ನಾಚೋಸ್‌, ಚಪಾತಿ ನೂಡಲ್ಸ್‌,ಕಾರ್ನ್‌ ಕಟ್ಲೆಟ್‌: ಸಂಜೆಯ ತಿಂಡಿಗಳು

By Kannadaprabha News  |  First Published Sep 6, 2020, 12:08 PM IST

ಕೊರೋನಾ ಕಾಲದ ಸಂಜೆಗಳ ಏಕತಾನತೆಯನ್ನು ಹೋಗಲಾಡಿಸೋದು ಗರಿಮುರಿ ತಿಂಡಿಗಳು. ಸಖತ್‌ ಟೇಸ್ಟಿಯಾದ ಐದು ಬಗೆಯ ಈವ್ನಿಂಗ್‌ ಸ್ನಾಕ್ಸ್‌ ರೆಸಿಪಿ ಇಲ್ಲಿದೆ. ಪಾಕಸ್ವಾದ ಯೂಟ್ಯೂಬ್‌ ಚಾನೆಲ್‌ನಲ್ಲೂ ಈ ರೆಸಿಪಿ ವೀಕ್ಷಿಸಬಹುದು.


ದಿವ್ಯಾ ಹೆಗಡೆ

1. ನಾಚೋಸ್‌

Tap to resize

Latest Videos

ಬೇಕಾಗುವ ಸಾಮಗ್ರಿಗಳು

ಮೈದಾ ಹಿಟ್ಟು - 1 ಕಪ್‌

ಅಕ್ಕಿ ಹಿಟ್ಟು- 1/4 ಕಪ್‌

ಅರಿಶಿನ- ಅರ್ಧ ಚಮಚ

ಚಾಟ್‌ ಮಸಾಲ- ಅರ್ಧ ಚಮಚ

ಅಚ್ಚಖಾರದ ಪುಡಿ - ಅರ್ಧ ಚಮಚ

ಓಂಕಾಳು - ಅರ್ಧ ಚಮಚ

ಉಪ್ಪು

ಎಣ್ಣೆ - ಕರಿಯಲು

ಪರ್ಫೆಕ್ಟ್ ಆಲೂ ಪರೋಟಾ ಮಾಡೋ ಈಸಿ ವಿಧಾನ!

ಮಾಡುವ ವಿಧಾನ

*ಮೊದಲಿಗೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಓಂಕಾಳು, ಉಪ್ಪು ಹಾಗೂ ಒಂದು ಚಮಚ ಎಣ್ಣೆ ಹಾಕಿ, ನಿಧಾನಕ್ಕೆ ನೀರು ಸೇರಿಸುತ್ತಾ ಹಿಟ್ಟನ್ನು ಕಲೆಸಿ 20 ನಿಮಿಷ ಮುಚ್ಚಿಡಿ

*20 ನಿಮಿಷದ ನಂತರ, ಹಿಟ್ಟನ್ನು ಮತ್ತೊಮ್ಮೆ ನಾದಿ, ಚಪಾತಿ ಆಕಾರಕ್ಕೆ ಲಟ್ಟಿಸಿ, ತ್ರಿಕೋನಾಕಾರದಲ್ಲಿ ಕತ್ತರಿಸಿ, ಫೋರ್ಕ್ ಸಹಾಯದಿಂದ ಚುಚ್ಚಿ.

* ಕಾದ ಎಣ್ಣೆಯಲ್ಲಿ ಕರಿಯಿರಿ.

* ಒಂದು ತಟ್ಟೆಯಲ್ಲಿ ಉಪ್ಪು, ಅಚ್ಚ ಖಾರದ ಪುಡಿ, ಚಾಟ್‌ ಮಸಾಲ ಕಲೆಸಿ, ಕರಿದಿಟ್ಟನಾಚೋಸ್‌ ಮೇಲೆ ಉದುರಿಸಿ.

* ಕಾಫಿ ಅಥವಾ ಚಹಾದೊಂದಿಗೆ ಸವಿಯಿರಿ.

2. ಚಪಾತಿ ನೂಡಲ್ಸ್‌

ಬೇಕಾಗುವ ಸಾಮಗ್ರಿಗಳು

ಚಪಾತಿ - 4

ಜೀರಿಗೆ - 1 ಚಮಚ

ಅರಿಶಿನ- ಅರ್ಧ ಚಮಚ

ಒಗ್ಗರಣೆಗೆ ಎಣ್ಣೆ

ಈರುಳ್ಳಿ - 1

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ

ಎಲೆಕೋಸು - ಅರ್ಧ

ಕ್ಯಾರೆಟು - 1

ಬೀನ್ಸ್‌ - 4

ಟೊಮೆಟೊ - 2

ಉಪ್ಪು

ಗರಮ್‌ ಮಸಾಲೆ- ಅರ್ಧ ಚಮಚ

ಖಾರ ಪುಡಿ - 1 ಚಮಚ

ಪೆಪ್ಪರ್‌ ಪುಡಿ - ಅರ್ಧ ಚಮಚ

ಸಿಪ್ಪೆ ತೆಗೆದು ಮೊಟ್ಟೆ ಬೇಯಿಸುವ ಈ ಸುಲಭ ವಿಧಾನ ಆಗಿದೆ ವೈರಲ್!

ಮಾಡುವ ವಿಧಾನ

- ಮೊದಲಿಗೆ ಚಪಾತಿಗಳನ್ನ ಸಣ್ಣಗೆ(ನೂಡಲ್ಸ್‌) ಆಕಾರದಲ್ಲಿ ಕತ್ತರಿಸಿಟ್ಟುಕೊಳ್ಳಿ.

- ಒಂದು ಕಡಾಯಿಯಲ್ಲಿ ಎಣ್ಣೆ, ಜೀರಿಗೆ, ಸಾಸ್ವೆ, ಅರಿಶಿನದ ಪುಡಿ ಹಾಕಿ ಹುರಿಯಿರಿ.

- ಒಗ್ಗರಣೆ ಬೆಂದ ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಬಾಡಿಸಿ.

- ಈರುಳ್ಳಿ ಬೆಂದ ನಂತರ ಸಣ್ಣಗೆ ಹೆಚ್ಚಿರುವ ಎಲೆಕೋಸು, ಬೀನ್ಸ್‌, ಕ್ಯಾರೆಟು ಹಾಕಿ ಹುರಿಯಿರಿ.

- ಈಗ ಟೊಮೆಟೊ ಹಾಕಿ ಬಾಡಿಸಿ, ಅಚ್ಚ ಖಾರದ ಪುಡಿ, ಪೆಪ್ಪರ್‌ ಪುಡಿ, ಗರಮ್‌ ಮಸಾಲೆ ಹಾಕಿ ಹುರಿಯಿರಿ.

- ಕತ್ತರಿಸಿದ ಚಪಾತಿ ಹಾಕಿ, ರುಚಿಗೆ ತಕ್ಕಷ್ಟುಉಪ್ಪನ್ನು ಸೇರಿಸಿ ಕಲೆಸಿ.

- ತಕ್ಷಣ ಬಡಿಸಿ ಅಥವಾ ಸವಿಯಿರಿ.

3. ಕಾರ್ನ್‌ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು

ಸ್ವಲ್ಪ ಬೆಳೆದಿರುವ ಜೋಳ - 1 ಕಪ್‌

ಈರುಳ್ಳಿ- 1

ಹಸಿಮೆಣಸಿನ ಕಾಯಿ - 2/3

ಕೊತ್ತಂಬರಿ ಸೊಪ್ಪು

ಕರಿಬೇವು

ಲಿಂಬೆರಸ - 1 ಚಮಚ

ಉಪ್ಪು

ಕಡ್ಲೆಹಿಟ್ಟು - 2 ಟೇಬಲ್‌ ಚಮಚ

ಕರಿಯಲು ಎಣ್ಣೆ

ಮಾಡುವ ವಿಧಾನ

- ಮೊದಲಿಗೆ ಜೋಳವನ್ನ ತರಿತರಿಯಾಗಿ ರುಬ್ಬಿ.

- ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಲಿಂಬೆರಸ, ಉಪ್ಪು, ಕಡಲೆ ಹಿಟ್ಟು ಹಾಕಿ ಕಲೆಸಿ.

- ಒಂದೆರಡು ಚಮಚ ಕಾದ ಎಣ್ಣೆಯನ್ನು ಹಾಕಿ ಮತ್ತೆ ಕಲೆಸಿ. ಹೀಗೆ ಮಾಡೋದರಿಂದ ಕಟ್ಲೆಟ್‌ ಜಾಸ್ತಿ ಗರಿಗರಿಯಾಗುತ್ತೆ.

- ಈ ಹಿಟ್ಟಿಗೆ ವಡೆಯಾಕಾರ ಕೊಟ್ಟು ಕಾದ ಎಣ್ಣೆಯಲ್ಲಿ ದೊಡ್ಡ ಉರಿಯಲ್ಲಿ ಕರಿಯಿರಿ.

- ಸಾಸ್‌ ಅಥವಾ ಚಟ್ನಿಯೊಂದಿಗೆ ಸವಿಯಿರಿ.

4. ಭಡಾಂಗ್‌

ಬೇಕಾಗುವ ಸಾಮಗ್ರಿಗಳು

ಚುರುಮುರಿ/ಮಂಡಕ್ಕಿ - 4 ಕಪ್‌

ಎಣ್ಣೆ - ಒಗ್ಗರಣೆಗೆ

ಸಾಸಿವೆ - ಅರ್ಧ ಚಮಚ

ಉದ್ದಿನಬೇಳೆ - 1 ಚಮಚ

ಶೇಂಗ - 1 ದೊಡ್ಡ ಚಮಚ

ಪುಟಾಣಿ - 1 ದೊಡ್ಡ ಚಮಚ

ಅರಿಶಿನ - 1 ಚಮಚ

ಬೆಳ್ಳುಳ್ಳಿ - 15-20 ಎಸಳು

ಸಕ್ಕರೆ ಫುಡಿ - 2 ಚಮಚ

ಉಪ್ಪು

ಮಾಡುವ ವಿಧಾನ

- ಮೊದಲಿಗೆ ಒಂದು ಕಡಾಯಿಗೆ ಎಣ್ಣೆ ಹಾಕಿಕೊಂಡು, ಅದಕ್ಕೆ ಶೇಂಗಾ ಹಾಕಿ ಹುರಿಯಿರಿ.

- ಶೇಂಗಾ ಕಂದುಬಣ್ಣ ಬಂದ ಬಳಿಕ ಪುಟಾಣಿ ಹಾಕಿ ಅದು ಗರಿಯಾಗುವವರೆಗೆ ಹುರಿಯಿರಿ.

- ಇದಕ್ಕೆ ಸಾಸಿವೆ ಕಾಳು, ಉದ್ದಿನಬೇಳೆ, ಅರಿಶಿನ, ಖಾರಪುಡಿ ಹಾಕಿ ಹುರಿಯಿರಿ.

- ಈಗ ಜಜ್ಜಿದ ಬೆಳ್ಳುಳ್ಳಿಯನ್ನ ಸೇರಿಸಿ.

- ಬೆಳ್ಳುಳ್ಳಿ ಬೆಂದ ನಂತರ ಒಲೆಯಾರಿಸಿ, ಮಂಡಕ್ಕಿ, ಉಪ್ಪು, ಸಕ್ಕರೆ ಪುಡಿ ಹಾಕಿ ಕಲೆಸಿ.

- ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ 15 ದಿನ ಕೆಡದೆ ಇರುತ್ತದೆ.

- ಕಾಫಿ ಅಥವಾ ಚಹಾದೊಂದಿಗೆ ತುಂಬಾ ರುಚಿ.

5. ಸೌತೆಕಾಯಿ ಮುರುಕ್ಕು

ಬೇಕಾಗುವ ಸಾಮಗ್ರಿಗಳು

ಸೌತೆಕಾಯಿ - 2

ಅಕ್ಕಿಹಿಟ್ಟು - 4 ಕಪ್‌

ಉಪ್ಪು

ಓಂಕಾಳು - 1 ಚಮಚ

ಹಸಿಮೆಣಸು - 3

ಕರಿಯಲು ಎಣ್ಣೆ

ಮಾಡುವ ವಿಧಾನ

- ಸೌತೆಕಾಯಿಯ ಸಿಪ್ಪೆ ತೆಗೆದು ತುರಿಯಿರಿ.

- ಇದಕ್ಕೆ ಮೆಣಸಿನಕಾಯಿ ಹಾಕಿ ನೀರು ಸೇರಿಸದೆ ನುಣ್ಣಗೆ ರುಬ್ಬಿ.

- ಈಗ ರುಚಿಗೆ ತಕ್ಕಷ್ಟುಉಪ್ಪು, ಓಂಕಾಳು ಹಾಕಿ ಕಲೆಸಿ.

- ಇದಕ್ಕೆ ನಿಧಾನಕ್ಕೆ ಅಕ್ಕಿ ಹಿಟ್ಟನ್ನ ಸೇರಿಸುತ್ತ ಹಿಟ್ಟು ಕಲೆಸಿಕೊಳ್ಳಿ.

- ಹಿಟ್ಟು ತೀರಾ ಗಟ್ಟಿಆಗಬಾರದು.

- ಹಿಟ್ಟಿನ ಸಣ್ಣ-ಸಣ್ಣ ಉಂಡೆ ಮಾಡಿ ಚಕ್ಕುಲಿ ಒರಳಿಗೆ ಹಾಕಿ. ಇದಕ್ಕೆ ಸಣ್ಣ ತೂತಿನ ಬ್ಲೇಡನ್ನ ಬಳಸಬೇಕು.

- ಕಾದ ಎಣ್ಣೆಗೆ ಸೀದಾ ಒತ್ತಿ. ಕಂದುಬಣ್ಣ ಬಂದಮೇಲೆ ತೆಗೆಯಿರಿ.

- ಗಾಳಿಯಾಡದ ಡಬ್ಬಿಯಲ್ಲಿಟ್ಟರೆ 15 ದಿನ ಇರುತ್ತದೆ.

click me!