ಒಂದು ಮೀನಿಗೆ ಬರೋಬ್ಬರಿ 13 ಲಕ್ಷ ರೂಪಾಯಿ ! ಯಾಕಿಷ್ಟು ದುಬಾರಿ ?

By Suvarna News  |  First Published Jun 28, 2022, 2:53 PM IST

ಅಬ್ಬಬ್ಬಾ ಅಂದ್ರೆ ಒಂದು ಮೀನಿಗೆ (Fish) ನೀವು ಎಷ್ಟು ರೂಪಾಯಿ ಕೊಟ್ಟಿರ್ತೀರಾ ? ಐನೂರು, ಸಾವಿರ. ಹೆಚ್ಚೆಂದರೆ ಎರಡು ಸಾವಿರ ಅಷ್ಟೇ ಅಲ್ವಾ. ಆದ್ರೆ ಇಲ್ಲೊಂದೆಡೆ ಒಂದು ಮೀನಿನ ಬೆಲೆ ಭರ್ತಿ 13 ಲಕ್ಷ ರೂಪಾಯಿ. ಅರೆ ಅಷ್ಟೊಂದಾ ಅಂತ ಗಾಬರಿಯಾಗ್ಬೇಡಿ. ಯಾಕಿಷ್ಟು ದುಬಾರಿ (Costly) ತಿಳ್ಕೊಳ್ಳಿ. 


ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಮೀನುಗಾರು (Fisherman) ಅಪರೂಪದ ಬೃಹತ್ ಮೀನನ್ನು ಸೆರೆಹಿಡಿದಿದ್ದಾರೆ. ಸುಮಾರು 55 ಕೆಜಿ ತೂಕದ ಬೃಹತ್ ಟೆಲಿಯಾ ಭೋಲಾ ಮೀನು (Fish) ಇದಾಗಿದೆ. ಮೀನನ್ನು ಹರಾಜಿನಲ್ಲಿ ಕಂಪನಿಯೊಂದು ಪ್ರತಿ ಕೆಜಿಗೆ  26 ಸಾವಿರ ರೂಪಾಯಿಗೆ ಖರೀದಿಸಿದೆ. ಅಂದರೆ ಮೀನು ಒಟ್ಟು 13 ಲಕ್ಷ ರೂಪಾಯಿಗೆ  ಮಾರಾಟವಾಗಿದೆ. ಟೆಲಿಯಾ ಭೋಲಾ ಮೀನಿನ ವೈಶಿಷ್ಟ್ಯವೆಂದರೆ ಅದು ಬಹಳಷ್ಟು ಮಾವ್ ಎಂಬ ಅಂಶವನ್ನು ಹೊಂದಿರುತ್ತದೆ, ಇದರಿಂದ ಔಷಧಿ (Meicine)ಗಳನ್ನು ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ಈ ಮೀನಿನ ಮಾವನ್ನು ವಿದೇಶದಲ್ಲೂ ಮಾರಾಟ ಮಾಡಲಾಗುತ್ತದೆ.

ಔಷಧಿಗಳನ್ನು ತಯಾರಿಸಲು ಈ ಮೀನಿನ ಮಾವ್ ಅನ್ನು ಬಳಸಲಾಗುತ್ತದೆ. ಆದ್ದರಿಂದ ಈ ಮೀನನ್ನು ಖರೀದಿಸಲು ವಿದೇಶಿ ನಿಗಮವು ದೊಡ್ಡ ಮೊತ್ತವನ್ನು ನೀಡಿತು. ಈ ಮೀನು ಹೆಣ್ಣು ಮೀನಾಗಿದ್ದರಿಂದ ಇದರಲ್ಲಿ ಹೆಚ್ಚು ಮಾವ್ ಇರಲಿಲ್ಲ. ಆರು ದಿನಗಳ ಹಿಂದೆ ಒಂದು ಗಂಡು ಟೆಲಿಯಾ ಭೋಲಾ ಮೀನನ್ನು ಮಾರಾಟ ಮಾಡಲಾಗಿದ್ದು, ಈ ಮೀನು 9 ಲಕ್ಷ ರೂಪಾಯಿಗೆ  ಮಾರಾಟವಾಗಿತ್ತು. 

Tap to resize

Latest Videos

ಬಲೆಗೆ ಬಿದ್ದ ವಿಚಿತ್ರ ಮೀನು ನೋಡಿ ಭಯಗೊಂಡ ಮೀನುಗಾರ

ಅಪರೂಪದ ಮೀನನ್ನು ನೋಡಲು ಅಪಾರ ಸಂಖ್ಯೆ ಜನರು ಜಮಾಯಿಸಿದ್ದರು. ಮೀನಿನ ಒಟ್ಟು ತೂಕ 55 ಕೆ.ಜಿ ಇದ್ದು 5 ಕೆಜಿ ಮೊಟ್ಟೆಗಳನ್ನು ಹೊರತುಪಡಿಸಿದರೇ, ಮೀನಿನ ಒಟ್ಟು ತೂಕ 50 ಕೆಜಿ ಇದೆ. ಸ್ಥಳೀಯ ಮೀನುಗಾರರ ಪ್ರಕಾರ, ಈ ಮೀನು ಟೆಲಿಯಾ ಭೋಲಾ ಎಂಬ ಹೈಬ್ರಿಡ್ ಆಗಿದೆ. ಗಂಡು ಮತ್ತು ಹೆಣ್ಣು ಹೊರತುಪಡಿಸಿ, ಎರಡೂ ಲಿಂಗಗಳು ಈ ಜಾತಿಯ ಮೀನಿನಲ್ಲಿವೆ. ಈ ಮೀನಿನ ಸ್ಥಳೀಯ ಹೆಸರು ಖಚ್ಚರ್ ಭೋಲಾ.  ಈ ಮೀನಿನ ಹೊಟ್ಟೆಯಲ್ಲಿರುವ ಮಾವ್​ ಬಹು ಬೇಡಿಕೆಯ ಅಂಗವಾಗಿದೆ. ಈ ದೈತ್ಯ ಟೆಲಿಯಾ ಭೋಲಾ ಮೀನುಗಳು ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಬರುತ್ತವೆ ಎಂದು ತಿಳಿದುಬಂದಿದೆ.

ಬಲೆಗೆ ಬಿತ್ತು 300 ಕೆಜಿ ತೂಗುವ ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು
ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದೆ. ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು ಎಂದು ತಿಳಿದು ಬಂದಿದೆ. ಜೂನ್ 13 ರಂದು ಸೆರೆ ಸಿಕ್ಕಿದ ಈ ಸ್ಟಿಂಗ್ರೇ ಮೀನು ಮೂತಿಯಿಂದ ಬಾಲದವರೆಗೆ ಸುಮಾರು 4 ಮೀಟರ್ (13 ಅಡಿ) ಉದ್ದ ಅಳತೆಯನ್ನು ಹೊಂದಿತ್ತು ಮತ್ತು  300 ಕಿಲೋಗ್ರಾಂ ಗಳಷ್ಟು (660 ಪೌಂಡ್‌ಗಳು) ತೂಗುತ್ತಿತ್ತು ಎಂದು ಕಾಂಬೋಡಿಯನ್-ಅಮೆರಿಕ. ಜಂಟಿ ಸಂಶೋಧನಾ ಯೋಜನೆಯಾದ ವಂಡರ್ಸ್ ಆಫ್ ದಿ ಮೆಕಾಂಗ್ ಹೇಳಿದೆ. 

Udupi; ಕಡಲಿನ ಒಡಲಿಂದ ಬರುತ್ತಿದೆ ಜಿಡ್ಡು,ಮತ್ಸ್ಯ ಸಂತತಿ ನಾಶದ ಭೀತಿ

2005 ರಲ್ಲಿ ಥೈಲ್ಯಾಂಡ್‌ನಲ್ಲಿ ಈ ಹಿಂದೆ ಸಿಕ್ಕ ಅತೀ ದೊಡ್ಡ ಸಿಹಿ ನೀರಿನ ಮೀನಿನ ಗಾತ್ರ 293 ಕಿಲೋಗ್ರಾಂ (646-ಪೌಂಡ್) ಆಗಿತ್ತು. ಮೆಕಾಂಗ್ ದೈತ್ಯ ಕ್ಯಾಟ್‌ ಫಿಶ್ ಇದಾಗಿತ್ತು. ಪ್ರಸ್ತುತ ಈಗ ಸಿಕ್ಕಿರುವ ಮೀನು ಈಶಾನ್ಯ ಕಾಂಬೋಡಿಯಾದ ಸ್ಟಂಗ್ ಟ್ರೆಂಗ್‌ನ ದಕ್ಷಿಣದಲ್ಲಿ ಸ್ಥಳೀಯ ಮೀನುಗಾರರಿಗೆ ಕಾಣ ಸಿಕ್ಕಿದೆ. ಬಳಿಕ ಮೀನುಗಾರರು ವಂಡರ್ಸ್ ಆಫ್ ದಿ ಮೆಕಾಂಗ್ ಪ್ರಾಜೆಕ್ಟ್‌ಗೆ ಸಂಬಂಧಿಸಿದ ವಿಜ್ಞಾನಿಗಳ ತಂಡಕ್ಕೆ ಈ ವಿಚಾರ ತಿಳಿಸಿದರು.  ನಂತರ ಪ್ರಾಜೆಕ್ಟ್‌ ತಂಡ ನದಿಯ ಉದ್ದಕ್ಕೂ  ಸಂರಕ್ಷಣಾ ಕಾರ್ಯದ ಪ್ರಚಾರ ಮಾಡಿದೆ.

click me!