ವಾವ್‌ ಏನ್‌ ಟೇಸ್ಟ್‌..ಥೈಲ್ಯಾಂಡ್ ಬ್ಲಾಗರ್ ಸೌತ್ ಇಂಡಿಯನ್ ಫುಡ್‌ಗೆ ಫಿದಾ

By Suvarna News  |  First Published Mar 26, 2022, 8:56 PM IST

ಭಾರತದಲ್ಲಿ ಭಿನ್ನ-ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಇರುವಂತೆಯೇ ಆಹಾರಪದ್ಧತಿ (Food)ಯು ವಿಭಿನ್ನವಾಗಿದೆ. ಅದರಲ್ಲೂ ಸೌತ್ ಇಂಡಿಯನ್ ಫುಡ್ (South Indian Food) ಸ್ಪಲ್ಪ ಹೆಚ್ಚೇ ಫೇಮಸ್. ಸದ್ಯ ಥೈಲ್ಯಾಂಡ್ ಫುಡ್ ಬ್ಲಾಗರ್ ಒಬ್ರು 18 ಬಗೆಯ ಸೌತ್ ಇಂಡಿಯನ್‌ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ (Viral) ಆಗಿದೆ


ಭಾರತದಲ್ಲಿ ಭಿನ್ನ-ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರವಿಚಾರಗಳು ಇರುವಂತೆಯೇ ಆಹಾರಪದ್ಧತಿ (Food)ಯು ವಿಭಿನ್ನವಾಗಿದೆ. ಅದರಲ್ಲೂ ಸೌತ್ ಇಂಡಿಯನ್ ಫುಡ್ (South Indian Food) ಸ್ಪಲ್ಪ ಹೆಚ್ಚೇ ಫೇಮಸ್. ಸದ್ಯ ಥೈಲ್ಯಾಂಡ್ ಫುಡ್ ಬ್ಲಾಗರ್ (Food Blogger) ಒಬ್ರು 18 ಬಗೆಯ ಸೌತ್ ಇಂಡಿಯನ್‌ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ. ಈ ವೀಡಿಯೋ ಎಲ್ಲೆಡೆ ವೈರಲ್ (Viral) ಆಗಿದೆ. 

ಭಾರತದಲ್ಲಿ ಪ್ರತಿಯೊಂದು ರಾಜ್ಯವೂ ಪ್ರತ್ಯೇಕವಾದ ಆಹಾರಕ್ರಮವನ್ನು ಹೊಂದಿದೆ. ನಾರ್ತ್‌ ಇಂಡಿಯನ್‌ ಹಾಗೂ ಸೌತ್‌ ಇಂಡಿಯನ್‌ ಫುಡ್ ಹೆಚ್ಚು ಫೇಮಸ್ ಆಗಿದೆ. ಅದರಲ್ಲೂ ದಕ್ಷಿಣಭಾರತದ ಆಹಾರವನ್ನು ವಿದೇಶಿಗರು ಸಹ ಇಷ್ಟಪಟ್ಟು ತಿನ್ನುತ್ತಾರೆ. ಸೌತ್ ಇಂಡಿಯನ್‌ ಇಡ್ಲಿ ವಡಾ, ಚಿತ್ರಾನ್ನ, ಪುಳಿಯೋಗರೆ, ಪಲಾವ್, ಅನ್ನ-ರಸಂ ವಿದೇಶದಲ್ಲೂ ಹೆಸರು ಪಡೆದುಕೊಂಡಿದೆ. ಸದ್ಯ ಥಾಯ್ಲೆಂಟ್‌ ವ್ಯಕ್ತಿಯೊಬ್ಬರು ಸೌತ್‌ ಇಂಡಿಯನ್‌ ಫುಡ್‌ನ್ನು ಬಾಯಿ ಚಪ್ಪರಿಸಿಕೊಂಡು ತಿಂದಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 

Latest Videos

undefined

Food Trend: ಐಸ್‌ಕ್ರೀಂ ಸೂಪ್‌ ನೂಡಲ್ಸ್‌ ಟೇಸ್ಟ್ ಮಾಡಿದ್ದೀರಾ ?

ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಫುಡ್ ಬ್ಲಾಗರ್ ಮತ್ತು ಯೂಟ್ಯೂಬರ್ (Youtuber) ಮಾರ್ಕ್ ವೈನ್ಸ್ ಅವರು ಇತ್ತೀಚೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಬಾಯಲ್ಲಿ ನೀರೂರಿಸುವ ದಕ್ಷಿಣ ಭಾರತೀಯ ಥಾಲಿಯನ್ನು ಪ್ರಯತ್ನಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Mark Wiens (@migrationology)

ವಿದೇಶಿಯರು ಮೊದಲ ಬಾರಿಗೆ ದೇಸಿ ಆಹಾರವನ್ನು ಪ್ರಯತ್ನಿಸುವುದನ್ನು ಭಾರತೀಯರು ಇಷ್ಟಪಡುತ್ತಾರೆ. ನೀವು ಪ್ರತಿದಿನ ತಿನ್ನುವ ಆಹಾರವನ್ನು ವಿದೇಶಿಗರು ತಿನ್ನುವುದನ್ನು ವೀಕ್ಷಿಸುವುದು ನಿಜಕ್ಕೂ ಆಕರ್ಷಕವಾಗಿದೆ.  ಆಹಾರ ಬ್ಲಾಗರ್ ಮತ್ತು ಯೂಟ್ಯೂಬರ್ ಆಗಿರುವ ಮಾರ್ಕ್ ವಿಯೆನ್ಸ್ ಅವರು ಇತ್ತೀಚೆಗೆ ಬ್ಯಾಂಕಾಕ್‌ನ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಭಾರತೀಯ ಥಾಲಿಯನ್ನು ಸವಿಯುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಈ ವೀಡಿಯೋದಲ್ಲಿ ಸೌತ್ ಇಂಡಿಯನ್ ಫುಡ್ ರುಚಿಯನ್ನು ಸವಿದ ಮಾರ್ಕ್ ವೈನ್ಸ್  ಅದ್ಭುತ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಆಹಾರವನ್ನು ಸವಿದ ಮಾರ್ಕ್ ವೈನ್ಸ್ ಭಾರತೀಯ ಆಹಾರವು ಅಸಾಧಾರಣವಾದ ರುಚಿಯನ್ನು ಹೊಂದಿದೆ ಎಂದು ಹೇಳುತ್ತಾರೆ.

ಇತ್ತೀಚಿಗೆ ಯೂಟ್ಯೂಬರ್ ಮಾರ್ಕ್ ವೈನ್ಸ್ ಇನ್‌ಸ್ಟಾಗ್ರಾಂ ವೀಡಿಯೊದಲ್ಲಿ, ಮಾರ್ಕ್ ಸುಗಮ್ ರೆಸ್ಟೋರೆಂಟ್‌ನಲ್ಲಿ 18 ವಿಭಿನ್ನ ದಕ್ಷಿಣ-ಭಾರತೀಯ ಭಕ್ಷ್ಯಗಳನ್ನು ಸವಿಯುವುದನ್ನು ಕಾಣಬಹುದು. ಅವರು ತಮ್ಮ Instagram ಹ್ಯಾಂಡಲ್ @migrationology ನಲ್ಲಿ ದಕ್ಷಿಣ ಭಾರತೀಯ ಆಹಾರವನ್ನು ಹೊಂದಿರುವ ಸಣ್ಣ ರೀಲ್ ಅನ್ನು ಅಪ್ಲೋಡ್ ಮಾಡಿದ್ದಾರೆ. ಒಬ್ಬ ಮಹಿಳೆ ಮಾವಿನ ಉಪ್ಪಿನಕಾಯಿ, ಆಲೂ ಜೀರಾ, ಎಲೆಕೋಸು ಪೊರಿಯಾಲ್, ಅವಿಯಲ್, ಪೊನ್ನಿ ರೈಸ್, ಪೂರಿ, ದಾಲ್, ಚನಾ ಮಸಾಲ ಮತ್ತು ಹೆಚ್ಚಿನದನ್ನು ಬಾಳೆ ಎಲೆಯಲ್ಲಿ ಬಡಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.

ಮೂಡ್‌ ಆಫ್ ಆಗಿದ್ಯಾ ? ಇಂಥಾ ಆಹಾರ ಸೇವಿಸಿ, ಫುಲ್ ಹ್ಯಾಪಿಯಾಗ್ತೀರಿ

ಫುಡ್ ಬ್ಲಾಗರ್ ಬಾಳೆ ಎಲೆಯ ಮೇಲೆ ಹರಡಿದ ವಿವಿಧ ಭಕ್ಷ್ಯಗಳನ್ನು ದಕ್ಷಿಣ ಭಾರತೀಯರಂತೆ ಕೈಗಳಿಂದಲೇ ತಿನ್ನುತ್ತಾರೆ. ಮತ್ತು ಎಲ್ಲಾ ಭಕ್ಷಗಳನ್ನು ಖುಷಿಯಿಂದ ಸವಿಯುತ್ತಾರೆ. ಮಾರ್ಕ್ ಮೊದಲು ತನ್ನ ಅನ್ನದ ಮೇಲೆ ಸ್ವಲ್ಪ ಉದ್ದಿನಬೇಳೆ ಮತ್ತು ಕಡಲೆ ಮಸಾಲವನ್ನು ಸ್ವಲ್ಪ ಸಾಂಬಾರ್‌ನೊಂದಿಗೆ ಬೆರೆಸಿ ರುಚಿ ನೋಡುತ್ತಾರೆ. ಅವರು ಆಹಾರದ ಸವಿಯನ್ನು ಆಸ್ವಾದಿಸುವುದನ್ನು ನೋಡಬಹುದು. ನಂತರ ಅನ್ನದಲ್ಲಿ ಒಂದೊಂದಾಗಿ ಬಗೆಬಗೆಯ ಖಾದ್ಯಗಳನ್ನು ಬೆರೆಸಿ ತಿನ್ನುತ್ತಾರೆ. ಕೊನೆಯದಾಗಿ, ಅವರು ತಮ್ಮ ಅಂಗೈಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಲ್ಪ ರಸವನ್ನು ಕುಡಿಯುದನ್ನು ಸಹ ನೀವು ನೋಡಬಹುದು.

ವೀಡಿಯೋದಲ್ಲಿ ಮಾರ್ಕ್ ವೈನ್ಸ್, ಸೌತ್ ಇಂಡಿಯನ್ ಫುಡ್ ಅಗಾಧವಾದ ಪ್ರಮಾಣ ಮತ್ತು ವೈವಿಧ್ಯತೆ. ಇದು ನಿಜವಾಗಿಯೂ ಸುಂದರವಾದ ಆಹಾರ ಸಂಸ್ಕೃತಿ ಎಂದು ಹೇಳುತ್ತಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 54,000 ಲೈಕ್‌ಗಳು ಬಂದಿವೆ.

click me!