳೇದು: ತೆಂಗಿನಕಾಯಿಯಲ್ಲಿ ನಾರಿನಂಶ ಹೆಚ್ಚಿದ್ದು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿದೆ. ತೆಂಗಿನಕಾಯಿ ಚಟ್ನಿ ಸೇವನೆಯು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಅಜೀರ್ಣ, ಅತಿಸಾರ, ಮಲಬದ್ಧತೆ ಮುಂತಾದ ಯಾವುದೇ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ. ಈ ಚಟ್ನಿಯನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯೊಳಗೆ ಇರುವ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಮಂಗಳೂರು ಸ್ಟೈಲ್ ಚಿಕನ್ ಗೀ ರೋಸ್ಟ್ ರೆಸಿಪಿ ಮಾಡೋದು ತುಂಬಾ ಈಝಿ
ರಕ್ತದೊತ್ತಡ ನಿಯಂತ್ರಿಸುತ್ತದೆ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತೆಂಗಿನಕಾಯಿ ಚಟ್ನಿಯನ್ನು ನಿತ್ಯವೂ ಸೇವಿಸಬೇಕು. ಏಕೆಂದರೆ ತೆಂಗಿನಕಾಯಿ ಚಟ್ನಿ ದೇಹದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಅತ್ಯಗತ್ಯವಾಗಿರುತ್ತದೆ.
ಹೃದಯದ ಆರೋಗ್ಯಕ್ಕೆ ಬೆಸ್ಟ್: ತೆಂಗಿನಕಾಯಿಯು ಪೋಷಕಾಂಶಗಳನ್ನು ಹೊಂದಿದ್ದು ಅದು ರಕ್ತನಾಳಗಳಲ್ಲಿನ ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಗೆ ತೆಂಗಿನಕಾಯಿಯನ್ನು ನೈಸರ್ಗಿಕವಾಗಿ ಆರೋಗ್ಯಕರ ಅಂಶವನ್ನಾಗಿ ಮಾಡುತ್ತದೆ. ತೆಂಗಿನಕಾಯಿ ಚಟ್ನಿ ಸೇವನೆಯು ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ (Heart disease) ಅಪಾಯವನ್ನು ತಡೆಯುತ್ತದೆ.
ತೂಕವನ್ನು ಕಳೆದುಕೊಳ್ಳಲು ಉತ್ತಮ: ತೆಂಗಿನಕಾಯಿ ಚಟ್ನಿ ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರರ್ಥ ನಿಮ್ಮ ದೇಹವು ಎಲ್ಲಾ ಆಹಾರವನ್ನು ಸರಿಯಾಗಿ ಬಳಸುತ್ತದೆ ಮತ್ತು ನೀವು ಇಡೀ ದಿನ ಸಕ್ರಿಯ ಮತ್ತು ಶಕ್ತಿಯುತವಾಗಿರುವಂತೆ ಮಾಡುತ್ತದೆ. ಉತ್ತಮ ಚಯಾಪಚಯ ದರವು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.