ಅಕ್ಕಿಯು ಭಾರತೀಯರು ಪ್ರತಿ ಮನೆಯಲ್ಲೂ ಆನಂದಿಸುವ ಪ್ರಧಾನ ಆಹಾರವಾಗಿದೆ. ಬಹುತೇಕ ರಾಜ್ಯಗಳಲ್ಲಿ ರೋಟಿ, ಚಪಾತಿಯನ್ನು ಹೊರತುಪಡಿಸಿ ಅನ್ನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ಆದರೆ ಯಾವಾಗಲೂ ಒಂದೇ ರೀತಿಯ ಅನ್ನವನ್ನು ತಿಂದು ಬೇಜಾರಾಗಿದೆಯೇ? ಹಾಗಿದ್ರೆ ಅನ್ನವನ್ನು ಆರೋಗ್ಯಕರವಾಗಿ ಮತ್ತು ರುಚಿಯಾಗಿ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್.
ಅನ್ನ ಭಾರತೀಯ ಆಹಾರಪದ್ಧತಿಯ ಪ್ರಮುಖ ಭಾಗ. ಹೀಗಾಗಿಯೇ ಹೆಚ್ಚಿನವರು ದಿನದ ಮೂರೂ ಹೊತ್ತು ಬಿಸಿ ಬಿಸಿ ಅನ್ನ ತಿನ್ನುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ದೈನಂದಿನ ಜೀವನಶೈಲಿಯಲ್ಲಿ ಒಂದು ಹೊತ್ತು ಅನ್ನ ತಿಂದಿಲ್ಲ ಎಂದರೆ ಸಮಾಧಾನವೇ ಇರುವುದಿಲ್ಲ. ಅನ್ನ ಅಥವಾ ಅನ್ನವನ್ನು ಸೇರಿಸಿ ತಯಾರಿಸಿದ ಇತರ ಆಹಾರಗಳನ್ನು ದಿನವಿಡೀ ಸೇವಿಸುತ್ತಿರುತ್ತಾರೆ. ಅನ್ನ ಪ್ರೋಟೀನ್, ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. ಆದ್ರೆ ವೆರೈಟಿ ಕರಿ, ಸಬ್ಜಿ ಇದ್ರೂ ಯಾವಾಗ್ಲೂ ಅದೇ ಅನ್ನ ತಿನ್ನೋದು ಅಂದ್ರೆ ಬೇಕಾರು ಅಲ್ವಾ ? ಹೀಗಾಗಿ ಅನ್ನವನ್ನು ಟೇಸ್ಟಿಯಾಗಿ ಮತ್ತು ಆರೋಗ್ಯಕರವಾಗಿ ಬೇಯಿಸಲು ಕೆಲವೊಂದು ಸಲಹೆಗಳು ಇಲ್ಲಿವೆ.
ಕರಿಬೇವು ಮಸಾಲಾ
ಒಣಗಿದ ಕರಿಬೇವಿನ ಎಲೆಗಳು (Curry leaves), ತೊಗರಿಬೇಳೆ, ಕರಿಮೆಣಸು, ಉಪ್ಪು, ಒಣಗಿದ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜಗಳು, ಒಣ ಮಾವಿನ ಪುಡಿ ಮತ್ತು ಜೀರಿಗೆ ಬೀಜಗಳೊಂದಿಗೆ ಮಸಾಲೆ ಪುಡಿ ಮಾಡಿ. ಈ ಮಸಾಲೆ ಪುಡಿಯನ್ನು ತುಪ್ಪದಲ್ಲಿ ಹಾಕಿ ನಂತರ ಅದರಲ್ಲಿ ಅನ್ನವನ್ನು ಬೇಯಿಸಿ. ಆರೊಮ್ಯಾಟಿಕ್ ಅಕ್ಕಿ ತಯಾರಿಕೆಯು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ.
ಅನ್ನ ಮಿಕ್ಕಿದೆ ಅನ್ನೋ ಚಿಂತೆನಾ ? ಐದೇ ನಿಮಿಷದಲ್ಲಿ ರೈಸ್ ಟಿಕ್ಕಿ ರೆಡಿ ಮಾಡಿ
ನಿಂಬೆ ರಸ
ಅನ್ನದ ತಯಾರಿಕೆಯು ತುಂಬಾ ಸಪ್ಪೆಯಾಗಿದೆ ಎಂದು ನೀವು ಭಾವಿಸಿದರೆ, ಅಡುಗೆ ಮಾಡುವಾಗ ಅದಕ್ಕೆ ಸ್ವಲ್ಪ ನಿಂಬೆ (Lemon) ರಸವನ್ನು ಸೇರಿಸಿ. ಇದರಿಂದ ಅಕ್ಕಿ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಅನ್ನ ಉದುರು ಉದುರಾಗಿ ರುಚಿಕರವಾಗುತ್ತದೆ.
ಗರಂ ಮಸಾಲಾ
ಎಣ್ಣೆ ಅಥವಾ ತುಪ್ಪದಲ್ಲಿ ಸ್ವಲ್ಪ ಗರಂ ಮಸಾಲವನ್ನು ಸರಳವಾಗಿ ಹುರಿಯಿರಿ. ನಂತರ ಇದಕ್ಕೆ ಉಪ್ಪು (Salt) ಸೇರಿಸಿ ಮತ್ತು ಅದರಲ್ಲಿ ಅನ್ನವನ್ನು ಬೇಯಿಸಿ. ಈ ಸ್ವಲ್ಪ ಮಸಾಲೆಯುಕ್ತ ಅನ್ನವನ್ನು ದಾಲ್ ತಡ್ಕಾ ಅಥವಾ ಆಲೂ ಜೀರಾದಂತಹ ಕಾಂಬಿನೇಷನ್‌ನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.
ಹಸಿರು ಬಟಾಣಿ ಮತ್ತು ಕಾರ್ನ್
ನೀವು ಅನ್ನವನ್ನು ಬೇಯಿಸುತ್ತಿರಲಿ ಅಥವಾ ಉಳಿದ ಅನ್ನವನ್ನು ಬಳಸುತ್ತಿರಲಿ, ಈ ಋತುವಿನಲ್ಲಿ ನೀವು ಯಾವಾಗಲೂ ಹಸಿರು ಬಟಾಣಿ (Green peas) ಮತ್ತು ಜೋಳದ (Corn) ಕಾಳುಗಳೊಂದಿಗೆ ಅದನ್ನು ವರ್ಣರಂಜಿತವಾಗಿ ಮತ್ತು ಆರೋಗ್ಯಕರವಾಗಿ (Healthy) ಮಾಡಬಹುದು. ಇದು ಭಕ್ಷ್ಯದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನ್ನದ ತಯಾರಿಕೆಯು ಕಣ್ಣಿಗೆ ಆಹ್ಲಾದಕರವಾಗಿ ಕಾಣುವಂತೆ ಮಾಡುತ್ತದೆ. ಈ ರೀತಿ ಅನ್ನವನ್ನು ಸಿದ್ಧಪಡಿಸುವುದರಿಂದ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ.
ಮಳೆಗಾಲದಲ್ಲಿ ಅಕ್ಕಿ ಗಂಜಿ ಕುಡಿದ್ರೆ ಕಾಯಿಲೆ ಬೀಳೋ ಭಯವಿಲ್ಲ
ಸಕ್ಕರೆ ಮತ್ತು ಮಸಾಲೆಗಳು
ನೀವು ಅನ್ನವನ್ನು ಹೆಚ್ಚು ರುಚಿಯಾಗಿ ಮಾಡಲು ಬಯಸಿದರೆ, ಅಡುಗೆ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ (Ghee)ವನ್ನು ಸೇರಿಸಿ. ನಂತರ ಕೆಲವು ಸಕ್ಕರೆ ಹರಳುಗಳು ಮತ್ತು ಸ್ಟಾರ್, ಸೋಂಪು, ಏಲಕ್ಕಿ, ಲವಂಗ ಮತ್ತು ದಾಲ್ಚಿನ್ನಿ ತುಂಡುಗಳಂತಹ ಮಸಾಲೆಗಳನ್ನು ಸೇರಿಸಿ. ಸಕ್ಕರೆ ಹರಳುಗಳು ಕರಗಲು ಬಿಡಿ ಮತ್ತು ಮಸಾಲೆಗಳ ಪರಿಮಳ ಹರಡಿದ ನಂತರ, ತೊಳೆದು ನೆನೆಸಿದ ಅಕ್ಕಿಯನ್ನು ಸೇರಿಸಿ. ನೀವು ಎಲ್ಲವನ್ನೂ ಒಟ್ಟಿಗೆ ಬೇಯಿಸಿದಾಗ ಅಂತಿಮ ಭಕ್ಷ್ಯವು ಕಂದು ಬಣ್ಣವನ್ನು ಹೊಂದುತ್ತದೆ. ನೀವೀಗ ಇದನ್ನು ನಿಮ್ಮ ಮೆಚ್ಚಿನ ದಾಲ್ ಅಥವಾ ಸಬ್ಜಿಯೊಂದಿಗೆ ಸವಿಯಬಹುದು.
ಈರುಳ್ಳಿ ಮತ್ತು ಬೆಳ್ಳುಳ್ಳಿ
ಸಾಮಾನ್ಯ ಆವಿಯಲ್ಲಿ ಬೇಯಿಸಿದ ಅನ್ನವನ್ನು ತಿನ್ನಲು ನಿಮಗೆ ಬೇಸರವಾಗಿದ್ದರೆ, ಅದಕ್ಕೆ ಸ್ವಲ್ಪ ಸುಟ್ಟ ಅಥವಾ ಕ್ಯಾರಮೆಲೈಸ್ ಮಾಡಿದ ಈರುಳ್ಳಿ (Onion) ಮತ್ತು ಬೆಳ್ಳುಳ್ಳಿ (Garlic)ಯನ್ನು ಸೇರಿಸಿ ಮತ್ತು ಅದು ತಕ್ಷಣವೇ ಅನ್ನದ ರುಚಿಯನ್ನು ಹೆಚ್ಚಿಸುತ್ತದೆ. ಪರಿಮಳವನ್ನು ಹೆಚ್ಚಿಸಲು ನೀವು ಸ್ವಲ್ಪ ಉಪ್ಪು ಮತ್ತು ಮೆಣಸು ಸಿಂಪಡಿಸಬಹುದು. ಈ ಅನ್ನದ ತಯಾರಿಕೆಯನ್ನು ಯಾವುದೇ ಮೇಲೋಗರದೊಂದಿಗೆ ಬಡಿಸಬಹುದು.