
ಅಕ್ಕಿ ಬೆಲೆ ಹೆಚ್ಚಾಗಿದೆ. ವಿವಿಧ ರೀತಿಯ ತಳಿ ಬಂದರೂ ಕೂಡ ಜನರೆಲ್ಲ ರೇಟ್ ಹೆಚ್ಚಾಗಿದೆ ಎಂದು ಯೋಚಿಸುತ್ತಿದ್ದಾರೆ. ಆದರೆ ಇಲ್ಲೊಂದು ಅಕ್ಕಿ ದರ ಸಿಕ್ಕಾಪಟ್ಟೆ ಹೆಚ್ಚಿದೆ. ಈ ಅಕ್ಕಿ ದರ ಎಷ್ಟಿದೆ ಎಂದರೆ ಒಂದು ಕೆಜಿ ಬೆಲೆಯಲ್ಲಿ ಮೂರು ತಿಂಗಳ ಮನೆ ಸಾಮಾನು ಖರೀದಿಸಬಹುದು. ಏನಿದರ ವಿಶೇಷತೆ? ಯಾಕಿಷ್ಟು ಬೆಲೆ?
ಈ ಅಕ್ಕಿಯನ್ನು ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಇದರ ಹೆಸರು 'ಕಿನೆಮೈ ಪ್ರೀಮಿಯಂ ರೈಸ್'. ಇದು ಗಿನ್ನೆಸ್ ವಿಶ್ವ ದಾಖಲೆ ಪುಟದಲ್ಲೂ ಸ್ಥಾನ ಪಡೆದಿದೆ. ಈ ಅಕ್ಕಿಯ ಬೆಲೆ ಕೆಜಿಗೆ 12,000 ದಿಂದ 15,000 ರೂಪಾಯಿವರೆಗೆ ಇರುತ್ತದೆ. ಇದು ಒಂದೇ ಬಗೆಯ ಅಕ್ಕಿಯಲ್ಲ. ಪ್ರತಿ ವರ್ಷ ಜಪಾನ್‌ನ ಸಾವಿರಾರು ಅಕ್ಕಿ ತಳಿಗಳಿಂದ 4 ರಿಂದ 6 ಉತ್ತಮ ಗುಣಮಟ್ಟದ ತಳಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಇದನ್ನು ಪಾಲಿಶ್ ಮಾಡುವ ವಿಧಾನವೂ ವಿಭಿನ್ನ. ಸಾಮಾನ್ಯ ಅಕ್ಕಿಯನ್ನು ಪಾಲಿಶ್ ಮಾಡಿದಾಗ ಪೋಷಕಾಂಶಗಳು ನಷ್ಟವಾಗುತ್ತವೆ. ಆದರೆ ಕಿನೆಮೈ ಅಕ್ಕಿಯಲ್ಲಿ ವಿಶೇಷ ಪಾಲಿಶಿಂಗ್ ತಂತ್ರಜ್ಞಾನ ಬಳಸುವುದರಿಂದ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ.
ಈ ಅಕ್ಕಿಯನ್ನು ಬೆಳೆದ ತಕ್ಷಣ ಮಾರುಕಟ್ಟೆಗೆ ತರುವುದಿಲ್ಲ. ಸುಮಾರು 6 ತಿಂಗಳ ಕಾಲ ವಿಶೇಷ ವಿಧಾನದಲ್ಲಿ ಶೇಖರಿಸಿಡುತ್ತಾರೆ. ಹೀಗೆ ಶೇಖರಿಸಿಡುವುದರಿಂದ ಅಕ್ಕಿಯ ರುಚಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಂತರವೇ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅಷ್ಟೇ ಅಲ್ಲ, ಈ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದಿಲ್ಲ. ಸೀಮಿತ ಪ್ರಮಾಣದಲ್ಲಿ ಮಾತ್ರ ಉತ್ಪಾದಿಸುವುದರಿಂದಲೂ ಇದರ ಬೆಲೆ ಹೆಚ್ಚು. ಇದರ ಪ್ಯಾಕೇಜಿಂಗ್ ಕೂಡ ತುಂಬಾನೇ ಪ್ರೀಮಿಯಂ ಆಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.