ಊಟದ (Food) ಸಂದರ್ಭ ನೀರು (Water) ಕುಡಿಯುವ ಅಭ್ಯಾಸ (Habit)ದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯನ್ನು ಅನುಸರಿಸುತ್ತಾರೆ. ಊಟದ ಮೊದಲು, ಊಟ ಮಾಡುತ್ತಾ, ಊಟದ ನಂತರ ಹೀಗೆ ನೀರು ಕುಡಿಯುವ ಅಭ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದ್ರಲ್ಲಿ ಯಾವ ಅಭ್ಯಾಸ ಆರೋಗ್ಯ (Health)ಕ್ಕೆ ಉತ್ತಮ ? ಯಾವ ರೀತಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಹಾನಿಯಿದೆ ನೋಡೋಣ.
ಭಾರತೀಯ ಸಂಸ್ಕೃತಿಯಲ್ಲಿ ಆಹಾರ (Food)ಕ್ಕೆ ಮಹತ್ವದ ಸ್ಥಾನವಿದೆ. ಅನ್ನ ದೇವರು ಎಂದೇ ಸಂಬೋಧಿಸಿ ಆಹಾರದ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಹಾಗೆಯೇ ಊಟ ಮಾಡಲು ಸಹ ನಿರ್ಧಿಷ್ಟ ಕ್ರಮಗಳಿವೆ. ಊಟದ ಸಂದರ್ಭ ನೀರು (Water) ಕುಡಿಯವು ಅಭ್ಯಾಸದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯನ್ನು ಅನುಸರಿಸುತ್ತಾರೆ. ಊಟದ ಮೊದಲು, ಊಟ ಮಾಡುತ್ತಾ, ಊಟದ ನಂತರ ಹೀಗೆ ನೀರು ಕುಡಿಯುವ ಅಭ್ಯಾಸ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದ್ರಲ್ಲಿ ಯಾವ ಅಭ್ಯಾಸ ಆರೋಗ್ಯಕ್ಕೆ ಉತ್ತಮ ? ಯಾವ ರೀತಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ (Health) ಹಾನಿಯಿದೆ ನೋಡೋಣ.
ಊಟಕ್ಕೂ ಮುನ್ನ ನೀರು ಕುಡಿಯುವ ಅಭ್ಯಾಸ : ಆಯರ್ವೇದದ ಪ್ರಕಾರ ಊಟಕ್ಕೂ ಮುನ್ನ ಅಗ್ನಿ ಅಥವಾ ಪಚನದ ಬೆಂಕಿಯನ್ನು ಶಮನಗೊಳಿಸಬೇಕು. ಇದಕ್ಕಾಗಿ ನೀವು ಒಂದು ಲೋಟದಷ್ಟು ನೀರು ಕುಡಿಯುವುದು ಒಳ್ಳೆಯದು. ಇದು ತಾಜಾ ಶುಂಠಿ, ನಾಲ್ಕಾರು ಹನಿ ನಿಂಬೆರಸ ಹಾಗೂ ಚಿಟಿಕೆ ಉಪ್ಪು (Salt) ಹಾಕಿದ ನೀರಾಗಿದ್ದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಇದು ಆಹಾರದ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುವ ಕಿಣ್ವಗಳ ಉತ್ಪತ್ತಿ ಗ್ರಂಥಿಯನ್ನು ಪ್ರಚೋದಿಸುತ್ತದೆ.
ಫುಡ್ ವೇಸ್ಟ್ ಮಾಡೋ ಮಕ್ಕಳಿಗೆ ಇದನ್ನು ಹೇಳಿಕೊಡಿ, ಪ್ಲೇಟ್ ಖಾಲಿ ಮಾಡದೆ ಏಳೋದೆ ಇಲ್ಲ
ಊಟದ ಮಧ್ಯೆ ನೀರು ಕುಡಿಯುವುದು: ಊಟದ ನಡುವೆ ಅನ್ನ ನುಂಗಲು ಸುಲಭವಾಗಲು ಕೆಲವೊಬ್ಬರು ಆಗಾಗ ನೀರು ಕುಡಿಯುತ್ತಾರೆ. ಆದ್ರೆ ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ ಯಾವತ್ತಿಗೂ ಒಳ್ಳೆಯದಲ್ಲ. ಇದು ಬೇಗನೇ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದರಿಂದ ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭಿಸುವುದಿಲ್ಲ. ಹೀಗಾಗಿ ಆಹಾರಕ್ಕೆ ಅತಿಯಾಗಿ ಉಪ್ಪು ಹಾಕಬೇಡಿ. ಉಪ್ಪು ಜಾಸ್ತಿಯಾದರೆ ಬಾಯಾರಿಕೆ ಉಂಟಾಗುತ್ತದೆ. ಹೀಗಾಗಿ ಆಗಾಗ ನೀರು ಕುಡಿಯಬೇಕು ಅನಿಸುತ್ತದೆ.
ಊಟದ ನಂತರ ನೀರು ಕುಡಿಯುವುದು: ಊಟವಾದ ತಕ್ಷಣ ನೀರನ್ನು ಕುಡಿಯಬೇಡಿ. ಊಟ ಮಾಡಿ 15 ನಿಮಿಷಗಳ ನಂತರ ನೀರು ಕುಡಿಯಿರಿ. ಊಟವಾಗಿ 45 ನಿಮಿಷಗಳ ನಂತರ ಬಾಯಾರಿಕೆಯಾಗಿದ್ದರೆ ನಿಮಗೆ ಬೇಕಾದಷ್ಟು ನೀರು ಕುಡಿಯಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
ಚಿಕನ್ ಜೊತೆ ಮೊಸರು ತಿನ್ನೋ ಅಭ್ಯಾಸ ಇದೆಯೇ? ಮತ್ತೊಮ್ಮೆ ಯೋಚ್ನೆ ಮಾಡಿ
ಊಟದ ಮಧ್ಯೆ ನೀರು ಕುಡಿಯೋದ್ರಿಂದ ಆರೋಗ್ಯಕಾಗುವ ತೊಂದರೆಯೇನು ?
1. ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು: ಊಟದ ಸಮಯದಲ್ಲಿ ನೀರು ಕುಡಿಯುವ ಅಭ್ಯಾಸ ಜೀರ್ಣಕ್ರಿಯೆಯ (Digestion) ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ಬಾಯಿಯಲ್ಲಿ ಲಾಲಾರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಡಿಮೆಯಾದ ಲಾಲಾರಸವು ಹೊಟ್ಟೆಗೆ ದುರ್ಬಲ ಸಂಕೇತಗಳನ್ನು ಕಳುಹಿಸುತ್ತದೆ, ಇದು ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಕಿಣ್ವಗಳ ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಊಟ ಮಾಡುವಾಗ ನೀರನ್ನು ಸಿಪ್ ಮಾಡಿದ ಕ್ಷಣದಿಂದ ಆಹಾರವನ್ನು ಹೀರಿಕೊಳ್ಳುವುದು ಮತ್ತು ಒಡೆಯುವ ಪ್ರಕ್ರಿಯೆ ಅಡ್ಡಿಯಾಗುತ್ತದೆ.
2. ಪೋಷಕಾಂಶಗಳ ಹೀರಿಕೊಳ್ಳುವಿಕೆ ನಿಧಾನಗೊಳ್ಳುತ್ತದೆ: ಊಟದ ಮಧ್ಯೆ ನೀರು ಕುಡಿದಾಗ, ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಖು ನೀರಿನಿಂದ ದುರ್ಬಲಗೊಳ್ಳುತ್ತವೆ. ಇದರಿಂದ ಆಹಾರವು ತುಂಬಾ ಸಮಯಗಳ ಕಾಲ ಜೀರ್ಣವಾಗುವುದೇ ಇಲ್ಲ. ಇದು ಕಡಿಮೆ ಪೋಷಕಾಂಶಗಳನ್ನು ಹೀರಿಕೊಳ್ಳುವುದರೊಂದಿಗೆ ನಿಧಾನಗತಿಯಲ್ಲಿ ಸಣ್ಣ ಕರುಳಿನ ಮೂಲಕ ಹಾದುಹೋಗಬಹುದು.
ಮೊಡವೆ ಸಮಸ್ಯೆ ನಿವಾರಿಸಲು ಈ Food Tips ಅನುಸರಿಸಿ!
3. ಅಸಿಡಿಟಿಗೆ ಕಾರಣವಾಗಬಹುದು: ತಿನ್ನುವಾಗ ನೀರು ಕುಡಿಯುವ ಅಭ್ಯಾಸ ಆಮ್ಲೀಯತೆಯನ್ನು ಉಂಟು ಮಾಡುತ್ತದೆ ಎಂದು ನಂಬಲಾಗಿದೆ. ಏಕೆಂದರೆ ನೀವು ತಿನ್ನುವಾಗ ಮತ್ತು ಕುಡಿಯುವಾಗ ನಿಮ್ಮ ಹೊಟ್ಟೆಯು ಎಷ್ಟು ಸಾಧ್ಯವೋ ಅಷ್ಟು ನೀರನ್ನು ಹೀರಿಕೊಳ್ಳುತ್ತದೆ. ಇದು ಗ್ಯಾಸ್ಟ್ರಿಕ್ (Gastric) ಜ್ಯೂಸ್ ಅನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
4. ತೂಕ ಹೆಚ್ಚಾಗಲು ಕಾರಣವಾಗಬಹುದು: ಊಟದ ಮಧ್ಯೆ ನೀರು ಕುಡಿಯೋ ಅಭ್ಯಾಸ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹವು ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅದು ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ಸಹಜವಾಗಿಯೇ ತೂಕ (Weight) ಹೆಚ್ಚಾಗಲು ಕಾರಣವಾಗುತ್ತದೆ.