ಒಂದ್ಕಡೆ ಬಾಯಾರಿಕೆ, ಇನ್ನೊಂದು ಕಡೆ ಸೆಕೆ. ಈ ಮಧ್ಯೆ ಕೋಲ್ಡ್ ಡ್ರಿಂಕ್ಸ್ ಬಯಸ್ತಿರುವ ಬಾಯಿ. ಅಪ್ಪಿತಪ್ಪಿ ಈ ಬೇಸಿಗೆಯಲ್ಲಿ ಬಾಯಿ ಮಾತು ಕೇಳಿದ್ರೆ ಮುಗೀತು. ಅದ್ರ ಬದಲು ಆರೋಗ್ಯಕ್ಕೆ ಅತ್ಯುತ್ತಮವಾಗಿರುವ, ಫಟಾ ಫಟ್ ಸಿದ್ಧವಾಗುವ ಈ ಡ್ರಿಂಕ್ಸ್ ಕುಡಿಯಿರಿ.
ಬೇಸಿಗೆ ಶುರುವಾದ್ರೂ ಜನರು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡೋದಿಲ್ಲ. ಅದೇ ಎಣ್ಣೆಯುಕ್ತ, ಮಸಾಲೆ ಆಹಾರ ಸೇವನೆ ಮಾಡ್ತಿರುತ್ತಾರೆ. ಹಾಗೆ ಕಡಿಮೆ ನೀರು ಸೇವನೆ ಮಾಡುವ ಜೊತೆಗೆ ಫಾಸ್ಟ್ ಫುಡ್ ಸೇವನೆಯನ್ನೂ ನಿಲ್ಲಿಸೋದಿಲ್ಲ. ಈ ಎಲ್ಲ ಕಾರಣದಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಹೊಟ್ಟೆಯಲ್ಲಿ ಉರಿ, ಅಜೀರ್ಣ, ಗ್ಯಾಸ್, ನೋವು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ ನಿಂದ ಬರೀ ಹೊಟ್ಟೆ ನೋವು, ಭಾರ ಮಾತ್ರವಲ್ಲ ತಲೆನೋವಿನ ಸಮಸ್ಯೆಯೂ ನಮ್ಮನ್ನು ಕಾಡುತ್ತದೆ.
ಪ್ರತಿ ಬಾರಿ ಋತು (Season) ಬದಲಾದ ತಕ್ಷಣ ನಮ್ಮ ಆರೋಗ್ಯ (Health) ದಲ್ಲೂ ನಾವು ಬದಲಾವಣೆ ಮಾಡಬೇಕು. ಯಾವ ಋತುವಿನಲ್ಲಿ ಯಾವ ಆಹಾರ ಸೇವನೆ ಮಾಡ್ಬೇಕು ಎಂಬುದು ನಮಗೆ ತಿಳಿದಿರಬೇಕು. ಬೇಸಿಗೆಯಲ್ಲಿ ಲಘು ಆಹಾರವನ್ನು ಸೇವಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ನಾವು ಸುಲಭವಾಗಿ ಜೀರ್ಣವಾಗಬಲ್ಲ ಆಹಾರವನ್ನು ಬೇಸಿಗೆ (Summer) ಯಲ್ಲಿ ಸೇವನೆ ಮಾಡಬೇಕು.
Health Tips : ಅರೆ ನಿದ್ರೆಯ ಕಾರಣಕ್ಕೆ ಕೆಟ್ಟ ವಿಚಾರ ಬರುತ್ತೆ ಗೊತ್ತಾ?
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವ ಜೊತೆಗೆ ದ್ರವ ಪದಾರ್ಥ ಸೇವನೆ ಮಾಡಬೇಕು. ಇದು ಹೊಟ್ಟೆ (Stomach) ಯನ್ನು ತಂಪಾಗಿಸುವು ಜೊತೆಗೆ ನಮ್ಮನ್ನು ಹೈಡ್ರೀಕರಿಸುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಬೇಸಿಗೆ ಬಂದ್ರೆ ಬಾಯಾರಿಕೆ (Thirst ) ಜಾಸ್ತಿ. ನೀವು ಬಾಯಾರಿಕೆ ಹೋಗಲಾಡಿಸಲು ಕೋಲ್ಡ್ ಡ್ರಿಂಕ್ಸ್ (Cold Drinks) ಸೇವನೆ ಮಾಡ್ತಿದ್ದರೆ ಅಥವಾ ಪ್ಯಾಕೆಟ್ ಜ್ಯೂಸ್ ಕುಡಿಯುತ್ತಿದ್ದರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು, ದೇಹಕ್ಕೆ ಶಕ್ತಿಬೇಕು ಅಂದ್ರೆ ನೀವು ಬೇಸಿಗೆಯಲ್ಲಿ ಸಮರ್ ಡ್ರಿಂಕ್ಸ್ ಮಾಡಿ ಕುಡಿಯಿರಿ. ನಾವಿಂದು ಸಮರ್ ಡ್ರಿಂಕ್ಸ್ ಮಾಡೋದು ಹೇಗೆ, ಅದ್ರ ಪ್ರಯೋಜನವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಸಮರ್ ಡ್ರಿಂಕ್ಸ್ ಮಾಡಲು ಬೇಕಾಗುವ ಪದಾರ್ಥ :
ಎಳ ನೀರು 200 ಮಿಲಿ
ಏಲಕ್ಕಿ ಪುಡಿ 1/4 ಟೀಸ್ಪೂನ್
ತುಳಸಿ ಬೀಜಗಳು 1 ಚಮಚ
ಗುಲ್ಕನ್ 1/2 ಚಮಚ
Healthy Food : ಸರ್ವ ರೋಗಕ್ಕೆ ಮದ್ದು ಈ ಗೋಧಿ ಹುಲ್ಲಿನ ಜ್ಯೂಸ್
ಸಮರ್ ಡ್ರಿಂಕ್ಸ್ ಮಾಡುವ ವಿಧಾನ : ಈ ಡ್ರಿಂಕ್ಸ್ ತಯಾರಿಸೋದು ತುಂಬಾ ಸುಲಭ.
• ಮೊದಲು ಎಳನೀರನ್ನು ತೆಗೆದುಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ.
• ಎಳೆನೀರಿಗೆ ಗುಲ್ಕನ್, ತುಳಸಿ ಬೀಜ, ಎಲಕ್ಕಿ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿ ಇಡಿ.
• ಸ್ವಲ್ಪ ಸಮಯದ ನಂತ್ರ ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ.
ಇದನ್ನು ಡೈಜೆಸ್ಟಿವ್ ಡ್ರಿಂಕ್ ಎಂದೂ ನಾವು ಕರೆಯಬಹುದು. ಇದರ ಸೇವನೆಯಿಂದ ಹೊಟ್ಟೆ ತಂಪಾಗುತ್ತದೆ. ಎಳ ನೀರಿನ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಿ ದಿ ಬೆಸ್ಟ್ ಪಾನೀಯ ಇದು. ಇದು ದೇಹ ತೇವಾಂಶದಿಂದ ಕೂಡಿರಲು ನೆರವಾಗುತ್ತದೆ. ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಕಂಡುಬರುತ್ತದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದು ನಮ್ಮ ಹೊಟ್ಟೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಗ್ಯಾಸ್ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಗುಲ್ಕನ್ ಆಮ್ಲೀಯತೆಯನ್ನು ಕಡಿಮೆ ಮಾಡುವ ಮೂಲಕ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತುಳಸಿ ಬೀಜಗಳು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಸುಲಭವಾಗಿ ಕಡಿಮೆಯಾಗುತ್ತದೆ. ಮಲ ವಿಸರ್ಜನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಪಾನೀಯ ನಿಮಗೆ ಇಡೀ ದಿನ ಕೆಲಸ ಮಾಡುವ ಶಕ್ತಿಯನ್ನು ನೀಡುತ್ತದೆ.