ಮಧ್ಯರಾತ್ರಿ ನಿದ್ರೆಯಿಂದ ಎಬ್ಬಿಸಿ ಕೊಟ್ರೂ ಸ್ಯಾಂಡ್ವಿಚ್ ತಿನ್ನೋರಿದ್ದಾರೆ. ಅಂಥವರಿಗೆ ಉಚಿತ ಸ್ಯಾಂಡ್ವಿಚ್ ಸಿಕ್ಕಿದ್ರೆ ಖುಷಿಯೋ ಖುಷಿ. ಸಬ್ ವೇ ನಿಮಗೆ ಬಂಪರ್ ಆಫರ್ ನೀಡ್ತಿದೆ. ಆದ್ರೆ ಷರತ್ತುಗಳು ಅನ್ವಯ.
ಫಾಸ್ಟ್ ಫುಡ್ ಗಳಲ್ಲಿ ಸ್ಯಾಂಡ್ವಿಚ್ ತನ್ನದೇ ಛಾಪು ಮೂಡಿಸಿದೆ. ಜನರು ವೆರೈಟಿ ವೆರೈಟಿ ಸ್ಯಾಂಡ್ಚಿಚ್ ತಿಂದು ಬಾಯಿ ಚಪ್ಪರಿಸುತ್ತಾರೆ. ನಿಮ್ಮಿಷ್ಟದ ಈ ಸ್ಯಾಂಡ್ವಿಚ್ ಜೀವನ ಪರ್ಯಂತ ಉಚಿತವಾಗಿ ಸಿಗುತ್ತೆ ಅಂದ್ರೆ ನಿಮಗೆ ಖುಷಿಯಾಗದೆ ಇರುತ್ತಾ? ದುಬಾರಿ ಬೆಲೆ ತೆತ್ತು ವಾರಕ್ಕೆ ಮೂರ್ನಾಲ್ಕು ಬಾರಿ ಸ್ಯಾಂಡ್ವಿಚ್ ತಿನ್ನುವ ಜನರಿಗೆ ಜೀವನ ಪರ್ಯಂತ ಪುಕ್ಕಟ್ಟೆ ಸ್ಯಾಂಡ್ವಿಚ್ ಸಿಕ್ಕಿದ್ರೆ ಸ್ವರ್ಗಕ್ಕೆ ಮೂರೇ ಗೇಣು. ನಿಮ್ಮ ಆಸೆಯನ್ನು ಸಬ್ ವೇ ಈಡೇರಿಸುತ್ತಿದೆ. ಸಬ್ ವೇ (Subway) ತನ್ನ ಗ್ರಾಹಕರಿಗೆ ಉಚಿತವಾಗಿ ಸ್ಯಾಂಡ್ವಿಚ್ (Sandwich ) ನೀಡುವ ಘೋಷಣೆ ಮಾಡಿದೆ. ಆದ್ರೆ ಸಬ್ ವೇ ಇದಕ್ಕೆ ಒಂದು ಷರತ್ತನ್ನು ವಿಧಿಸಿದೆ. ನೀವು ಜೀವನ ಪರ್ಯಂತ ಸವ್ ವೇ ಸ್ಯಾಂಡ್ಚಿಚ್ ತಿನ್ನಬೇಕು ಅಂದ್ರೆ ನಿಮ್ಮ ಹೆಸರ (Name) ನ್ನು ಬದಲಿಸಬೇಕು.
ಗ್ರಾಹಕರು ಮಾಡಬೇಕಾಗಿದ್ದು ಏನು? : ಸಬ್ ವೇ ತನ್ನ ದೊಡ್ಡ ಗ್ರಾಹಕರಿಗೆ ಈ ಉಚಿತ ಸಬ್ ಸ್ಕ್ರೈಬ್ ನೀಡಲಿದೆ. ನೀವು ಜೀವನ ಪರ್ಯಂತ ಉಚಿತವಾಗಿ ಸಬ್ ವೇ ಸ್ಯಾಂಡ್ವಿಚ್ ತಿನ್ನಬೇಕು ಎಂದಾದ್ರೆ ನೀವು ಹೆಸರು ಬದಲಿಸಬೇಕು. ನಿಮ್ಮ ಮೊದಲ ಹೆಸರನ್ನು ಸಬ್ ವೇ ಬದಲಿಸಲಿದೆ.
ಇದಕ್ಕಾಗಿ ನೀವು ಆಗಸ್ಟ್ ಒಂದರಿಂದ ಆಗಸ್ಟ್ 4ರ ಮಧ್ಯೆ SubwayNameChange.com ಗೆ ಹೋಗ್ಬೇಕು. ನಿಮ್ಮ ಹೆಸರನ್ನು ಬರೀ ಸಬ್ ವೇಗಾಗಿ ಸುಮ್ಮನೆ ಬದಲಿಸಿದ್ರೆ ಆಗೋದಿಲ್ಲ. ನೀವು ಕಾನೂನು ಪ್ರಕಾರ ನಿಮ್ಮ ಹೆಸರನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಕಾನೂನು ಪ್ರಕಾರ ನೀವು ಹೆಸರು ಬದಲಿಸಲು ಸಿದ್ಧವಿದ್ದರೆ ಮಾತ್ರ ಈ ವೆಬ್ಸೈಟ್ ಗೆ ಭೇಟಿ ನೀಡಿ. ಆಗ ಮಾತ್ರ ನೀವು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಒಂದ್ವೇಳೆ ನೀವು ಹೆಸರು ಬದಲಿಸಲು ಸಿದ್ಧವಿದ್ರೆ ನೀವು ಜೀವನ ಪರ್ಯಂತ ಉಚಿತವಾಗಿ ಸಿಗುವ ಉಚಿತ ಸಬ್‌ವೇ ಡೈಲಿ ಹೀರೋಸ್ ಗೆಲ್ಲಬಹುದು. ಉಚಿತವಾಗಿ ಡೇಲಿ ಸಬ್ ವೇ ಸ್ಯಾಂಡ್ವಿಚ್ ಪಡೆಯಲು ಸಬ್ ವೇ ಒಬ್ಬರನ್ನು ಆಯ್ಕೆ ಮಾಡುತ್ತದೆ. ಕಾನೂನು ರೂಪದಲ್ಲಿ ಹೆಸರನ್ನು ಬದಲಿಸಲು ಎಷ್ಟು ಖರ್ಚಾಗುತ್ತೋ ಅದನ್ನು ಸಬ್ ವೇ ನೀಡುತ್ತದೆ.
Healthy Food: ಟೊಮೇಟೋ ಸಿಪ್ಪೆ ಎಸೆಯೋ ಮೊದಲು ಒಮ್ಮೆ ಇದನ್ನೋದಿ
ಈ ಹಿಂದೆಯೂ ಬಂದಿತ್ತು ಈ ಆಫರ್ : ಇದು ಮೊದಲ ಬಾರಿಯಲ್ಲ. ಈ ಹಿಂದೆ ಕೂಡ ಸಬ್ ವೇ ತನ್ನ ಗ್ರಾಹಕರನ್ನು ಪರೀಕ್ಷೆ ಮಾಡಲು ಇಂಥ ಆಫರ್ ತಂದಿತ್ತು. ಹಿಂದಿನ ವರ್ಷ ಸಬ್ ವೇಯ ಚಾಲೆಂಜ್ ಸ್ವೀಕರಿಸಿದ್ದ ವ್ಯಕ್ತಿಯೊಬ್ಬ ಉಚಿತ ಸಬ್ ವೇ ಸ್ಯಾಂಡ್ವಿಚ್ ಆಫರ್ ಪಡೆದಿದ್ದಾನೆ. ಸೂಪರ್ ಫ್ಯಾನ್ ತನ್ನ ದೇಹದ ಮೇಲೆ ಸ್ಯಾಂಡ್ವಿಚ್ ಸರಣಿಯ ಲೋಗೋದ ಜೊತೆ ಉದ್ದದ ಟ್ಯಾಟೂವನ್ನು ಹಾಕಿಸಿಕೊಳ್ಳುವ ಮೂಲಕ ಉಚಿತ ಸ್ಯಾಂಡ್ವಿಚ್ ಆಫರ್ ಪಡೆದಿದ್ದ. ಮೊದಲು ಬನ್ನಿ ಮೊದಲು ಪಡೆಯಿರಿ ಎನ್ನುವ ಸ್ಪರ್ಧೆಯಲ್ಲಿ ಈತ ವಿಜೇತನಾಗಿದ್ದನಲ್ಲದೆ ಈತನಿಗೆ ನಗದು ಪುರಸ್ಕಾರ ಕೂಡ ಸಿಕ್ಕಿತ್ತು.
ಲಂಚ್‌ಗೆ ಈ ಆಹಾರ ತಿನ್ನಲೇ ಬಾರದಂತೆ
ತನ್ನ ವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ ಸಬ್ ವೇ ಕಂಪನಿ : ಸಬ್ ವೇ ಈಗಾಗಲೇ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಸಬ್ ವೇ 100 ದೇಶಗಳಲ್ಲಿ 37 ಸಾವಿರ ಫ್ರಾಂಚೈಸಿ ಹೊಂದಿದೆ. 100 ದೇಶಗಳಲ್ಲಿ 37 ಸಾವಿರ ಫ್ರಾಂಚೈಸಿಯಲ್ಲಿ ಸ್ಯಾಂಡ್ವಿಚ್, ಸಲಾಡ್ ಸೇರಿದಂತೆ ಅನೇಕ ಆಹಾರವನ್ನು ಸರ್ವ್ ಮಾಡುತ್ತದೆ. ಸಬ್ ವೇ ಇನ್ನಷ್ಟು ಜನರಿಗೆ ತನ್ನ ಉತ್ಪನ್ನ ನೀಡುವ ಉದ್ದೇಶ ಹೊಂದಿದೆ. ಐದು ದಶಕಗಳಿಗೂ ಹೆಚ್ಚು ಕಾಲದಿಂದ ಸಬ್ ವೇ ಎರಡು ಸಂಸ್ಥಾಪಕ ಕುಟುಂಬಗಳ ಒಡೆತನದಲ್ಲಿತ್ತು. 2019ರಲ್ಲಿ ಕುಟುಂಬ ಒಡೆತನದಿಂದ ಇದು ಹೊರ ಬಮತು. ಜಾನ್ ಚಿಡ್ಸೆ ಮೊದಲ ಬಾರಿ ಸಿಇಒ ಆದ್ರು.