ಅನಾದಿ ಕಾಲದಿಂದಲೂ ಆಹಾರಕ್ಕಾಗಿ ಅಕ್ಕಿಯ ಬಳಕೆ ರೂಢಿಯಲ್ಲಿದೆ. ಅದರಲ್ಲೂ ಭಾರತೀಯ ಆಹಾರಪದ್ಧತಿಯಲ್ಲಿ (Food) ಅನ್ನಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಅಕ್ಕಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ಕಪ್ಪು ಅಕ್ಕಿಯೂ (Black Rice) ಒಂದು. ಮಧುಮೇಹ (Diabetes), ತೂಕನಷ್ಟ, ಕಣ್ಣಿನ ಆರೋಗ್ಯ (Health) ಸೇರಿದಂತೆ ಹೃದಯದ ಆರೋಗ್ಯಕ್ಕೂ ಕಪ್ಪು ಅಕ್ಕಿಯ ಸೇವನೆ ಅತ್ಯುತ್ತಮ ಎಂದು ಹೇಳಲಾಗುತ್ತದೆ.
ಕಾಲ ಬದಲಾದಂತೆ ಆರೋಗ್ಯ ಸಮಸ್ಯೆಗಳು (Health Problem) ಸಹ ಹೆಚ್ಚಾಗುತ್ತಿದೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಡಯಾಬಿಟಿಸ್ (Diabetes), ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ, ಹೃದ್ರೋಗ ಸಮಸ್ಯಗಳು ಎಲ್ಲರಲ್ಲೂ ಸಾಮಾನ್ಯವಾಗುತ್ತಿದೆ. ಹಲವಾರು ರೀತಿಯಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಿದ್ದಾಗ ನಾವು ನಮ್ಮ ಆಹಾರಪದ್ಧತಿಯನ್ನೇ ಯಾಕೆ ಸರಿಪಡಿಸಿಕೊಳ್ಳಬಾರದು. ಸಾಮಾನ್ಯವಾಗಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಆಹಾರದಿಂದಲೇ ಬರುತ್ತವೆ. ಹೀಗಾಗಿಯೇ ಯಾವ ಆಹಾರ ಸೇವಿಸಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ತಿಳಿದುಕೊಳ್ಳೋಣ.
ಹಲವು ಆರೋಗ್ಯ ಸಮಸ್ಯೆಗಳಿರುವವರು ಅನ್ನ ಸೇವಿಸುವುದನ್ನೇ ಬಿಟ್ಟು ಬಿಡುತ್ತಾರೆ. ಬದಲಾಗಿ ಚಪಾತಿ ಸೇವಿಸುತ್ತಾರೆ. ಇನ್ನು ಕೆಲವೊಬ್ಬರು ಬ್ರೌನ್ ರೈಸ್ ಸೇವಿಸುವುದನ್ನು ರೂಢಿ ಮಾಡಿಕೊಳ್ಳುತ್ತಾರೆ. ಕೆಲವು ನಿರ್ಧಿಷ್ಟ ಮಾದರಿಯ ಅಕ್ಕಿ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ನಂಬುತ್ತಾರೆ. ಹೀಗಾಗಿಯೇ ಹಲವು ಆರೋಗ್ಯ ಸಮಸ್ಯೆಗಳು ಇರುವವರಿಗೆ ಕಪ್ಪು ಅಕ್ಕಿಯನ್ನು (Black Rice) ತಿನ್ನುವಂತೆ ಶಿಫಾರಸು ಮಾಡಲಾಗುತ್ತದೆ.
undefined
ಅಕ್ಕಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ಕಪ್ಪು ಅಕ್ಕಿಯೂ ಒಂದು. ಮಧುಮೇಹ, ತೂಕನಷ್ಟ, ಕಣ್ಣಿನ ಆರೋಗ್ಯ ಸೇರಿದಂತೆ ಹೃದಯದ ಆರೋಗ್ಯಕ್ಕೂ ಕಪ್ಪು ಅಕ್ಕಿಯ ಸೇವನೆ ಅತ್ಯುತ್ತಮ ಎಂದು ಹೇಳಲಾಗುತ್ತದೆ.
ಅನ್ನದೊಂದಿಗೆ ರೊಟ್ಟಿ ತಿಂದರೆ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ ?
ಅನಾದಿ ಕಾಲದಿಂದಲೂ ಆಹಾರಕ್ಕಾಗಿ ಅಕ್ಕಿಯ ಬಳಕೆ ರೂಢಿಯಲ್ಲಿದೆ. ಅದರಲ್ಲೂ ಭಾರತೀಯ ಆಹಾರಪದ್ಧತಿಯಲ್ಲಿ ಅನ್ನಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಹೀಗಾಗಿ ಅಕ್ಕಿಯ ವಿವಿಧ ಬಗೆಯ ಖಾದ್ಯಗಳು, ತರವೇವಾರಿ ತಿಂಡಿಗಳೂ ಕೂಡ ಜನಜನಿತವಾಗಿದೆ. ಅಕ್ಕಿಯಲ್ಲಿ ಹಲವು ವಿಧಗಳಿವೆ. ಬಿಳಿ ಅಕ್ಕಿ, ಕಂದು ಬಣ್ಣದ ಅಕ್ಕಿ, ಕೆಂಪು ಅಕ್ಕಿ, ಕಪ್ಪು ಅಕ್ಕಿ ಇತ್ಯಾದಿ. -ಪ್ರತಿಯೊಂದು ಅಕ್ಕಿಯೂ ತನ್ನದೇ ಆದ ವಿಶಿಷ್ಟ ಪೋಷಕಾಂಶಗಳನ್ನು ಹೊಂದಿದೆ. ಅದೇ ರೀತಿ ಕಪ್ಪು ಅಕ್ಕಿ ಸಹ ಆರೋಗ್ಯಕ್ಕೆ ಅತ್ಯುತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕಪ್ಪು ಅಕ್ಕಿಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಕಪ್ಪು ಅಕ್ಕಿಯಲ್ಲಿ ಹೇರಳವಾದ ಪ್ರೋಟೀನ್ (Protein), ಕಬ್ಬಿಣಾಂಶ ಅಡಕವಾಗಿದೆ. ಅಷ್ಟೇ ಅಲ್ಲದೆ ಕಾರ್ಬೋಹೈಡ್ರೇಟ್ಸ್, ಫೈಬರ್ (Fiber), ಅಲ್ಪ ಪ್ರಮಾಣದ ಕೊಬ್ಬಿನಾಂಶವೂ ಇದೆ. ಹೀಗಾಗಿ ಕಪ್ಪು ಅಕ್ಕಿಯನ್ನು ಅನ್ನ ಮಾಡಿ ಸೇವಿಸಿದರೆ ಪರಿಪೂರ್ಣ ಊಟ ಮಾಡಿದಂತಾಗುತ್ತದೆ. ಚೀನಾದಲ್ಲಿ ಮೊದಲು ಈ ಅಕ್ಕಿಯನ್ನು ಬೆಳೆಯಲಾಯಿತು. ಇದೀಗ ಭಾರತದಲ್ಲಿಯೂ ಈ ಕಪ್ಪು ಅಕ್ಕಿಯ ಬಳಕೆ ಮಾಡಲಾಗುತ್ತಿದೆ. ಆರೋಗ್ಯಕ್ಕೂ ಒಳ್ಳೆಯದಾದ ಈ ಅಕ್ಕಿಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.
ಉಳಿದ ಅನ್ನವನ್ನು ಬಳಸಿ ಮಲ್ಲಿಗೆಯಂತಹ ತ್ವಚೆ ಪಡೆಯಿರಿ
ಮಧುಮೇಹಿಗಳಿಗೆ ಒಳ್ಳೆಯದು: ಮಧುಮೇಹಿಗಳಿಗೆ ಆಹಾರದಲ್ಲಿ ಒಂದಷ್ಟು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಹೆಚ್ಚು ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವಂತಿಲ್ಲ. ಹೀಗಾಗಿ ಅಂತಹ ಆಹಾರಕ್ಕೆ ಕಪ್ಪು ಅಕ್ಕಿಯ ಅನ್ನ, ಇತರ ಆಹಾರ ಪದಾರ್ಥಗಳು ಹೆಚ್ಚು ಉಪಯುಕ್ತವಾಗಿದೆ. ಕಪ್ಪು ಅಕ್ಕಿಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೆ ಆಂಟಿಆಕ್ಸಿಡೆಂಟ್‌ಗಳನ್ನು ಈ ಕಪ್ಪು ಅಕ್ಕಿ ಹೊಂದಿರುತ್ತದೆ. ಹೀಗಾಗಿ ಮಧುಮೇಹಿಗಳು ಭಯವಿಲ್ಲದೆ ಈ ಕಪ್ಪು ಅಕ್ಕಿಯನ್ನು ಸೇವಿಸಬಹುದಾಗಿದೆ.
ಕರುಳಿನ ಸಮಸ್ಯೆ ಇರುವವರಿಗೆ ಒಳ್ಳೆಯದು: ಅಲ್ಲದೆ ಈ ಕಪ್ಪು ಅಕ್ಕಿ ಗ್ಲುಟನ್ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಕರುಳಿನ ಸಮಸ್ಯೆ ಇದ್ದವರೂ ಕೂಡ ಇದನ್ನು ಸೇವಿಸಬಹುದಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಕಪ್ಪು ಅಕ್ಕಿಯ ಸೇವನೆ ಹೃದಯದ (Heart) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಕಪ್ಪು ಅಕ್ಕಿಯ ಅನ್ನ ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಣೆಯಾದರೆ ಹೃದಾಯಾಘಾತ (Heartattack)ವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಧಿಕ ರಕ್ತದೊತ್ತಡವೂ ನಿಯಂತ್ರಣ: ಕಪ್ಪು ಅಕ್ಕಿಯ ಅನ್ನ ಸೇವನೆಯಿಂದ ಅಧಿಕ ರಕ್ತದೊತ್ತಡವೂ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಪ್ಪು ಅಕ್ಕಿಯ ಬಳಕೆ ಒಳ್ಳೆಯದು