ಪಾನಿಪುರಿ ನೋಡಿದ ತಕ್ಷಣ ತಿನ್ಬೇಕು ಅನ್ನಿಸುತ್ತೆ. ಹಾಗಂತ ವಿಮಾನ ನಿಲ್ದಾಣದಲ್ಲಿ ಬಾಯಿ ಹೇಳಿದಂತೆ ಕೇಳಿದ್ರೆ ಜೇಬು ಖಾಲಿಯಾಗುತ್ತೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದು ಪ್ಲೇಟ್ ಪಾನಿಪುರಿ ಬೆಲೆ ಕೇಳಿದ್ರೆ ದಂಗಾಗ್ತೀರಿ.
ಪಾನಿಪುರಿ.. ಭಾರತೀಯರ ಫೆವರೆಟ್ ಸ್ಟ್ರೀಟ್ ಫುಡ್ ನಲ್ಲಿ ಮೊದಲ ಸ್ಥಾನ ಪಡೆದಿದೆ. ಪಾನಿಪುರಿ, ಗೊಲ್ಗಪ್ಪಾ ಅಂತಾ ಅದನ್ನೇ ವೆರೈಟಿ ವೆರೈಟಿಯಾಗಿ ಜನರು ಬಾಯಿ ಚಪ್ಪರಿಸ್ತಾ ತಿನ್ನುತ್ತಾರೆ. ಯಾವುದೇ ಸಮಯದಲ್ಲಿ ಪಾನಿಪುರಿ ನೀಡಿದ್ರೂ ಬೇಡ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ಮಾಸ್ಟರ್ ಚೆಫ್ ನಲ್ಲಿ ಭಾರತೀಯ ಮೂಲದ ಮಹಿಳೆ ಪಾನಿಪುರಿ ತಯಾರಿಸಿ ಜಡ್ಜ್ ಗಳಿಗೆ ನೀಡಿದ ಸುದ್ದಿ ಬಂದಿತ್ತು. ಪಾನಿಪುರಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ವಿದೇಶದಿಂದ ಬಂದ ಸೆಲೆಬ್ರಿಟಿಗಳು ಪಾನಿಪುರಿ ರುಚಿ ನೋಡದೆ ಹೋಗೋದಿಲ್ಲ ಅಂದ್ರೆ ತಪ್ಪಾಗೋದಿಲ್ಲ. ಈ ಪಾನಿಪುರಿ ನಮ್ದೆ ಎನ್ನುವ ಭಾರತೀಯರು ಅದನ್ನು ಎಷ್ಟೇ ಇಷ್ಟಪಟ್ಟರು ಬೇಕಾಬಿಟ್ಟಿ ಹಣಕೊಟ್ಟು ಅದನ್ನು ತಿನ್ನೋದಿಲ್ಲ. ಬೀದಿ ಬದಿಯಲ್ಲಿ ಮೂವತ್ತು, ಆರವತ್ತು ರೂಪಾಯಿಗೆ ಸಿಗುವ ಪ್ಲೇಟ್ ಪಾನಿಪುರಿಗೆ ನೂರು, ನೂರೈವತ್ತು ಅಂದ್ರೆ ಕಣ್ಣು ಕೆಂಪಾಗುತ್ತೆ. ಇನ್ನು ಒಂದು ಪ್ಲೇಟ್ ಪಾನಿಪುರಿಗೆ ಮುನ್ನೂರ ಮೂವತ್ಮೂರು ರೂಪಾಯಿ ಅಂದ್ರೆ ಸುಮ್ಮನಿರೋಕೆ ಆಗುತ್ತಾ?
ವಿಮಾನ ನಿಲ್ದಾಣದ ಒಳಗೆ ಎಲ್ಲ ಆಹಾರದ ಬೆಲೆ ದುಬಾರಿ ಸರಿ. ಆದ್ರೆ ಒಂದು ಪ್ಲೇಟ್ ಪಾನಿಪುರಿಯನ್ನು 333 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ ಮಾರಾಯ್ರೆ.
ಮುಂಬೈ (Mumbai) ವಿಮಾನ ನಿಲ್ದಾಣಕ್ಕೆ (Mumbai Air Port) ಹೋಗಿದ್ದ ಉದ್ಯಮಿಯೊಬ್ಬರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ಅಂಗಡಿಯಲ್ಲಿ 333 ರೂಪಾಯಿಗೆ ಒಂದು ಪ್ಲೇಟ್ ಪಾನಿ ಪುರಿ (Pani Puri) ಮಾರಾಟವಾಗುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಫುಡ್ ಸ್ಟಾಲ್‌ನಲ್ಲಿ ಸ್ನ್ಯಾಕ್ ಕೌಂಟರ್‌ನ ಫೋಟೋವನ್ನು ಉದ್ಯಮಿ (Businessman) ಹಂಚಿಕೊಂಡಿದ್ದಾರೆ. ಸಿಎಸ್ ಎಐ ಮುಂಬೈ ವಿಮಾನ ನಿಲ್ದಾಣದಲ್ಲಿ ಆಹಾರ ಮಳಿಗೆಗಳ ಬೆಲೆ ದುಬಾರಿ ಅನ್ನೋದು ನನಗೆ ಗೊತ್ತಿತ್ತು. ಆದ್ರೆ ಇಷ್ಟೊಂದು ದುಬಾರಿ ಎಂಬುದು ತಿಳಿದಿರಲಿಲ್ಲ ಎಂದು ಶುಗರ್ ಕಾಸ್ಮೆಟಿಕ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಒಒ ಕೌಶಿಕ್ ಮುಖರ್ಜಿ, ಎಕ್ಸ್ ಖಾತೆಯಲ್ಲಿ ಪಾನಿಪುರಿ ಫೋಟೋ ಹಂಚಿಕೊಂಡಿದ್ದಾರೆ.
ಮಾವಿನ ಹಣ್ಣು ತಿಂದ್ರೆ ಶುಗರ್ ಲೆವೆಲ್ ಹೆಚ್ಚಾಗುತ್ತಾ? ರಸಭರಿತ ಹಣ್ಣನ್ನು ತಿನ್ನೋ ಮುನ್ನ ಗೊತ್ತಿರ್ಲಿ
ಕೌಶಿಕ್ ಮುಖರ್ಜಿ ತಮ್ಮ ಪೋಸ್ಟ್ ನಲ್ಲಿ ಮೂರು ಬೀದಿ ಆಹಾರದ (Street Food) ಫೋಟೋವನ್ನು ಹಂಚಿಕೊಂಡಿದ್ದಾರೆ. ಪಾನಿ ಪುರಿ, ದಹಿ ಪುರಿ (Dahi Puri) ಮತ್ತು ಸೇವ್ ಪುರಿ (Save Puri) ಫೋಟೋವನ್ನು ನೀವು ಅವರ ಪೋಸ್ಟ್ ನಲ್ಲಿ ನೋಡಬಹುದು. ಒಂದು ಪ್ಲೇಟ್ ಗೆ ನಿಮಗೆ ಎಂಟು ಪುರಿ ಸಿಗುತ್ತೆ. ಎಲ್ಲ ಮೂರು ಆಹಾರದ ಮುಂದೆ 333 ರೂಪಾಯಿ ಎಂದು ಬರೆಯಲಾಗಿದೆ.
ಕೌಶಿಕ್ ಮುಖರ್ಚಿ ಅವರ ಈ ಪೋಸ್ಟ್ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದೆ. ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ರೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಭಾರತದ ಈ ಸ್ಟ್ರೀಟ್ ಇಷ್ಟು ದುಬಾರಿ ಬೆಲೆಗೆ ಮಾರಾಟ ಆಗ್ತಿರೋದು ಬೇಸರದ ಸಂಗತಿ ಎಂದು ಕೆಲವರು ಹೇಳಿದ್ದಾರೆ.
ಬೀದಿಯಲ್ಲಿ ನಾನು ಎಂಟು ಪುರಿಯ ಪಾನಿಪುರಿ ಪ್ಲೇಟ್ ಗೆ ಕೇವಲ ನಲವತ್ತರಿಂದ ಐವತ್ತು ರೂಪಾಯಿ ನೀಡ್ತೇನೆ. ಅದನ್ನು ಡಬಲ್ ಮಾಡಿದ್ರೂ ನೂರು ರೂಪಾಯಿಗಿಂತ ಹೆಚ್ಚಾಗೋದಿಲ್ಲ. ಆದ್ರೆ ಇಷ್ಟೊಂದು ಬೆಲೆ ಏಕೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿರುವ ಅಂಗಡಿಯವರು ನಿರ್ವಹಣೆ ಶುಲ್ಕ (Maintenace Cost), ಮೆಂಟೇನೆನ್ಸ್, ಸಿಬ್ಬಂದಿ ಶುಲ್ಕ (Staff Remuneration) ಸೇರಿದಂತೆ ಎಲ್ಲವನ್ನೂ ಸೇರಿಸಿ ಬಿಲ್ ಹಾಕ್ತಾರೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ತಿಂಗಳಿಗೆ 19 ಲಕ್ಷ ಸಂಪಾದಿಸೋ ಈ ಹುಡುಗಿ ನೀಡ್ತಾಳೆ ಸೈಡ್ ಬ್ಯುಸಿನೆಸ್ ಮಾಡಲು ಟಿಪ್ಸ್ ಕೊಡ್ತಾರೆ!
ವಿಮಾನ ನಿಲ್ದಾಣದ ಆಹಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಬರ್ತಿರುತ್ತದೆ. ಕೆಲ ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದ ರೆಸ್ಟೋರೆಂಟ್ ಒಂದು ದೋಸೆ ಮತ್ತು ಮಜ್ಜಿಗೆಯನ್ನು 600 ರೂಪಾಯಿಯಿಂದ 620 ರೂಪಾಯಿಗೆ ಮಾರಾಟ ಮಾಡಿದ ಸುದ್ದಿ ವೈರಲ್ ಆಗಿತ್ತು.
Real estate is expensive for food stalls at the CSIA Mumbai airport - but I didn’t know THIS expensive 👀 pic.twitter.com/JRFMw3unLu
— Kaushik Mukherjee (@kaushikmkj)