ಬಾಯಲ್ಲಿಟ್ಟರೆ ಕರಗುವ ಬೆಣ್ಣೆ ದೋಸೆ ಹಲವರ ಫೇವರಿಟ್. ಹಿತವಾಗಿ ಮೃದುವಾಗಿರುವ ಬೆಣ್ಣೆ ದೋಸೆಯನ್ನು ಚಟ್ನಿಯಲ್ಲಿ ಅದ್ದಿ ತಿನ್ನುವುದೇ ಚೆಂದ.. ನಿಮ್ಗೂ ಇದನ್ನು ಸವಿಯೋ ಆಸೆ ಆಗಿದ್ಯಾ ? ಹಾಗಿದ್ರೆ ಬೆಂಗಳೂರಲ್ಲಿ ಬೆಸ್ಟ್ ಬೆಣ್ಣೆ ದೋಸೆ ಎಲ್ಲೆಲ್ಲಿ ಸಿಗುತ್ತೆ ನಾವ್ ಹೇಳ್ತೀವಿ.
ಬೆಂಗಳೂರು ಅಂದ್ರೆ ತರಹೇವಾರಿ ತಿನಿಸುಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಅದರಲ್ಲೂ ದೋಸೆ ಪ್ರಿಯರ ಪಾಲಿಗಂತೂ ಬೆಂಗಳೂರು ಸ್ವರ್ಗವೆಂದೇ ಹೇಳಬಹುದು. ಮಸಾಲೆ ದೋಸೆ, ತುಪ್ಪ ದೋಸೆ, ಪೇಪರ್ ದೋಸೆ, ಬೆಣ್ಣೆ ದೋಸೆಯನ್ನು ಸವಿಯಲು ಅದ್ಭುತವಾಗಿರುತ್ತದೆ. ಅದರಲ್ಲೂ ಹೆಚ್ಚು ಬೆಣ್ಣೆ ಸೇರಿಸಿ ತಯಾರಿಸುವ ಬೆಣ್ಣೆ ದೋಸೆಯನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಬೆಂಗಳೂರಿನಲ್ಲಿ ಅತ್ಯುತ್ತಮ ಬೆಣ್ಣೆ ದೋಸೆ ಎಲ್ಲೆಲ್ಲಿ ಸಿಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.
ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್
ಮಧ್ಯ ಕರ್ನಾಟಕದ ಪಟ್ಟಣವಾದ ದಾವಣಗೆರೆಯು ಈ ದೋಸೆಯ ಆವೃತ್ತಿಯು ಅದೇ ಹೆಸರಿನ ಹೊಟೇಲ್‌ನಲ್ಲಿ ಅದ್ಭುತ ರುಚಿಯಲ್ಲಿ (Taste) ಲಭ್ಯವಿದೆ. ದಾವಣಗೆರೆಯ ಪ್ರಸಿದ್ಧ ಬೆಣ್ಣೆ ದೋಸೆ ಈಗ ಅನೇಕ ಮನೆಗಳಲ್ಲಿ ಜನಪ್ರಿಯವಾಗಿದೆ (Famous). ಈ ಸ್ಪೆಷಲ್ ದೋಸೆಯನ್ನು ಸವಿಯಲು, ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗೆ ಭೇಟಿ ನೀಡುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚು ಬೆಣ್ಣೆ ಸೇರಿಸಿದ ದೋಸೆ ಮತ್ತು ತೆಂಗಿನಕಾಯಿ ಚಟ್ನಿ (Coconut chutney) ತಿನ್ನಲು ಅದ್ಭುತವಾಗಿರುತ್ತೆ. ಆದರೆ ಈ ರುಚಿಕರವಾದ ದೋಸೆಯನ್ನು ಸವಿಯಲು ಸರತಿ ಸಾಲಿನಲ್ಲಿ ನಿಂತು ಕಾಯಬೇಕು.
ಎಲ್ಲಿ: 13, 32 ನೇ ಇ ಕ್ರಾಸ್ ರಸ್ತೆ, 4 ನೇ ಬ್ಲಾಕ್, ಜಯನಗರ, 4 ನೇ ಟಿ ಬ್ಲಾಕ್ ಪೂರ್ವ, ಕೆವಿ ಲೇಔಟ್, ಜಯನಗರ
ಯಾವಾಗ: ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12 ಮತ್ತು ಸಂಜೆ 4:30 ರಿಂದ ರಾತ್ರಿ 9:30 ರವರೆಗೆ
ಬೆಲೆ: ಇಬ್ಬರಿಗೆ 200 ರೂ.
ನಾನ್‌ವೆಜ್ ಪ್ರಿಯರಾ ? ಬೆಂಗಳೂರಲ್ಲಿ ಬೆಸ್ಟ್ ದೊನ್ನೆ ಬಿರಿಯಾನಿ ಇಲ್ಲೆಲ್ಲಾ ಸಿಗುತ್ತೆ ನೋಡಿ
CTR (ಶ್ರೀ ಸಾಗರ್)
ಶ್ರೀ ಸಾಗರ್ ಎಂದು ಕರೆಯಲ್ಪಡುವ CTR (ಸೆಂಟ್ರಲ್ ಟಿಫಿನ್ ರೂಮ್) ಅದ್ಭುತ ಬೆಣ್ಣೆದೋಸೆಯನ್ನು ಒದಗಿಸುತ್ತದೆ. ಮಲ್ಲೇಶ್ವರಂನಲ್ಲಿರುವ ಈ ಸ್ಥಳವು ಬೆಣ್ಣೆ ಮಸಾಲೆ ದೋಸೆಗೆ ಹೆಸರುವಾಸಿಯಾಗಿದೆ. ಪರಿಪೂರ್ಣತೆಗೆ ಗರಿಗರಿಯಾದ, ಆಲೂ ಮಸಾಲ (Aloo curry)ವನ್ನು ಸೇರಿಸಲಾಗುತ್ತದೆ
ಎಲ್ಲಿ: 7ನೇ ಅಡ್ಡರಸ್ತೆ, ಶ್ರೀರಾಂಪುರ, ಮಲ್ಲೇಶ್ವರಂ
ಯಾವಾಗ: ಬೆಳಿಗ್ಗೆ 7 ರಿಂದ 12:30 ರವರೆಗೆ, ಸಂಜೆ 4 ರಿಂದ ರಾತ್ರಿ 9 ರವರೆಗೆ
ಬೆಲೆ: ಇಬ್ಬರಿಗೆ 150 ರೂ.
ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್
ಈ ಸ್ಥಳವು ಬೆಂಗಳೂರಿನ ಸುತ್ತಮುತ್ತ ದಾವಣಗೆರೆಯ ಬೆಣ್ಣೆ ದೋಸೆಯನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರವಾಗಿದೆ. ಅವರ ಮೆನು ಕನಿಷ್ಠವಾಗಿದೆ, ನಿಮಗೆ ಬಡಿಸಲು ಮೂರು ಭಕ್ಷ್ಯಗಳನ್ನು ಹೊಂದಿದೆ: ಖಾಲಿ ದೋಸೆ, ಒಂದು ಬೆಣ್ಣೆ ದೋಸೆ (1 ಪ್ಲೇಟ್) ಮತ್ತು ಎರಡು ಬೆಣ್ಣೆ ದೋಸೆ (ಪ್ರತಿ ಪ್ಲೇಟ್‌ಗೆ 2). ಯಾವಾಗಲೂ ಕಿಕ್ಕಿರಿದ ಜನಸಂದಣಿಯನ್ನು ಹೊಂದಿರುವ ಈ ಜಾಗ ಬೆಣ್ಣೆ ದೋಸೆ ಅಭಿಮಾನಿಗಳ ಪಾಲಿನ ಸ್ವರ್ಗವಾಗಿದೆ. ಮಸಾಲೆಯುಕ್ತ ತೆಂಗಿನಕಾಯಿ ಚಟ್ನಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.
ಎಲ್ಲಿ: ಸುಬ್ಬರಾಮ ಚೆಟ್ಟಿ ರಸ್ತೆ, ಎನ್‌ಆರ್ ಕಾಲೋನಿ, ಬಸವನಗುಡಿ
ಯಾವಾಗ: ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 1:30 ಮತ್ತು ಸಂಜೆ 4:30 ರಿಂದ ರಾತ್ರಿ 10 ರವರೆಗೆ
ಬೆಲೆ: ಇಬ್ಬರಿಗೆ 150 ರೂ.
ಕಾಫಿ ಪ್ರಿಯರಾ, ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಇಲ್ಲಿ ಸಿಗುತ್ತೆ ನೋಡಿ
ಶ್ರೀ ರಾಘವೇಂದ್ರ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್
ನಿಯಮಿತವಾಗಿ ಶ್ರೀ ರಾಘವೇಂದ್ರ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗೆ ಭೇಟಿ ನೀಡುವವರಿಗೆ ಇಲ್ಲಿನ ಸ್ವಾದಿಷ್ಟಕರ ದೋಸೆಯ ಪರಿಚಯವಿದೆ. ದೋಸೆಯ ಮೇಲ್ಭಾಗದಲ್ಲಿ ಉದಾರ ಪ್ರಮಾಣದ ಬೆಣ್ಣೆಯನ್ನು ಕರಗಿಸಿ, ರುಚಿಕರವಾದ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಕೆಂಪು ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯಲು ಅದ್ಭುತವಾಗಿರುತ್ತದೆ.
ಎಲ್ಲಿ: 76, ಕನಕಪುರ ರಸ್ತೆ, ಸಾರಕ್ಕಿ ಗೇಟ್, 1 ನೇ ಹಂತ, ಜೆಪಿ ನಗರ
ಯಾವಾಗ: ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ
ಬೆಲೆ: ಇಬ್ಬರಿಗೆ 200 ರೂ.