ಕಠ್ಮಂಡು(ಜೂ.27): ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಏಕಾಏಕಿನ ಪಾನಿಪೂರಿಯನ್ನು ನಿಷೇಧಿಸಲಾಗಿದೆ. ಲಲಿತಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಈ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೆ ಕಾರಣ ಪಾನಿಪೂರಿ ತಿಂದ 12ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿದ್ದಾರೆ.
ಪಾನಿಪೂರಿ ತಿಂದ 12ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಹೀಗಾಗಿ ಪಾನಿಪೂರಿಯನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷೆ ಒಳಪಡಿಸಿದ್ದಾರೆ. ಈ ಪಾನಿಪೂರಿಯಲ್ಲಿ ಬಳಸಿರುವ ನೀರಿನಲ್ಲಿ ಕಾಲರಾ ಬ್ಯಾಕ್ಟಿರಿಯಾ ಕಾಣಿಸಿಕೊಂಡಿದೆ.
undefined
Cardiovascular Diseaseಗೆ ಕಾರಣವಾಗುತ್ತೆ ವಿಪರೀತ ಉಪ್ಪು, ಸಕ್ಕರೆ ಸೇವನೆ
ಪಾನಿಪೂರಿ ನೀರಿನಲ್ಲಿ ಕಾಲರಾ ಬ್ಯಾಕ್ಟಿರಿಯಾ ಪತ್ತೆಯಾಗಿರುವ ಕಾರಣ ಇದೀಗ ಕಠ್ಮಂಡುವಿನಲ್ಲಿ ಪಾನಿಪೂರಿಯನ್ನೇ ನಿಷೇಧಿಸಿದೆ. 12 ಮಂದಿ ಆಸ್ಪತ್ರೆ ದಾಖಲಾಗಿದ್ದರೆ, ಮತ್ತೆ 7 ಮಂದಿಯಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ.
ಈ ಘಟನೆಗೂ ಮೊದಲೇ ಕಠ್ಮಂಡು ನಗರದ ವಿವಿಧ ಭಾಗಗಳಲ್ಲಿ ಒಟ್ಟು 5 ಕಾಲರ ಬ್ಯಾಕ್ಟೀರಿಯಾ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಒಂದೇ ಬಾರಿ 12 ಮಂದಿ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡಿದೆ. ಇದೀಗ ಕಠ್ಮಂಡುವಿನಲ್ಲಿ ಕಾಲರ ಪ್ರಕರಣ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ನಾಗರೀಕರಲ್ಲಿ ಬಳಸುವ ನೀರಿನ ಬಗ್ಗೆ ಎಚ್ಚರವಿಡಲು ಸೂಚಿಸಲಾಗಿದೆ. ಪಾನಿಪೂರಿ ಸೇರಿದಂತೆ ರಸ್ತೆ ಬದಿಯ ತಿನಿಸುಗಳು ಹಾಗೂ ಮನೆಯ ಹೊರಗಿನ ತನಿಸುಗಳ ಕುರಿತು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.ಬೇಸಿಗೆ ಕಾಲ ಹಾಗೂ ಮಳೆಗಾಲದಲ್ಲಿ ಕಾಲರ ಬ್ಯಾಕ್ಟೀರಿಯಾ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಎಚ್ಚರ ವಹಿಸುವಂತೆ ಸೂಚಿಸಾಗಿದೆ. ಮಕ್ಕಳು ಹಾಗೂ ವೃದ್ಧರೂ ಈ ಕುರಿತು ಅತೀವ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ಕಾಲರ ರೋಗ ನೀರಿನ ಮೂಲಕ ಹರಡುತ್ತದೆ. ನೀರಿನಲ್ಲಿ ಕಾಲರ ಬ್ಯಾಕ್ಟೀರಿಯಾಗಳು ಮನುಷ್ಯನ ದೇಹದೊಳಕ್ಕೆ ಸುಲಭವಾಗಿ ಸೇರಿಕೊಳ್ಳಲಿದೆ. ಕಾಲರಾಗೆ ತುತ್ತಾದ ವ್ಯಕ್ತಿಯಲ್ಲಿ ತೀವ್ರವಾದ ಅತಿಸಾರ ಹಾಗೂ ನಿರ್ಜಲೀಕರಣಕ್ಕೆ ಗುರಿಯಾಗುತ್ತಾರೆ. ತಕ್ಕ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕವಾಗುವ ಸಾಧ್ಯತೆ ಹೆಚ್ಚು. ಉತ್ತಮ ಆರೋಗ್ಯವಂತರಿಗೂ ಇದು ಅನ್ವಯಿಸುತ್ತದೆ.
ಗಬಗಬ ನುಂಗ್ಬೇಡಿ, ನಿಧಾನವಾಗಿ ಊಟ ಮಾಡಿ, ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಸಿಗುತ್ತೆ
ಬಡನತ, ಯುದ್ಧ, ಅಥವಾ ನೈಸರ್ಗಿಕ ವಿಪತ್ತುಗಳಿಂದ ನೈರ್ಮಲ್ಯ ವಿಲ್ಲದ ನೀರು ಬಳಕೆ ಮಾಡುವದರಿಂದ ಅಥವಾ ಕಿಕ್ಕಿರಿದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಬಳಕೆ ಮಾಡುವ ಕೊಳಚೆ ನೀರುಗಳಿಂದ ವೇಗವಾಗಿ ಕಾಲರ ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿನ ನೀರಿನ ಅಂಶವನ್ನು ಕಡಿಮೆ ಮಾಡಿ ಸಾವಿಗೂ ಕಾರಣವಾಗಬಲ್ಲ ಕಾಲರಗೆ ಸೂಕ್ತ ಚಿಕಿತ್ಸೆ ಇದೆ. ಹೀಗಾಗಿ ನಿರ್ಲಕ್ಷ್ಯ ಸಲ್ಲದು.
ಕಾಲರಾ ಬ್ಯಾಕ್ಟೀರಿಯಾ ಕಾಣಿಸಿಕೊಂಡ ವ್ಯಕ್ತಿ ಆರಂಭದಲಲೇ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ. ಸೋಂಕಿಗೆ ತುತ್ತಾಗಿದ್ದಾರೆ ಅನ್ನೋದು ತಿಳಿಯುವುದಿಲ್ಲ. ಕಾಲರ ರೋಗಕ್ಕೆ ತುತ್ತಾದವರಲ್ಲಿ ಅತಿಸಾರ ಕಾಣಿಸಿಕೊಳ್ಳಲಿದೆ. ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗಲಿದೆ. ಇದರಿಂದ ದೇಹವೂ ನಿರ್ಜಲೀಕರಣಗೊಳ್ಳಲಿದೆ. ಹೀಗಾಗಿ ತಕ್ಕ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಲೇಬೇಕು.