
ಮಳೆಗಾಲದಲ್ಲಿ ಹಾಲ್‌ನಲ್ಲಿ ಕುಳಿತು ಟೀ ಹೀರುವುದೆಷ್ಟು ಹಿತ ಅಲ್ವಾ..? ಈ ಮಳೆಗಾಲದಲ್ಲಿ ಚಹಾದ ಬಿಸಿ ಹಿತಾನುಭವದ ಜೊತೆ ಇಮ್ಯುನಿಟಿಯನ್ನು ಹೆಚ್ಚಿಸಿಕೊಳ್ಳೋದು ಹೇಗೆ..? ಹೊರಗೆ ಮಳೆ ಸುರಿಯುವಾಗ ಚಹಾ ಇನ್ನಷ್ಟು ರುಚಿ ಎನಿಸುತ್ತದೆ. ಆದರೆ ಹೊರಗಿನ ಹವೆ ಮಾತ್ರ ಆರೋಗ್ಯಕ್ಕೆ ಪೂರಕವಾಗಿಲ್ಲ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ಶೀತ, ಜ್ವರ, ನೆಗಡಿ, ಗಂಟಲು ನೋವು ಇದೆಲ್ಲವೂ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬೆಚ್ಚನೆ ಚಾಟ್ಸ್, ಸ್ಪೈಸಿ ಫುಡ್ ಸೇವಿಸಬಹುದು ಎಂದು ಕೊಂಡರೆ ಮನೆಯಲ್ಲೇ ಇರುವುದರಿಂದ ಅಜೀರ್ಣದ ಸಮಸ್ಯೆ ಕಾಡಬಹುದು.
ಕಪ್ಪೆಳ್ಳಿನಲ್ಲಿ ಕ್ಯಾಲ್ಶಿಯಂ ಹೆಚ್ಚಿದೆ: ನಿಮ್ಮ ಆಹಾರದಲ್ಲಿ ಸಿಮ್‌ಸಿಮ್ ಸೇರಿರಲಿ..!
ಹಾಗಾಗಿ ಮಳೆಗಾಲದಲ್ಲಿ ನಾವು ಕುಡಿಯುವ ಟೀಯಲ್ಲಿ ಸ್ವಲ್ಪ ವಿಶೇಷತೆ ಇರಬೇಕಾಗುತ್ತದೆ. ಹರ್ಬಲ್ ಟೀ ಹಿತದ ಜೊತೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಶುಂಠಿ ಟೀ, ತುಳಸಿ ಟೀ ಆರೋಗ್ಯಕ್ಕೆ ಸಹಕಾರಿ. ಇಲ್ಲಿದೆ ಇಮ್ಯುನಿಟಿ ಹೆಚ್ಚಿಸಬಲ್ಲ ಟೀ ಕುರಿತ ಮಾಹಿತಿ.
ಜೇನು-ನಿಂಬೆ-ಶುಂಠಿ ಟೀ:
ಜೇನು, ನಿಂಬೆ, ಶುಂಠಿ ಆರೋಗ್ಯ ವೃದ್ಧಿಸುವ ಅಂಶಗಳನ್ನು ಹೊಂದಿದೆ. ಜೇನಿನಲ್ಲಿ ಬ್ಯಾಕ್ಟಿರಿಯಾ ವಿರೋಧಿ ಅಂಶಗಳು ಅಡಕವಾಗಿದೆ. ಗಂಟಲು ನೋವಿನ ಶಮನಕ್ಕೂ ಜೇನು ಸಹಕಾರಿ. ನಿಂಬೆ ದೇಹಕ್ಕೆ ವಿಟಮಿನ್ ಸಿ ಒದಗಿಸುತ್ತದೆ. ನಿಂಬೆ ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಕೂಡಾ ಹೌದು. ಶುಂಠಿ ಹೊಟ್ಟೆ ನೋವು, ಶೀತವನ್ನು ಶಮನ ಮಾಡುತ್ತದೆ.
ಅರಶಿನ ಟೀ:
ಅರಶಿನ ಭಾರತದ ಮಸಾಲೆಗಳಲ್ಲಿ ಅತ್ಯಂತ ಹೆಚ್ಚು ರೋಗ ನಿರೋಧಕ ಶಕ್ತಿ ಇರುವ ವಸ್ತು. ಇದನ್ನು ಎಲ್ಲ ಕಾಲಮಾನದಲ್ಲಿಯೂ ಬಳಸಬಹುದು. ಅರಶಿನ ಟೀ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮಸಾಲಾ ಚಾಯ್:
ಮಳೆಗಾಲಕ್ಕೆ ಸಂಬಂಧಿಸಿ ಮಸಾಲಾ ಚಾಯ್ ಎಲ್ಲರ ಫೇವರೇಟ್. ಮಸಾಲಾ ಟೀಯನ್ನು ನಿಧಾನವಾಗಿ ಸಿಪ್ ಮಾಡುವುದು ಈ ಚಳಿ ಹವೆಗೆ ಹೆಚ್ಚು ಹಿತ ನೀಡುತ್ತದೆ. ಲವಂಗ, ಏಲಕ್ಕಿ, ದಾಲ್ಚೀನಿ ಮತ್ತು ನಕ್ಷತ್ರ ಸೋಂಪು ಬಳಸಿ ಮಾಡುವ ಭಾರತದ ಮಸಾಲ ಚಾಯ್ ಬೇರೆಲ್ಲೂ ಸಿಗದು. ಅಂದ ಹಾಗೆ ಇವೆಲ್ಲವೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಮಸಾಲೆಗಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.