ಚಾಕಲೇಟ್ ತಿನ್ನಿ, ತಿನ್ನಿಸಿ; ಚಾಕಲೇಟ್ ಡೇ ಆಚರಿಸಿ!

Suvarna News   | Asianet News
Published : Jul 07, 2020, 01:07 PM IST
ಚಾಕಲೇಟ್ ತಿನ್ನಿ, ತಿನ್ನಿಸಿ; ಚಾಕಲೇಟ್ ಡೇ ಆಚರಿಸಿ!

ಸಾರಾಂಶ

ಮಕ್ಕಳನ್ನು ಪುಸಲಾಯಿಸಲು, ಪ್ರೇಮಿಯನ್ನು ಓಲೈಸಲು ಮಾತ್ರವಲ್ಲ ಆತಂಕ, ದುಗುಡದಲ್ಲಿರುವ ಮನಸ್ಸಿಗೊಂದು ಸಣ್ಣ ಖುಷಿಯ ಸಿಂಚನ ಚಿಮ್ಮಿಸುವ ಶಕ್ತಿ ಚಾಕೊಲೇಟ್ ನಲ್ಲಿದೆ ಎಂದರೆ ನಂಬುತ್ತೀರಾ?   

ಮಿತ ಚಾಕೊಲೇಟ್ ಸೇವನೆ ಮನಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಹಿತಕರ ಎಂಬುದನ್ನು ಕೆಲವು ಸಂಶೋಧನೆಗಳೇ ಸಾಕ್ಷೀಕರಿಸಿರುವುದರಿಂದ ನಂಬಲೇಬೇಕಿದೆ. ಈಗ ಯಾಕೆ ಚಾಕೊಲೇಟ್ ವಿಷಯ ಬಂತು ಎಂದು ಆಲೋಚನೆಗಿಳಿದಿದ್ದೀರಾ ಅಲ್ಲವೇ? ಯಾಕಂದ್ರೆ ಇಂದು ಎಲ್ಲರ ಹುಟ್ಟುಹಬ್ಬದ ಖುಷಿಯನ್ನು ಇಮ್ಮಡಿಸುವ ಚಾಕೊಲೇಟ್ ಗೆ ಮೀಸಲಿರಿಸಿರುವ ದಿನ. ವರ್ಲ್ಡ್ ಚಾಕೊಲೇಟ್ ಡೇ.

ಚಾಕೋಲೇಟ್‌ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜವಾ?

ವಯಸ್ಸಿನ ಅಂತರವಿಲ್ಲದೆ ಎಲ್ಲರ ಅಚ್ಚುಮೆಚ್ಚಿನ ಸಿಹಿ ತಿನಿಸಾದ ಚಾಕೊಲೇಟ್ ಗೆ ವಿಶ್ವದಾದ್ಯಂತ ಭಾರಿ ಬೇಡಿಕೆ ಇದೆ. ಚಾಕೊಲೇಟ್‌ಗಳಲ್ಲಿ ವೈಟ್‌, ಮಿಲ್ಕ್‌ ಮತ್ತು ಡಾರ್ಕ್‌ ಚಾಕೊಲೇಟ್‌ ಎಂಬ ರುಚಿಗಳಿದ್ದು,  ಮಿಲ್ಕ್‌ ಪೌಡರ್‌, ಚಾಕೊಲೇಟ್‌ ಪೌಡರ್‌, ಸಕ್ಕರೆ, ಬೆಣ್ಣೆ ಹಾಕಿ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದೇ. ಆದರೆ ಮಿತವಾಗಿ ಸೇವಿಸಬೇಕಷ್ಟೆ. 

ವಿದೇಶಗಳಲ್ಲಿ ಚಾಕೊಲೇಟ್ ಗೆ ವಿಶಿಷ್ಟ ಮನ್ನಣೆ ಇದೆ.

ಜುಲೈ 7, 1550ರಂದು ಮೊದಲ ಬಾರಿಗೆ ಚಾಕೊಲೇಟ್‌ ಅನ್ನು ಯೂರೋಪಿನಲ್ಲಿ ಪರಿಚಯಿಸಲಾಯಿತು. ಹಾಗಾಗಿ ಜುಲೈ 7 ರಂದು ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲಾಗುತ್ತಿದೆ. ಇದರೊಂದಿಗೆ ಚಾಕೊಲೇಟ್‌ ಥೀಮ್‌ ಇಟ್ಟುಕೊಂಡು ಚಾಕೊಲೇಟ್‌ ಐಸ್‌ಕ್ರೀಮ್‌ ಡೇ, ಚಾಕೊಲೇಟ್‌ ಕೇಕ್‌ ಡೇ, ಮಿಲ್ಕ್‌ ಚಾಕೊಲೇಟ್‌ ಡೇ, ವೈಟ್‌ ಚಾಕೊಲೇಟ್‌ ಡೇ, ಚಾಕೊಲೇಟ್‌ ಕವರ್ಡ್‌ ಎನಿಥಿಂಗ್‌ ಡೇಗಳಂಥ ದಿನಗಳನ್ನು ಆಚರಿಸಲಾಗುತ್ತದೆ.

ಚಾಕೋಲೇಟ್ ತಿಂದು, ಹಂಚಿ ಆರೋಗ್ಯವರ್ಧಿಸಿಕೊಳ್ಳಿ!

ಚಾಕೊಲೇಟ್ ನಲ್ಲಿರುವ  ರಾಸಾಯನಿಕ ವಸ್ತುಗಳು ಕ್ಯಾನ್ಸರ್ ಸಂಬಂಧಿತ ಸಮಸ್ಯೆ ನಿವಾರಿಸಿ ಹಾಗೂ ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುತ್ತದೆ. ಮಹಿಳೆಯರ ಮನೋಭಾವ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಮಾಸಿಕ ದಿನಗಳಲ್ಲಿ ವಿಪರೀತವಾಗಿರುತ್ತದೆ. ಹಾಗಾಗಿ ಆಕೆಯ ಮನೋಭಾವ ಈ ದಿನಗಳಲ್ಲಿ ಹೆಚ್ಚು ಬದಲಾಗದೇ ಸ್ಥಿರವಾಗಿರಲು ಈ ದಿನಗಳಲ್ಲಿ ಚಾಕೊಲೇಟ್ ಸೇವನೆಗೆಮೊರೆಹೋಗಿದ್ದಾರೆ.

ಒಟ್ಟಾರೆಯಾಗಿ, ಸೇವಿಸುವ ಚಾಕೊಲೇಟ್ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಿದ ಮತ್ತು ಶುದ್ಧವಾಗಿದ್ದರೆ, ನಿಮ್ಮ ದಿನನಿತ್ಯದಲ್ಲಿ ಮಿತವಾಗಿ ಚಾಕೊಲೇಟ್ ಸೇವಿಸಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ಒಟ್ಟಿನಲ್ಲಿ ಸೇವಿಸುವ ಚಾಕೊಲೇಟ್ ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಿದ ಮತ್ತು ಶುದ್ಧವಾಗಿದ್ದರೆ, ನಿಮ್ಮ ದಿನನಿತ್ಯದ ದಿನಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸೇರಿಸಬಹುದು.
ಈ ದಿನ ನಿಮ್ಮ ಆತ್ಮೀಯರಿಗೆ ಚಾಕೊಲೇಟ್ ಅನ್ನು ಉಡುಗೊರೆಯಾಗಿ ನೀಡಿ ಅವರನ್ನು ಖುಷಿಯಾಗಿರಿಸುವ ಮೂಲಕ ವಿಶ್ವ ಚಾಕೊಲೇಟ್ ಡೇ ಅನ್ನು ಆಚರಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?