ಎಷ್ಟೇ ದೊಡ್ಡ ರೆಸ್ಟೋರೆಂಟ್‌ನಲ್ಲಿ ಉಂಡರೂ ಮದ್ವೆ ಊಟ ಎಲ್ರೂ ಮಿಸ್ ಮಾಡ್ಕೊಳ್ತಾರೆ. ಕೊರೋನಾ ಬಂದ್ಮೇಲಂತೂ ಮದುವೆ ಊಟ ದೂರದ ಕನಸಾಗಿ ಬಿಟ್ಟಿದೆ. ಮದುವೆಗೆ ಕರೆಯುವ ಹಾಗೂ ಇಲ್ಲ, ಕರೆದರೆ ಹೋಗುವಹಾಗೆಯೂ ಇಲ್ಲ. ಹಾಗಿದೆ ಪರಿಸ್ಥಿತಿ. ಆದ್ರೆ ಇಲ್ಲೊಂದು ಕುಟುಂಬ ಹೊಸ ಐಡಿಯಾ ಮಾಡಿದೆ. ಏನದು..? ಇಲ್ಲಿ ಓದಿ
ಮದುವೆ ಮನೆಯ ಗದ್ದಲ, ಅಲ್ಲಿನ ನೆಂಟರಿಷ್ಟರ ಮಾತುಕತೆ, ಉಡುಗೊರೆ ನೀಡುವ ಗೌಜಿ, ಮಧ್ಯಾಹ್ನ ಹೊಟ್ಟೆ ಚುರುಗುಟ್ಟುತ್ತಿರುವಾಗ ಊಟದ ಹಾಲ್ ಕಡೆಯಿಂದ ಬರುವ ಘಮ್ಮೆನ್ನುವ ಪರಿಮಳ ಇವೆಲ್ಲವನ್ನೂ ಮಿಸ್ ಮಾಡ್ಕೊಳ್ತಿದ್ದೀರಾ..?
ಮದುವೆಲಿ ಗಂಡು ಹೆಣ್ಣಿಗೆ ಆಶಿರ್ವಾದ ಮಾಡೋದೆಷ್ಟು ಮುಖ್ಯವೋ ನೆಂಟರ ಜೊತೆ ಮದುವೆ ಊಟ ಮಾಡೋದು ಅಷ್ಟೇ ಮುಖ್ಯ.. ಹೇಳಿ ಏನು ಖುಷಿ.. ಕೊರೋನಾ ಬಂದ ಮೇಲೆ ಇದ್ಯಾವುದೂ ಆಗ್ತಾ ಇಲ್ವಲ್ಲಾ..?
ಸೈಡ್ಸ್ ಪ್ಲೀಸ್, ಇದು ಚಪಾತಿ, ದೋಸೆ, ಪುಲ್ಕಾಗೆ ಸೈಡ್ ಡಿಶ್‌ಗಳು!
ಮನೆಯಿಂದಲೇ ನವ ವಧೂ ವರರಿಗೆ ಆಶಿರ್ವಾದ ಮಾಡಿದ್ರೂ ಘಮ್ಮೆನ್ನುವ ಭೋಜನ ಮಿಸ್ ಮಾಡದೇ ಇರಲು ಸಾಧ್ಯವೇ..? ತನ್ನ ಮಗನ ಮದುವೆ ಪರ್ಫೆಕ್ಟ್ ಆಗಬೇಕೆಂದು ಬಯಸಿದ ಚೆನ್ನೈನ ತಂದೆಯೊಬ್ಬರು ಮಾಡಿದ್ದೇನು ಗೊತ್ತಾ..? ನೆಂರಿಷ್ಟರಿಗೆ ಪ್ರೀತಿಯಿಂದ ಉಣ ಬಡಿಸುವ ಅವರ ಆಸೆಯನ್ನು ಅವರು ಪೋರೈಸಿಕೊಂಡಿದ್ದು ಹೇಗೆ ಗೊತ್ತಾ..?
ಮದುವೆಗೆ ಬರಬೇಕಿದ್ದ ಅಷ್ಟೂ ಅತಿಥಿಗಳ ಮನೆ ಬಾಗಿಲಿಗೆ ಭೋಜನ ಕಳುಹಿಸಿ ಕೊಟ್ಟಿದ್ದಾರೆ ಇವರು. ಆಶ್ಚರ್ಯ ಆಗ್ತಿದ್ಯಾ..? ಆದ್ರೆ ಇದು ನಿಜ. ಮದುವೆ ಆಮಂತ್ರಣ ಪತ್ರಿಕೆ ಜೊತೆ ಭೋಜನ ಕಳುಹಿಸಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
ಬಿಳಿ ಆಹಾರಗಳಿಗಿಂತ ಬ್ರೌನ್ ಆಹಾರ ಯಾಕೆ ಬೆಟರ್? ರೀಸನ್ ಇದೆ
ಮದುವೆ ಊಟ( ಕಲ್ಯಾಣ ಸಾಪಾಡು)ವನ್ನು ಸ್ವೀಕರಿಸಿ ಎಂದು ಮನವಿ ಮಾಡಿಕೊಂಡಿರುವ ಇನ್ವಿಟೀಷನ್ ಕೂಡಾ ಕಳುಹಿಸಲಾಗಿದೆ. ಘಮಘಮಿಸುವ ಭೋಜನದ ಜೊತೆ, ಬಾಳೆಲೆಯನ್ನೂ ಕಳುಹಿಸಲಾಗಿದೆ. ಡಿಸೆಂಬರ್ 10ರಂದು ನಾವು ಮಗನ ಮದುವೆ ಪ್ರಯುಕ್ತ ಕಳುಹಿಸುವ ಮದುವೆ ಉಟವನ್ನು ನೀವು ಸ್ವೀಕರಿಸಿ ಎಂದು ಬರೆಯಲಾಗಿದೆ.
ಅತಿಥಿಗಳಿಗೆ ಚಂದದ ಅಟ್ರಾಕ್ಟಿವ್ ಬ್ಯಾಗ್ ಜೊತೆ, ಎರಡು ದೊಡ್ಡ ಮತ್ತು ಇನ್ನೆರಡು ಚಿಕ್ಕ ಬಾಕ್ಸ್‌ಗಳೂ, ಬಾಳೆಲೆಯೂ ಲಭಿಸಿದೆ. ಈ ಊಟದಲ್ಲಿ 12 ಬಗೆಯ ಖಾದ್ಯಗಳಿತ್ತು. ಸಾಂಬಾರು, ರಸಂ, ಪುಳಿ ಸದಂ, ಪಾಯಸಂ, ಖೀರ್ ಸೇರಿ ಹಲವು ಬಗೆಯ ಭಕ್ಷ್ಯಗಳಿದ್ದವು.
ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ
ಅರುಸುವೈ ಅರಸು ಕ್ಯಾಟರರ್ಸ್ ಅಡುಗೆ ತಯಾರಿಸಿದ್ದು, ಶ್ರೀನಿವಾಸ್ ಸುಂದರರಾಜನ್ ಅವರ ಟೆಕ್ನಾಲಜಿ ಬೇಸ್ಡ್ ಲಾಜಿಸ್ಟಿಕ್ಸ್ ಉನಾನು ಮೂಲಕ ಭೋಜನ ಮನೆ ಮನೆಗೆ ಡೆಲಿವರಿ ಮಾಡಲಾಗಿದೆ. 250 ಮನೆಗಳಿಗೆ ಸುಮಾರು 700 ಬ್ಯಾಗ್‌ಗಳನ್ನು ಕಳುಹಿಸಿಕೊಡಲಾಗಿದೆ.