ನಿತ್ಯ ನಾವು ತಿನ್ನೋ ಆಹಾರದಲ್ಲಿ ವಿಶೇಷ ಬದಲಾವಣೆ ಇರೋದಿಲ್ಲ. ಒಂದು ದಿನ ಅಕ್ಕಿ ಇನ್ನೊಂದು ದಿನ ಗೋಧಿ. ಹಾಗಾಗೇ ನಮ್ಮ ಜೀವನದಲ್ಲಿ ಕೆಲವೇ ಕೆಲವು ಆಹಾರ ಮುಖ್ಯ ಪಾತ್ರವಹಿಸಿದೆ. ಅದಿಲ್ಲ ಅಂದ್ರೆ ಬದುಕು ಕಷ್ಟ.
ಮನುಷ್ಯ ಬದುಕಲು ಆಹಾರ ಬೇಕೇ ಬೇಕು. ಮನುಷ್ಯ ತನ್ನ ಆಹಾರಕ್ಕಾಗಿ ಪ್ರಾಣಿ, ಸಸ್ಯ ಹಾಗೂ ಹಣ್ಣುಗಳನ್ನು ಅವಲಂಬಿಸಿದ್ದಾನೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಹಾರ ಶೈಲಿ ಬೇರೆ ಬೇರೆಯಾಗಿದ್ದರು ಕೂಡ ಅವುಗಳ ಮೂಲ ಒಂದೇ ಆಗಿದೆ. ಮನುಷ್ಯ ಸಾಮಾನ್ಯವಾಗಿ ಅಕ್ಕಿ, ಗೋಧಿ, ಕಬ್ಬು ಮತ್ತು ಜೋಳ ಹಾಗೂ ಕೆಲವು ಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸುತ್ತಾನೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ (ಎಫ್ ಎ ಒ) ಸಂಸ್ಥೆ, ಪ್ರತಿಶತ 75ರಷ್ಟು ಜನರು ಕೇವಲ 12 ಸಸ್ಯ ಮತ್ತು 5 ಪ್ರಾಣಿಗಳಿಂದ ಆಹಾರ ಪಡೆಯುತ್ತಾರೆ ಎಂದು ವರದಿ ಮಾಡಿದೆ.
ಕೇವಲ 12 ಸಸ್ಯ ಮತ್ತು 5 ಪ್ರಾಣಿಗಳಿಂದ ಸಿಗುವ ಆಹಾರ (Food)ವೇ ಮುಕ್ಕಾಲು ಭಾಗ ಜನರ ಆಹಾರವಾಗಿದೆ ಎಂದು ಎಪ್ ಎಒ ತಿಳಿಸಿದೆ. ಜಗತ್ತಿನ 400 ಕೋಟಿ ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಈ ಕೆಲವೇ ಕೆಲವು ಸಸ್ಯಗಳು ಮತ್ತು ಪ್ರಾಣಿ (Animal) ಗಳನ್ನು ಅವಲಂಬಿಸಿದ್ದಾರೆ. ಸುಮಾರು 70ರಷ್ಟು ಭಾಗದ ಆಹಾರ ಇವುಗಳಿಂದಲೇ ಸಿಗುತ್ತದೆ. ಆದ್ದರಿಂದ ಇವುಗಳು ಇಲ್ಲದೇ ಇದ್ದರೆ ಮನುಷ್ಯ ಜೀವಿಸುವುದು ಕಷ್ಟ ಎಂದು ಎಫ್ಎಒ ಸಂಸ್ಥೆ ಹೇಳಿದೆ.
undefined
ಹೊಸ ವರ್ಷಕ್ಕೆ ನಟಿ ಅದಿತಿ ಕಲಿಸಿಕೊಟ್ರು ಸುಲಭದಲ್ಲಿ ಮಾಡುವ ಬನಾನಾ ವಾಲ್ನಟ್ ಕೇಕ್
ಮನುಷ್ಯನ ಆಹಾರದ ಮೂಲಗಳಿವು : ಎಫ್ಎಒ (FAO) ಡೇಟಾಬೇಸ್ ಪ್ರಕಾರ, ಪ್ರಪಂಚದಲ್ಲಿ 3 ಲಕ್ಷಕ್ಕೂ ಹೆಚ್ಚು ಜಾತಿಯ ಸಸ್ಯಗಳಿವೆ. ಅವುಗಳಲ್ಲಿ ಕೇವಲ 30000 ಜಾತಿಯ ಸಸ್ಯಗಳ ಬಗ್ಗೆ ಮಾತ್ರ ಮನುಷ್ಯ ತಿಳಿದಿದ್ದಾನೆ. ಸುಮಾರು 7000 ಜಾತಿಯ ಸಸ್ಯಗಳನ್ನು ಆತ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅಂದರೆ ಆಹಾರಕ್ಕಾಗಿಯೋ ಅಥವಾ ಕೃಷಿ ಪೂರೈಕೆಗಾಗಿಯೋ ಬೆಳೆಸಿಕೊಂಡಿದ್ದಾನೆ. ಮನುಷ್ಯ ಕೇವಲ 255 ಜಾತಿಯ ಸಸ್ಯಗಳನ್ನು ಮಾತ್ರ ತನ್ನ ಆಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಈ ಸಸ್ಯಗಳಲ್ಲೇ ಆತನ ಆಹಾರ ಚಕ್ರ ನಡೆಯುತ್ತದೆ. ಈ ಸಸ್ಯಗಳ ಪೈಕಿ 12 ಸಸ್ಯಗಳು ಮನುಷ್ಯನಿಗೆ ಬೇಕಾದ ಪ್ರತಿಶತ 61ರಷ್ಟು ಆಹಾರವನ್ನು ಪೂರೈಸುತ್ತವೆ. ಗೋಧಿ, ಅಕ್ಕಿ, ಜೋಳ, ಕಬ್ಬು, ಸೋಯಾ, ಆಲೂಗಡ್ಡೆ, ತಾಳೆ ಎಣ್ಣೆ, ಮರಗೆಣಸು, ಸಿಹಿ ಗೆಣಸು, ಕಡಲೆಕಾಯಿ, ರಾಗಿ ಮುಂತಾದವುಗಳಿಂದಲೇ ಮನುಷ್ಯನಿಗೆ ಸುಮಾರು ಶೇಕಡಾ 61ರಷ್ಟು ಭಾಗದ ಆಹಾರ ದೊರೆಯುತ್ತದೆ.
ಬಾಯಲ್ಲಿ ನೀರೂರಿಸೋ ಚಿಕನ್ ಕರಿ, ಫಿಶ್ ಫ್ರೈ; ಟ್ರಕ್ ಡ್ರೈವರ್ ಆಹಾರ ತಯಾರಿಸೋ ವೀಡಿಯೋ ಸಖತ್ ವೈರಲ್
ಭಾರತದಲ್ಲಿ ಗೋಧಿ, ಅಕ್ಕಿ, ಜೋಳ, ಆಲೂಗಡ್ಡೆ ಮತ್ತು ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇನ್ನು ಗೋಧಿ ಪ್ರಪಂಚದಲ್ಲೆ ಅತಿ ಹೆಚ್ಚು ಸೇವಿಸುವ ಧಾನ್ಯವಾಗಿದೆ. ಗೋಧಿಯಿಂದಲೇ ಬ್ರೆಡ್, ಬಿಸ್ಕೆಟ್ ಗಳನ್ನು ತಯಾರಿಸುವುದರಿಂದ ಗೋಧಿ ಈ ಎಲ್ಲ ಆಹಾರಗಳ ಮೂಲವಾಗಿದೆ. ಗೋಧಿಯ ಹೊರತಾಗಿ ಅಕ್ಕಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದರಂತೆಯೇ ಮೆಕ್ಕೆ ಜೋಳ, ಆಲೂಗಡ್ಡೆ ಹಾಗೂ ಕಬ್ಬಿನಿಂದ ತಯಾರಾದ ಸಕ್ಕರೆಯನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಎಫ್ಎಒ ವರದಿಯ ಅನುಸಾರ ಮನುಷ್ಯ 26 ಬಗೆಯ ಧಾನ್ಯ, 17 ಬಗೆಯ ಬೇರು, 26 ಬಗೆಯ ಕಾಳು, 44 ಬಗೆಯ ತರಕಾರಿ ಹಾಗೂ 59 ಬಗೆಯ ಹಣ್ಣುಗಳನ್ನು ತಿನ್ನುತ್ತಾನೆ.
ಮಾರುಕಟ್ಟೆಗಳಲ್ಲಿ ಕೂಡ ಗೋಧಿ (Wheat), ಅಕ್ಕಿ (Rice), ಜೋಳ (Maize) ಹಾಗೂ ಕಬ್ಬಿನ (Suar Cane) ಉತ್ಪನ್ನದಿಂದ ತಯಾರಿಸಿದ ಆಹಾರಗಳೇ ಹೆಚ್ಚು ಸಿಗುತ್ತವೆ. ಇವು ಕಾರ್ಬೋಹೈಡ್ರೇಟ್ (Carbohydrates) ಮತ್ತು ಪ್ರೋಟೀನ್ (Protein) ಗಳಿಂದ ಸಮೃದ್ಧವಾಗಿದೆ. ಇವುಗಳ ಹೊರತಾಗಿ ಕೋಳಿ, ಹಸು (Cattle), ಎಮ್ಮೆ, ಮೇಕೆ ಮತ್ತು ಹಂದಿ ಮುಂತಾದ 5 ಜೀವಿಗಳು ಪ್ರತಿಶತ 14 ರಷ್ಟು ಜನರಿಗೆ ಮಾಂಸ, ಹಾಲುಗಳ ಮೂಲಕ ಆಹಾರ ನೀಡುತ್ತವೆ. ಇದರ ಹೊರತಾಗಿ ಔಷಧಗಳ ತಯಾರಿಕೆಯಲ್ಲಿಯೂ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.