ವರಮಹಾಲಕ್ಷ್ಮಿ ಹಬ್ಬದಂದು ಮಾಡಿದ ಕರ್ಜಿಕಾಯಿ ತಿಂಗಳಾದರೂ ಕೆಡದಂತಿರಲು, ಗರಿಗರಿಯಾಗಿರಲು ಇಲ್ಲಿದೆ ಟಿಪ್ಸ್

Published : Aug 20, 2026, 07:34 PM IST
Karjikayi recipe Kannada

ಸಾರಾಂಶ

Karjikayi recipe Kannada: ಒಮ್ಮೆ ಮಾಡಿದರೆ ತಿಂಗಳ ಕಾಲ ಕೆಡದಂತೆ, ಅಷ್ಟೇ ರುಚಿಯಾಗಿ ಮತ್ತು ಗರಿಗರಿಯಾಗಿ ಇರುವ ಸಾಂಪ್ರದಾಯಿಕ ಶೈಲಿಯ 'ಕರ್ಜಿಕಾಯಿ' ಈಗ ನಿಮ್ಮ ಮನೆಯಲ್ಲೇ ಸಿದ್ಧ! ಪರ್ಫೆಕ್ಟ್ ಅಳತೆಯಲ್ಲಿ, ಅತೀ ಸುಲಭವಾಗಿ ಕರ್ಜಿಕಾಯಿ ಮಾಡುವುದು ಹೇಗೆ ಎಂಬ ವಿಶೇಷ ಸೀಕ್ರೆಟ್ ರೆಸಿಪಿ ಇಲ್ಲಿದೆ. ಹಬ್ಬದ ಸಂಭ್ರಮಕ್ಕೆ ಈ ರುಚಿಕರ ತಿಂಡಿ ಇರಲೇಬೇಕು!

ಬ್ಬ ಹರಿದಿನಗಳಿರಲಿ ಅಥವಾ ಸಂಜೆಯ ಟೀ ಟೈಮ್ ಇರಲಿ, 'ಕರ್ಜಿಕಾಯಿ' ಎಲ್ಲರಿಗೂ ಇಷ್ಟವಾಗುವ ಸಾಂಪ್ರದಾಯಿಕ ತಿಂಡಿ. ಒಮ್ಮೆ ಮಾಡಿದರೆ ಬರೋಬ್ಬರಿ ಒಂದು ತಿಂಗಳ ಕಾಲ ಕೆಡದಂತೆ, ಅಷ್ಟೇ ರುಚಿಯಾಗಿ ಮತ್ತು ಗರಿಗರಿಯಾಗಿ ಇರಿಸುವುದು ಹೇಗೆ ಎಂಬ ರಹಸ್ಯವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮತ್ಯಾಕೆ ತಡ, ಕೇವಲ 1.5 ಕಪ್ ಮೈದಾ ಹಿಟ್ಟಿನಿಂದ ಸುಮಾರು 35 ಕರ್ಜಿಕಾಯಿಗಳನ್ನು ತಯಾರಿಸುವ ಸುಲಭ ಟಿಪ್ಸ್ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಹೊರ ಪದರಕ್ಕೆ
1.5 ಕಪ್ ಮೈದಾ ಹಿಟ್ಟು
1/4 ಕಪ್ ಚಿರೋಟಿ ರವೆ
1 ಚಮಚ ತುಪ್ಪ
ಅರ್ಧ ಚಮಚ ಸಕ್ಕರೆ
ಚಿಟಿಕೆ ಉಪ್ಪು ಮತ್ತು ಎಣ್ಣೆ

ಹೂರಣಕ್ಕೆ (ಸ್ಟಫಿಂಗ್): ಒಣ ಕೊಬ್ಬರಿ, 1/2 ಕಪ್ ಹುರಿಗಡಲೆ (ಕಡ್ಲೆ ಪಪ್ಪು), 1 ಕಪ್ ಬೆಲ್ಲ, 3 ಏಲಕ್ಕಿ, ಎಳ್ಳು ಮತ್ತು ಗಸಗಸೆ.

ತಯಾರಿಸುವ ಹಂತ ಹಂತದ ವಿಧಾನ

ಹಿಟ್ಟು ಸಿದ್ಧಪಡಿಸುವಿಕೆ
ಮೊದಲು ಮೈದಾ ಹಿಟ್ಟಿಗೆ ಚಿರೋಟಿ ರವೆ, ತುಪ್ಪ, ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಎಣ್ಣೆ ಸವರಿ 5-6 ನಿಮಿಷ ಚೆನ್ನಾಗಿ ನಾದಿ, ಹಿಟ್ಟು ಒಣಗದಂತೆ ಸುಮಾರು 20 ನಿಮಿಷಗಳ ಕಾಲ ನೆನೆಯಲು ಬಿಡಿ.

ಹೂರಣದ ತಯಾರಿ
ಒಣ ಕೊಬ್ಬರಿಯನ್ನು ಮಿಕ್ಸಿ ಜಾರ್‌ನಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ (ಇದು ಸುಮಾರು 2 ಕಪ್ ಇರಲಿ). ನಂತರ ಅರ್ಧ ಕಪ್ ಹುರಿಗಡಲೆ, ಒಂದು ಕಪ್ ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ ನುಣ್ಣಗೆ ಪುಡಿ ಮಾಡಿ ಕೊಬ್ಬರಿಯೊಂದಿಗೆ ಬೆರೆಸಿ. ಇದಕ್ಕೆ ಸ್ವಲ್ಪ ಹುರಿದ ಎಳ್ಳು ಮತ್ತು ಗಸಗಸೆಯನ್ನು ಸೇರಿಸಿದರೆ ರುಚಿಕರವಾದ ಹೂರಣ ಸಿದ್ಧವಾಗುತ್ತದೆ.

ಲಟ್ಟಿಸುವಿಕೆ ಮತ್ತು ಆಕಾರ
ನೆನೆದ ಹಿಟ್ಟಿನ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಪೂರಿಯಂತೆ ತೆಳ್ಳಗೆ ಲಟ್ಟಿಸಿಕೊಳ್ಳಿ. ನಿಮ್ಮ ಬಳಿ ಕರ್ಜಿಕಾಯಿ ಅಚ್ಚು (Mould) ಇದ್ದರೆ ಅದಕ್ಕೆ ಮೈದಾ ಹಿಟ್ಟು ಉದುರಿಸಿ, ಲಟ್ಟಿಸಿದ ಎಲೆ ಇಟ್ಟು ಹೂರಣ ತುಂಬಿ. ಅಂಚುಗಳಿಗೆ ನೀರು ಹಚ್ಚಿ ಬಿಗಿಯಾಗಿ ಪ್ರೆಸ್ ಮಾಡಿ. ಅಚ್ಚು ಇಲ್ಲದಿದ್ದರೆ ಕೈಯಿಂದಲೇ ಮಡಚಿ ಫೋರ್ಕ್ (Fork) ಸಹಾಯದಿಂದ ಅಂಚುಗಳನ್ನು ಸೀಲ್ ಮಾಡಬಹುದು.

ಕರಿಯುವ ವಿಧಾನ
ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಗ್ಯಾಸ್ ಉರಿಯನ್ನು ಮೀಡಿಯಂ ಫ್ಲೇಮ್‌ನಲ್ಲೇ ಇರಿಸಿ ಕರ್ಜಿಕಾಯಿಗಳನ್ನು ಎರಡು ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ. ಹೀಗೆ ಮಾಡುವುದರಿಂದ ಕರ್ಜಿಕಾಯಿ ಮೇಲೆ ಪದರ ಗರಿಗರಿಯಾಗಿ ಬರುತ್ತದೆ.

ವಿಶೇಷ ಟಿಪ್ಸ್
*ಹೂರಣ ತುಂಬುವಾಗ ಅಂಚುಗಳಿಗೆ ನೀರು ಹಚ್ಚುವುದರಿಂದ ಎಣ್ಣೆಯಲ್ಲಿ ಕರಿಯುವಾಗ ಅವು ಬಿಟ್ಟುಕೊಳ್ಳುವುದಿಲ್ಲ.

*ಒಂದೇ ಸಮನೆ ಎಲ್ಲಾ ಕರ್ಜಿಕಾಯಿಗಳನ್ನು ಲಟ್ಟಿಸಿ ಇಡುವ ಬದಲು, ಹತ್ತತ್ತು ಮಾಡಿ ಫ್ರೈ ಮಾಡುವುದು ಉತ್ತಮ. ಇಲ್ಲದಿದ್ದರೆ ಹಿಟ್ಟು ಒಣಗಿ ಪದರ ಒಡೆಯುವ ಸಾಧ್ಯತೆ ಇರುತ್ತದೆ.

*ಈ ಅಳತೆಯಲ್ಲಿ ಮಾಡಿದರೆ ಹೂರಣ ಮತ್ತು ಹಿಟ್ಟು ಸರಿಯಾದ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಕರ್ಜಿಕಾಯಿ ಮಕ್ಕಳಿಗೂ ಅಚ್ಚುಮೆಚ್ಚು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಲ್ ಜಾಸ್ತಿ ಅಂತ ಅಲ್ಲ... ಮೆನು ನೋಡಿ ಕೋಪಗೊಂಡು ಎದ್ದು ಹೋದ ಗ್ರಾಹಕಿ! ಅಲ್ಲಿ ನಡೆದಿದ್ದೇನು?
Banned Indian Foods: ವಿದೇಶಗಳಲ್ಲಿ ಬ್ಯಾನ್ ಆದ ಭಾರತೀಯ ಆಹಾರಗಳ ಪಟ್ಟಿ