ಸಿಹಿಗೆಣಸನ್ನು ಕೆಲವರು ಒಂದು ಆಹಾರ ಎಂದೇ ಪರಿಗಣಿಸುವುದಿಲ್ಲ. ಆದರೆ ಇದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ನೋಡಿದರೆ ನೀವು ಅದನ್ನು ಎಂದೂ ಬಿಡಲಾರಿರಿ.
ಗೆಡ್ಡೆ ಜಾತಿಗೆ ಸೇರಿರುವ ತರಕಾರಿಯಾಗಿರುವ ಗೆಣಸಿನಲ್ಲಿ ಅತ್ಯಧಿಕ ಪೋಷಕಾಂಶಗಳು ಮತ್ತು ವಿವಿಧ ರೀತಿಯ ಖನಿಜಾಂಶಗಳು ಇವೆ. ತೂಕ ಇಳಿಸಲು ಯಾವುದಾದರೂ ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು ಎಂದು ಮನಸ್ಸು ಮಾಡಿರುವಂತಹವರು ಖಂಡಿತವಾಗಿಯೂ ಗೆಣಸನ್ನು ತಮ್ಮ ಆಹಾರ ಕ್ರಮದಲ್ಲಿ ಬಳಸಬೇಕು. ಗೆಡ್ಡೆಗೆಣಸುಗಳು ಬುಡಕಟ್ಟು ಜನರು ಹೆಚ್ಚಾಗಿ ಬಳಸುವ ಆಹಾರ. ಹೀಗಾಗಿಯೇ ಅವರು ಯಾವುದೇ ಕಾಯಿಲೆ ಇಲ್ಲದೆ ಆರೋಗ್ಯಕರವಾಗಿ ಇರುವುದು.
ಇದರಲ್ಲಿ ಕೂಡ ಪಿಷ್ಠ ಹಾಗೂ ಅತ್ಯಧಿಕ ಪ್ರಮಾಣದ ಕಾರ್ಬೊಹೈಡ್ರೇಟ್ ಇವೆ. ಆದರೆ ಇದು ಯಾವತ್ತಿಗೂ ಅನಾರೋಗ್ಯಕಾರಿ ಅಲ್ಲ. ಗೆಣಸಿನಲ್ಲಿ ವಿಟಮಿನ್‌ಗಳು, ನಾರಿನಾಂಶ, ಖನಿಜಾಂಶಗಳು, ಪೈಥೋನ್ಯೂಟ್ರಿಯೆಂಟ್ಸ್‌ಗಳು ಇವೆ. ಪ್ರೋಟೀನ್, ಪೊಟಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಇದರಲ್ಲಿದೆ.
ತೂಕ ಇಳಿಸಲು ಗೋಧಿ ಬದಲು ಈ ಹಿಟ್ಟಿನ ಚಪಾತಿ ಟ್ರೈ ಮಾಡಿ! ...
ಇಮ್ಯುನಿಟಿ ವರ್ಧಕ
ಗೆಣಸಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇದೆ. ಮಾತ್ರವಲ್ಲದೆ, ವಿಟಮಿನ್ ಎ ಕೂಡ ಇದರಲ್ಲಿ ಸಮೃದ್ಧವಾಗಿದೆ. ಆಂಟಿಆಕ್ಸಿಡೆಂಟ್ ಗಳಾದ ಬೀಟಾ ಕ್ಯಾರೋಟೆನ್, ಕ್ಲೋರೊಜೆನಿಕ್ ಆಮ್ಲ ಮತ್ತು ಆಂಥೋಸಯಾನಿನ್‌ಗಳು ಇದರಲ್ಲಿದೆ. ಹೀಗಾಗಿ ಇದು ನಿಮ್ಮ ದೇಹದ ರೋಗ ಪ್ರತಿರೋಧ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
ತೂಕ ಇಳಿಸಲು ಸಹಕಾರಿ
ಆಹಾರದ ನಾರಿನಾಂಶ ಪ್ರಮಾಣವು ಇದರಲ್ಲಿ ಉತ್ತಮ ಪ್ರಮಾಣದಲ್ಲಿದ್ದು, ಇದು ಹಸಿವಿನ ಹಾರ್ಮೋನ್ ಮಟ್ಟ ಕಡಿಮೆ ಮಾಡುವುದು ಮತ್ತು ಕೊಲೆಸಿಸ್ಟೊಕಿನಿನ್ ಹಾರ್ಮೋನ್ ಹೆಚ್ಚಿಸುವುದು. ಇದರಿಂದಾಗಿ ಹೊಟ್ಟೆ ತುಂಬಿದ ತೃಪ್ತಿ ಸಿಗುವುದು, ಜೀರ್ಣಕ್ರಿಯೆ ನಿಧಾನವಾಗುವುದು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವು ಸುಧಾರಣೆ ಆಗುವುದು. ನಾರಿನಾಂಶ ಹಾಗೂ ಗ್ಲುಕೋಸ್ ಅಂಶವು ದೇಹಕ್ಕೆ ಬೇಕಾಗಿರುವಂತಹ ಅತ್ಯಧಿಕ ಮಟ್ಟದ ಶಕ್ತಿ ನೀಡುವುದು. ವ್ಯಾಯಾಮಕ್ಕೆ ಮೊದಲು ಹಾಗೂ ಬಳಿಕ ಇದು ಒಂದು ಒಳ್ಳೆಯ ಆಹಾರ. ಇದು ದೇಹಕ್ಕೆ ಹಠಾತ್ ಶಕ್ತಿ ನೀಡುವುದು ಮತ್ತು ಇದರಲ್ಲಿನ ಪೋಷಕಾಂಶಗಳು ದೇಃದಲ್ಲಿ ಇಲೆಕ್ಟೋಲೈಟ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಇದರಲ್ಲಿರುವ ಕಾರ್ಬೊಹೈಡ್ರೇಟ್, ದೀರ್ಘಕಾಲ ನಿಮ್ಮ ಹೊಟ್ಟೆ ತುಂಬಿ ಇರುವಂತೆ ಮಾಡುವುದು ಹಾಗೂ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು.
ಕೊರೋನಾದಿಂದ ದೂರವಿರಲು ಗ್ರೀನ್ ಟೀ ಸೇವನೆ ಸಹಕಾರಿ; ಸ್ವಾನ್‌ಸಿ ಅಧ್ಯಯನ ವರದಿ! ...
ತೂಕ ಇಳಿಸಲು ಬಯಸುವವರು ಖಂಡಿತವಾಗಿಯೂ ಗೆಣಸನ್ನು ಆಲೂಗಡ್ಡೆ ಬದಲಿಗೆ ಬಳಕೆ ಮಾಡಬಹುದು. ಆಲೂಗಡ್ಡೆ ಹಾಗೂ ಗೆಣಸಿನ ಮಧ್ಯೆ ಇರುವ ಮಹತ್ವದ ವ್ಯತ್ಯಾಸವೆಂದರೆ, ಗೆಣಸಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್, ನಾರಿನಾಂಶ ಇದೆ ಮತ್ತು ಕ್ಯಾಲರಿಯು ತುಂಬಾ ಕಡಿಮೆ ಇದೆ.
ಗೆಣಸನ್ನು ಯಾವ ರೀತಿ ಬಳಕೆ ಮಾಡುತ್ತಾರೆ ಎನ್ನುವುದರ ಮೇಲೆ ತೂಕ ಇಳಿಕೆ ನಿಂತಿದೆ. ಅದನ್ನು ಕರಿದರೆ, ಆಗ ಅದರಲ್ಲಿ ಇರುವ ಕ್ಯಾಲರಿ ಹೆಚ್ಚಾಗುವುದು. ಇದರಿಂದ ತೂಕ ಇಳಿಯದು. ತೂಕ ಇಳಿಸಲು ಬಯಸುವವರು ಗೆಣಸನ್ನು ಬೇಯಿಸಿ ಅಥವಾ ಬೇಕ್ ಮಾಡಿ ಬಳಕೆ ಮಾಡಿದರೆ ತುಂಬಾ ಒಳ್ಳೆಯದು. ಗೆಡ್ಡೆಗಳನ್ನು ಸೇವನೆ ಮಾಡಲು ಇದು ತುಂಬಾ ಒಳ್ಳೆಯ ವಿಧಾನ. ಹೀಗೆ ಸೇವನೆ ಮಾಡಿದರೆ ಅದರಿಂದ ಕ್ಯಾಲರಿ ನಿಯಂತ್ರಣದಲ್ಲಿ ಇರುವುದು ಮತ್ತು ಬೇಕಾಗಿರುವಂತಹ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು.
ಜೀರಿಗೆ ಹುಡಿ, ಮೆಣಸಿನ ಹುಡಿ, ಒರೆಗಾನೊ, ಲಿಂಬೆರಸ ಮತ್ತು ಉಪ್ಪನ್ನು ನೀವು ಇದಕ್ಕೆ ಸೇರಿಸಿಕೊಂಡರೆ ಆಗ ರುಚಿ ಹೆಚ್ಚಾಗುವುದು. ಬೇರೆಲ್ಲಾ ತರಕಾರಿಗಳಿಗಿಂತ ಗೆಣಸಿನಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೊಹೈಡ್ರೇಟ್ ಇದೆ. ಹೀಗಾಗಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬಾರದು. ಆದರೆ ಇದು ಉತ್ತಮ ಗುಣಮಟ್ಟದ ಕಾರ್ಬೊ. ಹೀಗಾಗಿ ತೊಂದರೆಯಿಲ್ಲ.
ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ 5 ರೊಟ್ಟಿ ತಿನ್ನಿ ...