ಫಿಶ್ ಕರಿ, ಫಿಶ್ ಫ್ರೈ, ಫಿಶ್ ಮಸಾಲ, ಫಿಶ್ ಬಿರಿಯಾನಿ ಹೀಗೆ ಮೀನಿನ ವಿವಿಧ ರೀತಿಯ ಖಾದ್ಯಗಳು ತಿನ್ನಲು ರುಚಿಕರವಾಗಿರುತ್ತದೆ. ಆದರೆ ಮುಳ್ಳುಗಳು ಸೇರಿಕೊಂಡಿರುವ ಮೀನನ್ನು ಶುಚಿಗೊಳಿಸಿ ಅಡುಗೆ (Cooking) ಮಾಡುವುದೇ ದೊಡ್ಡ ಕೆಲಸ. ಹಾಗಿದ್ರೆ ಮೀನಿನ ರೆಸಿಪಿ (Recipe) ಮಾಡುವಾಗ ಏನೆಲ್ಲಾ ತಿಳ್ಕೊಂಡಿರ್ಬೇಕು.
ಮೀನೂಟ ಹಲವರ ಫೇವರಿಟ್. ಕರಾವಳಿಗರಿಗಂತೂ ಮೂರು ಹೊತ್ತು ಇದನ್ನೇ ತಿನ್ನುತ್ತಾರೆ. ಮೀನು (Fish) ಹೆಚ್ಚಿನ ಪ್ರಮಾಣದ ಪ್ರೋಟೀನ್, ಅಯೋಡಿನ್, ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುವ ಕಾರಣ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಊಟದಲ್ಲಿ ಸೇರಿಸಲು ಇಷ್ಟಪಡುತ್ತಾರೆ. ಜತೆಗೆ ಮೀನಿನಲ್ಲಿ ವಿಟಮಿನ್ (Vitamin) ಎ, ಇ, ಬಿ, ಡಿ ಅಂಶವನ್ನು ಸಹ ಇರುತ್ತದೆ. ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳ ಅಂಶ ಹೃದಯಾಘಾತ (Heart Attack)ದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮೆದುಳಿನ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ.
ಫಿಶ್ ಕರಿ, ಫಿಶ್ ಫ್ರೈ, ಫಿಶ್ ಮಸಾಲ, ಫಿಶ್ ಬಿರಿಯಾನಿ ಹೀಗೆ ಮೀನಿನ ವಿವಿಧ ರೀತಿಯ ಖಾದ್ಯಗಳು ತಿನ್ನಲು ರುಚಿಕರವಾಗಿರುತ್ತದೆ. ಆದರೆ ಮುಳ್ಳುಗಳು ಸೇರಿಕೊಂಡಿರುವ ಮೀನನ್ನು ಶುಚಿಗೊಳಿಸಿ ಅಡುಗೆ (Cooking) ಮಾಡುವುದೇ ದೊಡ್ಡ ಕೆಲಸ. ಮೀನಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಸರಿಯಾಗಿ ದೇಹಕ್ಕೆ ದೊರಕಬೇಕಿದ್ದರೆ ಅದನ್ನು ಸರಿಯಾಗಿ ಶುಚಿಗೊಳಿಸಿ, ಸರಿಯಾದ ರೀತಿಯಲ್ಲಿ ಅಡುಗೆ ಮಾಡುವುದು ಮುಖ್ಯ. ಮೀನಿನ ಅಡುಗೆಯನ್ನು ಮಾಡುವಾಗ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯೋಣ.
Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?
ಸರಿಯಾದ ಮೀನುಗಳನ್ನು ಖರೀದಿಸಿ
ಮೀನಿನ ಅಡುಗೆ ಸರಿಯಾಗಿ ಆಗಬೇಕಾದರೆ ಸರಿಯಾದ ಮೀನನ್ನು ಖರೀದಿಸಬೇಕಾದುದು ಮುಖ್ಯ. ಹೀಗಾಗಿ ಮೀನನ್ನು ಖರೀದಿಸುವಾಗ ಎಚ್ಚರ ವಹಿಸಬೇಕು. ಮೀನು ತಾಜಾವಾಗಿದೆಯೇ, ಸಾಮಾನ್ಯ ಪರಿಮಳ (Smell) ಹೊಂದಿದೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು. ಕೊಳೆತ ಮೀನುಗನ್ನು ಖರೀದಿಸಬಾರದು. ತಜ್ಞರ ಪ್ರಕಾರ, ಮೀನಿನ ಕಣ್ಣುಗಳು ಸ್ಫಟಿಕದಂತೆ ಸ್ಪಷ್ಟವಾಗಿರಬೇಕು ಮತ್ತು ಕಿವಿರುಗಳು ಕೆಂಪು ಗುಲಾಬಿ ಬಣ್ಣವನ್ನು ಹೊಂದಿರಬೇಕು. ಹೀಗಿದ್ದಾಗ ಆ ಮೀನು ತಾಜಾವಾಗಿದೆ ಎಂದರ್ಥ.
ಮೀನಿನ ಮೂಳೆಗಳನ್ನು ತೆಗೆದುಹಾಕಲು ಕೇಳಿ
ಮೀನಿನ ಅಡುಗೆ ಮಾಡಬೇಕಾದರೆ ಮೀನಿನ ಮೂಳೆಗಳನ್ನು ನೀಟಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಡುಗೆ ಮಾಡುವಾಗ ತೊಂದರೆಯಾಗುತ್ತದೆ. ಹೀಗಾಗಿ ಮೀನು ಖರೀದಿಸುವಾಗಲೇ ನೀಟಾಗಿ ಕ್ಲೀನ್ (Clean) ಮಾಡಲು ಹೇಳಿ ಅಥವಾ ಮನೆಯಲ್ಲೇ ಕ್ಲೀನ್ ಮಾಡುವುದಾದರೆ ನುರಿತರು ನೀಟಾಗಿ ಮೀನಿನ ಮುಳ್ಳನ್ನು ತೆಗೆಯಬೇಕು. ಮೀನಿನಲ್ಲಿರುವ ಪಿನ್ ಮೂಳೆಗಳು ಫಿಲೆಟ್‌ನ ದಪ್ಪನಾದ ಭಾಗದಲ್ಲಿ ಕಂಡುಬರುವ ಸಣ್ಣ ಮೂಳೆಗಳಾಗಿವೆ. ಅವುಗಳನ್ನು ಬರಿಗೈಯಿಂದ ತೆಗೆಯಲಾಗುವುದಿಲ್ಲ, ಆದ್ದರಿಂದ ಸೂಜಿ, ಇಕ್ಕಳದ ಸಹಾಯದಿಂದ ಅವುಗಳನ್ನು ತೆಗೆದುಹಾಕಲು ವ್ಯಾಪಾರಿಗಳಿಗೆ ಸೂಚಿಸಬೇಕು.
Microwave Usage: ಈ ಆಹಾರವನ್ನು ಮಾತ್ರ ಬಿಸಿ ಮಾಡಬೇಡಿ!
ಮೀನನ್ನು ಸರಿಯಾಗಿ ತೆಗೆದಿಡಿ
ಮೀನನ್ನು ಖರೀದಿಸಿದ ನಂತರ ಅದನ್ನು ತಕ್ಷಣ ಅಡುಗೆಗೆ ಬಳಸುದಿಲ್ಲವಾಗಿದ್ದರೆ ಅದನ್ನು ತೆಗೆದಿಡುವ ರೀತಿಯೂ ಸರಿಯಾಗಿರಬೇಕು. ಯಾಕೆಂದರೆ ಮೀನು ಬೇಗನೆ ಹಾಳಾಗುತ್ತದೆ. ಹೀಗಾಗಿ ತಂದ ತಕ್ಷಣ ಮೀನುಗಳನ್ನು ತೊಳೆದು ಜಿಪ್‌ಲಾಕ್ ಬ್ಯಾಗ್‌ಗೆ ವರ್ಗಾಯಿಸಿ ಮತ್ತು ಅದನ್ನು ಐಸ್‌ನ ಬೌಲ್‌ನ ಮೇಲೆ ಇರಿಸಿ. ಇದು ಮೀನುಗಳನ್ನು ದೀರ್ಘಕಾಲದವರೆಗೆ ತಂಪಾಗಿ ಮತ್ತು ತಾಜಾವಾಗಿಡುತ್ತದೆ.
ಮೀನನ್ನು ಸಂಪೂರ್ಣವಾಗಿ ಒಣಗಿಸಿ
ಮೀನನ್ನು ಪ್ಯಾನ್ ಫ್ರೈ ಮಾಡುತ್ತಿದ್ದರೆ, ಮೀನುಗಳನ್ನು ಹುರಿಯುವ ಮೊದಲು ಅದರಲ್ಲಿ ನೀರಿನಂಶವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪೇಪರ್ ಟವೆಲ್‌ನಿಂದ ಮೀನನ್ನು ಸರಿಯಾಗಿ ಒಣಗಿಸಿ. ಇದರಿಂದ ಮೀನು ಸರಿಯಾದ ರೀತಿಯಲ್ಲಿ ಬೇಯುತ್ತದೆ.
ಯಾವಾಗಲೂ ಮೃದುವಾದ ಸೌಟನ್ನು ಬಳಸಿ
ಮೀನನ್ನು ಪ್ಯಾನ್‌ಗೆ ಹಾಕಿದಾಗ ಅದು ಮೃದುವಾಗುತ್ತದೆ. ಹೀಗಾಗಿ ಅದನ್ನು ತಿರುಗಿಸಿ ಹಾಕಲು ಸಾಮಾನ್ಯಸೌಟನ್ನು ಬಳಸುವುದರಿಂದ ಮೀನು ಪುಡಿಯಾಗಬಹುದು. ಹೀಗಾಗಿ ಮೀನನ್ನು ಪ್ಯಾನ್‌ಗೆ ಹಾಕಲು, ತಿರುಗಿಸಿ ಹಾಕಲು ಮೃದುವಾದ ಸೌಟನ್ನು ಬಳಸಿ.
ಮೀನನ್ನು ಮೇಯನೇಸ್ ನೊಂದಿಗೆ ಗ್ರೀಸ್ ಮಾಡಿ
ತಜ್ಞರ ಪ್ರಕಾರ, ಗ್ರಿಲ್ ಮೇಲೆ ಹಾಕುವ ಮೊದಲು ಮೀನನ್ನು ಮೇಯೊದಿಂದ ಗ್ರೀಸ್ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಚರ್ಮರಹಿತ ಫಿಲೆಟ್ ಗೆ ಮೇಯನೇಸ್ ಲೇಪನ ಮಾಡುವುದು ಗ್ರಿಲ್‌ಗೆ ಅಂಟಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಬ್ರೌನಿಂಗ್ ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.